ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ವಿಳಂಬ ಏಕೆ?

ಕಾಂಗ್ರೆಸ್ ಪಕ್ಷ ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಪುವಿಗೆ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಬೈಂದೂರಿಗೆ ಮಾಜಿ ಶಾಸಕ ಗೋಪಾಲ ಪೂಜಾರಿ, ಕುಂದಾಪುರಕ್ಕೆ ಯುವ ನಾಯಕ ಮೊಳಹಳ್ಳಿ ದಿನೇಶ್ ಹೆಗ್ಡೆ ಹಾಗೂ ಉಡುಪಿಗೆ ಮತ್ತೊರ್ವ ಯುವನಾಯಕ ಪ್ರಸಾದ್‌ರಾಜ್ ಕಾಂಚನ್ ಹೆಸರನ್ನು ಅಖೈರುಗೊಳಿಸಿ ಆದೇಶ ಹೊರಡಿಸಿದ್ದು ಆ ಎಲ್ಲಾ ಅಭ್ಯರ್ಥಿಗಳು ಈಗಾಗಲೇ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಿಸುವ ಮೂಲಕ ಒಂದು ಸುತ್ತಿನ ಪ್ರಚಾರ ಮುಗಿಸಿದ್ದರಾದರೂ ಮಿಕ್ಕಳಿದ ಕಾರ್ಕಳಕ್ಕೆ ಈ ತನಕವೂ ಅಭ್ಯರ್ಥಿಯನ್ನು ಘೋಷಿಸಿಲ್ಲದಿರುವುದು ಇದೀಗ ಕಾರ್ಕಳ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ವಲಯದಲ್ಲಿ ಬಾರೀ ಗೊಂದಲಕ್ಕೆ ಕಾರಣವಾಗಿದೆ‌.

ನಿಜಕ್ಕೂ ವಿದೇಶದಲ್ಲಿ ದೇಶದ ಮಾನ ಕಳೆದಿದ್ದವರು ಮೋದಿಯವರಲ್ಲವೇ?

ಕಾರ್ಕಳ ಕಾಂಗ್ರೆಸ್ ಎಂದಾಕ್ಷಣ ಮೊದಲಿಗೆ ನೆನಪಾಗುವುದು ಮಾಜಿ ಮುಖ್ಯಮಂತ್ರಿ ವಿರಪ್ಪ ಮೊಯಿಲಿಯವರಾಗಿದ್ದಾರೆ. ಸ್ವತಃ ಅವರು ಈ ಕ್ಷೇತ್ರದಲ್ಲಿ ನಿರಂತರವಾಗಿ ಸ್ಪರ್ಧಿಸಿ ವಿಜಯ ಸಾಧಿಸಿ ರಾಜ್ಯದ ಮುಖ್ಯಮಂತ್ರಿ ಕೂಡ ಆಗಿದ್ದವರು. ಆ ನಂತರ ಅವರು ಲೋಕಸಭಾ ಅಭ್ಯರ್ಥಿಯಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಅವರ ಅನುಯಾಯಿಯಾಗಿದ್ದ ದಿವಂಗತ ಗೋಪಾಲ ಭಂಡಾರಿಯವರು ನಿರಂತರವಾಗಿ ಸ್ಪರ್ದಿಸಿ, ವಿಜಯ ಸಾಧಿಸಿ ಜನಾನುರಾಗಿ ಶಾಸಕರಾಗಿ ಕೂಡ ಹೆಸರು ಗಳಿಸಿದ್ದರು ಮತ್ತು 2018ರಲ್ಲಿ ಕೂಡ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದಿಸಿ ಬಿಜೆಪಿಯ ಸುನಿಲ್ ಕುಮಾರ್ ವಿರುದ್ದ ಸೋತಿದ್ದರು.
ಹಾಗೆಯೇ ಗೋಪಾಲ ಭಂಡಾರಿಯವರು ಜೀವಂತವಾಗಿ ಇದ್ದಿದ್ದರೆ ಈ ಬಾರಿಯೂ ಅವರೇ ಅಭ್ಯರ್ಥಿಯಾಗಿರುತ್ತಿದ್ದರು ಎನ್ನುವುದು ಸಾರ್ವತ್ರಿಕವಾಗಿ ಇರುವ ಅಭಿಪ್ರಾಯವಾಗಿದೆ ಮತ್ತು ಇದು ಸತ್ಯ ಕೂಡ ಆಗಿದೆ.

ಕಾಂಗ್ರೆಸ್ ಈ ದೇಶಕ್ಕೇನು ಕೊಟ್ಟಿದೆ?

ಈ ಬಾರಿ ಚುನಾವಣೆಯಲ್ಲಿ ಸ್ಪರ್ದಿಸಲು ಉತ್ಸುಕರಾಗಿರುವವರು ಎರಡು ಲಕ್ಷ ರೂಪಾಯಿ ದೇಣಿಗೆಯ ಜೊತೆ ಅರ್ಜಿ ಸಲ್ಲಿಸುವಂತೆ ಕಳೆದ ಮೂರು ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷದ ರಾಜ್ಯ ಘಟಕ ಕರೆಕೊಟ್ಟಾಗ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ಕೆಪಿಸಿಸಿ ಸದಸ್ಯ ಸುರೇಂದ್ರ ಶೆಟ್ಟಿ, ಹಿರಿಯ ರಾಜಕಾರಣಿ ಡಿ.ಆರ್ ರಾಜು ಸೇರಿ ನಾಲ್ವರು ಅಭ್ಯರ್ಥಿಗಳು ಮಾತ್ರವೇ ಅರ್ಜಿ ಸಲ್ಲಿಸಿದ್ದರು. ಆದರೆ ಈ ನಡುವೆ ಕೆಪಿಸಿಸಿ ಮಟ್ಟದಲ್ಲಿ ಯಾವುದೇ ಅರ್ಜಿ ಸಲ್ಲಿಸದ ಯುವ ಉಧ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿಯವರ ಹೆಸರು ಪ್ರಭಲವಾಗಿ ಕೇಳಿಬರತೊಡಗಿದ ಹಿನ್ನಲೆಯಲ್ಲಿ ವೀರಪ್ಪ ಮೊಯಿಲಿಯವರು "ಅರ್ಜಿ ಸಲ್ಲಿಸಿದ ನಾಲ್ವರಲ್ಲಿ ಯಾವುದೇ ಅಭ್ಯರ್ಥಿಗೆ ಟಿಕೇಟು ನೀಡಲು ವಿರೋಧವಿಲ್ಲ. ಆದರೆ ಅರ್ಜಿ ಸಲ್ಲಿಸದ ಅಭ್ಯರ್ಥಿಗೆ ನೀಡುವುದಕ್ಕೆ ವಿರೋಧವಿದೆ" ಎಂದು ಹೇಳಿರುವ ಕಾರಣದಿಂದಾಗಿ ಇದೀಗ ಅಭ್ಯರ್ಥಿಯ ಘೋಷಣೆ ವಿಳಂಬವಾಗುತ್ತಿದೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ!

ಪಕ್ಷದ ಸಂಘಟನೆಯಲ್ಲಿ ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿರುವ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿಯವರು ಅರ್ಜಿ ಸಲ್ಲಿಸಿರುವ ಪ್ರಮುಖ ನಾಯಕರಲ್ಲಿ ಓರ್ವರಾಗಿದ್ದಾರೆ.

ಮತ್ತೊರ್ವ ಅರ್ಜಿ ಸಲ್ಲಿಸಿರುವ ಆಕಾಂಕ್ಷಿ ನೀರೆ ಕೃಷ್ಣ ಶೆಟ್ಟಿಯವರು ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಉತ್ತಮ ಕಾರ್ಯವೆಸಗಿ ಹೆಸರುವಾಸಿಯಾಗಿದ್ದಾರೆ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯ ಕುರಿತಾದ ಅವರ ಜ್ಞಾನಕ್ಕಾಗಿ ಜಿಲ್ಲೆಯಲ್ಲಿ ಉತ್ತಮ ಗೌರವ ಪಡೆದಿದ್ದಾರೆ.

ಕೆಪಿಸಿಸಿ ಸದಸ್ಯ, ಕೊಡುಗೈ ದಾನಿ, ಕುಂದಾಪುರದ ಯುವ ಉದ್ಯಮಿ ಮೂಲತಃ ಕಾರ್ಕಳದ ಸುರೇಂದ್ರ ಶೆಟ್ಟಿಯವರು ಅರ್ಜಿ ಸಲ್ಲಿಸಿದ ಆಕಾಂಕ್ಷಿಗಳಲ್ಲಿ ಓರ್ವರಾಗಿದ್ದು ಇವರು ವೀರಪ್ಪ ಮೊಯ್ಲಿಯವರ ನಿಕಟವರ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಕೊರೋನಾ ಕಾಲದಲ್ಲಿ ಸತತವಾಗಿ ಸಹಾಯ ಮಾಡುವ ಮೂಲಕ ಕಾರ್ಕಳ ಸುತ್ತಮುತ್ತಲಿನ ಬಡಜನರ ಪಾಲಿನ ಆಪತ್ಬಾಂದವರಾಗಿರುವ ಕಾಫಿ ತೋಟದ ಮಾಲಕ, ಹೆಸರಾಂತ ಉಧ್ಯಮಿ ಡಿ.ಆರ್ ರಾಜುರವರು ಅರ್ಜಿ ಸಲ್ಲಿಸಿರುವ ಮತ್ತೊರ್ವ ಪ್ರಮುಖರಾಗಿದ್ದಾರೆ.

ಈ ನಡುವೆ ಚರ್ಚೆಯಲ್ಲಿರುವ ಮುನಿಯಾಲು ಉದಯಕುಮಾರ್ ಶೆಟ್ಟಿಯವರು ಓರ್ವ ಹೆಸರಾಂತ ಯುವ ಗುತ್ತಿಗೆದಾರ ಹಾಗೂ ಕೊಡುಗೈ ದಾನಿ. ಹಾಗೆಯೇ ಅವರು ಕಳೆದ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೇಟು ಆಕಾಂಕ್ಷಿಯಾಗಿದ್ದರು. ಆಗ ಟಿಕೇಟು ಸಿಗದ ಕಾರಣಕ್ಕಾಗಿ ಆ ಸಂಧರ್ಭದಲ್ಲಿ ಅವರು ವೀರಪ್ಪ ಮೊಯ್ಲಿ ಮತ್ತು ದಿವಂಗತ ಗೋಪಾಲ ಭಂಡಾರಿಯವರ ಜೊತೆಗೆ ಒಂದಷ್ಟು ಅಂತರ ಕಾಯ್ದುಕೊಂಡಿದ್ದರಲ್ಲದೇ, ಬಲ್ಲ ಮೂಲಗಳ ಪ್ರಕಾರ ಕಾರ್ಕಳ ಪುರಸಭೆ ಮತ್ತು ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಪಕ್ಷದ ಸ್ಪರ್ಧಿಗಳ ಪರ ವಹಿಸಲಿಲ್ಲ ಎನ್ನುವುದು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ‌.ಕೆ ಶಿವಕುಮಾರ್ ರವರು ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ದ 40% ಕಮಿಷನ್ ಆರೋಪ ಮಾಡಿದ್ದಾಗ ಉದಯಕುಮಾರ್ ಶೆಟ್ಟಿಯವರು ಪತ್ರಿಕಾ ಗೋಷ್ಟಿ ನಡೆಸಿ "ನಾವು ಗುತ್ತಿಗೆದಾರರು ಯಾರಿಗೂ ಕಮಿಷನ್ ಕೊಡುತ್ತಿಲ್ಲ" ಎಂಬ ಹೇಳಿಕೆ ನೀಡಿದ್ದರು ಎನ್ನುವುದು ಕೂಡ ಕಾರ್ಕಳ ಕಾಂಗ್ರೆಸ್‌ನ ವಿರೋಧಕ್ಕೆ ಮತ್ತೊಂದು ಕಾರಣವಾಗಿದೆ.

ಹಿಂದುತ್ವವನ್ನು ಬೆಂಬಲಿಸೋಣ. ಹಿಂದುತ್ವ ವಿರೋಧಿ ಕಾಂಗ್ರೆಸ್ ಅನ್ನು ನಾಶಗೊಳಿಸೋಣ.

ಆದರೆ ಇದೀಗ ವೀರಪ್ಪ ಮೊಯ್ಲಿಯವರು "ಕಾರ್ಕಳದ ಟಿಕೇಟನ್ನು ಅರ್ಜಿ ಸಲ್ಲಿಸಿದ ನಾಲ್ವರಲ್ಲಿ ಯಾರಿಗೆ ಬೇಕಿದ್ದರೂ ಕೊಡಿ" ಎಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.