ಮುಖ್ಯಮಂತ್ರಿ ಹುದ್ದೆ ಪೈಪೋಟಿ: ಬಿಜೆಪಿ ಹಿಂದಿನ ಮೋದ್ಯಮಗಳು ಬಿತ್ತಿದ್ದ ವಿಷಬೀಜ?

ಕಾಂಗ್ರೆಸ್ ಪಕ್ಷಕ್ಕೆ ಬಹುಮತದ ಫಲಿತಾಂಶ ಪ್ರಕಟಗೊಂಡು ಕೇವಲ ನಾಲ್ಕು ದಿನಗಳಾಗಿವೆ‌. ಹಾಗೆಯೇ ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು 24ರಿಂದ 72ಗಂಟೆಗಳ ತನಕದ ಸಮಯದೊಳಗೆ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಿಸುವ ಭರವಸೆಯನ್ನು ಕಾಂಗ್ರೆಸ್ ಹೈಕಮಾಂಡ್ ನೀಡಿದೆ.

"ಸತಿ ಪದ್ದತಿ ಪುನಃ ಬಂದರೆ ಕಷ್ಟ" ಎಂದ ಪ್ರಜ್ಞಾವಂತ ಯುವತಿ!

ಯಾವುದೇ ರಾಜಕೀಯ ಪಕ್ಷದಲ್ಲಿ ಯಾವುದೇ ಒಂದು ಸಣ್ಣ ಹುದ್ದೆಗೂ ಪೈಪೋಟಿ ಏರ್ಪಡುವುದು ಸಹಜ ಹಾಗೆಯೇ ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ಏರ್ಪಟ್ಟಿದೆ ಎಂದು ನಾವು ನೀವು ಅಂದುಕೊಳ್ಳಬಹುದು. ಅದು ನಿಜವೂ ಕೂಡ. ಆದರೆ, ಈ ಸಹಜ ಪ್ರಕ್ರಿಯೆಯ ಹಿಂದೆ ಅಂದು ಬಿಜೆಪಿ ಬಿತ್ತಿದ ವಿಷಬೀಜ ಗಿಡವಾಗಿ ಬೆಳೆದು ಇದೀಗ ಹೆಮ್ಮರವಾಗಿ ಬೆಳೆದಿದ್ದು ಮುಂದೊಂದು ದಿನ ಅದು ಭವಿಷ್ಯದ ಸರ್ಕಾರಕ್ಕೆ ತೊಡಕಾಗಿ ಪರಿಣಮಿಸಲಿದೆ ಎಂಬುದು ಸುಳ್ಳಲ್ಲ!

ನಿಜಕ್ಕೂ ವಿದೇಶದಲ್ಲಿ ದೇಶದ ಮಾನ ಕಳೆದಿದ್ದವರು ಮೋದಿಯವರಲ್ಲವೇ?

ಹಾಗೆಯೇ ಇದುವೇ ಬಿಜೆಪಿಯ ಹಿಂದಿರುವ ಮನುವಾದಿ 'ಸಂಘ' ಟನೆಗಳ 'ದೂರಾಲೋಚನೆಯ ದುರಾಲೋಚನೆ' ಎಂಬುದು ಕೂಡ ಸುಳ್ಳಲ್ಲ!

ಹೌದು, ಕಾಂಗ್ರೆಸ್ ಪಕ್ಷದಲ್ಲಿ ಅಂದರೆ ಸಿದ್ದರಾಮಯ್ಯ- ಡಿಕೆಶಿ ನಡುವೆ ಅಂತಹ ಯಾವುದೇ ಪೈಪೋಟಿ ಇಲ್ಲದಿದ್ದ ಸಂಧರ್ಭದಲ್ಲಿ ಅಂದರೆ ಚುನಾವಣೆಗೆ ಹಲವು ಸಮಯದ ಹಿಂದೆಯೇ ಎಲ್ಲರೂ ಒಗ್ಗಟ್ಟಾಗಿ ರಾಜ್ಯಾದ್ಯಂತ ಪ್ರವಾಸ ನಡೆಸಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಕಾಲಘಟ್ಟದಲ್ಲಿ ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಸುಳಿವು ಹೊಂದಿದ್ದ ಕೆಲವು ಎಂಜಲುಕಾಸಿ ಮೋದ್ಯಮಗಳು, 'ಯಾವುದಕ್ಕೂ ಇರಲಿ' ಎಂಬ ಮುಂದಾಲೋಚನೆ ಹೊಂದಿದ್ದ ಬಿಜೆಪಿಯ ಹಿಂದಿನ ಸಂಘಟನೆಗಳ ನಿರ್ದೇಶನ ಮತ್ತು ನಿರ್ಮಾಪಕತ್ವದ ಮೇರೆಗೆ 'ಈ ಪೈಪೋಟಿ'ಯನ್ನು ಹುಟ್ಟುಹಾಕಿದ್ದವು.

ರಾಹುಲ್ v/s ಆರೆಸೆಸ್, ಬಿಜೆಪಿ ಮತ್ತು ಮೋದಿ?

ಡಿಕೆಶಿ, ಪರಮೇಶ್ವರ್, ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ, ಖರ್ಗೆ ಮತ್ತಿತರ ನಾಯಕರುಗಳು ಹೋದಲ್ಲಿ ಬಂದಲ್ಲೆಲ್ಲಾ 'ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು?' ಎಂದು ಅದೊಂದು ರಾಷ್ಟ್ರೀಯ ಸಮಸ್ಯೆಯೇನೋ ಎಂಬಂತೆ ಪ್ರಶ್ನಿಸುತ್ತಿದ್ದವು. ಆ ಪ್ರಶ್ನೆಗಳಿಗೆ ಕಾಂಗ್ರೆಸ್ ನ ನಾಯಕರುಗಳು ಸಹಜವಾಗಿಯೇ 'ಆಯ್ಕೆಯಾಗುವ ಪ್ರತಿಯೊಬ್ಬರಿಗೂ ಮುಖ್ಯಮಂತ್ರಿ ಹುದ್ದೆಯನ್ನು ಕೇಳುವ ಅಧಿಕಾರ ಇದೆ' ಎಂದು ಎಂದು ಉತ್ತರಿಸುವ ಮೂಲಕ ಅವರುಗಳ ಬಾಯಿ ಮುಚ್ಚಿಸುತ್ತಿದ್ದರು. ಆದರೆ ಈ ಕುರಿತು ಆ ಮೋದ್ಯಮಗಳು ತಮ್ಮ ಸ್ಟುಡಿಯೋಗಳಲ್ಲಿ ಅದ್ಯಾರ‌್ಯಾರೋ ಅನಾಮಿಕರನ್ನೆಲ್ಲಾ ಕೂರಿಸಿಕೊಂಡು ಗಂಟೆಗಟ್ಟಲೆ ಚರ್ಚೆ ನಡೆಸುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಹುದ್ದೆಗೆ ಬಾರೀ ಪೈಪೋಟಿ ಇದೆ ಎಂಬಂತೆ ಬಿಂಬಿಸುತ್ತಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಚ್ಚಾಟ ನಡೆಸುತ್ತಾರೆ ಎಂಬಂತೆ ಮತದಾರರ ತಲೆಯಲ್ಲಿ ತುಂಬಿಸುವ ಕಾರ್ಯದಲ್ಲಿ ತೊಡಗಿದ್ದವು. ಈ ನಡುವೆ ದಲಿತ ಮುಖ್ಯಮಂತ್ರಿಯ ಕುರಿತು ಕೂಡ ಚರ್ಚೆಯನ್ನು ಹುಟ್ಟುಹಾಕಿ ಮತ್ತಷ್ಟು ಪೈಪೋಟಿ ಏರ್ಪಡಲು ಪ್ರಯತ್ನ ಪಡುತ್ತಿದ್ದವು. ಮಲ್ಲಿಕಾರ್ಜುನ ಖರ್ಗೆಯವರನ್ನು ಏಕೆ ಮುಖ್ಯಮಂತ್ರಿ ಮಾಡಿಲ್ಲ, ಪರಮೇಶ್ವರ್ ರವರಿಗೆ ಏಕೆ ಮುಖ್ಯಮಂತ್ರಿ ಪದವಿ ನೀಡಿಲ್ಲ ಎಂದೆಲ್ಲಾ ಪ್ರಶ್ನಿಸುವ ಮೂಲಕ ದಲಿತರನ್ನು ಕಾಂಗ್ರೆಸ್ ವಿರುದ್ಧ ಎತ್ತಿಕಟ್ಟುವ ಪ್ರಯತ್ನವನ್ನು ಕೂಡ ನಡೆಸಿದ್ದವು.

"ಅದಾನಿ ಕಂಪೆನಿಗೆ 20 ಸಾವಿರ ಕೋಟಿ ಎಲ್ಲಿಂದ ಬಂತು? ಪ್ರಧಾನಿ- ಅದಾನಿ ಸಂಬಂಧ ಏನು?" ಈ ಮಾತುಗಳಿಗೆ ಮೋದಿ ಬೆದರಿದರೇ?

ಈ ನಡುವೆ ಬಿಜೆಪಿಯ ಹಿಂದಿರುವ ಮನುವಾದಿ 'ಸಂಘ' ಟನೆಯ ಕುರಿತು ಅಪಾರವಾದ ಆಕ್ರೋಶ ಹೊಂದಿರುವ ಸಿದ್ದರಾಮಯ್ಯ ನವರು ಮತ್ತೆ ಮುಖ್ಯಮಂತ್ರಿ ಆದರೆ ಖಂಡಿತವಾಗಿಯೂ ತಮಗೆ ಉಳಿಗಾಲವಿಲ್ಲ. ಅವರು ತಮ್ಮ ಪಕ್ಷದ ಹಿಂದಿರುವ ಸಂವಿಧಾನ ವಿರೋಧಿ ಸಂಘಟನೆಗಳನ್ನು ನಿಷೇಧಿಸದೆ ಇರಲಾರರು. ಅವರು ಈ ಹಿಂದಿನ ತಮ್ಮ ಆಪರೇಷನ್ ಕಮಲ ಸರ್ಕಾರದ ಅವಧಿಯ ಅಕ್ರಮಗಳ ರೂವಾರಿಗಳನ್ನು ಜೈಲಿಗಟ್ಟದೆ ಇರಲಾರರು. ಅದು ಭವಿಷ್ಯದಲ್ಲಿ ಬಿಜೆಪಿಯ ಬೆಳವಣಿಗೆಗೆ ತೊಡಕಾಗಲಿದೆ ಎಂಬ ಕುರಿತು ಅರಿವು ಹೊಂದಿರುವ ಬಿಜೆಪಿ ತನ್ನ ಬೆಂಬಲಿಗ ಮಾದ್ಯಮಗಳ ಮೂಲಕ ಮುಖ್ಯಮಂತ್ರಿ ಆಯ್ಕೆಯ ವಿಚಾರದಲ್ಲಿ ಮತ್ತಷ್ಟು ಗೊಂದಲವನ್ನು ಹುಟ್ಟುಹಾಕುತ್ತಿದೆ. ಆ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಒಡಕು ಮೂಡಿಸುವ ದುರುದ್ದೇಶವನ್ನು ಕೂಡ ಹೊಂದಿದೆ.

ಮನುವಾದಿಗಳಿಗೆ ಸಿದ್ದರಾಮಯ್ಯನವರ ಮೇಲೆ ಈ ಪರಿಯ ದ್ವೇಷವೇಕೆ ಗೊತ್ತೇ?

ಹಾಗೆಯೇ ಒಂದು ವೇಳೆ 'ಆದಾಯ ಮೀರಿದ ಆಸ್ತಿ ಗಳಿಕೆ' ಆರೋಪ ಹೊಂದಿರುವ ಡಿಕೆಶಿಯವರು ಮುಖ್ಯಮಂತ್ರಿ ಆದರೆ ತಮ್ಮ ಕೈಯಲ್ಲಿರುವ ಸಿಬಿಐ ಮೂಲಕ ಡಿಕೆಯವರನ್ನು ಆ ಪ್ರಕರಣದ ವಿಚಾರಣೆಯ ನೆಪದಲ್ಲಿ ಅಥವಾ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ನೆಪದಲ್ಲಿ ಬಂದಿಸುವ ಮೂಲಕ 'ಜೈಲಿಗೆ ಹೋದ ಕಾಂಗ್ರೆಸ್ ಮುಖ್ಯಮಂತ್ರಿ' ಎಂಬ ಕಳಂಕವನ್ನು ಕಾಂಗ್ರೆಸ್ ಗೆ ಮೆತ್ತುವ ಆ ಮೂಲಕ ಕಾಂಗ್ರೆಸ್ ಸರಕಾರವನ್ನು ಕೆಡಹುವ ತದನಂತರ ಆಪರೇಷನ್ ಕಮಲ ಮತ್ತಿತರ ಅನೈತಿಕ ವಿಧಾನವನ್ನು ಅನುಸರಿಸಿ ಬಿಜೆಪಿ ಸರ್ಕಾರವನ್ನು ಮತ್ತೆ ಅಸ್ಥಿತ್ವಕ್ಕೆ ತರುವ ತಂತ್ರಗಾರಿಕೆಯನ್ನು ಹೊಂದಿದೆ ಎಂದು ಬೆರಳು ಚೀಪುವ ಎಳೆಯ ಮಕ್ಕಳಿಗೂ ತಿಳಿಯುವ ಸಂಗತಿಯಾಗಿದೆ.

ಬಿಜೆಪಿಯ "ಬ್ರಾಹ್ಮಣೀಯ ಹಿಂದುತ್ವ"ದ ಏಕರೂಪ ನಾಗರಿಕ ಸಂಹಿತೆ ಹಿಂದೂ ಮಹಿಳೆಯರಿಗೇ ಮಾರಕ

ಬಹುಶಃ ಈ ಕುರಿತಾದ ಸೂಕ್ಷ್ಮತೆಯನ್ನು ಅರಿತಿರುವ ಕಾಂಗ್ರೆಸ್ ಹೈಕಮಾಂಡ್ ಸಮಸ್ಯೆಯನ್ನು ಪಕ್ಷಕ್ಕೆ ಯಾವುದೇ ತೊಂದರೆಯಾಗದಂತೆ ಬೇರಿನಲ್ಲೇ ಚಿವುಟಿ ಹಾಕುವ ಮೂಲಕ ಪರಿಹರಿಸುವ ಕೆಲಸ ಮಾಡಬೇಕು ಎಂಬುದು ಜನಸಾಮಾನ್ಯರ ಹಾಗೂ ಕಾಂಗ್ರೆಸ್ ಮತದಾರರುಗಳ ಒಕ್ಕೊರಲ ಅಭಿಪ್ರಾಯವಾಗಿದೆ.

"ದೇಶಕ್ಕಾಗಿ ಆರೆಸ್ಸೆಸ್ ಬಿಟ್ಟೆ" ಪುಸ್ತಕ ವಿಮರ್ಶೆ

8 ಬಾರಿ ಚಾಮುಂಡೇಶ್ವರಿಯಿಂದ, 2 ಬಾರಿ ವರುಣಾದಿಂದ ಗೆದ್ದಿದ್ದ ನಾನು ಅಲೆಮಾರಿನಾ? : ಸಿದ್ದರಾಮಯ್ಯ

ಕಾಂಗ್ರೆಸ್ ಈ ದೇಶಕ್ಕೇನು ಕೊಟ್ಟಿದೆ?

ಮಣಿಪುರದ ಪರಿಸ್ಥಿತಿ ಇಡೀ ದೇಶದಲ್ಲಿ ಬರುವ ಮೊದಲು ಎಚ್ಚೆತ್ತುಕೊಳ್ಳಿ!

ಮನುವಾದಿಗಳಿಗೆ ಸಿದ್ದರಾಮಯ್ಯನವರ ಮೇಲೆ ಈ ಪರಿಯ ದ್ವೇಷವೇಕೆ ಗೊತ್ತೇ?

ಸಾವರ್ಕರ್ ‌ರನ್ನು ಅಂಡಮಾನ್ ಜೈಲಿನಲ್ಲಿ ಕರಿನೀರ ಶಿಕ್ಷೆಗೆ ಒಳಪಡಿಸಿದ್ದು ಏಕೆ ಗೊತ್ತೇ?