Advertisement

ಮೀಸಲಾತಿ: ಯಾವ್ಯಾವ ಜಾತಿಗಳಿಗೆಷ್ಟು ಗೊತ್ತೇ?

Advertisement

ಮೀಸಲಾತಿ: ಯಾವ್ಯಾವ ಜಾತಿಗಳಿಗೆಷ್ಟು ಗೊತ್ತೇ?

ಸಂಪಾದಕೀಯ

ಅಂಬೇಡ್ಕರ್ ಎಂದೊಡನೆ ಮಾನವತಾವಾದಿಗಳಿಗೆ "ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು" ಸಿದ್ದಾಂತದ ಸಂವಿಧಾನದ ನೆನಪಾದರೆ, ಸನಾತನಿ ಮನುವಾದಿಗಳಿಗೆ ಅದೇ ಮೀಸಲಾತಿಯ ನೆನಪಾಗಿ ಹೊಟ್ಟೆ ಉರಿಯತೊಡಗುತ್ತದೆ.

ಮೀಸಲಾತಿ ಎಂದರೆ ಕೇವಲ ಅಲ್ಪಸಂಖ್ಯಾತರು ಮತ್ತು ದಲಿತರಿಗೆ ಮಾತ್ರವೇ ನೀಡಲಾಗುತ್ತಿರುವ ವಿಶೇಷ ಸವಲತ್ತು ಎಂಬಂತೆ ದೇಶದಾದ್ಯಂತ ಅಪಪ್ರಚಾರ ನಡೆಸಿರುವ ಈ ಮನುವಾದಿ ವೈದಿಕಶಾಹಿ ವರ್ಗ ಒಕ್ಕಲಿಗ ರಲ್ಲಿ ಬಡವರು ಇಲ್ಲವೇ ಎಂದು ಒಕ್ಕಲಿಗ ರಲ್ಲಿ ಕೇಳಿದರೆ, ಕುರುಬರಲ್ಲಿ ಬಡವರು ಇಲ್ಲವೇ ಎಂದು ಆ ಜಾತಿಯವರಲ್ಲಿ, ಬಂಟರಲ್ಲಿ ಬಡವರು ಇಲ್ಲವೇ ಎಂದು ಬಂಟರಲ್ಲಿ , ಬಿಲ್ಲವರಲ್ಲಿ ಬಡವರಿಲ್ಲವೇ ಎಂದು ಆ ವರ್ಗದ ಜನರಲ್ಲಿ, ರಾಮಕ್ಷತ್ರೀಯರಲ್ಲಿ ಇಲ್ಲವೇ ಎಂದು ಅವರಲ್ಲಿ, ವಿಶ್ವಕರ್ಮರಲ್ಲಿ ಬಡವರಿಲ್ಲವೇ ಎಂದು ಅವರಲ್ಲಿ, ಮೀನುಗಾರ ಜಾತಿಯಲ್ಲಿ ಬಡವರು ಇಲ್ಲವೇ ಎಂದು ಆ ವರ್ಗದ ಜನರಲ್ಲಿ, ಕೊಡವರಲ್ಲಿ ಇಲ್ಲವೇ ಎಂದು ಆ ವರ್ಗದ ಜನರಲ್ಲಿ ಹೀಗೆ ಆಯಾಯ ವರ್ಗದವರಲ್ಲಿ ಕೇಳುವ ಮೂಲಕ ಮೀಸಲಾತಿ ವಿರೋದಿ ಭಾವನೆ ಬಿತ್ತುವ ಕಾರ್ಯದಲ್ಲಿ ತೊಡಗಿದೆ.

ಆದರೆ ಅದು ನಿಜವಲ್ಲ, ನಿಜಕ್ಕೂ ಮೀಸಲಾತಿ ಪಡೆಯುವ ಜಾತಿಗಳು/ ವರ್ಗಗಳು ಇಂತಿವೆ:

•ಕೆಟಗರಿ 1 ರಲ್ಲಿ ಗೊಲ್ಲ, ಪಿಂಜಾರ, ಉಪ್ಪಾರ ಇತ್ಯಾದಿ 95 ಉಪಜಾತಿಗಳಿಗೆ ಶೇಕಡ 4 ಮೀಸಲಾತಿ ಪಡೆಯುತ್ತಿದೆ.

•ಕೆಟಗರಿ 2(a) ರಲ್ಲಿ ಕುರುಬ, ಈಡಿಗ, ಮಡಿವಾಳ, ಕುಂಬಾರ, ವಿಶ್ವಕರ್ಮ, ಕ್ಷೌರಿಕ, ದೇವಾಂಗ, ತಿಗಳ, ಮತಾಂತರಗೊಂಡ ಕ್ರೈಸ್ತರು ಇತ್ಯಾದಿ 102 ಜಾತಿಗಳು ಸೇರಿ ಶೇಕಡ 15.

•ಕೆಟಗರಿ 2(b) ರಲ್ಲಿ ಮುಸ್ಲಿಂ ಮತ್ತಿತರ ಸಮಾನಂತರ ಜಾತಿಗಳಿಗೆ ಶೇಕಡ 2.

•ಕೆಟಗರಿ 3(a)ರಲ್ಲಿ ಒಕ್ಕಲಿಗ, ರೆಡ್ಡಿ, ಬಂಟ, ಕೊಡವ ಇತ್ಯಾದಿ 12 ಜಾತಿಗಳಿಗೆ ಶೇಕಡ 4.

•ಕೆಟಗರಿ 3(b) ರಲ್ಲಿ ಲಿಂಗಾಯತ ಮತ್ತಿತರ 42ಜಾತಿಗಳಿಗೆ ಶೇಕಡ 5.

•S.T ಕೆಟಗರಿಯಲ್ಲಿ ನಾಯಕ, ವಾಲ್ಮಿಕಿ, ಜೇನುಕುರುಬ, ಕಾಡು ಕುರುಬ, ಸೋಲಿಗ ಇತ್ಯಾದಿ 65ಜಾತಿಗಳಿಗೆ ಶೇಕಡ 3.

•SC ಕೆಟಗರಿಯಲ್ಲಿ ಹೊಲೆಯ, ಮಾದಿಗ, ಸಮಗಾರ, ಡೋಹಾರ, ಭೋವಿ, ಲಂಬಾಣಿ, ಕೊರಚ, ಕೊರಮ ಇತ್ಯಾದಿ 101 ಜಾತಿಗಳಿಗೆ ಶೇಕಡ 15.

ಈ ಮೇಲಿನ ಮೀಸಲಾತಿ ಪಡೆದ ಜಾತಿಗಳನ್ನು ಒಟ್ಟು ಸೇರಿಸಿದರೆ ಶೇಕಡ 49.5 ಮೀಸಲಾತಿ ಮಾತ್ರವೇ ನೀಡಿದಂತಾಗುತ್ತದೆ. ಇನ್ನುಳಿದ ಶೇಕಡ 50.5 ಮೀಸಲಾತಿ ಇರುವುದು ಸಾಮಾನ್ಯ ವರ್ಗಕ್ಕೆ ಅಂದರೆ ಶೈಕ್ಷಣಿಕ ವಾಗಿ, ಔದ್ಯೋಗಿಕ ವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದುವರಿದ ವರ್ಗಕ್ಕೆ. ಆದರೆ ಒಂದು ವಿಷಯ ತಿಳಿದಿರಲಿ ಗೆಳೆಯರೆ, ಸ್ವಾತಂತ್ರ್ಯ ಸಿಗುವ ವೇಳೆಗೆ ಈ ದೇಶದಲ್ಲಿ ಈ ಮೇಲೆ ಹೇಳಿದ ಮುಂದುವರಿದ ವರ್ಗಕ್ಕೆ ಸಂಬಂಧ ಪಟ್ಟಂತೆ ಇದ್ದವರು ಬ್ರಾಹ್ಮಣ, ಪಟೇಲ್, ಬನಿಯಾ ಸಮುದಾಯ ಮುಂತಾದ ಮೇಲ್ಜಾತಿಯ ವರ್ಗ ಮಾತ್ರವೇ ಆಗಿದೆ.


(ಜಾತಿ ಧರ್ಮಗಳೇ ಇಲ್ಲದ ಕಾಲದಲ್ಲಿ ಮನುಷ್ಯ ಅದೆಷ್ಟು ಅನೋನ್ಯತೆಯಿಂದಿದ್ದ! ಅಲ್ಲವೇ?)

ಮೀಸಲಾತಿಯ ಇತಿಹಾಸ:

ಮೀಸಲಾತಿ ಮೊದಲಿಗೆ ಆರಂಭಗೊಂಡದ್ದು ಕ್ರಿ.ಪೂ 185ರಲ್ಲಿ. ಅಂದು ಸುಮತಿಭಾರ್ಗವ ಮನುಸ್ಮೃತಿ ಯನ್ನು ರಚಿಸುವ ಮೂಲಕ ಮೀಸಲಾತಿಯನ್ನು ಜಾರಿಗೆ ತರುತ್ತಾನೆ.

ಆ ಮೀಸಲಾತಿಯ ಪ್ರಕಾರ:

•ಬ್ರಾಹ್ಮಣ ಮಾತ್ರವೇ ವಿದ್ಯೆ ಕಲಿತು ಆಸ್ಥಾನದಲ್ಲಿ ರಾಜಗುರು, ಮಂತ್ರಿ, ಖಜಾನಾಧಿಕಾರಿ ಮತ್ತಿತರ ಪ್ರಮುಖ ಹುದ್ದೆಯನ್ನು ನಿಬಾಯಿಸಬೇಕು.

•ಕ್ಷತ್ರಿಯನಾದವ ರಾಜ ಪಟ್ಟವನ್ನು ಏರಿ ರಾಜ್ಯವನ್ನು ವೈರಿಗಳಿಂದ ರಕ್ಷಿಸಬೇಕು.

•ವೈಶ್ಯ ತಲೆಹೊರೆಯ ಮೂಲಕ, ದೋಣಿ , ಎತ್ತಿನಗಾಡಿಗಳ ಮೂಲಕ ಊರೂರಿಗೆ ತೆರಳಿ ವ್ಯಾಪಾರ- ವಹಿವಾಟು ನಡೆಸಿ ರಾಜ ಆಸ್ಥಾನಕ್ಕೆ ಕಾಲಕಾಲಕ್ಕೆ ತೆರಿಗೆಯನ್ನು ಸಲ್ಲಿಸಬೇಕು.

•ಶೂದ್ರ ವಂಶಪಾರಂಪರ್ಯ ವಾಗಿ ಇವರೆಲ್ಲರ ಗುಲಾಮನಾಗಿ ಕೆಲಸ ಮಾಡಿಕೊಂಡಿರಬೇಕು.

ಈ ಮನುಸ್ಮೃತಿ ಯ ಆದಾರದ ಮೇಲೆ ಪುಷ್ಯಮಿತ್ರ ಶುಂಗ ಎಂಬ ರಾಜ ಶಾಸನ ಮಾಡುತ್ತಾನೆ. ಆ ನಂತರ ಮನುಸ್ಮೃತಿ ಕಾನೂನುಗಳು ನಿರಂತರವಾಗಿ ಬೇರೆಬೇರೆ ಆಡಳಿತಗಾರರ ಕಾಲಮಾನಗಳಲ್ಲಿ ಧಾರ್ಮಿಕತೆ, ಸಂಪ್ರದಾಯ, ಪದ್ದತಿ, ಸಂಸ್ಕೃತಿ ಮುಂತಾದ ಹೆಸರಿನಲ್ಲಿ ನಡೆದುಕೊಂಡು ಬಂದು ಬರೋಬ್ಬರಿ 2000 ವರ್ಷಗಳಷ್ಟು ಕಾಲ ಚಾಲ್ತಿಯಲ್ಲಿದ್ದವು. ಈ 20ಶತಮಾನಗಳ ಅವಧಿಯಲ್ಲಿ ಹಿಂದುಳಿದ ವರ್ಗ, ದಲಿತರು ಮತ್ತು ಅಲ್ಪಸಂಖ್ಯಾತರ‌್ಯಾರು ಕೂಡ ಯಾವುದೇ ಸೌಲಭ್ಯಗಳ ಸುಖವನ್ನು ಅನುಭವಿಸಿರಲೇ ಇಲ್ಲ. ಬ್ರಾಹ್ಮಣ ವರ್ಗ ಮಾತ್ರವೇ ಈ ಭೂಮಿಯ ಸಕಲ ಸಂಪತ್ತು, ಸವಲತ್ತು ಮುಂತಾದ ಸುಖಗಳನ್ನು ಅನುಭವಿಸಿತ್ತು ಮತ್ತು ತಲೆತಲಾಂತರವಾಗಿ ಇತರ ವರ್ಗವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ, ದೈಹಿಕವಾಗಿ ಮತ್ತು ಲೈಂಗಿಕವಾಗಿ ಕೂಡ ಶೋಷಿಸಿತ್ತು.

1947ರಲ್ಲಿ ಈ ದೇಶಕ್ಕೆ ಸ್ವಾತಂತ್ರ್ಯ ಸಿಗುವ ತನಕವೂ ಈ ಶೋಷಣೆ ಮುಂದುವರಿದಿತ್ತು. ಆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ 1950ರಲ್ಲಿ ಜಾರಿಗೊಳಿಸಿದ ಅಂಬೇಡ್ಕರ್ ಸಂವಿಧಾನವು ಸಂಪೂರ್ಣವಾಗಿ ಮನುಸ್ಮೃತಿ ಸಂವಿಧಾನಕ್ಕೆ ವಿರುದ್ದವಾಗಿ ಹಿಂದುಳಿದ ವರ್ಗಕ್ಕೆ 27%, ಪರಿಶಿಷ್ಟ ವರ್ಗಕ್ಕೆ 15%, ಪರಿಶಿಷ್ಟ ಜಾತಿಗೆ 7.5% ಮತ್ತು ಸಾಮಾನ್ಯ ವರ್ಗಕ್ಕೆ 50.5% ಮೀಸಲಿಟ್ಟಿತ್ತು. ಇದೀಗ ಆ ಮೀಸಲಾತಿ ತಗೆದು ಹಾಕುವ ಕುರಿತು ಪ್ರಯತ್ನದಲ್ಲಿ ಆರೆಸ್ಸೆಸ್ ಮತ್ತಿತರ ಪುರೋಹಿತಶಾಹಿ ಪರ ಸಂಘಟನೆಗಳು ಪ್ರಯತ್ನಿಸುತ್ತಿವೆ.

ನಮ್ಮ ಪ್ರಶ್ನೆ ಇಷ್ಟೆ... 20ಶತಮಾನಗಳ ಕಾಲ ವೈದಿಕಶಾಹಿ ವರ್ಗ ಅನುಭವಿಸಿದ ಸೌಲಭ್ಯಗಳ ಮೀಸಲಾತಿ ಹಿಂದುಳಿದ ವರ್ಗ ಮತ್ತು ದಲಿತ ವರ್ಗಕ್ಕೆ ಕೇವಲ 70ವರ್ಷಗಳ ಕಾಲ ಕೊಟ್ಟರೆ ಸಾಕೇ? ಒಂದು ವೇಳೆ ಮೀಸಲಾತಿ ರದ್ದುಮಾಡುವುದೇ ಆದರೆ ದೇಶದ ಸಂಪತ್ತನ್ನು ತಲಾವಾರು ಆಧಾರದ ಮೇಲೆ ಸಮಾನವಾಗಿ ಹಂಚಿಕೆ ಮಾಡಿ ಆ ನಂತರವೇ ರದ್ದುಪಡಿಸ ಬೇಕಲ್ಲವೇ?

ಇಷ್ಟಾಗಿಯೂ ಬಿಜೆಪಿ ಪಕ್ಷದಲ್ಲಿದ್ದುಕೊಂಡು ಮೀಸಲಾತಿಯ ವಿರುದ್ದವಾದ ವೈದಿಕಶಾಹಿ ವರ್ಗದ ಜೊತೆ ದ್ವನಿ ಸೇರಿಸುವ ಹಿಂದುಳಿದ ಮತ್ತು ದಲಿತ ವರ್ಗದ ಯುವಕರಲ್ಲಿ ಒಂದು ಪ್ರಶ್ನೆ. ನಿಮ್ಮ ಹೋರಾಟ ಯಾರ ವಿರುದ್ದ? ಮುಂದಿನ ಜನಾಂಗದ ನಮ್ಮದೆ ಮಕ್ಕಳ, ಮೊಮ್ಮಕ್ಕಳ ವಿರುದ್ದವೇ?

ಆದರೆ ಇದು ಮೀಸಲಾತಿಯ ನೈಜ ಫಲಾನುಭವಿಗಳಿಗೆ ಅರ್ಥವೇ ಆಗುತ್ತಿಲ್ಲವೇ?

Advertisement
Advertisement
Recent Posts
Advertisement