Advertisement

ಕೊನೆಗೂ ಬ್ರಿಜ್ ಭೂಷಣ್ ಹೆಸರು ಕೈಬಿಟ್ಟ ಬೆಂಗಳೂರು ಕಂಬಳ ಸಮಿತಿ!

Advertisement

ಬೆಂಗಳೂರು ಕಂಬಳದಲ್ಲಿ ಭಾರತ ಕುಸ್ತಿ ಫೆಡರೇಷನ್‌ ಮಾಜಿ ಅಧ್ಯಕ್ಷ, ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಆರೋಪಕ್ಕೆ ಒಳಗಾಗಿರುವ ಬಿಜೆಪಿ ಸಂಸದ, ಬ್ರಿಜ್‌ಭೂಷಣ್ ಶರಣ್ ಸಿಂಗ್ ಭಾಗವಹಿಸುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಪ್ರಬಲ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಕಂಬಳ ಕಾರ್ಯಕ್ರಮದ ಸಂಘಟಕರು ಆರೋಪಿತ ಸಿಂಗ್ ಹೆಸರನ್ನು ಆಹ್ವಾನ ಪತ್ರಿಕೆಯಿಂದ ಕೈಬಿಟ್ಟಿರುವ ಕುರಿತು ವರದಿಯಾಗಿದೆ.

ಭಾರತೀಯ ಕುಸ್ತಿ ಪಟುಗಳ ಒಕ್ಕೂಟದ ಮುಖ್ಯಸ್ಥರಾಗಿದ್ದ ಈ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿ ಪಟುಗಳು ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದರು ಮತ್ತು ಇವರ ವಿರುದ್ಧ ನಿರಂತರವಾಗಿ ದೊಡ್ಡ ಮಟ್ಟದಲ್ಲಿ ಹೋರಾಟವನ್ನು ಕೂಡ ನಡೆಸಿದ್ದರು. ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ಈ ಹೋರಾಟ ಪ್ರತಿಧ್ವನಿಸಿತ್ತು ಮತ್ತು ಬಾರೀ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಈ ಕುರಿತು ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಮೌನದ ಬಗ್ಗೆಯೂ ದೇಶದಾದ್ಯಂತ ಹಲವು ಪ್ರಮುಖರು ಪ್ರಶ್ನೆ ಮಾಡಿದ್ದರು.

ಅದೇ ರೀತಿಯಲ್ಲಿ ನೂತನ ಸಂಸತ್ತಿನ ಅತಿ ಹತ್ತಿರದಲ್ಲೆ ಇರುವ ಆ ಪ್ರತಿಭಟನಾ ಸ್ಥಳದಲ್ಲಿ ಪೋಲಿಸರ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸುತ್ತಿರುವ ಮೋದಿ ಸರಕಾರದ ನಡೆಯನ್ನು ವಿರೋಧಿಸಿ ಸಿದ್ದರಾಮಯ್ಯನವರು ಕೂಡ ಟ್ವೀಟ್ ಮಾಡುವ ಮೂಲಕ ಪ್ರತಿಭಟನಾಕಾರರನ್ನು ಬೆಂಬಲಿಸಿದ್ದರು.

ಹಾಗೆಯೇ, ಪ್ರತಿಷ್ಠಿತ ಬೆಂಗಳೂರು ಕಂಬಳಕ್ಕೆ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಬ್ರಿಜ್ ಭೂಷಣ್ ರನ್ನು ಅತಿಥಿಯಾಗಿ ಆಹ್ವಾನಿಸಿದ್ದರ ವಿರುದ್ಧ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ, ಪುತ್ತೂರು ಕ್ಷೇತ್ರದ ಕಾಂಗ್ರೆಸ್‌ನ ಹಾಲಿ ಶಾಸಕರೂ ಆಗಿರುವ ಹಾಗೂ ಚುನಾವಣೆಯ ಪೂರ್ವದಲ್ಲಷ್ಟೇ ಬಿಜೆಪಿಯಿಂದ ಕಾಂಗ್ರೆಸ್ ಗೆ ಸೇರ್ಪಡೆಗೊಂಡು ಸ್ಪರ್ದಿಸಿ ಗೆದ್ದಿದ್ದ ಅಶೋಕ್ ಕುಮಾರ್ ರೈಯವರ ವಿರುದ್ದವೂ ವ್ಯಾಪಕ ಟೀಕೆ ವ್ಯಕ್ತವಾಗಿತ್ತು ಮತ್ತು ಈ ಕುರಿತು ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಮೌಖಿಕ ದೂರು ದಾಖಲಾಗಿತ್ತು.

ಆಮಂತ್ರಣ ಪತ್ರಿಕೆಯ ಪ್ರಕಾರ ನವೆಂಬರ್ 25 ಮತ್ತು 26ರಂದು ಕಂಬಳ ನಡೆಯಲಿದ್ದು, 25ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರಬೇಕಿತ್ತು. ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಅವರ ಭಾಗವಹಿಸುವಿಕೆಗೆ ವಿವಿಧ ಪ್ರಗತಿಪರ ಸಂಘಟನೆಗಳು ವಿರೋಧಿಸಿದ್ದವು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜನಪರ ಹೋರಾಟಗಾರರಿಂದ ಕೂಡ ಬಾರೀ ವಿರೋಧ ವ್ಯಕ್ತವಾಗಿತ್ತು. 

ಆ ಕುರಿತು ವಿವಾದ ಆರಂಭ ಗೊಳ್ಳುತ್ತಿದ್ದಂತೆಯೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕಂಬಳದ ಮುಖಂಡ ಅಶೋಕ್ ರೈ "ಬ್ರಿಜ್‌ಭೂಷಣ್‌ ಕುಡುಬಿ ಹಾಗೂ ಸಿದ್ದಿ ಜನಾಂಗದವರಿಗೆ ಗೋವಾದಲ್ಲಿ ಕುಸ್ತಿ ತರಬೇತಿ ನೀಡಿದ್ದರು. ಸಿದ್ದಿ ಜನಾಂಗದ ಮುಖಂಡರು ಮಾಡಿದ್ದ ಮನವಿಯಂತೆ ಅವರನ್ನು ಕಂಬಳಕ್ಕೆ ಆಹ್ವಾನಿಸಲಾಗಿತ್ತು. ಎರಡು ದಿನಗಳ ಹಿಂದೆಯೇ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಿದ್ದರು. ಕೊನೆ ಗಳಿಗೆಯಲ್ಲಿ ಆಹ್ವಾನ ಪತ್ರಿಕೆ ಬದಲಿಸಿ ವಿವಾದಕ್ಕೆ ತೆರೆ ಎಳೆಯಲಾಗಿದೆ" ಎಂದು ಪ್ರತಿಕ್ರಿಯೆ ನೀಡಿದ್ದರು.

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಫೆಡರೇಶನ್ (WFI) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ (Bhushan Sharan Singh) ವಿರುದ್ಧ ದೆಹಲಿ ಪೊಲೀಸರು 1,000 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ. ರೋಸ್ ಅವೆನ್ಯೂ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಕೆಯಾಗಿತ್ತು.

ಕುಸ್ತಿಪಟುಗಳ ದೂರಿನ ಮೇರೆಗೆ ದಾಖಲಿಸಿದ FIR ಆಧರಿಸಿ ನಡೆಸಿದ ತನಿಖೆ ಬಳಿಕ ಆರೋಪಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 354, 354 A, 354 D ಮತ್ತು IPC ಸೆಕ್ಷನ್ 109/ 354/354 A/506ರ ಅಡಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಸಂತ್ರಸ್ತೆಯ ಮತ್ತು ಆಕೆಯ ತಂದೆಯ ಹೇಳಿಕೆ ಆಧಾರದ ಮೇಲೆ ನಾವು ಪೋಕ್ಸೊ (POCSO) ರದ್ದತಿ ವರದಿ ಸಲ್ಲಿಸಿದ್ದೇವೆ ಎಂದು ದೆಹಲಿ ಪೊಲೀಸ್ ವಕ್ತಾರೆ ಸುಮನ್ ನಲ್ವಾ ಹೇಳಿಕೆ ನೀಡಿದ್ದರು.

ಬ್ರಿಜ್ ಭೂಷಣ್‌ ಶರಣ್‌ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ ಕುಸ್ತಿಪಟುಗಳು (Bajrang Punia/Twitter) ಚಿತ್ರ ಕೃಪೆ: ಗೂಗಲ್

ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ ಕುರಿತಾದ ಹಲವು ಚಿತ್ರಗಳು ಮತ್ತು ಖ್ಯಾತ ವ್ಯಂಗ್ಯಚಿತ್ರಕಾರರ ವ್ಯಂಗ್ಯಚಿತ್ರಗಳು.

Advertisement
Advertisement
Recent Posts
Advertisement