Advertisement

ಗುಜರಾತ್: ಜಿಗ್ನೇಶ್ ಮೇವಾನಿ, ಶ್ರೀನಿವಾಸ್ ಬಿ.ವಿ, ಹಾರ್ದಿಕ್ ಪಟೇಲ್ ಬಂಧನ

Advertisement
ಇಂದು ಗುಜರಾತ್ ರಾಜ್ಯ ಯುವ ಕಾಂಗ್ರೆಸ್ ನ ವತಿಯಿಂದ, ಗುಜರಾತಿನ ಗಾಂಧಿನಗರದಲ್ಲಿ ನಡೆದ 'ನಿರುದ್ಯೋಗ-ಹಣದುಬ್ಬರದ ವಿರುದ್ಧ ಪ್ರತಿಭಟನೆ'ಗೆ ಪೊಲೀಸರು ಅವಕಾಶ ನಿರಾಕರಿಸಿದರು ಮತ್ತು ಕಾಂಗ್ರೆಸ್ ಯುವ ನಾಯಕರಾದ ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ ಮತ್ತು ಶ್ರೀನಿವಾಸ್ ಬಿ.ವಿ ಮತ್ತು ಸಹಸ್ರಾರು ಯುವಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದರು.

"ಪ್ರತಿಭಟನೆಯನ್ನು ಹತ್ತಿಕ್ಕುವ ಕುತಂತ್ರದ ಭಾಗವಾಗಿ ಕಾಂಗ್ರೆಸ್ ಯುವನಾಯಕರನ್ನು ಬಂದಿಸಲಾಗಿದೆ. ಅಸಮರ್ಥ ಸರ್ಕಾರದ ನಿಷೇಧದ ನಡುವೆಯೂ ಸಹಸ್ರಾರು ಹೋರಾಟಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ" ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಧ್ರಾ ಹೇಳಿದ್ದಾರೆ.

"ಈ ಚಳುವಳಿ ಇಲ್ಲಿಗೇ ನಿಲ್ಲುವುದಿಲ್ಲ. ಯುವಕರು ಎಚ್ಚೆತ್ತುಕೊಂಡಿದ್ದಾರೆ. ಬಿಜೆಪಿ ಸರ್ಕಾರ ನಮ್ಮನ್ನು ಬಂಧಿಸಬಹುದು ಪ್ರತಿಭಟಿಸದಂತೆ ತಡೆಯಬಹುದು, ಆದರೆ ದೇಶದ ಕೋಟ್ಯಂತರ ನಿರುದ್ಯೋಗಿ ಯುವಕರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ" ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಯವರು ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
Advertisement
Advertisement
Recent Posts
Advertisement