"ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಕುರಿ ಮಾಂಸ ತಿಂದ ಚರ್ಬಿ" ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರವರನ್ನು ತನ್ನ ಯೋಗ್ಯತೆ ಮೀರಿ ಟೀಕಿಸಿರುವ ಸಂಸದ ಪ್ರತಾಪಸಿಂಹಗೆ ಅಹಂಕಾರದ ಚರ್ಬಿ ತಲೆಗಡರಿದೆ. ಇದು ಕುರಿ ಮಾಂಸದ ಚರ್ಬಿಯಂತಲ್ಲ ಸಮಾಜಕ್ಕೆ ವಿಷ ಹರಿಸುವ ಅಪಾಯಕಾರಿ ಚರ್ಬಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರತಿಕ್ರಿಯಿಸಿದೆ.
ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ನಿಂದ ಬಿಜೆಪಿ ಬಿಚಲಿತಗೊಂಡಿದೆ: ಕಾಂಗ್ರೆಸ್
ಪ್ರತಾಪ ಸಿಂಹ ಹೇಳಿಕೆ ಅವರ ಮನುವಾದಿ ಮಾನವೀಯ ಮತ್ತು ರಾಜಕೀಯ ಸಂಸ್ಕೃತಿಯ ಪ್ರತೀಕ. ಮನುವಾದಿಗಳಿಗೆ ಮಾಂಸ ಅಹಂಕಾರವಾಗಿ ಕಾಣುವುದರಲ್ಲಿ ಆಶ್ಚರ್ಯವಿಲ್ಲ. ಪ್ರಧಾನಿ ಮೋದಿಯನ್ನು ಮೆಚ್ಚಿಸುವ ಭರದಲ್ಲಿ ಪ್ರತಾಪಸಿಂಹ ಸಿದ್ಧರಾಮಯ್ಯನವರ ಮೇಲೆ ಮಾಡಿದ ಠೀಕೆ ಸಮಗ್ರ ಮಾಂಸಹಾರಿಗಳನ್ನು ಮತ್ತು ಮಾಂಸಾಹಾರಿ ಜನಾಂಗವನ್ನೆ ನಿಂದಿಸಿದಂತಾಗಿದೆ. ಇದೊಂದು ಜನಾಂಗೀಯ ನಿಂದನೆಯ ಉದ್ಧಟತನದ ತಿಳಿಗೇಡಿ ಹೇಳಿಕೆ ಎಂದು ಕಾಂಗ್ರೆಸ್ ವ್ಯಾಖ್ಯಾನಿಸಿದೆ.
ಕಾಂಗ್ರೆಸ್ ಈ ದೇಶಕ್ಕೇನು ಕೊಟ್ಟಿದೆ?
ಕಳೆದ 6 ತಿಂಗಳಲ್ಲಿ ಸಂಸದ ಪ್ರತಾಪಸಿಂಹ ಕ್ಷೇತ್ರದಲ್ಲಿ 6 ಅಮೂಲ್ಯ ಬಡಜೀವಗಳು ಹುಲಿಗಳಿಗೆ ಬಲಿಯಾಗಿವೆ. ಅದೆಷ್ಟೋ ಜಾನುವಾರುಗಳು ಹುಲಿಗಳಿಗೆ ಆಹಾರವಾಗಿವೆ. ಯಾವೊಬ್ಬ ಸಂತ್ರಸ್ತನಿಗೂ ಈ ವರೆಗೆ ಪೂರಕ ಪರಿಹಾರ ಸಿಕ್ಕಿಲ್ಲ. ಬಹುಶಃ ಒಬ್ಬ ಜನಪ್ರತಿನಿಧಿಯಾಗಿದ್ದುಕೊಂಡು ಸಂಸದ ಪ್ರತಾಪಸಿಂಹ ಪ್ರಧಾನಿ ಮೋದೀಜಿ ಯವರನ್ನು ಸಫಾರಿಯೆಡೆಯಿಂದ ಸಂತ್ರಸ್ತರ ಮನೆಗೆ ಬೇಟಿ ನೀಡಿಸಿ ಸಾಂತ್ವನ ಹೇಳಿಸಿ ಪರಿಹಾರ ಕೊಡಿಸುವ ಕೆಲಸ ಮಾಡಬೇಕಿತ್ತು. ಇದು ಒಬ್ಬ ಜನಪ್ರತಿನಿಧಿಯಾದವನ ಕರ್ತವ್ಯವೂ ಆಗಿತ್ತು. ಆದರೆ ಹೆಲಿಕಾಪ್ಟರ್ ಸದ್ದಿಗೆ ಕಾಡಿನಲ್ಲಿ ಹುಲಿಗಳು ಹೆದರಿ ಗುಹೆ ಸೇರುತ್ತವೆ ಎಂದು ಗೊತ್ತಿದ್ದೂ ಮಾನ್ಯ ಪ್ರಧಾನಿಯವರಿಗೆ ಹುಲಿ ನೋಡಲು ಹೆಲಿಕಾಪ್ಟರ್ ಆಯೋಜಿಸಿ ಹುಲಿಗಳು ನೋಡಲು ಸಿಗದಂತೆ ಮಾಡಿದ ವಿಘ್ನ ಸಂತೋಷಿಗಳಿಗೆ ಇದು ಅರ್ಥ ಆಗಲು ಸಾಧ್ಯವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಅದಾನಿ ಕಂಪೆನಿಗೆ 20 ಸಾವಿರ ಕೋಟಿ ಎಲ್ಲಿಂದ ಬಂತು? ಪ್ರಧಾನಿ- ಅದಾನಿ ಸಂಬಂಧ ಏನು?" ಈ ಮಾತುಗಳಿಗೆ ಮೋದಿ ಬೆದರಿದರೇ?