Advertisement

"ಸತಿ ಪದ್ದತಿ ಪುನಃ ಬಂದರೆ ಕಷ್ಟ" ಎಂದ ಪ್ರಜ್ಞಾವಂತ ಯುವತಿ!

Advertisement

ಇಂದು ನಾನೊಂದು ವೈರಲ್ ಆಗಿರುವ ವಿಡಿಯೋ ತುಣುಕನ್ನು ನೋಡಿದೆ. ಆ ವಿಡಿಯೋ ದಲ್ಲಿ ನಿರೂಪಕರು ಈ ಬಾರಿ ಮೊದಲ ಮತದಾನಕ್ಕೆ ಅರ್ಹತೆ ಪಡೆದಿರುವ ಬೈಕ್‌ ಹಿಂಬದಿ ಸವಾರೆ ಯುವತಿಗೆ "ನೀವು ಈ ಬಾರಿ ಮತ ಚಲಾಯಿಸುತ್ತೀರಾ" ಎಂದು ಪ್ರಶ್ನಿಸುತ್ತಾರೆ. "ಹೌದು ನಾನು ಈ ಬಾರಿ ಮತ ಚಲಾವಣೆಗೆ ಅರ್ಹಳಾಗಿದ್ದೇನೆ" ಎನ್ನುತ್ತಾರೆ ಆಕೆ ಅತ್ಯಂತ ಹೆಮ್ಮೆಯಿಂದ. ಆಗ ನಿರೂಪಕರು ಮುಂದುವರಿದು "ಯಾವ ಸರ್ಕಾರ ಬಂದರೆ ಸೂಕ್ತ?" ಎಂದು ಪ್ರಶ್ನಿಸುತ್ತಾರೆ‌. ಅದಕ್ಕೆ ಆಕೆ ನಗುತ್ತಾ "ಬಿಜೆಪಿ ಹೊರತುಪಡಿಸಿ ಬೇರೆ ಯಾವುದೇ ಸರ್ಕಾರ ಬಂದರೂ ಅದು ಸೂಕ್ತ" ಎನ್ನುತ್ತಾರೆ. ಆಗ ನಿರೂಪಕರು "ಹಾಗಾದರೆ ಬಿಜೆಪಿಯಿಂದ ಅಷ್ಟೊಂದು ಕಷ್ಟ ಆಗಿದೆಯಾ? ಅದಲ್ಲವಾದರೆ ಯಾಕೆ ಬಿಜೆಪಿ ಹೊರತುಪಡಿಸಿ ಬೇರೆ ಪಕ್ಷ ಅಧಿಕಾರಕ್ಕೆ ಬರಬೇಕು?" ಎಂದು ಮರುಪ್ರಶ್ನೆ ಎಸೆಯುತ್ತಾರೆ. ಅದಕ್ಕಾಕೆ "ಏಕೆಂದರೆ... ಹಿಜಾಬ್ ಹೆಸರಲ್ಲಿ ಮಹಿಳೆಯರಿಗೆ ನೀಡಿದ ಹಿಂಸೆ ಇರಬಹುದು ಮತ್ತು ಇವರೇ ಅಧಿಕಾರಕ್ಕೆ ಬಂದರೆ ನೀವು ಮಹಿಳೆಯರು ಮನೆಯಲ್ಲೇ ಇರಿ. ಇದು ನಮ್ಮ ಕಲ್ಚರ್ ಅಲ್ಲ. ಸತಿ ಪದ್ಧತಿ ಪುನಃ ಬರಬೇಕು ಎಂದರೆ ನಮ್ಮ ಗತಿ ಏನು" ಎಂದು ಆಕೆ ಪ್ರಶ್ನಿಸುತ್ತಾರೆ.

ಬಹುಶಃ ಈ ದೇಶದ ಯುವಜನತೆ ಜಾಗ್ರತರಾಗುತ್ತಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ. ಏಕೆಂದರೆ ಈ ದೇಶ ಹಲವು ಶತಮಾನಗಳ ಕಾಲ ಶೋಷಣೆಯಿಂದ ನಲುಗಿದ ದೇಶ. "ಸತಿ"ಯಂತಹ ನೀಚ ಪದ್ಧತಿಯ ಮೂಲಕ ನಮ್ಮದೇ ಪೂರ್ವಜ ಮಹಿಳೆಯರನ್ನು ಜೀವಂತ ದಹಿಸಿದ ಶೋಷಕರ ನೀಚ ವಂಸಸ್ಥರು ಈಗಲೂ ಅಟ್ಟಾಹಾಸ ಮೆರೆಯುತ್ತಿರುವ ದೇಶ. ಜಾತಿಯ ಕಾರಣಕ್ಕಾಗಿ ವಿದ್ಯೆ, ಅಧಿಕಾರ, ಭೂಮಿಯ ಹಕ್ಕು ಮುಂತಾದ ಮೂಲಭೂತ ಸೌಕರ್ಯಗಳನ್ನು ನಿರಾಕರಿಸಿದ ದುಷ್ಟರು ಈಗ ಮತ್ತೆ ಆಡಳಿತದ ಚುಕ್ಕಾಣಿ ಹಿಡಿದಿರುವ ದೇಶ‌. ಈ ದೇಶದಲ್ಲಿ ಸುಮಾರು 73 ವರ್ಷಗಳ ಹಿಂದೆಯೇ ಜನಪರ ಸಿದ್ಧಾಂತದ ಆಗಿನ ಪ್ರಧಾನ ಮಂತ್ರಿ ಜವಹರಲಾಲ್ ನೆಹರೂರವರ ನೇತೃತ್ವದಲ್ಲಿ ಪ್ರಗತಿಪರ ಧ್ಯೇಯೋದ್ದೇಶಗಳನ್ನು ಹೊಂದಿರುವ ಸಂವಿಧಾನವನ್ನು ಜಾರಿಗೊಳಿಸಲಾಗಿದ್ದರೂ ಇಂದಿಗೂ ಕೆಳಜಾತಿಯ ಜನರನ್ನು ಶೋಷಿಸುವ ಕಾನೂನುಗಳನ್ನು ಮತ್ತೆ ತರಲು ಸ್ವಯಂಘೋಷಿತ ಮೇಲ್ಜಾತಿಯ ಜನಗಳ ಸಂಘಟನೆಯೊಂದು ಕಳೆದ 98ವರ್ಷಗಳಿಂದ ಕಾರ್ಯಾಚರಿಸುತ್ತಿರುವುದು, ಆ ಸಂಘಟನೆಯ ಹಿಡೆನ್ ಅಜೆಂಡಾಗಳ ಕುರಿತು ಬಹಿರಂಗವಾಗಿ ಟೀಕಿಸಿದ ವಿರೋಧ ಪಕ್ಷದ ನಾಯಕರನ್ನು ವ್ಯವಸ್ಥಿತವಾಗಿ ಮುಗಿಸುತ್ತಿರುವ ಘಟನೆಗಳು, ಲೇಖನ ಬರೆದ ಕಲ್ಬುರ್ಗಿ, ಗೌರಿ ಮುಂತಾದವರನ್ನು ಬಹಿರಂಗವಾಗಿ ಕಗ್ಗೊಲೆ ಮಾಡಿದ ಘಟನೆಗಳು ಇದೀಗಲೂ ಜೀವಂತವಾಗಿದೆ. ಬಹುಶಃ ಈ ಕುರಿತಾಗಿ ಪ್ರಜ್ಞಾವಂತರಲ್ಲಿರುವ ಆತಂಕವನ್ನು ಆ ಯುವತಿಯ ಈ ಮೇಲಿನ ಮಾತುಗಳು ಒಂದಷ್ಟು ಕಡಿಮೆಗೊಳಿಸಿದೆ.

ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ:

Advertisement
Advertisement
Recent Posts
Advertisement