8 ಬಾರಿ ಚಾಮುಂಡೇಶ್ವರಿಯಿಂದ, 2 ಬಾರಿ ವರುಣಾದಿಂದ ಗೆದ್ದಿದ್ದ ನಾನು ಅಲೆಮಾರಿನಾ? : ಸಿದ್ದರಾಮಯ್ಯ

"8 ಬಾರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಹಾಗೂ 2 ಬಾರಿ ವರುಣಾ ಕ್ಷೇತ್ರದಿಂದ ಗೆದ್ದಿದ್ದ ನಾನು ಬಿಜೆಪಿಗರು ಮತ್ತು ಕೆಲವು ಮಾಧ್ಯಮಗಳು ಹೇಳುವಂತೆ ಅಲೆಮಾರಿನಾ? ಅವರುಗಳು ಅಪಪ್ರಚಾರ ಮಾಡುತ್ತಿರುವಂತೆ ನಾನು ಪ್ರತಿಬಾರಿ ಕ್ಷೇತ್ರ ಬದಲಾವಣೆ ಮಾಡಿದ್ದೀನಾ?" ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಪ್ರಶ್ನಿಸಿದ್ದಾರೆ.

"ಚಾಮುಂಡೇಶ್ವರಿ ಕ್ಷೇತ್ರ ಪುನರ್ವಿಂಗಡನೆ ಆದ ಸಂಧರ್ಭದಲ್ಲಿ ನನ್ನ ಹುಟ್ಟೂರು ವರುಣಾ ಕ್ಷೇತ್ರಕ್ಕೆ ಸೇರಿದಾಗ ನಾನು ವರುಣಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೆ ಮತ್ತು ಅಲ್ಲಿಂದ ಎರಡೆರಡು ಬಾರಿ ಗೆದ್ದಿದ್ದೆ ಮತ್ತದರ ನಂತರ ಅಂದರೆ ಕಳೆದ ಬಾರಿಯ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಪಕ್ಷದ ಕಾರ್ಯಕರ್ತರ ಒತ್ತಾಯಕ್ಕೆ ಕಟ್ಟುಬಿದ್ದು ಚಾಮುಂಡೇಶ್ವರಿ ಯಲ್ಲಿ ಮತ್ತು ಬಾದಾಮಿಯಲ್ಲಿ ಎರಡು ಕಡೆ ಸ್ಪರ್ದೆ ಮಾಡಿದ್ದೆ. ಆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಯಲ್ಲಿ ಸೋತಿದ್ದರೆ ಬಾದಾಮಿಯಲ್ಲಿ ಗೆಲುವು ಸಾಧಿಸಿದ್ದೆ. ಇದೀಗ ಬಾದಾಮಿ ನನಗೆ ದೂರ ಆಗುತ್ತದೆ ಮತ್ತು ಮತದಾರರ ಸಮಸ್ಯೆ ಆಲಿಸಲು ಪದೇಪದೇ ಹೋಗಿ ಬರಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕಾಗಿ ಇದೀಗ ವರುಣಾ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೇನೆ. ಅದರಲ್ಲೇನು ತಪ್ಪು ಎಂದವರು ಪ್ರಶ್ನಿಸಿದ್ದಾರೆ.

ಮೋದಿ ಎರಡು ಕಡೆ ಸ್ಪರ್ದೆ ಮಾಡಿದರೆ "ಅವರನ್ನು ದೊಡ್ಡ ಲೀಡರ್, ಅವರು ಎಲ್ಲಿ ನಿಂತರೂ ಗೆಲ್ಲುತ್ತಾರೆ" ಎಂದು ಬಿಂಬಿಸುವುದು. ಸಿದ್ದರಾಮಯ್ಯ ಸ್ಪರ್ದೆ ಮಾಡಿದರೆ " ಸಿದ್ದರಾಮಯ್ಯ ಅಲೆಮಾರಿ ಎನ್ನೋದು, ಕ್ಷೇತ್ರವೇ ಇಲ್ಲ ಎಂಬಂತೆ ಬಿಂಬಿಸುವ ಕೆಲವು ಪೂರ್ವಾಗ್ರಹಪೀಡಿತ ಮಾಧ್ಯಮಗಳು ತಮ್ಮ ವೃತ್ತಿಧರ್ಮವನ್ನು ಮರೆಯಬಾರದು" ಎಂದವರು ಪತ್ರಕರ್ತರ ಜೊತೆ ಮಾತನಾಡುತ್ತಾ ಹೇಳಿರುವ ವಿಡಿಯೋ ಒಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಾರಿಕೊಂಡ ಮಾಧ್ಯಮಗಳಲ್ಲಿ ಪ್ರಕಟವಾಗದ ಸುದ್ದಿಗಳಿಗಾಗಿ ಕನ್ನಡ ಮೀಡಿಯಾ ಡಾಟ್ ಕಾಂ ನ ಸದಸ್ಯರಾಗಿ