Advertisement

ತೆಲಂಗಾಣ: ಯುವಕಾಂಗ್ರೆಸ್ ನಿಂದ 'Book my CM' ಅಭಿಯಾನ!

Advertisement

ಈ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರಕಾರದ ಭ್ರಷ್ಟಾಚಾರದ ವಿರುದ್ಧ ಕರ್ನಾಟಕ ಕಾಂಗ್ರೆಸ್ ಪಕ್ಷ ನಡೆಸಿದ paycm ಮಾದರಿಯಲ್ಲಿ ಇದೀಗ ತೆಲಂಗಾಣ ರಾಜ್ಯದಾದ್ಯಂತ “BOOK MY CM” ಪೋಸ್ಟರ್‌ಗಳ ಮೂಲಕ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಭ್ರಷ್ಟಾಚಾರವನ್ನು ಭಾರತೀಯ ಯುವ ಕಾಂಗ್ರೆಸ್ ಬಹಿರಂಗಪಡಿಸಿದೆ.

"ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ದೇಶದಲ್ಲೇ ಅತ್ಯಂತ ಭ್ರಷ್ಟ ಸಿಎಂ" ಎಂದು ಆರೋಪಿಸಿ ಯುವ ಕಾಂಗ್ರೆಸ್ ಪೋಸ್ಟರ್ ಸಮರ ಆರಂಭಿಸಿದೆ.

ಹೈದರಾಬಾದ್‌ನಾದ್ಯಂತ ಹಾಕಲಾಗಿರುವ ಪೋಸ್ಟರ್‌ಗಳಲ್ಲಿ "BOOK MY CM" ಎಂಬ ಘೋಷವಾಕ್ಯವಿದೆ ಮತ್ತದರ ಜೊತೆಗೆ ಬಾರ್‌ಕೋಡ್ ಕೂಡಾ ಪ್ರಕಟಿಸಲಾಗಿದೆ. ಆ ಬಾರ್‌ಕೋಡ್ ನೊಳಗೆ ಸಿಎಂ ಕೆಸಿಆರ್ ಅವರ ಮುಖವನ್ನು ಅಳವಡಿಸಲಾಗಿದೆ.

ತೆಲಂಗಾಣದಲ್ಲಿ ಕೆಸಿಆರ್ ಸರಕಾರ ಪ್ರತೀ ಯೋಜನೆಯಲ್ಲಿ ಶೇ.30 ಕಮಿಷನ್ ಪಡೆದು ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿದೆ ಎಂದು ಯುವ ಕಾಂಗ್ರೆಸ್ ಆರೋಪಿಸಿದೆ ಮತ್ತು ಸಿಎಂ ಕೆಸಿಆರ್ ಅವರ ಕುಕೃತ್ಯಗಳನ್ನು ಬಯಲಿಗೆಳೆದು ರಾಜೀನಾಮೆಗೆ ಆಗ್ರಹಿಸಿ ಪೋಸ್ಟರ್ ಸಮರ ನಡೆಸಲಾಗಿದೆ.

Advertisement
Advertisement
Recent Posts
Advertisement