Advertisement

ಕಾರ್ಕಳ ಶಾಸಕರದ್ದು ಆರ್ಥಿಕ ಮತ್ತು ಧಾರ್ಮಿಕ ಭ್ರಷ್ಟಾಚಾರ: ಉಳೆಪಾಡಿ ದಿನೇಶ್ ಹೆಗ್ಡೆ

Advertisement

ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಕುರಿತಾಗಿ ಮಂಗಳೂರಿನ ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರಕಾರದ ಆಡಳಿತದ ಅವಧಿಯಲ್ಲಿ
ಕಾರ್ಕಳದಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಿಸಲು 14 ಕೋಟಿ ಹಣ ಮೀಸಲು ಇಡಲಾಗಿತ್ತು. ಒಪ್ಪಂದದ ಪ್ರಕಾರ ಗುತ್ತಿಗೆ ದಾರರು ಸಂಪೂರ್ಣ ಗೊಳಿಸಲು ಇನ್ನೂ ಎರಡು ವರ್ಷ ಬಾಕಿ ಇದೆ.(ಈ ದಿನದಿಂದ ). ಸರಕಾರ 14 ಕೋಟಿಯಲ್ಲಿ 3 ಕೋಟಿಯಷ್ಟೇ ಪಾವತಿ ಮಾಡಿತ್ತು.(ಉದ್ಘಾಟನಾ ಸಮಯದ ವರೆಗೆ)

ಆಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದವರು ಕಾರ್ಕಳ MLA ಸುನಿಲ್ ಕುಮಾರ್. ಥೀಮ್ ಪಾರ್ಕ್ ನ ಬಹು ಮುಖ್ಯ ಆಕರ್ಷಣಾ ಬಿಂದು ತುಳುನಾಡಿನಲ್ಲಿ ಬಹುಕಾಲದಿಂದಲೂ ಮನೆ ಮನೆಯಲ್ಲಿ ಪ್ರಚಲಿತ ಇರುವ ಪರಶುರಾಮ ದೇವರ ಮೂರ್ತಿ. ಥೀಮ್ ಪಾರ್ಕ್ ನ ಕಾಮಗಾರಿಯನ್ನು ಆರಂಬಿಸುವ ಸಮಯದಲ್ಲಿಯೇ ಕರ್ನಾಟಕ ವಿಧಾನ ಸಭೆಯ ಚುನಾವಣೆ ಯನ್ನು ನಿಗದಿಪಡಿಸಲು ಕೆಲವು ತಿಂಗಳು ಬಾಕಿ ಇದ್ದವು.
ಮತದಾರರಲ್ಲಿ ಧಾರ್ಮಿಕ ಭಾವನೆ ಯನ್ನು ಕೆರಳಿಸಿ ಚುನಾವಣೆ ಗೆಲ್ಲುವ ಲೆಕ್ಕಾಚಾರ ಸುನಿಲ್ ಕುಮಾರ್ ಅವರದ್ದು.
ಆರಂಭಿಕ ಹಂತದ ಕೆಲಸ ನಡೆಯುತ್ತಿರುವ ಥೀಮ್ ಪಾರ್ಕ್ ಅನ್ನು ಉದ್ಘಾಟನೆಗೆ ಸಿದ್ದ ಗೊಳಿಸುವಂತೆ ಸುನಿಲ್ ಕುಮಾರ್ ಅವರು ಉಡುಪಿಯ ಡಿಸಿ ಯವರಿಗೆ ಆದೇಶ ನೀಡುತ್ತಾರೆ. ಅಪೂರ್ಣವಾದ ಕಾಮಗಾರಿಯನ್ನು ಉದ್ಘಾಟನೆಗೆ ಸಜ್ಜುಗೊಳಿಸಲು ಆಗುವುದಿಲ್ಲ ಮತ್ತು ಅದು ಅಪರಾಧ ಕೂಡಾ ಮತ್ತು ಒಂದು ವೇಳೆ ಈ ಹಂತದಲ್ಲಿ ಉದ್ಘಾಟನೆ ಮಾಡಿ ಸಾರ್ವಜನಿಕರಿಗೆ ಪ್ರವೇಶ ಅವಕಾಶ ನೀಡಿದರೆ ಜೀವ ಹಾನಿ ಆಗುವ ಸಂಭವ ಇದೆ ಎಂದು ಡಿಸಿ ಸಲಹೆ ನೀಡುತ್ತಾರೆ. ನನಗೆ ಚುನಾವಣೆ ಗೆಲ್ಲುವುದು ಮುಖ್ಯ. ಯಾರ ಜೀವ ಹೋಗುತ್ತದೆ ಹೋಗುವುದಿಲ್ಲ ಎಂದು ನನಗೆ ಲೆಕ್ಕಾ ಚಾರ ಹಾಕಿ ಕುಳಿತುಕೊಳ್ಳಲು ಸಮಯ ಇಲ್ಲ. ನೀವು ಉದ್ಘಾಟನೆಗೆ ತಯಾರು ಗೊಳಿಸದೇ ಇದ್ದರೆ ನಿಮ್ಮನ್ನು ಲಾಭ ಇಲ್ಲದ ಇಲಾಖೆಗೆ ಟ್ರಾನ್ಸಫರ್ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಾರೆ.

ಯೋಜಿತ ಪರಶುರಾಮನ ಮೂರ್ತಿಯಲ್ಲಿ ಕೊಡಲಿ ಬಹು ಮುಖ್ಯವಾದ ಮತ್ತು ಆಕರ್ಷಣೀಯ ಅಂಗ. ಮೂರ್ತಿಯ ಎತ್ತರಕ್ಕೆ ಅನುಗುಣವಾಗಿ ಅದರ ಕೈ ಮತ್ತು ಕೊಡಲಿಯ ಬಾರ 1.5 ಟನ್ ತೂಕ.ಇಷ್ಟು ತೂಕದ ಭಾರವನ್ನು ಹೊರಲು ಮೂರ್ತಿಗೆ ಭೂಮಿಯ ಅಡಿ ಭಾಗದಿಂದ ಆಧಾರ ಸ್ತಂಭ ವನ್ನು ನಿರ್ಮಿಸಬೇಕು. ಇದು ಬಹು ನಜೂಕಾದ ಮತ್ತು ವೈಜ್ಞಾನಿಕ ಲೆಕ್ಕಾಚಾರದಲ್ಲಿ ನಿರ್ಮಾಣಮಾಡಬೇಕಾದ ಕೆಲಸ. ಇದನ್ನು ಮಾಡಲು ನೆಲದಿಂದ ಕಾಲಿನ ಒಳಭಾಗದಿಂದ ಕಂಬವನ್ನು ನಿರ್ಮಿಸಿ (piller ) ಕೈ ಮತ್ತು ಕೊಡಲಿಗೆ ಆಧಾರವನ್ನು ನೀಡಬೇಕು. ಸ್ವಲ್ಪ ಲೆಕ್ಕಾಚಾರ ತಪ್ಪಿದರೂ ಗಾಳಿ ಮಳೆಗೆ ಆಯ ತಪ್ಪಿ ಕೆಳಗೆ ಉರುಳುವ ಸಾಧ್ಯತೆಯೇ ಜಾಸ್ತಿ. ಇದರಿಂದ ಆಸುಪಾಸಿನ ಜನರ ಆಸ್ತಿಗೆ ಮತ್ತು ಪ್ರವಾಸಿ ಜನರ ಜೀವ ಹಾನಿ ಉಂಟಾಗುವ ಸಾಧ್ಯತೆ ಇದೆ.
ಸುನಿಲ್ ಕುಮಾರ್ ರವರ ಮಾತಿಗೆ ಗುಟ್ರಿಗೆದಾರರು ವಿರೋಧ ವ್ಯಕ್ತ ಪಡಿಸುತ್ತಾರೆ. ತನ್ನ ಮಾತನ್ನು ಕೇಳದ
ಗುತ್ತಿಗೆದಾರರನ್ನು ಪಕ್ಕಕ್ಕೆ ಸರಿಸಿ ಸುನಿಲ್ ಕುಮಾರ್ ಇಡೀ ಥೀಮ್ ಪಾರ್ಕ್ ನ ಕೆಲಸವನ್ನು ತನ್ನ ನಿಯಂತ್ರಣಕ್ಕೆ ಪಡೆದುಕೊಳ್ಳುತ್ತಾರೆ. ನಿರ್ಮಾಣ ಹಂತದಲ್ಲಿ ಇದ್ದ ಕೆಲಸವನ್ನು ತನ್ನ ಆಪ್ತರ ಸುಪರ್ದಿಗೆ ನೀಡುತ್ತಾರೆ. ಪರಶುರಾಮ ಮೂರ್ತಿಗೆ ಲೋಹದ ಬದಲು ಫೈಬರ್ ವಸ್ತುವನ್ನು ಬಳಸುತ್ತಾರೆ. ಮೂರ್ತಿಯ ಬಹು ಮುಖ್ಯವಾದ ಮತ್ತು ಧಾರ್ಮಿಕ ನಂಬಿಕೆಯ ಭಾಗವಾದ ಕೈ ಮತ್ತು ಕೊಡಲಿಯನ್ನು ಫೈಬರ್ ನಿಂದ ನಿರ್ಮಿಸಿ ತನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಣದಿಂದ ಉದ್ಘಾಟನೆ ಗೊಳಿಸುತ್ತಾರೆ.
ಉದ್ಘಾಟನೆ ಮಾಡುವಾಗ ಇದನ್ನು 14 ಕೋಟಿಯಲ್ಲಿ ನಿರ್ಮಿಸಲಾಗಿದೆಯೆಂದೂ, ಹಿಂದೂ ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಲೋಹದಿಂದ ನಿರ್ಮಿಸಲಾಗಿದೆಯೆಂದೂ ನಮ್ಮ ಸುನಿಲ್ ಕುಮಾರ್ ರವರು ಘೋಷಿಸುತ್ತಾರೆ.
ಫೈಬರ್ ನಿಂದ ನಿರ್ಮಿಸಲಾದ ಮೂರ್ತಿಯೊಂದನ್ನು ಲೋಹದಿಂದ ಮಾಡಲಾಗಿದೆ ಎಂದು ಬಿಂಬಿಸಿ ಹಿಂದೂ ಭಕ್ತರ ಧಾರ್ಮಿಕ ಭಾವನೆಗೆ ದಕ್ಕೆ ತಂದಿದ್ದಾರೆ.
ಸಾಮಾನ್ಯ ರಸ್ತೆ ಮೆರವಣಿಗೆಗಳಲ್ಲಿ ಕೊಂಡು ಹೋಗುವ ಬೊಂಬೆಗಳನ್ನು ಕೂಡಾ ಫೈಬರ್ ನಲ್ಲಿ ನಿರ್ಮಿಸಲಾಗುತ್ತದೆ.
ಸುನಿಲ್ ಕುಮಾರ್ ರವರು ಒಬ್ಬ ಸರಕಾರದ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದು ಮಾಡಿದ ಈ ಕೃತ್ಯ ಭ್ರಷ್ಟಾಚಾರದ ಅಪರಾಧ ಹಾಗೂ ಜನರ ಧಾರ್ಮಿಕ ನಂಬಿಕೆಗೆ ಮಾಡಿರುವ ದ್ರೋಹವಾಗಿದೆ.

ಕಾರ್ಕಳದ ಥೀಮ್ ಪಾರ್ಕ್ ನಲ್ಲಿ ಪರಶುರಾಮನ ಮೂರ್ತಿಯನ್ನು ಫೈಬರ್ ವಸ್ತುವಿನಿಂದ ನಿರ್ಮಿಸಿ ಶುದ್ಧ ಲೋಹದಿಂದ ನಿರ್ಮಿಸಲಾಗಿದೆ ಎಂದು ಸಚಿವ ಸುನಿಲ್ ಕುಮಾರ್ ರವರು ಮತ್ತು ಅವರ ಸಂಘಟನೆಯವರು ಪ್ರಚಾರ ಮಾಡುತ್ತಾರೆ.
ಸರಕಾರದ ಈ ಜವಾಬ್ದಾರಿಯುತ ಸಚಿವರೂ, ಹಿಂದೂ ಧರ್ಮ ರಕ್ಷಕರೆಂದು ಘೋಷಿಸಿಕೊಂಡ ನಾಯಕರೂ ಆಗಿರುವ ನಮ್ಮ ಸುನಿಲ್ ಕುಮಾರ್ ಇವರ ಮಾತನ್ನು ಎಲ್ಲಾ ಹಿಂದೂ ಗಳು ಯಾವುದೇ ಪ್ರಶ್ನೆಯನ್ನು ಮಾಡದೆ ನಂಬುತ್ತಾರೆ.
ಸುನಿಲ್ ಕುಮಾರ್ ನೇತೃತ್ವದಲ್ಲಿ ಈ ಪರಶುರಾಮ ದೇವರ ಮೂರ್ತಿಗೆ ಸಹಸ್ರ ಜನರನ್ನು ಸೇರಿಸಿ ಶಂಖ ಜಾಗಟೆ ಹೊಡೆಸಿ ಪೂಜೆಯನ್ನೂ ಮಾಡಿಸುತ್ತಾರೆ. ಎಲ್ಲಾ ಕಾರ್ಯಕ್ರಮಗಳಂತೆ
ಬ್ರಾಹ್ಮಣರು ಈ ಪೂಜೆಯ ನೇತೃತ್ವವನ್ನು ವಹಿಸಿ ಪೂಜೆ ಮಾಡುತ್ತಾರೆ.

ಈಗ ಬಯಲಾದ ಸುದ್ದಿ ಏನೆಂದರೆ, ಯಾವ ಮೂರ್ತಿಯನ್ನು ಲೋಹದಿಂದ ಮಾಡಿಸಿದ್ದಾರೆ ಎಂದು ಹೇಳಿ ಪ್ರತಿಷ್ಠಾಪಿಸಿದ್ದಾರೋ ಅದು ನಕಲಿ ಅಷ್ಟೇ ಅಲ್ಲ, ಸಾಮಾನ್ಯ ಫೈಬರ್ ನಿಂದ ಮಾಡಲ್ಪಟ್ಟವುಗಳಾಗಿವೆ.
ಈ ಕೆಳಗಿನ ಫೈಟೋ ನೋಡಿ. ಅದೆಷ್ಟೋ ಮಂದಿ ಮುಗ್ದ ಭಕ್ತರು ಬಹಳ ಭಕ್ತಿ ಭಾವ ಪರವಾಶಾರಾಗಿ ಫೈಬರ್ ನಲ್ಲಿ ತಯಾರಿಸಲಾದ ಪರಶುರಾಮ ಮೂರ್ತಿಯವರು ಎದುರು ಅದರ ನೈಜತೆಯನ್ನು ತಿಳಿಯದೆ ಶಂಖ ಊದು ತ್ತಿದ್ದಾರೆ.

ಈ ಮೂರ್ತಿಗೆ ಫೈಬರ್ ಬಳಸಲಾಗಿದೆ ಎಂದು ಸುನಿಲ್ ಕುಮಾರ್ ರವರಿಗೆ ತಿಳಿದಿತ್ತು. ಆದರೂ ಜನರನ್ನು ಇದು ಲೋಹದಿಂದ ಮಾಡಲಾಗಿದೆ ಎಂದು ನಂಬಿಸಿ ಅವರನ್ನು ಆ ನಕಲಿ ಮೂರ್ತಿಗೆ ಕೈ ಮುಗಿಯುವಂತೆ ಮಾಡಿ ಜನರನ್ನು ಅದರಲ್ಲೂ ಹಿಂದೂ ಗಳನ್ನು ಮೋಸ ಮಾಡಿ ದ್ದಾರೆ.ಧಾರ್ಮಿಕ ನಂಬಿಕೆಗೆ ಉದ್ದೇಶಪೂರ್ವಕವಾಗಿ ಧಾರ್ಮಿಕ ನಂಬಿಕೆಯನ್ನು ಕೆಡಿಸಿ, ಸ್ಥಳವನ್ನು ಅಪವಿತ್ರಗೋಳಿದ್ದಾರೆ.

ಮಾಜಿ ಸಚಿವರ ಈ ಕ್ರತ್ಯ ಹಿಂದೂ ವಿರೋಧಿ ಕ್ರತ್ಯವಾಗಿದೆ. ಇವರ ವಿರುದ್ಧ ಧಾರ್ಮಿಕ ಮುಖಂಡರು, ಯುವ ಮತದಾರರು ಪ್ರತಿಭಟನೆ ಮಾಡಬೇಕಾಗಿದೆ

(ಕೆಳಗಿನ ಚಿತ್ರ ಪರಶುರಾಮನ ಮೂರ್ತಿಗೆ ಭಕ್ತಿಯಿಂದ ಜನರು ಸೇರಿ ಶಂಖ ನಾದನ ಮಾಡಿ ಪೂಜೆ ಮಾಡುವುದು)

(ಉಳೆಪಾಡಿ ದಿನೇಶ್ ಹೆಗ್ಡೆ ಇವರು ವಿಠ್ಠಲ ಮಲೆಕುಡಿಯರವರ ವಿರುದ್ಧದ ನಕ್ಸಲ್ ಸಂಪರ್ಕದ ಕೇಸಿನಲ್ಲಿ ದಾಖಲೆಗಳ ಸಮೇತ ಸಮರ್ಥವಾಗಿ ವಾದವನ್ನು ಮಂಡಿಸಿ ವಿಠ್ಠಲ ಕೇವಲ ಓರ್ವ ಸಾಮಾಜಿಕ ಕಳಕಳಿಯ ಯುವಕ ಆತನಿಗೂ ನಕ್ಸಲರಿಗೂ ಸಂಬಂಧವಿಲ್ಲ ಎಂದು ನಿರೂಪಿಸಿ ವಿಠ್ಠಲರನ್ನು ಬಂಧಮುಕ್ತಗೊಳಿಸಿದ್ದ ಖ್ಯಾತ ನ್ಯಾಯವಾದಿ.)

Advertisement
Advertisement
Recent Posts
Advertisement