Advertisement

"ಸನಾತನ ಧರ್ಮದೊಳಗಿನ ಹುಳುಕು" ಗಳ ಕುರಿತು ಒಗಟಿನ ಮಾತೇಕೆ?

Advertisement
  • ನಿಜ,ನಾವು ಕೂಡಾ ಹಿಂದೂಗಳೇ. ನಾವ್ಯಾರಿಗೂ ನಮ್ಮ ಧರ್ಮರಕ್ಷಣೆಯ ಗುತ್ತಿಗೆಯನ್ನು ಕೊಟ್ಟಿಲ್ಲ. ಸತತ ಎಂಟುನೂರು ವರ್ಷಗಳ ಕಾಲ ಮುಸ್ಲಿಂ ದೊರೆಗಳು, ಸತತ ಮುನ್ನೂರು ವರ್ಷಗಳ ಕಾಲ ಡಚ್ಚರು, ಫ್ರೆಂಚರು, ಬ್ರಿಟಿಷರು ಆಳಿದಾಗಲೂ ನಮ್ಮ ಧರ್ಮ ಹಾಗೆಯೇ ಉಳಿದಿತ್ತು. ಇಂದು ಧರ್ಮರಕ್ಷಣೆಯ ಹೊಣೆ ಹೊತ್ತವರಂತೆ ಫೋಸು ಕೊಡುತ್ತಿರುವವರ ಪೂರ್ವಜರೆ ಅಂದು ಆ ಮುಸ್ಲಿಂ ದೊರೆಗಳ ಮತ್ತು ಬ್ರಿಟಿಷ್ ಅಧಿಕಾರಿಗಳ ಎಡಬಲದಲ್ಲಿದ್ದು ಅವರು ಕ್ಯಾಕರಿಸಿ ಉಗುಳಿದ್ದ ಉಗುಳನ್ನು ಪ್ರಸಾದದಂತೆ ನೆಕ್ಕುತ್ತಿದ್ದವರು ಎಂಬುದನ್ನು ಮರೆಯಲಾದೀತೆ?

ಇಷ್ಟಾಗಿಯೂ ನಾವು ಅದೇಕೆ ಸನಾತನ ಧರ್ಮದೊಳಗಿನ ಹುಳುಕಿನ ಕುರಿತಾಗಿ ಒಗಟಿನ ಮಾತನಾಡಬೇಕು?

ಹೌದು, ಇಷ್ಟಾಗಿಯೂ 'ಸನಾತನ ಧರ್ಮ' ಹಾಗೆ -ಹೀಗೆ ಎಂದು ಒಗಟಿನ ಮಾತನ್ನು ನಾವು ಏಕೆ ಆಡಬೇಕು? ಅದೇಕೆ ನೇರವಾಗಿ ಆ ಆರ್ಯನ್ನರ ಹೊಲಸು ಚಾರಿತ್ರ್ಯವನ್ನು ನಮ್ಮ ಯುವಜನರ ಮುಂದೆ ಬಿಚ್ಚಿಡುವ ಕೆಲಸವನ್ನು ಮಾಡಬಾರದು? ಯಾವುದೇ ಧರ್ಮ ನಮಗೇನು ಅನ್ಯಾಯ ಮಾಡಿದೆ? ಅನ್ಯಾಯ ಮಾಡಿದವರು ಧರ್ಮದ ಹೆಸರೇಳಿ ಬದುಕುತ್ತಿರುವ ಆ ನೀಚರಲ್ಲವೇ? ಪರೋಕ್ಷವಾಗಿ ಮಾತನಾಡುವುದಕ್ಕಿಂತ ನಮ್ಮ ಆ ಧರ್ಮದೊಳಗೆ ಅವಿತು ಕುಳಿತು, ಧರ್ಮದ ಹೆಸರಲ್ಲಿ ಬಡವರ ಹಕ್ಕನ್ನು 'ಮತ್ತೊಮ್ಮೆ' ಕಸಿದುಕೊಳ್ಳಲು ಹವಣಿಸುತ್ತಿರುವ ಆ ನೀಚ ವಲಸಿಗ ಆರ್ಯರ ಇತಿಹಾಸದ ಕುರಿತು ಏಕೆ ಮಾತನಾಡಬಾರದು? ಈ ದೇಶದ ಮೂಲನಿವಾಸಿಗಳಿಂದ ಜಾತಿಯ ಹೆಸರಲ್ಲಿ ಶತಶತಮಾನಗಳ ಕಾಲ ಜೀತ ಮಾಡಿಸಿದ, ಗುಲಾಮಗಿರಿ ಮಾಡಿಸಿದ, ಶಿಕ್ಷಣ- ಅಧಿಕಾರ- ಭೂಮಿಯ ಹಕ್ಕು ನೀಡದೆ ಶೋಷಿಸಿದ ಮತ್ತು ಇದೀಗಲೂ ವದಂತಿಗಳನ್ನು ಹರಡುವ ಮೂಲಕ ಇಲ್ಲಿನ ಜನರ ನಡುವಿನ ಸಾಮರಸ್ಯ ಕೆಡಿಸುತ್ತಿರುವ, ಭವ್ಯವಾದ ಭವಿಷ್ಯ ಹೊಂದಿದ್ದ ಯುವಕರ ಬಾಳನ್ನು ಆ ಮೂಲಕ ನಾಶಗೆಡಿಸುತ್ತಿರುವ ಅವರನ್ನು ನಾವ್ಯಾಕೆ ಸಹಿಸಬೇಕು?

ಅಂದು ಮೂರೂವರೆ ಸಾವಿರ ವರ್ಷಗಳ ಹಿಂದೆ ಇದೇ ಆರ್ಯರ ಕುರಿತು ನಮ್ಮ ಹಿರಿಯರು ತೋರಿಸಿದ ಒಳ್ಳೆಯತನ ನಮಗೆ ತಲೆತಲಾಂತರವಾಗಿ ಮುಳ್ಳಾಗಲಿಲ್ಲವೇ? ಇಂದಿಗೂ ಮುಳ್ಳೇ ಆಗಿ ಉಳಿದಿಲ್ಲವೇ? ಹಾಗಿದ್ದ ಮೇಲೂ ಯಾಕೆ ನಾವು ನೇರವಾಗಿ ಆ "ಆರ್ಯನ್ನರ" ಕುರಿತು ಮಾತನಾಡಲು ಹೆದರುತ್ತಿದ್ದೇವೆ? ಮಂದೆ ಬರಬಹುದಾದ ಆ ಅಪಾಯಕ್ಕಿಂತ ಅವರ ವಿರುದ್ದ ಮಾತನಾಡಿ ಆಗಬಹುದಾದ ಈ ಅಪಾಯ ಘನಘೋರವೇ? 3% ಇರುವ ಅವರೇನು ಹುಲಿಗಳೇ? ನಮ್ಮ ಸಂವಿಧಾನ ಅವರಿಗೇನು ಪ್ರತ್ಯೇಕ ಸವಲತ್ತು ಒದಗಿಸಿದೆಯೇ? ಇಲ್ಲವಲ್ಲವೇ? ಹಾಗಾದರೆ 97% ಇರುವ ನಾವು ಯಾಕೆ ಬಾಯ್ಮುಚ್ಚಿ ಕುಳಿತಿದ್ದೇವೆ? ಇಷ್ಟಾಗಿಯೂ ನಾವು ಅವರನ್ನು ಇದೀಗಲೂ ಸಹಿಸುತ್ತಿರುವುದು ಅತೀ ಅನ್ನಿಸುತ್ತಿಲ್ಲವೇ? ಹೀಗೆಯೇ ಸಹಿಸುತ್ತಾ ಹೋದರೆ ನಮ್ಮ ಮುಂದಿನ‌ ಜನಾಂಗದ ಬದುಕು ಹಾಳಾಗುವುದಿಲ್ಲವೇ? ಹಾಳಾಗುವಂತಾದರೆ ನಮ್ಮ ಮಕ್ಕಳು- ಮೊಮ್ಮಕ್ಕಳು ನಮ್ಮನ್ನು ಕ್ಷಮಿಸುವರೇ? ನಮಗೊಂದು ಸಾಮಾಜಿಕ ಪ್ರಜ್ಞೆ ಬೇಡವೇ? ಕನಿಷ್ಟಪಕ್ಷ ಅಂಬೇಡ್ಕರ್ ಸಂವಿಧಾನ ನಮಗೆ ನೀಡಿರುವ ಹಕ್ಕುಗಳನ್ನಾದರೂ ರಕ್ಷಿಸಿಕೊಳ್ಳಬೇಡವೇ?

ಸ್ನೇಹಿತರೇ, ಈ ಮೇಲಿನ ಪ್ರಶ್ನೆಗಳಿಗೆಲ್ಲ ಉತ್ತರಿಸದಿದ್ದರೂ ಪರವಾಗಿಲ್ಲ. ಆದರೆ ಈ ಕುರಿತು ಯೋಚಿಸಿ.. ಯೋಚಿಸಿ ಹಾಗೂ ಪದೇಪದೇ ಯೋಚಿಸಿ ಮತ್ತು ಸಮಾನಮನಸ್ಕರಲ್ಲಿ ಚರ್ಚಿಸಿ.

(File photo)

ತಮಿಳುನಾಡಿನ ಯುವ ರಾಜಕಾರಣಿ ಉದಯನಿಧಿ ಯವರು ಹೇಳಿದ್ದ "ಸನಾತನ ಧರ್ಮದೊಳಗಿನ ಹುಳುಕು"ಗಳ ವಿರುದ್ಧವಾದ ಮಾತು ಇದೀಗ ಬಹು ವಿವಾದಕ್ಕೆ ಈಡಾಗಿದೆ.

ಈ ಕುರಿತು ವಿವಾದ ಆರಂಭಗೊಳ್ಳುತ್ತಿದ್ದಂತೆಯೇ "ಸನಾತನ ಎಂದರೆ ಜಾತಿ ತಾರತಮ್ಯ, ಇದಕ್ಕೆ ನೂತನ ಸಂಸತ್​ ಉದ್ಘಾಟನೆಯೇ ಉದಾಹರಣೆ. ಜಾತಿ ಕಾರಣಕ್ಕಾಗಿಯೇ ರಾಷ್ಟ್ರಪತಿಯವರನ್ನೆ ಆಹ್ವಾನ ಮಾಡಿರಲಿಲ್ಲ. ನನ್ನ ಸನಾತನ ಧರ್ಮದ ಹುಳುಕುಗಳ ವಿರುದ್ಧದ ಹೇಳಿಕೆಗೆ ಈಗಲೂ ಬದ್ಧ" ಎಂದು ಉದಯನಿಧಿ ಗುಡುಗಿದ್ದಾರೆ.

ಈ ಕುರಿತು ಉದಯನಿಧಿ ಹೇಳಿಕೆಯನ್ನು ಸಮರ್ಥಿಸಿಕೊಂಡು ಸಾಹಿತಿ ಪ್ರೊ. ಕೆ.ಎಸ್. ಭಗವಾನ್ ಹೇಳಿಕೆ ನೀಡಿದ್ದು "ಈ ದೇಶದ ಸಾಕಷ್ಟು ಹಿಂದೂಗಳಿಗೆ ಹಿಂದೂ ಪದದ ಅರ್ಥವೆ ಗೊತ್ತಿಲ್ಲ. ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನ ನಾಶ ಮಾಡಬೇಕು ಎಂದಿಲ್ಲ, ನ್ಯೂನತೆ ತಿದ್ದಬೇಕು ಎಂದಿದ್ದಾರೆ. ಶೂದ್ರ ಪದದ ಅರ್ಥ ಅಸಹ್ಯವಾಗಿದ್ದು, ಈ ದೇಶದ ಶೇ.95ರಷ್ಟು ಮಂದಿ ಶೂದ್ರರು" ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು "ಸನಾತನ ಧರ್ಮದ ಬಗೆಗಿನ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ತಕ್ಕ ಪ್ರತ್ಯುತ್ತರ ನೀಡಿ’’ ಎಂಬ ಪ್ರಧಾನಿ ನರೇಂದ್ರ ಮೋದಿ ಕರೆ ಅತ್ಯಂತ ಪ್ರಚೋದನಕಾರಿಯಾದುದು ಮಾತ್ರವಲ್ಲ ಸಂವಿಧಾನ ವಿರೋಧಿಯಾದುದು. ಈ ಪ್ರಚೋದನಕಾರಿ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸುತ್ತೇನೆ" ಎಂದಿದ್ದಾರೆ.

"ವಿಷಯ-ವಿದ್ಯಮಾನಗಳೇನೇ ಇರಲಿ, ಯಾರಾದರೂ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಅಂತಹವರ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ. ಇದರ ಬದಲಿಗೆ ತಕ್ಕ ಪ್ರತ್ಯುತ್ತರ ನೀಡಿ ಎಂದು ಜನರನ್ನು ಪ್ರಚೋದಿಸುವುದು, ಕಾನೂನನ್ನು ಕೈಗೆತ್ತಿಕೊಳ್ಳಲು ನೀಡುವ ಕರೆಯಾಗುತ್ತದೆ. ಇದನ್ನು ಪ್ರಧಾನಿಯವರು ಮಾಡಿದರೂ ಅಪರಾಧವೇ. ನರೇಂದ್ರ ಮೋದಿ ಅವರು ಕೇವಲ ಬಿಜೆಪಿಯ ನಾಯಕರಲ್ಲ, ಅವರು ಸಾಂವಿಧಾನಿಕ ಹುದ್ದೆಯಾದ ಪ್ರಧಾನಮಂತ್ರಿಯ ಕುರ್ಚಿಯಲ್ಲಿ ಕುಳಿತಿರುವವರು. ಹೀಗಿರುವಾಗ ಅವರ ನಡೆ-ನುಡಿ ಮತ್ತು ಕ್ರಿಯೆ-ಪ್ರತಿಕ್ರಿಯೆ ಆ ಸ್ಥಾನದ ಘನತೆ-ಗೌರವ ಮತ್ತು ಜವಾಬ್ದಾರಿಗಳಿಗೆ ತಕ್ಕಂತೆ ಇರಬೇಕಾಗಿರುವುದು ರಾಜಧರ್ಮವಾಗಿದೆ.
ನರೇಂದ್ರ ಮೋದಿ ಅವರು ಇನ್ನೂ ಆರ್.ಎಸ್.ಎಸ್ ನ ತನ್ನ ಪೂರ್ವಾಶ್ರಮದ ಗುಂಗಿನಲ್ಲಿದ್ದಂತೆ ಕಾಣುತ್ತಿದೆ. ತಾನು ಈ ದೇಶದ 140 ಕೋಟಿ ಜನರಿಗೂ ಪ್ರಧಾನಿ ಎನ್ನುವುದನ್ನು ಮರೆತಂತಿದೆ. ಪ್ರಧಾನಿಯವರ ಇಂತಹ ಹೇಳಿಕೆಗಳಿಂದ ಪ್ರಚೋದಿತರಾಗಿ ಅವರದ್ದೇ ಪಕ್ಷ ಮತ್ತು ಸಂಘಟನೆಯ ಅನೇಕ ನಾಯಕರು ಹಿಂಸಾಚಾರಕ್ಕೆ ಕರೆನೀಡುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ" ಎಂದವರು ಹೇಳಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿ ಅವರ ಹಿಂದಿನ ನಡವಳಿಕೆಗಳನ್ನು ಗಮನಿಸಿದರೆ ಅವರ ಈಗಿನ ಹೇಳಿಕೆಗಳು ಅಚ್ಚರಿ ಹುಟ್ಟಿಸುವುದಿಲ್ಲ. ಗುಜರಾತ್ ಗಲಭೆಯ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿಯವರು ನಡೆದುಕೊಂಡ ರೀತಿಯ ಬಗ್ಗೆ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೇ ಅಸಮಾಧಾನ ವ್ಯಕ್ತಪಡಿಸಿ, ರಾಜಧರ್ಮ ಪಾಲಿಸಲು ಕರೆ ಕೊಟ್ಟಿದ್ದರು. ದಿವಂಗತ ವಾಜಪೇಯಿ ಅವರ ಆ ಬುದ್ದಿಮಾತನ್ನೇ ಈ ಸಂದರ್ಭದಲ್ಲಿ ಮೋದಿಯವರಿಗೆ ನೆನಪು ಮಾಡಿಕೊಡಲು ಬಯಸುತ್ತೇನೆ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

"ಸಚಿವ ಉದಯನಿಧಿ ಸ್ಟಾಲಿನ್ ಯಾವ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ ಎಂಬವುದು ಗೊತ್ತಿಲ್ಲ.
ಆದ್ರೆ ಯಾವ ಧರ್ಮದಲ್ಲಿ ಸಾಮಾಜಿಕ ಸಮಾನತೆ, ಆರ್ಥಿಕ ಸಮಾನತೆ ಇಲ್ಲವೋ ಅದು ಧರ್ಮ ಅಲ್ಲ. ಮನುಷ್ಯರ ನಡುವೆ ಭೇದ-ಭಾವ ಇರೋದು ಧರ್ಮ ಅಲ್ಲ, ನಮಗೆಲ್ಲಾ ಸಾಮಾಜಿಕ ಸಮಾನತೆ ಕೊಡುವ ಸಂವಿಧಾನವೇ ಧರ್ಮ" ಎಂದು ಜನಪ್ರಿಯ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದರು.

ಆದರೆ ಈ ನಡುವೆ ಉದಯನಿಧಿಯವರನ್ನು ಬೆಂಬಲಿಸಿ ನೀಡಿದ ಹೇಳಿಕೆಯ ವಿರುದ್ಧ ಉತ್ತರಪ್ರದೇಶದಲ್ಲಿ ಕರ್ನಾಟಕದ ಸಚಿವ ಪ್ರಿಯಾಂಕ ಖರ್ಗೆಯವರ ಮೇಲೆ FIR ದಾಖಲಿಸಲಾಗಿದೆ.

"ದೇಶದಲ್ಲಿ ಜಾತಿ ಜನಗಣತಿ ಮಾಡುವ ಸಂದರ್ಭದಲ್ಲಿ ಸನಾತನ ಅನ್ನುವ ಬಗ್ಗೆ ದೇಶದ ಜನಗಣತಿಯಲ್ಲಿ ಎಷ್ಟು ಜನರು ತಮ್ಮಜಾತಿಯನ್ನು ಸನಾತನ ಎಂದು ಸೇರ್ಪಡೆ ಮಾಡಿಸಿದ್ದಾರೆ. ಸನಾತನ ಧರ್ಮದ ಬಗ್ಗೆ ಸಂವಿಧಾನದಲ್ಲಿ ಯಾವುದೇ ಚರ್ಚೆ ಮಾಡಿದ್ದಾರೆಯೆ ? ಸನಾತನ ಧರ್ಮಕ್ಕೆ ಅವಹೇಳನ ಬಗ್ಗೆ ಯಾವ ಆದಾರದ ಮೇಲೆ ಎಫ್.ಐ.ಆರ್ ದಾಖಲು ಮಾಡುತ್ತಾರೆ ? ಅಲ್ಲವೇ?

ಈ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕರ್ನಾಟಕದ ಹಿರಿಯ ಸಚಿವ ಡಾ. ಎಚ್.ಸಿ ಮಹದೇವಪ್ಪ ನವರು "ಉದಯನಿಧಿ ಸ್ಟಾಲಿನ್ ಅವರ ಹೇಳಿಕೆ ವಿಷಯವಾಗಿ ನಮ್ಮ ಕೆಲವು ಧಾರ್ಮಿಕ ಮುಖಂಡರು ಸಂವಿಧಾನದ ಗಡಿರೇಖೆಯನ್ನು ಮೀರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದರಲ್ಲೂ ಓರ್ವ ಸ್ವಾಮೀಜಿ ವೇಷಧಾರಿಯು ಉದಯನಿಧಿ ಸ್ಟಾಲಿನ್ ತಲೆ ತಂದುಕೊಟ್ಟರೆ 10 ಕೋಟಿ ನೀಡುವುದಾಗಿ ಹೇಳಿದ್ದಾರೆ. ಬಹಳ ಶ್ರೀಮಂತನಂತೆ ಕಾಣುವ ಈ ಸ್ವಾಮೀಜಿ ಎಂದಾದರೂ ಬಡವರ ಕಲ್ಯಾಣ ಕಾರ್ಯಕ್ರಮಕ್ಕೆ ಹಣ ವಿನಿಯೋಗಿಸುವ ಯೋಚನೆ ಮಾಡಿದ್ದರೆ ಆತನ ಮೇಲೆ ಗೌರವ ಹೆಚ್ಚುತ್ತಿತ್ತು ಮತ್ತು ಆತ ಹೇಳುವ ಧರ್ಮದ ಕಲ್ಪನೆಗೂ ಹೆಚ್ಚು ಮಹತ್ವ ಬರುತ್ತಿತ್ತು. ಆದರೆ ಹತ್ಯೆಗಾಗಿ ಹಣ ನೀಡುವ ಆತನ ವಿಚಾರಧಾರೆಯು ಸಂವಿಧಾನಾತ್ಮಕವಲ್ಲದ ಧಾರ್ಮಿಕ ಮೂಲಭೂತವಾದಕ್ಕೆ ಸಮನಾಗಿದೆ ಎಂಬುದನ್ನು ನಾವೆಲ್ಲರೂ ಅರಿಯಬೇಕು" ಎಂದು ಹೇಳಿದ್ದಾರೆ.

"ಜೊತೆಗೆ ಧರ್ಮದ ಹೆಸರಲ್ಲಿ ಹಿಂಸೆಯನ್ನು ಪ್ರಚೋದಿಸುವ ಮತ್ತು ಧರ್ಮ ಎಂದರೆ ಏನೆಂದು ಇಷ್ಟು ದಿನವಾದರೂ ತಿಳಿದುಕೊಳ್ಳುವ ಪ್ರಯತ್ನ ಮಾಡದ ಇಂತವರು ಸ್ವಾಮಿ ವಿವೇಕಾನಂದರು ಹೇಳಿದ ನಿಜವಾದ ಧರ್ಮದ ಸಾರವನ್ನು ಅರಿಯಲಿ.
ಹಸಿದವರ ಮುಂದೆ ನಿಂತು ಧರ್ಮ ಬೋಧನೆ ಮಾಡುವುದು, ಜಾತಿ ಧರ್ಮದ ಹೆಸರಲ್ಲಿ ಅಸಮಾನತೆಯನ್ನು ನೇರವಾಗಿ ಮತ್ತು ಪರೋಕ್ಷವಾಗಿ ಆಚರಿಸುವುದು ಮತ್ತು ಹಿಂಸೆಯ ವಾತಾವರಣ ಸೃಷ್ಟಿಯನ್ನು ಸ್ವಾಮಿ ವಿವೇಕಾನಂದರು, ಎಂದೂ ಒಪ್ಪಿರಲಿಲ್ಲ.
ಹೀಗಾಗಿ ಉದಯನಿಧಿ ಸ್ಟಾಲಿನ್ ಅವರು ಹಾಗೆ ಹೇಳಿದಾಗ, ಯಾಕೆ ಹಾಗೆ ಹೇಳಿದಿರಿ? ಅದಕ್ಕೆ ಕಾರಣ ಏನೆಂದು ತಿಳಿದುಕೊಳ್ಳಬೇಕು. ಒಂದು ವೇಳೆ ಆತ ಸೂಕ್ತವಾದ ಕಾರಣ ನೀಡಿದರೆ ಅದನ್ನು ವಸ್ತುನಿಷ್ಠವಾಗಿ ಸರಿಪಡಿಸಿಕೊಳ್ಳಬೇಕು ಅಥವಾ ಆತ ಹೇಳಿದ್ದು ನಿಜಕ್ಕೂ ಅವಾಸ್ತವಿಕ ಅಥವಾ ಅಸತ್ಯ ಎನಿಸಿದರೆ ಅದನ್ನು ನಿಖರ ವಿಚಾರಗಳ ಮೂಲಕ ಆತನಿಗೆ ಮನವರಿಕೆ ಮಾಡಬೇಕು.ಅದನ್ನು ಬಿಟ್ಟು ಅವನ ತಲೆ ಕಡಿಯಿರಿ, ಹತ್ಯೆ ಮಾಡಿ ಎಂದೆಲ್ಲಾ ಹೇಳಿದರೆ, ಅಂತಹ ಮೂಲಭೂತವಾದಿ ನಡವಳಿಕೆಗೆ ಕಾನೂನಿನ ವ್ಯಾಪ್ತಿಯಲ್ಲಿ ಕ್ರಮ ಜರುಗಿಸಲೇ ಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಅಂದಹಾಗೆ, ಧರ್ಮದ ಬಗ್ಗೆ ಮಾತನಾಡುವ ಬಹಳಷ್ಟು ಮಂದಿಗೆ ಇಷ್ಟು ದಿನಗಳಾದರೂ ಸಂವಿಧಾನದ ಕುರಿತ ತಿಳುವಳಿಕೆ ಮೂಡದೇ ಇರುವುದು ಇಂತಹ ಅಪದ್ದಗಳಿಗೆ ಮೂಲ ಕಾರಣ ಎಂದು ಮಹದೇವಪ್ಪನವರು ಹೇಳಿದ್ದಾರೆ.

ಹಾಗೆಯೇ ಈ ಕುರಿತು ಪ್ರಗತಿಪರ ಚಿಂತಕ ಹರ್ಷಕುಮಾರ್ ಖುಗ್ವೆ ತನ್ನ ಫೇಸ್‌ಬುಕ್‌ ವಾಲ್‌ನಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ಅದು ಈ ಕೆಳಗಿನಂತಿದೆ:

ಉದಯನಿಧಿ ಸ್ಟಾಲಿನ್‌ ವಿಷಯದಲ್ಲಿ ಅತ್ತಲೂ ಅಲ್ಲ ಇತ್ತಲೂ ಅಲ್ಲ ಎನ್ನುವಂತೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡುವವರ ಗಮನಕ್ಕೆ,

- ಸಂಘಪರಿವಾರ ಅಥವಾ ಆರೆಸ್ಸೆಸ್‌ ಗಳು ಸಿದ್ದಾಂತದ ವಿಷಯ ಬಂದಾಗ ಎಂದೂ ರಾಜಿಯಾಗಿಲ್ಲ. ಸಂಗಟನೆ ವಿಷಯದಲ್ಲಿ ಅವರು ಕೆಲವು ಕಾಲಕ್ಕೆ ಕೆಲವರನ್ನು ಮಾತ್ರ ಟಾರ್ಗೆಟ್‌ ಮಾಡಿ ಉಳಿದವರನ್ನು ಸೇರಿಸಿಕೊಳ್ಳುವ ತಂತ್ರಗಾರಿಕೆ ಮಾಡುತ್ತಾರೆಯೇ ವಿನಃ ಅವರ ಕೋರ್‌ ತತ್ವದಲ್ಲಿ ಬ್ರಾಹ್ಮಣವಾದವನ್ನು ಬಿಟ್ಟುಕೊಟ್ಟಿಲ್ಲ. ಇವತ್ತಿಗೂ ಅವರ ಕಲ್ಪನೆಯ ಸನಾತನ ಧರ್ಮ ಅಂದರೆ ವೈದಿಕ ಧರ್ಮವೇ.

- ಇಸ್ಲಾಂ, ಕ್ರೈಸ್ತ ದರ್ಮಗಳು ಮಾತ್ರವೇ ಇತ್ತೀಚಿಗೆ ಬಂದಂತವು, ಸನಾತನ ದರ್ಮಕ್ಕೆ ಆದಿಯೂ ಇಲ್ಲ ಅಂತ್ಯವೂ ಇಲ್ಲ, ಅತವಾ ಇದಕ್ಕೆ 5000 ವರ್ಷಗಳಿಂದ ಇದೆ ಎಂಬುದೆಲ್ಲಾ ಈ ವೈದಿಕ ಸನಾತನಿಗಳು ನಂಬಿಸಿಕೊಂಡು ಬಂದಿರುವ ಅಡಗೂಲಜ್ಜಿ ಕತೆ. ನೀವೂ ಇದಕ್ಕೇ ತಲೆ ಆಡಿಸುವುದಾದರೆ ನೊ ಕಮೆಂಟ್ಸ್.‌

- ಈ ಸನಾತನ ದರ್ಮಕ್ಕೆ ಬಾರತದಲ್ಲಿ 3500 ವರ್ಷಗಳಿಗಿಂತ ಹಿಂದಿನ ಇತಿಹಾಸ ಇಲ್ಲ. ಮತ್ತು ಈ ಸನಾತನ ಸಂಸ್ಕೃತಿ ಶುರುವಾಗಿದ್ದು ಮಧ್ಯ ಏಶಿಯಾದಿಂದ ಯಾಮ್ನಾಯಾ ಸಂಸ್ಕೃತಿಯೊಂದಿಗೆ ಬಂದ ಆರ್ಯವೈರಿಕ ಪಶುಪಾಲಕರಿಂದ ಎನ್ನುವ ಸಂಗತಿ ಈಗ DNAಗಳ ಮೂಲಕವೂ ಸಾಬೀತಾಗಿದೆ.

- ಈ ಸನಾತನ ದರ್ಮ ಮತ್ತು ಸನಾತನ ಸಂಸ್ಕೃತಿ ಈ ದೇಶದಲ್ಲಿ ಶುರುವಾಗುವುದಕ್ಕೂ ಹತ್ತಾರು ಸಾವಿರ ವರ್ಷಗಳ ಹಿಂದೆ ಈ ದೇಶದಲ್ಲಿ ಆರ್ಯರಲ್ಲದ ಮೊದಲ ಬಾರತೀಯರು ಹುಟ್ಟುಹಾಕಿದ ದೊಡ್ಡ ಸಂಸ್ಕೃತಿ ಇದೆ. ಇಂದು ಇಡೀ ದೇಶದಲ್ಲಿ ಹರಡಿಕೊಂಡಿರುವುದು ಅದೇ ಮೂಲ ಬಾರತೀಯ ಸಂಸ್ಕೃತಿ. ಅದರ ಮೇಲೆ ಸವಾರಿ ಮಾಡುತ್ತಿರುವುದು ನಂತರ ಬಂದ ಸನಾತನ ದರ್ಮ ಅತವಾ ಸನಾತನ ವೈದಿಕ ಸಂಸ್ಕೃತಿ.

- ಈ ಮೇಲಿನ ಸ್ಪಷ್ಟ ಸೈದ್ದಾಂತಿಕ ತಿಳುವಳಿಕೆಯನ್ನು ಬಿಜೆಪಿ ಸಂಗಪರಿವಾರ ಹೊರತುಪಡಿಸಿದ ಯಾವುದೇ ರಾಜಕೀಯ ಪಕ್ಷ ಬಾರತೀಯರಿಗೆ ನೀಡಲು ಸೋತಿರುವುದೇ ಇಂದು ಸಂಗಪರಿವಾರ ತನ್ನ ಹುಸಿ ಸಿದ್ದಾಂತವನ್ನು, ವಿಷಕಾರಿ ಹಿಂದುತ್ವವನ್ನು ಬಾರತೀಯರ ತಲೆಗಳಲ್ಲಿ ತುಂಬಲು ಪ್ರಮುಕ ಕಾರಣ.

- ಸನಾತನ ದರ್ಮದ ನಿರ್ಮೂಲನೆ ಅಂದರೆ ಯಾವುದೇ ಸಮುದಾಯವನ್ನಾಗಲೀ ಯಾವುದೇ ಸಿದ್ದಾಂತದ ಜನರನ್ನಾಗಲೀ ನಿರ್ಮೂಲಿಸುವುದಲ್ಲ. ಆದರೆ ಒಂದು ವಿಷಕಾರಿ ದಾರ್ಮಿಕ-ರಾಜಕೀಯ-ಸಾಮಾಜಿಕ ಸಿದ್ದಾಂತದ ವಿರುದ್ದ ನಡೆಸುವ ಸೈದ್ದಾಂತಿಕ ಸಮರ. ಇದು ಆಗಲೇಬೇಕು.

- ನಮ್ಮ ಶೋಷಿತ ಸಮುದಾಯಗಳನ್ನು ಅಂಬೇಡ್ಕರ್-ಪೆರಿಯಾರ್-ಪುಲೆ-ಬುದ್ದ ಇವರ ಚಿಂತನೆಗಳೊಂದಿಗೆ ಈ ಸೈದ್ದಾಂತಿಕ ಹೋರಾಟದಲ್ಲಿ ಸಂಸಿದ್ದಗೊಳಿಸುವ ಎದೆಗಾರಿಕೆ ತೋರದೇ ಅಳುಮುಂಜಿಗಳಂತೆ ಹಿಂದಡಿ ಇಟ್ಟರೆ ಅಲ್ಲಿಗೆ ಶಾಶ್ವತವಾಗಿ ಗುಲಾಮರಾಗುವ ದಿನಗಳು ದೂರವಿಲ್ಲ.

- ಈ ದೇಶದಲ್ಲಿ ಒಂದೋ ಅಂಬೇಡ್ಕರ್-ಪೆರಿಯಾರ್‌-ಬಸವ-ಕುವೆಂಪು ಮುಂತಾದವರ ಚಿಂತನೆಗಳು ಗೆಲ್ಲಬೇಕು, ಜನರ ಬದುಕು ಹಸನಾಗಬೇಕು ಇಲ್ಲವೇ ಸನಾತನಿಗಳ ಸಿದ್ದಾಂತ ಗೆದ್ದು ಶಾಶ್ವತ ಗುಲಾಮಗಿರಿಗೆ ಬಾರತ ತಳ್ಳಲ್ಪಡಬೇಕು.

- ಹೌದು ಇದು ತೌಡು ಕುಟ್ಟುವ ಕಾಲವಲ್ಲ. ಜನರನ್ನು ಸೈದ್ದಾಂತಿಕವಾಗಿ ತಯಾರು ಮಾಡುವ ಸಂದಿಗ್ದದ ಕಾಲ. ಅದಕ್ಕೆ ಮೊದಲು ನಾವು ಸಂಸಿದ್ದರಾಗಬೇಕಿದೆ. ಇಲ್ಲವಾದರೆ ಈ ಸನಾತನಿ ಚಂಡಮಾರುತ ಎಲ್ಲವನ್ನೂ ಗುಡಿಸಿ ಗುಂಡಾರ ಮಾಡುವುದು ಶತಸ್ಸಿದ್ದ" ಎಂದು ಖುಗ್ವೆ ಹೇಳಿದ್ದಾರೆ.

ಈ ಕುರಿತು ತಮಿಳಿನ ಖ್ಯಾತ ನಿರ್ದೇಶಕ ಪಾ. ರಂಜಿತ್ ಹೇಳಿಕೆ ನೀಡಿದ್ದು ಅದು ಇಂತಿದೆ:

"ಸನಾತನ ಧರ್ಮದೊಳಗಿನ ಹುಳುಕುಗಳನ್ನು ನಿರ್ಮೂಲನೆ ಮಾಡಬೇಕೆಂಬ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯು ಶತಮಾನಗಳ ಜಾತಿ ವಿರೋಧಿ ಚಳವಳಿಯ ಮೂಲ ತತ್ವವಾಗಿದೆ. ಜಾತಿ ಮತ್ತು ಲಿಂಗದ ಹೆಸರಿನಲ್ಲಿ ನಡೆಯುತ್ತಿರುವ ಅಮಾನವೀಯ ಆಚರಣೆಗಳ ಬೇರು ಸನಾತನ ಧರ್ಮದಲ್ಲಿದೆ. ಕ್ರಾಂತಿಕಾರಿ ನಾಯಕ ಬಾಬಾಸಾಹೇಬ್ ಡಾ.ಬಿ.ಆರ್‌.ಅಂಬೇಡ್ಕರ್, ಜಾತಿ ವಿರೋಧಿ ಸುಧಾರಕರಾದ ಲಿಯೋತಿದಾಸ್ ಪಂಡಿತರ್, ತಂದೆ ಪೆರಿಯಾರ್, ಮಹಾತ್ಮ ಫುಲೆ, ಸಂತ ರವಿದಾಸ್ ಮುಂತಾದವರು ತಮ್ಮ ಜಾತಿ ವಿರೋಧಿ ಸಿದ್ಧಾಂತದಲ್ಲಿ ಇದನ್ನೇ ಪ್ರತಿಪಾದಿಸಿದ್ದಾರೆ" ತಮಿಳಿನ ಖ್ಯಾತ ನಿರ್ದೇಶಕ ಪಾ. ರಂಜಿತ್ ಹೇಳಿದ್ದಾರೆ.

"ಸಚಿವರ ಹೇಳಿಕೆಯನ್ನು ತಿರುಚಿ ಅದನ್ನು ದುರುಪಯೋಗಪಡಿಸಿಕೊಳ್ಳುವ ದುರುದ್ದೇಶಪೂರಿತ ಧೋರಣೆ ಸ್ವೀಕಾರಾರ್ಹವಲ್ಲ. ಸಚಿವರ ಮೇಲೆ ಹೆಚ್ಚುತ್ತಿರುವ ದ್ವೇಷ ಮತ್ತು ಮಾಧ್ಯಮಗಳ ಬೇಟೆ ತುಂಬಾ ಕಳವಳಕಾರಿಯಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಮಾಜವನ್ನು ಸ್ಥಾಪಿಸಲು ಸನಾತನ ಧರ್ಮದ ನಿರ್ಮೂಲನೆಗೆ ಕರೆ ನೀಡಿರುವ ಉದಯ್ ನಿಧಿ ಅವರ ಮಾತುಗಳಿಗೆ ನಾನು ಬೆಂಬಲವಾಗಿ ನಿಲ್ಲುತ್ತೇನೆ" ಎಂದು ಅವರು ಹೇಳಿದ್ದಾರೆ.

Advertisement
Advertisement
Recent Posts
Advertisement