ಉಡುಪಿ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸದಾಶಿವ ದೇವಾಡಿಗ ನೇಮಕ!

ಕಾರ್ಕಳ ಬ್ಲಾಕ್‍ಕಾಂಗ್ರೆಸ್‍ನ ಅಧ್ಯಕ್ಷರಾಗಿದ್ದ ಖ್ಯಾತ ನ್ಯಾಯವಾದಿ ಶ್ರೀ ಶೇಖರ್ ಮಡಿವಾಳ ಅವರು ವೈಯಕ್ತಿಕ ಕಾರಣಗಳಿಂದ ತನ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಸದ್ರಿ ತೆರವಾದ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸಿಗ ಸದಾಶಿವ ದೇವಾಡಿಗ ಇವರು ನೇಮಕಗೊಂಡಿದ್ದಾರೆ.ಶ್ರೀಯುತರು ನ್ಯೂ ಇಂಡಿಯಾ ಇನ್ಸೂರೆನ್ಸ್ ಕಂಪೇನಿಯಲ್ಲಿ ಸೀನಿಯರ್ ಬ್ರಾಂಚ್ ಮ್ಯಾನೇಜರ್ ಆಗಿ ನಿವೃತ್ತಿಗೊಂಡಿದ್ದು ಇದೀಗ ಕ್ಷೇತ್ರದ ಕಾರ್ಯಕರ್ತರ ಒತ್ತಾಸೆಯ ಮೇರೆಗೆ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಹಾಗೂ‌ ಜಿಲ್ಲಾ ಕಾಂಗ್ರೆಸ್‍ ಅಧ್ಯಕ್ಷರಾದ ಅಶೋಕ್‍ಕುಮಾರ್‍ ಕೊಡವೂರು ರವರ ಶಿಪಾರಸಿನ ಮೇರೆಗೆ ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‍ ರವರು ಸದಾಶಿವ ದೇವಾಡಿಗ ಅವರನ್ನು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶಿಸಿರುತ್ತಾರೆ.

ಆದೇಶಪತ್ರವನ್ನು ಸ್ವೀಕರಿಸುವ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಧಾಕರ ಕೋಟ್ಯಾನ್, ಹೆಬ್ರಿ ಬ್ಲಾಕ್‍ ಅಧ್ಯಕ್ಷರಾದ ಮಂಜುನಾಥ ಪೂಜಾರಿ, ಕಾಂಗ್ರೆಸ್ ನಾಯಕ ಕೃಷ್ಣಮೂರ್ತಿ, ಕಾರ್ಕಳ ಬ್ಲಾಕ್ ವಕ್ತಾರರಾದ ಬಿಪಿನ್ ಚಂದ್ರಪಾಲ್ ನಕ್ರೆ, ಕೆಪಿಸಿಸಿ ಕಿಸಾನ್‍ ಘಟಕದ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ, ಕೆಪಿಸಿಸಿ ಯುವ ಕಾಂಗ್ರೆಸ್ ಕಾರ್ಯದರ್ಶಿ ರವಿಶಂಕರ್ ಸೆರ್ವೇಗಾರ್, ಕಾರ್ಕಳ ಬ್ಲಾಕ್‍ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರಾ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಸ್ಲಾಮ್, ಕಾರ್ಕಳ ಐಟಿ ಸೆಲ್‍ ಅಧ್ಯಕ್ಷ ಸತೀಶ್ ಕಾರ್ಕಳ, ಸೇವಾದಳದ ಅಧ್ಯಕ್ಷ ಸುಶಾಂತ್, ಐಟಿ ಸೆಲ್‍ನ ಪ್ರದೀಪ್ ಮುದ್ರಾಡಿ ಹಾಗೂ ಇತರಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ, ಇತ್ತೀಚೆಗೆ ನಿಧನರಾದ ನಿತ್ಯಾನಂದ ಅಮೀನ್ ಪಡುಕೆರೆ (ಉಡುಪಿ ಬ್ಲಾಕ್‍ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್‍ ಅಮೀನ್ ಪಡುಕೆರೆಯವರ ಹಿರಿಯ ಸಹೋದರ) ಹಾಗೂ ಇದಿನಬ್ಬ ಸಾಹೇಬ್ ಇವರುಗಳಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಅಶೋಕ್‍ಕುಮಾರ್‍ ಕೊಡವೂರು ರವರು ಶ್ರದ್ದಾಂಜಲಿ ಅರ್ಪಿಸಿದರು.

⚫ನಿಮಗೆ ಈ ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ.

⚫ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ.

⚫ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

0Shares