Kannada Media Kannada News | Latest And Breaking News Tuesday, April 13, 2021
Menu
  • ಮುಖಪುಟ
  • ರಾಷ್ಟ್ರೀಯ
  • ರಾಜ್ಯ
  • ಜಿಲ್ಲಾವಾರು
    • ಶಿವಮೊಗ್ಗ
    • ಉಡುಪಿ
    • ತುಮಕೂರು
  • ಸಂಪಾದಕೀಯ
  • ಸುದ್ದಿ ವಿಶ್ಲೇಷಣೆ
  • ಅಂಕಣ
  • ಮುಖಪುಟ
  • ರಾಷ್ಟ್ರೀಯ
  • ರಾಜ್ಯ
  • ಜಿಲ್ಲಾವಾರು
    • ಶಿವಮೊಗ್ಗ
    • ಉಡುಪಿ
    • ತುಮಕೂರು
  • ಸಂಪಾದಕೀಯ
  • ಸುದ್ದಿ ವಿಶ್ಲೇಷಣೆ
  • ಅಂಕಣ
ಉಡುಪಿ

ಬಿಜೆಪಿ ಸರ್ಕಾರದ ರೈತ ವಿರೋಧಿ ಕಾಯ್ದೆಯ ವಿರುದ್ಧ ಒಂದು ಲಕ್ಷಕ್ಕೂ ಅಧಿಕ ರೈತರ ಸಹಿ ಸಂಗ್ರಹಿಸಿದ ಉಡುಪಿ ಜಿಲ್ಲಾ ಕಾಂಗ್ರೆಸ್.

18 November 2020 12:28 PM by Kannada Media Views: 241

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮತ್ತು ರಾಜ್ಯದ ಯಡಿಯೂರಪ್ಪ ಸರ್ಕಾರಗಳು ಭೂ ಸ್ವಾದೀನ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಕಾರ್ಮಿಕ ತಿದ್ದುಪಡಿ ಕಾಯ್ದೆಗಳನ್ನು ರೈತ ಮತ್ತು ಕಾರ್ಮಿಕರ ಹಿತಾಸಕ್ತಿಗೆ ವಿರುದ್ದವಾಗಿ ತಿದ್ದುಪಡಿ ಮಾಡಿ ಜಾರಿಗೊಳಿಸಲು ಹೊರಟಿವೆ. ಇದು ರೈತರನ್ನು ಗುಲಾಮಗಿರಿಗೆ ತಳ್ಳುವ ಹುನ್ನಾರದ ಭಾಗವಾಗಿದೆ. ಇದರ ಹಿಂದೆ ಬಿಜೆಪಿಯ ಚುನಾವಣಾ ಖರ್ಚಿಗೆ ಹಣದ ಹೊಳೆ ಹರಿಸುವ ಪ್ರಧಾನಿ ಮೋದಿಯವರ ಉದ್ಯಮಿ ಸ್ನೇಹಿತರನ್ನು ಉದ್ದರಿಸುವ ಗುಪ್ತಕಾರ್ಯಸೂಚಿ ಅಡಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.



ಅವರು ಸೋಮವಾರ ಉಡುಪಿ ಬನ್ನಂಜೆಯಿಂದ ಕಡಿಯಾಳಿಯ ತನಕ ಎರಡು ಕಿ.ಮೀಟರ್ ಉದ್ದದ, ಜಿಲ್ಲೆಯ 1,111 ಬೂತ್‌ಗಳ ರೈತರ ಸಹಿಯುಳ್ಳ ಬ್ಯಾನರ್ ಅನ್ನು ಕಾಂಗ್ರೆಸ್ ಕಾರ್ಯಕರ್ತರ ಮೂಲಕ ಪ್ರದರ್ಶನ ನಡೆಸಿ, ಉಡುಪಿ ಸಿಟಿ ಬಸ್ ಸ್ಟ್ಯಾಂಡ್ ನಲ್ಲಿ ಸಾರ್ವಜನಿಕವಾಗಿ ಮಾತನಾಡುತ್ತಿದ್ದರು.



ಈ ಕಾಯ್ದೆಗಳ ತಿದ್ದುಪಡಿಯು ಈ ಹಿಂದೆ ಅಧಿಕಾರದಲ್ಲಿದ್ದ ಸಂಧರ್ಭದಲ್ಲಿ ಕಾಂಗ್ರೆಸ್ ಸರ್ಕಾರಗಳು ಜಾರಿಗೊಳಿಸಿ ಈ ತನಕ ಎಪಿಎಂಸಿಗಳಿಗೆ ನೀಡಲಾಗುತ್ತಿದ್ದ ಬೆಂಬಲ ಬೆಲೆಯನ್ನು ನಿಲ್ಲಿಸುವ, ಆಮೂಲಕ ನಿಧಾನವಾಗಿ ಎಪಿಎಂಸಿಗಳನ್ನು ಮುಚ್ಚುವ ಹಾಗೂ ರೈತರ ಜಮೀನನ್ನು ದೇಶದ ಕೆಲವೇ ಉದ್ಯಮಿಗಳ ವಶಕ್ಕೆ ಒಪ್ಪಿಸುವ ಅತ್ಯಂತ ಅಪಾಯಕಾರಿ ತಿದ್ದುಪಡಿಯಾಗಿವೆ, ಈ ದೇಶದ ಪ್ರಜ್ಞಾವಂತರಾದ ನಾವು ಈ ಕುರಿತು ಅರಿವಿದ್ದೂ ಕಣ್ಮುಚ್ಚಿ ಕುಳಿತುಕೊಳ್ಳಲಾಗುವುದಿಲ್ಲ. ಆ ಕಾರಣಕ್ಕಾಗಿ ಈ ಕಾಯ್ದೆಗಳ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯುವ ತನಕವೂ ನಮ್ಮ ಈ ಹೋರಾಟ ಮುಂದುವರಿಯಲಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.



ಈ ತಿದ್ದುಪಡಿ ಕಾಯ್ದೆಗಳು ರೈತರ ಹಾಗೂ ಕಾರ್ಮಿಕರ ಪಾಲಿಗೆ ಮರಣಶಾಸನವಾಗಲಿವೆ. ಕಾಂಗ್ರೆಸ್ ಅದ್ಯಕ್ಷೆ ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ಈ ತಿದ್ದುಪಡಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ದೇಶದಾದ್ಯಂತ ಕನಿಷ್ಠ ಎರಡು ಕೋಟಿ ರೈತರ ಸಹಿ ಸಂಗ್ರಹದ ಗುರಿ ಹೊಂದಿ ಅಭಿಯಾನ ನಡೆಯುತ್ತಿದೆ. ಈ ಸಹಿ ಸಂಗ್ರಹದ ಬಳಿಕ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಇದನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿ ತಿದ್ದುಪಡಿ ಕಾಯ್ದೆಯನ್ನು ಹಿಂದಕ್ಕೆ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸುವಂತೆ ಮನವಿ ಮಾಡಲಿದ್ದಾರೆ. ಉಡುಪಿ ಜಿಲ್ಲೆಯೊಂದರಲ್ಲೇ ಒಂದು ಲಕ್ಷಕ್ಕೂ ಅಧಿಕ ಸಹಿ ಸಂಗ್ರಹವಾಗಿರುವುದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹಾಗೂ ಈ ಜಿಲ್ಲೆಯ ಇತರ ನಾಯಕರುಗಳ ಬಹುದೊಡ್ಡ ಸಾಧನೆಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲಿಂ ಅಹಮದ್ ಹೇಳಿದ್ದಾರೆ.



ಈ ಸಂಧರ್ಭದಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ, ಹತ್ತು ಬ್ಲಾಕ್‌ಗಳ ಸುಮಾರು ಒಂದು ಸಾವಿರಕ್ಕೂ ಮಿಕ್ಕಿ ರೈತರು ಹಾಗೂ ಕಾಂಗ್ರೆಸ್ ನಾಯಕರುಗಳು ಭಾಗವಹಿಸಿದ್ದರು.

ಪ್ರತಿಭಟನೆಯ ವಿಡಿಯೋಗಾಗಿ ಈ ಕೆಳಗಿನ ಟ್ವೀಟರ್ ಲಿಂಕ್ ಕ್ಲಿಕ್ ಮಾಡಿ:

ಕೇಂದ್ರ ಸರ್ಕಾರದ ರೈತವಿರೋಧಿ ಭೂಸ್ವಾದೀನ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಗಳನ್ನು ವಿರೋಧಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಸಹಿ ಸಂಗ್ರಹದ 2ಕಿ.ಮೀ ಉದ್ದದ ಬ್ಯಾನರ್ ಪ್ರದರ್ಶನ. ಈ ಸಂಧರ್ಭದಲ್ಲಿ ಕಾಂಗ್ರೆಸ್ ನಾಯಕರಾದ @SaleemAhmadINC , @VKSorake , @ashok_kodavoor ಮುಂತಾದವರು ಭಾಗವಹಿಸಿದ್ದರು. pic.twitter.com/eW3sYEOW7w

— kannadamedia.com (@Inckundapur) November 18, 2020
____________________________________

►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Post Views: 337
0Shares
Tags: ashok kumar kodavoor, KPCC, KPCC Social Media, saleem ahmad, Udupi Disrict Congress, vinay kumar sorake

ನಮ್ಮ ಜಾಹೀರಾತುದಾರರನ್ನು ಬೆಂಬಲಿಸಿ

Follow Us

Follow us on Facebook Follow us on Twitter Contact us on WhatsApp

Kannada Media

Copyright © 2021 Kannada Media. Designed by Indira India