Advertisement

ವ್ಯಂಗ್ಯಚಿತ್ರಕಾರ ಪಂಜು ಗಂಗೊಳ್ಳಿಯವರ ಕುಂದಾಪ್ರ ಕನ್ನಡ ನಿಘಂಟು ಈಗ ಪ್ರಕಟಣಾಪೂರ್ವ ಖರೀದಿಗೆ ಲಭ್ಯ

Advertisement

700ಕ್ಕೂ ಮಿಕ್ಕಿ ಪುಟಗಳ, 10,000ಕ್ಕೂ ಮಿಕ್ಕಿ ಶಬ್ದಗಳು ಹಾಗೂ 1700ಕ್ಕೂ ಮಿಕ್ಕಿ ನುಡಿಗಟ್ಟುಗಳನ್ನು ಹೊಂದಿರುವ ಕುಂದಾಪ್ರ ಕನ್ನಡ ನಿಘಂಟು ಈಗ ಪ್ರಕಟಣಾಪೂರ್ವ ಖರೀದಿಗೆ ಲಭ್ಯವಿದೆ. ಮಾರುಕಟ್ಟೆ ಬೆಲೆ 600/- ಇರುವ ಈ ಪುಸ್ತಕ ಈಗ ಪ್ರಕಟಣಾಪೂರ್ವ 400/-ರೂ.ಗಳಲ್ಲಿ (ಅಂಚೆವೆಚ್ಚ ಸಹಿತ) ಲಭ್ಯವಿದೆ. ಪುಸ್ತಕದ ಪ್ರಕಟಣಾಪೂರ್ವ ಮಾರಾಟವನ್ನು ಎಕ್ಸ್‌ಕ್ಲೂಸಿವ್ ಆಗಿ “ಬುಕ್ ಬ್ರಹ್ಮ” ತಂಡ ನಿಭಾಯಿಸುತ್ತಿದೆ. ಆ ಸಂಸ್ಥೆ ಪ್ರಕಟಣಾಪೂರ್ವ ಖರೀದಿಗೆ ಸಿಂಗಲ್ ಪಾಯಿಂಟ್ ವಿಂಡೊ ಆಗಿ ಕಾರ್ಯ ನಿರ್ವಹಿಸಲಿದೆ. ಪುಸ್ತಕ ಖರೀದಿಸಲು ಆಸಕ್ತರು ದೂರವಾಣಿ ಸಂಖ್ಯೆ: 8495024253 ಗೆ ಪೇಟಿಎಂ/ ಗೂಗಲ್ ಪೇ/ ಫೋನ್ ಪೇ ಮೂಲಕ ಪಾವತಿ ಮಾಡಿ, ಪಾವತಿ ಮಾಡಿದ ವಿವರ ಮತ್ತು ವಿಳಾಸವನ್ನು ಕಳುಹಿಸಿಕೊಟ್ಟರೆ, ಜನವರಿ 26ಕ್ಕೆ ಪುಸ್ತಕ ಬಿಡುಗಡೆಯ ದಿನದಂದೇ ಪುಸ್ತಕವನ್ನು ತಲುಪಿಸಲು ವ್ಯವಸ್ಥೆ ಮಾಡಲಾಗುತ್ತದೆ. 'ಪ್ರೊಡಿಜಿ ಪ್ರಿಂಟಿಂಗ್' ಪುಸ್ತಕವನ್ನು ತಮ್ಮ ಮನೆ ಬಾಗಿಲಿಗೆ ಮುಟ್ಟಿಸಲಿದೆ. ನಿಮಗೆ ಈ ಪುಸ್ತಕ ಖರೀದಿಯ ಸಂಬಂಧ ಯಾವುದೇ ಪ್ರಶ್ನೆಗಳಿದ್ದರೂ ಮೇಲಿನ ಫೋನ್ ನಂಬರಿಗೆ ಕರೆ ಮಾಡಿ, ಮಾತನಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisement
Advertisement
Recent Posts
Advertisement