ರಾಷ್ಟ್ರೀಯ

ಇಂದು ದೆಹಲಿಯಲ್ಲಿ ರೈತವಿರೋಧಿ ಕೃಷಿಕಾಯ್ದೆಗಳ ವಿರುದ್ಧ ಲಕ್ಷಾಂತರ ಟ್ರ್ಯಾಕ್ಟರ್ ಗಳ ಬೃಹತ್ ‌ರ‌್ಯಾಲಿ… ವಿಡಿಯೋ ನೋಡಿ!

ಬರಹ: ಪುರುಷೋತ್ತಮ ಬಿಳಿಮಲೆ ( ಲೇಖಕರು ಜನಪರ ಚಿಂತಕರು ಹಾಗೂ ಜೆಎನ್‌ಯು ನ ನಿವೃತ್ತ ಪ್ರೊಫೆಸರ್)ದೆಹಲಿಯ ಟ್ರಾಕ್ಟರ್‌ ಪೆರೇಡ್‌ ಆಗಲೇ ಯಶಸ್ವಿಯಾಗಿದೆ. ಲಕ್ಷಾಂತರ ಟ್ರಾಕ್ಟರುಗಳು ದೆಹಲಿ ಗಡಿಗಳನ್ನು ತಲುಪಿವೆ. ಸಾವಿರಾರು ಟ್ರಾಕ್ಟರುಗಳು ಇನ್ನೂ ಬರುತ್ತಿವೆ. ರೈತ ನಾಯಕರು ಅತ್ಯದ್ಭುತವಾಗಿ ಪೆರೇಡಿಗೆ ವ್ಯವಸ್ಥೆ ಮಾಡಿದ್ದಾರೆ. ಪ್ರತಿ ಟ್ರಾಕ್ಟರುಗಳಲ್ಲೂ ಒಂದು ದಿನಕ್ಕೆ ಬೇಕಾದಷ್ಟು ಆಹಾರ, ನೀರು ಇರುತ್ತದೆ. ಮೆರವಣಿಗೆ ಸುಮಾರು ೧೩೦ ಕಿಮೀಗಳಷ್ಟು ಕ್ರಮಿಸುತ್ತದೆ. ಇದಕ್ಕೆ ಸುಮಾರು ಏಳೆಂಟು ಗಂಟೆಗಳ ಅವಧಿ ತಗಲಬಹುದೆಂದು ಊಹಿಸಲಾಗಿದೆ. ದುಷ್ಕರ್ಮಿಗಳ ಮೇಲೆ ನಿಗಾ ಇರಿಸಲಾಗಿದೆ. ಸುಮಾರು ೪೫ ಸಾವಿರಕ್ಕೂ ಹೆಚ್ಚು ಪೋಲೀಸರು ಶಿಸ್ತು ಕಾಪಾಡಲು ಸಿದ್ಧರಾಗಿದ್ದಾರೆ. ದೇಶ ವಿದೇಶಗಳ ೨೫೦ಕ್ಕೂ ಹೆಚ್ಚು ಚಾನೆಲ್‌ ಗಳು ಆಗಲೇ ದೆಹಲಿ ತಲುಪಿವೆ. ಶಾಂತಿ ಕಾಪಾಡಲು ಎಲ್ಲರೂ ಪ್ರತಿಜ್ಞಾ ಬದ್ಧರಾಗಿದ್ದಾರೆ. ಸರಕಾರ ಹೆಚ್ಚು ಚರ್ಚಿಸದೆ, ವಿವೇಚನೆ ಮಾಡದೆ, ಸುಗ್ರೀವಾಜ್ಞೆಯ ಮೂಲಕ, ಅದೂ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜ್ಯಾರಿಗೆ ತಂದ ಮೂರು ಕೃಷಿ ಕಾಯ್ದೆಗಳು ಬಹುಶ: ಖಾಸಗೀಕರಣದ ಕೊನೆಯ ಹಂತ. ಇದು ಮನುಷ್ಯನನ್ನು ನಾಶ ಮಾಡಿ ಆ ಜಾಗದಲ್ಲಿ ಹಣವನ್ನೂ ಹೆಣವನ್ನೂ ಒಟ್ಟಿಗೇ ಸ್ಥಾಪಿಸುತ್ತದೆ. ರೈತ ವರ್ಗಕ್ಕೆ ತಡವಾಗಿಯಾದರೂ ಇದರ ಬಗ್ಗೆ ತಿಳಿವಳಿಕೆ ಮೂಡಿದ್ದು ಭವಿಷ್ಯದ ಬಗ್ಗೆ ಆಸೆ ಹುಟ್ಟಿಸಿದೆ. ಭಾರತದಂತ ಬೃಹತ್‌ ದೇಶದ ಗಣರಾಜ್ಯೋತ್ಸವಕ್ಕೆ ರೈತರೇ ಅತಿಥಿಗಳಾಗಿರುವುದು ಸಣ್ಣ ಸಂಗತಿಯೇನಲ್ಲ.

ರೈತರ ಹೋರಾಟದ ಯಶಸ್ಸನ್ನು ಅರ್ಥಮಾಡಿಕೊಳ್ಳಬೇಕಾದರೆ ರೈತ ವಿರೋಧಿಗಳ ಮಾತುಗಳಿಗೆ ಕಿವಿಕೊಡಬೇಕು. ಅದರಲ್ಲಿ ಹೆಚ್ಚಿನವರು ಆಗಲೇ ಮಾನಸಿಕ ಸಮತೋಲನ ಕಳೆದುಕೊಂಡಂತೆ ಮಾತಾಡುತ್ತಿದ್ದಾರೆ. ಬಹುಮತದಿಂದ ಆಯ್ಕೆಯಾದ ಸರಕಾರದ ವಿರುದ್ಧ ಮಾತಾಡುವುದು ತಪ್ಪೆಂದು ಹೇಳುವವರಿಗೆ ಪ್ರಜಾಪ್ರಭುತ್ವದ ಅ ಆ ಇ ಈ ಕೂಡಾ ತಿಳಿದಿಲ್ಲ. ನಾಳಿನ ದಿನ ಇತಿಹಾಸದ ಪುಟಗಳಲ್ಲಿ ಸೇರಲಿದೆ. ಅದಕ್ಕೆ ಸಾಕ್ಷಿಯಾಗೋಣ. ದಣಿವರಿಯದೆ ಹಗಲೂ ರಾತ್ರಿ ದುಡಿಯುತ್ತಿರುವ ಅಜಿತ್‌ ಅಂಜುಂ ದೆಹಲಿಗೆ ಆಗಮಿಸುತ್ತಿರುವ ಟ್ರಾಕ್ಟರುಗಳ ಬಗ್ಗೆ ವರದಿ ಮಾಡಿದ್ದಾರೆ.

ಟ್ರಾಕ್ಟರ್ ರ‌್ಯಾಲಿಯ ಕುರಿತಾದ ವಿಡಿಯೋಗಳಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಮತ್ತು kannadamedia YouTube ಚಾನಲ್ subscribe ಮಾಡಿ.__________________________________

►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

0Shares