Advertisement

ಉಚಿತ ಲಸಿಕೆಗೆ ಕಾಂಗ್ರೆಸ್ ‌ಒತ್ತಾಯಿಸಿತ್ತು, ಇದೀಗ ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಅಭಿನಂದನೆ ತಿಳಿಸುತ್ತೇವೆ: ಡಿಕೆಶಿ

Advertisement

ಎಲ್ಲರಿಗೂ ಉಚಿತ ಲಸಿಕೆ ನೀಡುವಂತೆ ನಾವು ‌ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಿದ್ದೆವು, ಅದಕ್ಕೆ ಯಡಿಯೂರಪ್ಪ ಸರ್ಕಾರ ಒಪ್ಪಿಕೊಂಡಿದೆ ಅದಕ್ಕೆ ಅಭಿನಂದನೆ ತಿಳಿಸುತ್ತೇವೆ. ಸರ್ಕಾರದ ಕೋವಿಡ್ ಮಾರ್ಗಸೂಚಿ ನಿಯಮಗಳಿಂದ ಯಾರಿಗೆ ತೊಂದರೆ ಆಗಿದ್ದರೂ ಅಂತಹವರಿಗೆ ಸರ್ಕಾರ ಪರಿಹಾರ ನೀಡಬೇಕು. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರಿಗೆ ಸಹಾಯ‌ ಮಾಡಬೇಕು. ಬಡ್ಡಿಮನ್ನಾ ಮಾಡಿ ಸಾಲ ಮರುಪಾವತಿ ಗಡುವು ಮುಂದೂಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದ್ದಾರೆ. ಅವರು ಇಂದು ಕೆಪಿಸಿಸಿ ಕಚೇರಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಆಟೋ, ಟ್ಯಾಕ್ಸಿ, ಟ್ರಾನ್ಸ್ ಪೋರ್ಟ್ ವಾಹನ ಚಾಲಕರಿಗೆ ರಕ್ಷಣೆ ನೀಡಬೇಕು, ಫೈನಾನ್ಸಿಯರ್‌ಗಳು ಕೊಡುವ ಕಿರುಕುಳ ನಿಲ್ಲಿಸಬೇಕು. ಹೊಟೆಲ್, ಸಾರಿಗೆ, ರೆಸ್ಟೋರೆಂಟ್ ಉದ್ಯಮಗಳನ್ನು ಅಗತ್ಯ ಸೇವೆಗಳ ಪಟ್ಟಿಗೆ ಸೇರಿಸಬೇಕು. ಇಲ್ಲದಿದ್ದರೆ ರೈತರು, ಕಾರ್ಮಿಕರಂತೆಯೇ ವರ್ತಕರ ಪರವಾಗಿಯೂ ನಿಂತು ನಮ್ಮ ಪಕ್ಷ ಹೋರಾಟ ಮಾಡಬೇಕಾಗುತ್ತದೆ ಎಂದವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. __________________________________ ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement