ಸುದ್ದಿ ವಿಶ್ಲೇಷಣೆ

ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ!

‘ಮೂರನೆ ಹಂತದ ಟ್ರಾಯಲ್‌ಗೆ ಬಾಕಿ ಇರುವ ವ್ಯಾಕ್ಸಿನ್ ಒಂದನ್ನು ದೇಶದ ಜನರ ಮೇಲೆ ಪ್ರಯೋಗಿಸಲು ಮುಂದಾದಾಗ ಪ್ರಜಾಪ್ರಭುತ್ವದ ಮಾದರಿಯಲ್ಲಿ, ದೇಶದ ಜನರ ಭದ್ರತೆಯ ದೃಷ್ಟಿಯಿಂದ, ಈ ದೇಶಕ್ಕೆ ಸತತ 60ಕ್ಕೂ ಹೆಚ್ಚು ವರ್ಷಗಳ ಕಾಲ ಜನಪರವಾಗಿ ಆಡಳಿತ ನೀಡಿದ ಒಂದು ರಾಜಕೀಯ ಪಕ್ಷವಾಗಿ, ಈಗಿನ ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾಂಗ್ರೆಸ್ ‘ಈ ದೇಶದ ಅಮಾಯಕ ಜನರನ್ನು ಪ್ರಯೋಗಕ್ಕೆ ಬಳಸಬೇಡಿ, ಸಂಪೂರ್ಣ ಟ್ರಾಯಲ್ ಮುಗಿದು WHO ಅಥವಾ ಅಂತಹ ಅಧಿಕೃತ ಸಂಸ್ಥೆಗಳಿಂದ ಅನುಮೋದನೆ ಪಡೆದಿರುವ ಲಸಿಕೆಯನ್ನು ಮಾತ್ರವೇ ನೀಡಿ, ಏಕೆಂದರೆ ಪ್ರಯೋಗಕ್ಕೆ ಬಳಸಿಕೊಳ್ಳಲು ಈ ದೇಶದ ಜನ ಇಲಿಗಳಲ್ಲ’ ಎಂದು ಒತ್ತಾಯಿಸಿತ್ತು ಮತ್ತು ಈ ನೆಲದ ಪ್ರಜ್ಞಾವಂತ ಜನರು ಹಾಗೂ ಆರೋಗ್ಯ ತಜ್ಞರುಗಳು ಕೂಡ ಈ ಕುರಿತು ಧ್ವನಿಗೂಡಿಸಿದ್ದರು.

ಆದರೆ ಕೊರೊನಾ ಎರಡನೆಯ ಅಲೆ ಅಪ್ಪಳಿಸಿದ ಸಂಧರ್ಭದಲ್ಲಿ ಬಿಜೆಪಿಯ ಹಲವು‌ ನಾಯಕರುಗಳು ಲಸಿಕೆ ಕುರಿತಾಗಿ ಕಾಂಗ್ರೆಸ್ ಪಕ್ಷ ಅಪಪ್ರಚಾರ ಮಾಡಿದ್ದೇ ಎರಡನೆಯ ಅಲೆ ಅಪ್ಪಳಿಸಲು ಕಾರಣ ಎಂದು ಪ್ರಚಾರ ಮಾಡುತ್ತಿದ್ದಾರೆ. ಆದರೆ ನಿಜ ಏನು? ನಿಜಕ್ಕೂ ಕೊರೊನಾದ ಗಂಭಿರತೆ ಮರೆತು, ಆ ಕುರಿತು ಬಾಲಿಷವಾಗಿ ಹೇಳಿಕೆ ನೀಡಿದವರು ಯಾರು? ನಿಜ ಏನೆಂದು ತಿಳಿಯಲು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಕೆಳಗಿನ ‘ಕನ್ನಡ ಮೀಡಿಯಾ ಡಾಟ್ ಕಾಂ’ ಯೂಟ್ಯೂಬ್ ನಲ್ಲಿನ ವಿಡಿಯೋ ನೋಡಿ…

ಇದು ಕಾರವಾರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಅನಂತಕುಮಾರ್ ಹೆಗ್ಡೆ ‘ಕೊರೊನಾ ಎನ್ನುವದೇ ಒಂದು ಮಹಾನ್ ಸುಳ್ಳು, ಅದೊಂದು ಮೆಡಿಕಲ್ ಲಾಬಿ’ ಎಂದು ಹೇಳಿರುವ ವಿಡಿಯೋ! ಕಾನೂನು ತಜ್ಞರ ಪ್ರಕಾರ ಆರೋಗ್ಯ ತುರ್ತುಸ್ಥಿತಿಯ ಈ ಸಂಧರ್ಭದಲ್ಲಿ ಈ ವಿಡಿಯೋವನ್ನು ಪ್ರಮುಖ ಸಾಕ್ಷಿಯಾಗಿ ಬಳಸಿಕೊಂಡು ನ್ಯಾಯಾಲಯದಲ್ಲಿ ದಾವೆ ಹೂಡಬಹುದಾಗಿದೆ.

ಹಿನ್ನಲೆ: ‘ವಿದೇಶಿ ಖಾಯಿಲೆ ಕೊರೊನಾ’ ಮಹಾಮಾರಿಯ ಮೊದಲ ಅಲೆ ಈ ದೇಶಕ್ಕೆ ಅಪ್ಪಳಿಸುವ ಮೊದಲೇ ಅಂದರೆ ಇಲ್ಲಿ ಕೇವಲ 520+ ಜನರಿಗೆ ಮಾತ್ರವೇ ಕೊರೊನಾ ಪಾಸಿಟಿವ್ ಇರುವ ಹೊತ್ತಿನಲ್ಲಿ ಕೇವಲ ಅಂತರ್ರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸುವ ಮೂಲಕ ಕೊರೊನಾ ಹರಡದಂತೆ ತಡೆಯಬಹುದಾಗಿದ್ದ ಸುಲಭ ವಿಧಾನವನ್ನು ಬಿಟ್ಟು ಪ್ರಧಾನಿ ಮೋದಿಯವರು ಯಾವುದೇ ಮುನ್ಸೂಚನೆ ನೀಡದೆ ರಾತ್ರೋರಾತ್ರಿ 21ದಿನಗಳ‌ ಕಾಲದ ಲಾಕ್‌ಡೌನ್ ಘೋಷಿಸುವ ಮೂಲಕ ಬಹುಮುಖ್ಯವಾಗಿ ದೇಶದ ವಿವಿದೆಡೆಯ ಲಕ್ಷಾಂತರ ವಲಸೆ ಕಾರ್ಮಿಕರು ಮತ್ತಿತರರು ಅನ್ನ ನೀರಿಲ್ಲದೆ ಬಳಲಲು, ಬೀದಿ ಶವವಾಗಲು ಕಾರಣರಾಗಿದ್ದರು ಮತ್ತು ದೇಶದ ಜನರಿಗೆ ಲಸಿಕೆ ಮುಂತಾದ ವೈಜ್ಞಾನಿಕ ಮಾರ್ಗಗಳನ್ನು ಸೂಚಿಸುವ ಬದಲಿಗೆ ಚಪ್ಪಾಳೆ, ತಟ್ಟೆಗಳನ್ನು ಬಡಿಯುವಂತೆ, ಕ್ಯಾಂಡಲ್ ಹೆಚ್ಚುವಂತೆ ಕರೆನೀಡಿ ನಗೆ ಪಾಟಿಲಿಗಿಡಾಗಿದ್ದನ್ನು, ಜನರ ಶಾಪಕ್ಕೆ ಈಡಾಗಿದ್ದನ್ನು ನಾವಿಲ್ಲಿ ನೆನೆಪಿಸಿಕೊಳ್ಳಬಹುದಾಗಿದೆ.