Advertisement

ಕರಾವಳಿ ಆಹಾರ ಪದ್ಧತಿಗೆ ಪುಸ್ತಕ ರೂಪ ಕೊಟ್ಟ ದುಬೈ ಕನ್ನಡತಿ ದೀಪಿಕಾ ಶೆಟ್ಟಿ

Advertisement

ಆಹಾರವು ಜನರ ನಿತ್ಯ ಅವಶ್ಯಕತೆಯ ಒಂದು ಭಾಗ. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹಸ್ತಾಂತರವಾಗುತ್ತಾ ಬಂದಿದೆ. ಆಹಾರವು ಗಡಿ, ಸಮುದ್ರ ದಾಟಿ ಪ್ರಯಾಣಿಸಿ ಬೆಳೆದಿದೆ. ಆಹಾರದ ಮೂಲವನ್ನು ಹಾಗೆಯೇ ಉಳಿಸಿಕೊಂಡು ನಾವು ಆಹಾರಕ್ಕೆ ಮತ್ತೊಂದಿಷ್ಟನ್ನು ಸೇರಿಸಿ ಬೆಳೆಸಿ, ಅದರ ಕೊಂಬೆಗಳನ್ನು ಬಲಿಷ್ಠಗೊಳಿಸಿದ್ದೇನೆ: ದೀಪಿಕಾ ಶೆಟ್ಟಿ., ಲೇಖಕಿ. (ಇವರು ಅಂತರ್ರಾಷ್ಟ್ರೀಯ ಮಟ್ಟದ ಕುಂದಾಪುರ ಮೂಲದ ಉದ್ಯಮಿ ಹುಂತ್ರಿಕೆ ಸುಧಾಕರ ಶೆಟ್ಟಿಯವರ ಪುತ್ರಿ) Coconut Grove ಪುಸ್ತಕದ ಆನ್‌ಲೈನ್ ಖರೀದಿಗಾಗಿ ಇಲ್ಲಿ ಕ್ಲಿಕ್ ಮಾಡಿ ಮನುಷ್ಯನ ನಾಗರಿಕತೆಗೆ ಸುದೀರ್ಘ ಇತಿಹಾಸ ಇರುವಂತೆ ಆತನ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ ಆಹಾರಕ್ಕೂ ಅಷ್ಟೇ ಸುದೀರ್ಘ ಇತಿಹಾಸವಿದೆ. ಆಹಾರ ಮನುಷ್ಯನ ನಾಗರಿಕತೆಯ ಕತೆ ಹೇಳುತ್ತದೆ. ಹಾಗೆಯೇ ವಿಶ್ವದಲ್ಲಿ ಎಲ್ಲೆಡೆ ವಿಭಿನ್ನವಾದ ಸ್ಥಳೀಯ ಆಹಾರ ವ್ಯವಸ್ಥೆಯನ್ನು ಹವಾಗುಣ, ಲಭ್ಯವಿರುವ ಸಾಮಾಗ್ರಿಗಳಿಗೆ ಅನುಗುಣವಾಗಿ ವಿಭಿನ್ನ ಶೈಲಿಯಲ್ಲಿ ತಯಾರಿಸಲಾಗುತ್ತದೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ನಮ್ಮ ದೇಶವು ಆಹಾರ ವೈಶಿಷ್ಟ್ಯತೆ ಹೆಸರುವಾಸಿ. ಕರ್ನಾಟಕದಲ್ಲೂ ಮೈಸೂರು, ಉತ್ತರಕನ್ನಡ, ಮಂಗಳೂರು ಶೈಲಿಯ ಆಹಾರ ಪದ್ದತಿಯೂ ಹೆಸರುವಾಸಿಯಾಗಿದೆ. ಹೀಗೆ ಆಹಾರದ ವಿಭಿನ್ನ ಮಾದರಿಯನ್ನು ಬಹರೈನ್‌ನಲ್ಲಿ ನೆಲೆಸಿರುವ ಕನ್ನಡತಿ ದೀಪಿಕಾ ಶೆಟ್ಟಿ ಅವರು ಒಂದು ಪುಸ್ತಕದಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ದಕ್ಷಿಣ ಕನ್ನಡದ ಆಹಾರ ಪದ್ಧತಿಯನ್ನು ಪುಸ್ತಕ ರೂಪದಲ್ಲಿ ಹೊರತಂದಿರುವ ಅವರು ತಮ್ಮ ಪುಸ್ತಕಕ್ಕೆ 'ಕೋಕನಟ್ ಗ್ರೋವ್: ಎಕ್ಸ್‌ಪ್ಲೋರಿಂಗ್ ಕೋಸ್ಟಲ್ ಫ್ಲೇವರ್' ಎಂದು ನಾಮಕರಣ ಮಾಡಿದ್ದಾರೆ. ಕರಾವಳಿ ತೀರದಲ್ಲಿ ಅದರಲ್ಲೂ ಮಂಗಳೂರಿನ ಭಾಗದಲ್ಲಿ ಆಹಾರ ಹೇಗೆ ತನ್ನ ಬೆಳವಣಿಗೆಯನ್ನು ಪಡೆಯಿತು ಎಂಬುದನ್ನು ಅವರು ಅಕ್ಷರ ರೂಪದಲ್ಲಿ ಓದುಗರಿಗೆ ನೀಡಿದ್ದಾರೆ. ಮಂಗಳೂರು ಭಾಗದ ಆಹಾರ ಪದ್ಧತಿಯಲ್ಲಿ ತೆಂಗಿನ ಕಾಯಿಯ ಬಳಕೆ ಅಧಿಕ. ತೆಂಗಿನ ಹಾಲು, ತೆಂಗಿನ ಎಣ್ಣೆಯಲ್ಲೆ ತಿಂಡಿ, ಊಟ ಸಿದ್ಧಪಡಿಸುವ ಕ್ರಮ ಅಲ್ಲಿನ ವಾತಾವರಣಕ್ಕೂ ಪೂರಕ. ಈ ಹಿನ್ನಲೆಯಲ್ಲಿ ದೀಪಿಕಾ ಅವರು ತಮ್ಮ ತಲೆತಲಾಂತರದಿಂದ ಬೆಳದು ಬಂದ ಆಹಾರ ಪದ್ಧತಿಯ ಬಗ್ಗೆ ಪುಸ್ತಕದಲ್ಲಿ ಬೆಳಕು ಚೆಲ್ಲಿದ್ದಾರೆ. ನಮ್ಮ ತಾಯಿ, ಅತ್ತೆ ಅವರಿಂದ ಪಡೆದ ಮಾಹಿತಿಯನ್ನು ಆಧರಿಸಿ ಸ್ವತಃ ತಿಂಡಿ, ಊಟವನ್ನು ಸಿದ್ಧಪಡಿಸುವ ಪ್ರಯೋಗ ಮಾಡಿದ್ದಾರೆ. ಬಳಿಕ ಅವುಗಳ ಬಗ್ಗೆ, ಅವುಗಳ ಮೂಲದ ಬಗ್ಗೆ ಮಾಹಿತಿ ಅರಸಿ ಮಂಗಳೂರಿನ ವಿವಿಧೆಡೆ ಸಂಚರಿಸಿ ಪುಸ್ತಕ ತಯಾರಿಸಿದ್ದಾರೆ. ಸಾಂಪ್ರದಾಯಿಕ ವ್ಯವಸ್ಥೆಯೊಂದಿಗೆ ಆಧುನಿಕ ಆಹಾರ ಪದ್ಧತಿಯು ತಳಕು ಹಾಕಿಕೊಂಡಿರುವ ಬಗ್ಗೆ ದೀಪಿಕಾ ಅವರು ಬೆಳಕು ಚೆಲ್ಲಿದ್ದಾರೆ. ಹಿಂದಿನ ಪದ್ಧತಿ ಮತ್ತು ಇಂದಿನ ಆಹಾರ ವ್ಯವಸ್ಥೆಯ ನಡುವಿನ ಪುಸ್ತಕ ಇದಾಗಿದೆ ಎಂದು ದೀಪಿಕಾ ಅವರು ತಿಳಿಸಿದ್ದಾರೆ ಎಂದು 'ಕನ್ನಡಪ್ರಭ ಎನ್‌ಆರ್‌ಐ ಸಂಚಿಕೆ' ವರದಿ ಮಾಡಿದೆ. ಬಹುತೇಕ ಕರಾವಳಿಯಿಂದ ಹೊರಗೆ ಬೆಳೆದ ನನಗೆ ಅಮ್ಮ ಮತ್ತು ನನ್ನ ಅತ್ತೆಯವರು ಮಾಡುತ್ತಿದ್ದ ಅಡುಗೆಯ ರುಚಿ ಭಿನ್ನವಾಗಿರುವ ಸಂಗತಿ ತಿಳಿಯಿತು. ಇದರ ಬಗ್ಗೆ ಕುತೂಹಲ ಬೆಳೆಸಿಕೊಂಡ ನಾನು ಅವುಗಳನ್ನು ಪ್ರಾಯೋಗಿಕವಾಗಿ ಅಡುಗೆ ಮಾಡಿ, ಅದರ ರುಚಿಯನ್ನು ಸವಿದೆ. ಇದನ್ನೇ ಮುಂದುವರಿಸಿದ ನನಗೆ ಪುಸ್ತಕ ಬರೆಯಬೇಕೆಂಬ ಅಭಿಲಾಷೆ ಉಂಟಾಯಿತು. ಅದನ್ನು ಇದೀಗ ಕಾರ್ಯರೂಪಕ್ಕೆ ತಂದಿದ್ದೇನೆ. ಮಂಗಳೂರಿನಲ್ಲಿ ಇಡ್ಲಿ, ರಸಂ ರುಚಿಯೇ ಭಿನ್ನ. ನನ್ನ ತಾಯಿ ಸ್ವತಃ ಬೆಲ್ಲ. ಅಡುಗೆಗೆ ಬೇಕಾದ ಎಣ್ಣೆ, ತುಪ್ಪವನ್ನು ತಯಾರಿಸಿಕೊಳ್ಳುತ್ತಿದ್ದರು. ಇದನ್ನು ನೋಡುತ್ತಾ ಬೆಳೆದ ನನಗೆ ಅಡುಗೆ ಬಗ್ಗೆ ಸಹಜ ಕುತೂಹಲ ಮೂಡಿತು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು. ಇಂದಿನ ಯುವ ಜನಾಂಗ ಮತ್ತೆ ಸಾಂಪ್ರದಾಯಿಕ ಆಹಾರ ಪದ್ಧತಿ, ಮುಖ್ಯವಾಗಿ ಸಾವಯವ ಪದ್ಧತಿಯನ್ನು ಹೊರಳುತ್ತಿದೆ. ಇದು ಮಸಾಲೆಯನ್ನು ತಾವೇ ತಯಾರಿಸಿಕೊಳ್ಳಲು ಬಹುತೇಕರು ಇಚ್ಚಿಸುತ್ತಾರೆ. ಅಂತಹವರಿಗೆ ಈ ಪುಸ್ತಕ ಉಪಯುಕ್ತವಾಗಿದೆ. ಮೂರು ಜನಾಂಗವನ್ನು ಈ ಆಹಾರ ಪದ್ಧತಿಯು ಬೆಸೆಯುತ್ತದೆ ಎಂದು ಅವರು ಹೇಳಿದ್ದಾರೆ. ಮೂಲತಃ ದೀಪಿಕಾ ಅವರು ಶೆಫ್ ಆಗಿ ವೃತ್ತಿ ಮಾಡುತ್ತಿದ್ದರು. ಮದುವೆಯ ಬಳಿಕ ಹವ್ಯಾಸಿ ಶೆಫ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ತಮ್ಮ ಮೂಲದ ಆಹಾರ ಪದ್ಧತಿಯ ಝಲಕ್ ಅನ್ನು ಪುಸ್ತಕ ರೂಪದಲ್ಲಿ ಹಿಡಿದಿಟ್ಟ ತೃಪ್ತಿ ಇದೆ. ನಾವು ಮಾಡುವ ಅಡುಗೆ ರುಚಿಕರವಾಗಿ ಬರಲು ಅಡುಗೆಗೆ ಬಳಸುವ ಮಸಾಲೆಯು ಹದವಾಗಿ ಇರಬೇಕು. ಮಸಾಲೆ ರುಬ್ಬಲು ಬಳಸುವ ಸಾಮಗ್ರಿಗಳು ಅಳತೆ ಮೀರಬಾರದು ಎನ್ನುತ್ತಾರೆ ಅವರು. ಸ್ವತಃ ತಮ್ಮ ಪ್ರಕಾಶನದಲ್ಲೆ ಪುಸ್ತಕವನ್ನು ಹೊರತಂದಿರುವ ದೀಪಿಕಾ ಶೆಟ್ಟಿ ಅವರ ಪುಸ್ತಕವನ್ನು ಚೆನ್ನೈ ಮೂಲದ 'ನೋಷನ್ ಪ್ರೆಸ್' ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 328 ಪುಟಗಳನ್ನು ಒಳಗೊಂಡ ಪುಸ್ತಕದ ಬೆಲೆ ಮಾರುಕಟ್ಟೆಯಲ್ಲಿ ₹2499. ಇದು ಅಮೇಝಾನ್‌ನಲ್ಲಿ ಲಭ್ಯವಿದೆ. __________________________________ ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG (ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement