ಉಡುಪಿ, ರಾಜ್ಯ

ಬಿಜೆಪಿಗರಿಂದ ಉಡುಪಿ ಜಿಲ್ಲೆಯಾದ್ಯಂತ ಲಸಿಕೆ ಬ್ಲಾಕಿಂಗ್ ದಂದೆ? : ಜಿಲ್ಲಾ ಕಾಂಗ್ರೆಸ್ ಆರೋಪ

ಸಾಂಕ್ರಾಮಿಕತೆಯನ್ನೇ ಬಂಡವಾಳ ಮಾಡಿಕೊಂಡು ಕೋವಿಡ್ ಲಸಿಕೆ ನೀಡಿಕೆಯ ಹೆಸರಲ್ಲಿ ಬಿಜೆಪಿ ತನ್ನ ‘ಸ್ವಜನ ಹಿತಾಸಕ್ತಿ’ಯ ಅಪರ ರಾಜಕೀಯದ ಮೂಲಕ ಜನ ಸಾಮಾನ್ಯರನ್ನು ವಂಚಿಸುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೋವಿಡ್ ನಿಗ್ರಹಿಸುವಲ್ಲಿ ಉಡುಪಿ ಜಿಲ್ಲಾಧಿಕಾರಿಯವರ ಸಮರ್ಥ ಕಾರ್ಯನಿರ್ವಹಣೆಯ ಕಣ್ಗಾವಲಿನ ಹೊರತಾಗಿಯೂ ಜಿಲ್ಲೆಯಾದ್ಯಂತ ಕೊರೋನಾ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಎನ್ನಲಾದ ಬಿಜೆಪಿ ಕಾರ್ಯಕರ್ತರು ಪಕ್ಷದ ನಾಯಕರ, ಜನಪ್ರತಿನಿಧಿಗಳ ಲೆಟರ್ ಹೆಡ್, ಶಿಪಾರಸು ಪತ್ರ ಬಳಸಿಕೊಂಡು ಲಸಿಕೆ ಕೇಂದ್ರದ ನಿಯಮಾವಳಿಗಳನ್ನು ಗಾಳಿಗೆ ತೂರಿ, ಸಂಬಂದಪಟ್ಟ ವಾರಿಯರ್ಸ್ ಗಳ ಮೇಲೆ ಒತ್ತಡ ಹೇರಿ ತಮ್ಮವರಿಗೆ ಲಸಿಕೆ ನೀಡಿಸುತ್ತಿರುವ ಬಗ್ಗೆ ಜನಸಾಮಾನ್ಯರು ಈಗಾಗಲೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಆರೋಗ್ಯ ತುರ್ತುಸ್ಥಿತಿಯ ಈ ದುರಂತ ಸನ್ನಿವೇಶವನ್ನು ತಮ್ಮವರ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಬಿಜೆಪಿಯ ಈ ಅಮಾನವೀಯ ನಡೆಯನ್ನುಕಾಂಗ್ರೆಸ್‍ ಖಂಡಿಸುತ್ತದೆ ಎಂದಿದ್ದಾರೆ.

ಇಂತಹ ಪ್ರಕರಣಗಳು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕೇಳಿ ಬರುತ್ತಿದ್ದು, ಕಾರ್ಕಳ ನಗರ ವ್ಯಾಪ್ತಿಯ ಲಸಿಕಾ ಕೇಂದ್ರದಲ್ಲಿ ಬಿಜೆಪಿ ಕಾರ್ಯಕರ್ತರು ಎನ್ನಲಾದ ಮಂದಿ, ಕೊರೋನಾ ವಾರಿಯರ್ಸ್‍ಗಳು ಮಾಡಬೇಕಾದ ಕೆಲಸವನ್ನು ತಾವೇ ಮಧ್ಯ ಪ್ರವೇಶಿಸಿ ಅನಧಿಕೃತವಾಗಿ ಮಾಡುತ್ತಿರುವುದು ಹಾಗೂ ತಮ್ಮವರ ಆಧಾರಕಾಡ್ ಬಳಸಿ ಲಸಿಕೆ ಬುಕ್ಕಿಂಗ್ ಮಾಡುತ್ತಿರುವುದು ಇದಕ್ಕೊಂದು ಉದಾಹರಣೆಯಾಗಿದೆ ಎಂದಿದ್ದಾರೆ.

ಜಿಲ್ಲಾಡಳಿತ ಈ ಬಗ್ಗೆ ಮಧ್ಯ ಪ್ರವೇಶಿಸಿ ,ಜನತೆಯ ಹಿತದೃಷ್ಠಿಯಿಂದ ಜಿಲ್ಲೆಯ ಎಲ್ಲಾ ಟಾಸ್ಕ್ ಫೋರ್ಸ್ ಸಮಿತಿಗಳನ್ನು ಬರ್ಖಾಸ್ತುಗೊಳಿಸಿ, ಎಲ್ಲರಾಜಕೀಯ ಪಕ್ಷಗಳ ಗ್ರಾಮ ಪಂಚಾಯತು ಸದಸ್ಯರು, ತಾ.ಪಂ.ಸದಸ್ಯರು, ಜಿ.ಪಂ. ಸದಸ್ಯರು ಹಾಗೂ ಮಾಜಿ ಜನಪ್ರತಿನಿಧಿಗಳನ್ನೊಳಗೊಂಡ ಹೊಸ ಸಮಿತಿಯನ್ನು ರಚಿಸಬೇಕಾದುದು ಇಂದಿನ ಆದ್ಯತೆಯಾಗಿದೆ ಎಂದು ಅವರು ತನ್ನ ಹೇಳಿಕೆಯಲ್ಲಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.__________________________________

►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG (ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. www.kannadamedia.com