ಅಂಕಣ

ಲಾಕ್‌ಡೌನ್- ಲಾಕ್‌ ಓಪನ್ ಎಂಬ ಕೆರೆ- ದಡ ಆಟ

ಎರಡೂ ಲಾಕ್‌ಡೌನ್ ಗಳನ್ನು ಡಬ್ಲ್ಯೂಎಚ್‌ಓ ನಿರ್ದೇಶನದಂತೆ ಬಳಸಿಕೊಳ್ಳಲಿಲ್ಲಬರಹ: ರಾಜಾರಾಂ ತಲ್ಲೂರು (ಲೇಖಕರು ಹಿರಿಯ ಪತ್ರಕರ್ತರು ಮತ್ತು ಜನಪರ ಚಿಂತಕರು)

ದೇಶದಲ್ಲಿ ಕೊವಿಡ್ ಮ್ಯಾನೇಜ್ಮೆಂಟ್ ಹೇಗೆ ನಡೆದಿದೆ ಎಂಬುದಕ್ಕೆ ಒಂದು ದಿಕ್ಸೂಚಿ ಇದ್ದರೆ, ಅದು ಲಾಕ್‌ಡೌನ್ – ಲಾಕ್ಓಪನ್ ಪ್ರಕ್ರಿಯೆ. ನಮ್ಮ ಸೀಮಿತ ಆರೋಗ್ಯ ವ್ಯವಸ್ಥೆ, ಸೀಮಿತ ಪ್ರಯತ್ನ, ಸೀಮಿತ ಫಲಿತಾಂಶಗಳೆಲ್ಲದಕ್ಕೂ ಅದು ಸಮರ್ಪಕವಾದ ತೋರುಗಂಬ. ಇಂದು ಲಸಿಕೆ ಅಭಿಯಾನ ದೇಶದಲ್ಲಿ ಆರಂಭ ಆಗಿದೆ; ಕೋಟ್ಯಂತರ ಮಂದಿ ಸರ್ಕಾರಿ ಲೆಕ್ಕದ ಒಳಗೆ ಮತ್ತು ಹೊರಗೆ ಕರೊನಾ ಸೋಂಕನ್ನು ಅನುಭವಿಸಿದ್ದಾರೆ; ಅವರಲ್ಲಿ ದುರ್ಬಲರು ಸೋಂಕಿಗೆ ಬಲಿಯಾಗಿದ್ದಾರೆ. ಇದರ ಜೊತೆ ಜೊತೆಗೇ ನಾವು ಕಾಪಾಡಿಕೊಳ್ಳಬೇಕಿದ್ದ ಲಕ್ಷಾಂತರ ಮಂದಿ ಕೊವಿಡ್ ಸೋಂಕು ಇಲ್ಲದೆಯೂ ನಮ್ಮ ಸೀಮಿತ ಆರೋಗ್ಯ ವ್ಯವಸ್ಥೆಯ ಕಾರಣಕ್ಕೆ, ಆರ್ಥಿಕ-ಸಾಮಾಜಿಕ ಕಾರಣಕ್ಕೆ ಜೀವತೆತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಈಗ ಸೋಮವಾರದಿಂದ ನಡೆಯಲಿರುವ ಲಾಕ್ಓಪನ್ ಪ್ರಕ್ರಿಯೆಯನ್ನು ಪರಿಶೀಲಿಸಬೇಕಾಗುತ್ತದೆ.

ಲಾಕ್‌ಡೌನ್

ಮೊತ್ತ ಮೊದಲಾಗಿ ಈ ಲಾಕ್‌ಡೌನ್ ಎಂಬುದು ಕೊರೊನಾಕ್ಕೆ ಮದ್ದು ಎಂದು ಹೇಳಿದವರು ಯಾರು? ಎಂಬಪ್ರಶ್ನೆಯನ್ನುಕೇಳಿಕೊಂಡರೆ,ಅದಕ್ಕೆ ಎಲ್ಲೂ ಉತ್ತರ ಇಲ್ಲ. ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯ ಪಾತ್ರವಹಿಸಿರುವ ವಿಶ್ವಆರೋಗ್ಯಸಂಸ್ಥೆ (WHO) ಸ್ವತಃ ತಾನು ಈ “ಲಾಕ್‌ಡೌನ್” ಪರ ಇಲ್ಲ ಎಂದಿದೆ.

“ಲಾಕ್‌ಡೌನ್ ಕಾರಣಕ್ಕಾಗಿ ಸಿಗುವ ದೈಹಿಕ ಅಂತರ ಮತ್ತು ಚಲನ ವಲನ ನಿರ್ಬಂಧಗಳಿಂದಾಗಿ COVID‑19 ಹರಡುವಿಕೆ ಕಡಿಮೆಯಾದೀತೇ ಹೊರತು ಮೂಲ ಸಮಸ್ಯೆ ಪರಿಹಾರ ಆಗುವುದಿಲ್ಲ. ಲಾಕ್‌ಡೌನ್ ಉಂಟುಮಾಡುವ ಸಾಮಾಜಿಕ- ಆರ್ಥಿಕಸಂಕಷ್ಟಗಳು ಅವಕಾಶ ವಂಚಿತ ಸಮುದಾಯಗಳ ಮೇಲೆ ತೀವ್ರವಾದ ಪರಿಣಾಮ ಬೀರುತ್ತವೆ. ಕೊರೊನಾ ವಿರುದ್ಧ ಹೋರಾಟಕ್ಕಾಗಿ ತಯಾರಿಗೆ ಸಮಯ ಗಳಿಸಿಕೊಳ್ಳಲು ಕೆಲವು ದೇಶಗಳು “ಲಾಕ್‍ಡೌನ್” ಮಾಡಬೇಕಾಗಬಹುದು. ಅಂತಹ ಸನ್ನಿವೇಶದಲ್ಲಿ ಸರ್ಕಾರಗಳು ತಮ್ಮ T T T (ಟೆಸ್ಟ್- ಟ್ರೇಸ್- ಟ್ರೀಟ್) ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು” ಎಂದು WHO ಹೇಳಿದೆ.

WHO ಕೋವಿಡ್-19 ವಿಶೇಷ ರಾಯಭಾರಿ ಡಾ| ಡೇವಿಡ್‌ ನಬಾರೋ ಅವರು ಕಳೆದ ವರ್ಷ ಸಂದರ್ಶನ ವೊಂದರಲ್ಲಿ ಸ್ಪಷ್ಟವಾಗಿ “ಈ ವೈರಸ್‌ ನಿಯಂತ್ರಣಕ್ಕೆ ಲಾಕ್‌ಡೌನ್ ಪ್ರಾಥಮಿಕ ದಾರಿ ಅಲ್ಲ, ಅದರಿಂದ ವೈರಸ್‌ ನಿಯಂತ್ರಣ ಸಾಧ್ಯವಿಲ್ಲ. ನಮ್ಮ ಸಂಪನ್ಮೂಲಗಳನ್ನು ಮರು ಸಂಘಟಿಸಿ ಸಂತುಲಿತಗೊಳಿಸಲು, ಸುಸ್ತು ಹೊಡೆದಿರುವ ಆರೋಗ್ಯ ಕಾರ್ಯಕರ್ತರಿಗೆ ಸ್ವಲ್ಪ ವಿಶ್ರಾಂತಿ ನೀಡಿ ಅವರನ್ನು ರಕ್ಷಿಸಲು ಬಳಕೆಯಾದರೆ ಮಾತ್ರ ಲಾಕ್‌ಡೌನ್ ನ್ಯಾಯಯತ. ಸಾಮಾನ್ಯ ಸನ್ನಿವೇಶದಲ್ಲಿ ಅದನ್ನು ಮಾಡದಿರುವುದೇಒಳ್ಳೆಯದು” ಎಂದಿದ್ದರು.

ಟೆಸ್ಟ್-ಟ್ರೇಸ್-ಟ್ರೀಟ್

ಕರ್ನಾಟಕ ಈಗ ಎರಡು ವರ್ಷಗಳಲ್ಲಿ ಎರಡು ದೊಡ್ಡ ಲಾಕ್‌ಡೌನ್‌ಗಳಿಗೆ ಮತ್ತು ಅದರ ಅಡ್ಡಪರಿಣಾಮಗಳಿಗೆ ಸಾಕ್ಷಿ ಆಗಿದೆ. ನಮ್ಮಲ್ಲಿ ಲಾಕ್‌ಡೌನ್ ಕಾಲವನ್ನು WHO ಹೇಳಿದಂತೆ “ಟೆಸ್ಟ್-ಟ್ರೇಸ್-ಟ್ರೀಟ್” ಕೆಲಸಗಳಿಗೆ ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡರೆ, ಈಗ ಲಾಕ್ ಓಪನ್ ಎಷ್ಟು ಪರಿಣಾಮಕಾರಿ ಆಗಲಿದೆ ಎಂಬ ಚಿತ್ರಣ ಸಿಗುತ್ತದೆ.

ಜೂನ್ ಎಂಟಕ್ಕೆ, 139 ಕೋಟಿ ಜನಸಂಖ್ಯೆ ಇರುವ ದೇಶದ ಒಳಗೆ, ಹದಿನಾರು ತಿಂಗಳುಗಳಲ್ಲಿ 37,01,93,563 ಕೊರೊನಾ “ಟೆಸ್ಟಿಂಗ್”ಗಳು ನಡೆದಿವೆ. ಈಗ ದಿನಕ್ಕೆ ಅಂದಾಜು 20 ಲಕ್ಷ ತಪಾಸಣೆ ನಡೆಯುತ್ತಿದೆ. ಕರ್ನಾಟಕದಲ್ಲಿ ಈ ತಪಾಸಣೆಯ ಪ್ರಮಾಣ ಈಗ ದಿನಕ್ಕೆ ಅಂದಾಜು ಒಂದೂವರೆ ಲಕ್ಷದಷ್ಟಿದೆ; ಒಟ್ಟು ಅಂದಾಜು ಮೂರು ಕೋಟಿ ತಪಾಸಣೆ ರಾಜ್ಯದೊಳಗೆ ನಡೆದಿದೆ. ಆದರೆ, ಈ ತಪಾಸಣೆಗಳು ರೋಗ ಹರಡುತ್ತಿರುವ ಜಾಗಗಳಲ್ಲಿ ಎಷ್ಟು ವಿಸ್ತ್ರತವಾಗಿ, ಪರಿಣಾಮಕಾರಿಯಾಗಿ ನಡೆದಿವೆ ಎಂಬದಕ್ಕೆ ವಿವರವಾದ ದಾಖಲೆಗಳಿಲ್ಲ.

ಮೊದಲ ಅಲೆಯ ವೇಳೆಗೆ ಕೋಟ್ಯಂತರ ರೂಪಾಯಿಗಳ ವೆಚ್ಚದಲ್ಲಿ ಸಿದ್ಧಗೊಂಡಿದ್ದ ಮಹತ್ವಾಕಾಂಕ್ಷೆಯ “ಟ್ರೇಸಿಂಗ್” ಆಪ್ಲಿಕೇಶನ್ “ಆರೋಗ್ಯಸೇತು” ಈ ಬಾರಿ ಮಾತನಾಡುತ್ತಿಲ್ಲ. ಹಾಗಾಗಿ, ಪ್ರತಿಯೊಬ್ಬ ಪಾಸಿಟಿವ್ ರೋಗಿಗೆ ಸಂಪರ್ಕ ಟ್ರೇಸಿಂಗ್ ಎಷ್ಟು ಪರಿಣಾಮಕಾರಿಯಾಗಿ ನಡೆದಿದೆ ಎಂಬುದಕ್ಕೆ ಯಾವುದೇ ಖಚಿತ ಆಧಾರಗಳಿಲ್ಲ.

ಈ ಎರಡು ಕಾರಣಗಳಿಂದಾಗಿ, ಸೀಮಿತವಾಗಿರುವ “ಟ್ರೀಟಿಂಗ್” ವ್ಯವಸ್ಥೆ ಕಂಗೆಡಬೇಕಾಗಿ ಬಂದದ್ದನ್ನು ಇಡಿಯ ದೇಶ ಅನುಭವಿಸಿದೆ. ಕೊನೆಯ ಕ್ಷಣದಲ್ಲಿ ಜೀವ ಉಳಿಸಿಕೊಳ್ಳಲು ಆಮ್ಲಜನಕಕ್ಕಾಗಿ ಮೊರೆ ಇಡುತ್ತಾ ಬಂದ ರೋಗಿಗಳು ಎಲ್ಲೆಂದರಲ್ಲಿ ಜೀವ ಕಳೆದುಕೊಂಡದ್ದು, ಆಮ್ಲಜನಕ, ಅಗತ್ಯ ಔಷಧಿಗಳು ಕೊರತೆ ಆದದ್ದು.. ಇವೆಲ್ಲವನ್ನೂ ಕಂಡಾಗಿದೆ.

ಇವೆಲ್ಲ ಒಟ್ಟಾಗಿ ಹೇಳಿದ್ದು ಏನೆಂದರೆ, ನಮ್ಮ ಟೆಸ್ಟ್-ಟ್ರೇಸ್-ಟ್ರೀಟ್ ಕೆಲಸ ಪರಿಣಾಮಕಾರಿಯಾಗಿ ನಡೆಯಲಿಲ್ಲ ಎಂದೇ. ಲಾಕ್ಓಪನ್. ಈಗ ಲಾಕ್ಓಪನ್ ಹೇಗೆ ನಡೆಯಬೇಕು? ಹಂತಹಂತವಾಗಿ ಹೇಗೆ ಸಹಜಸ್ಥಿತಿಗೆ ಬರಬೇಕು ಎಂಬ ಚರ್ಚೆ ನಡೆದಿದೆ. ನಿಜಕ್ಕೆಂದರೆ, ರಾಜ್ಯ ಸರ್ಕಾರಕ್ಕೆ ಎರಡು ಲಾಕ್‌ಡೌನ್‌ಗಳನ್ನೂ ಪರಿಣಾಮಕಾರಿಯಾಗಿ, ವಿಶ್ವ ಆರೋಗ್ಯ ಸಂಸ್ಥೆಯ ಹೇಳಿದ ಹಾದಿಯಲ್ಲಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಇದಕ್ಕೆ ಸರ್ಕಾರದ ಕಡೆಯಿಂದ ನೂರಾರು ಸಬೂಬುಗಳಿರಬಹುದು. ಆದರೆ ಅಂತಿಮ ಫಲಿತಾಂಶವೇನೂ ಅದರಿಂದ ಬದಲಾಗದು. ನಾಳೆ ಮತ್ತೊಮ್ಮೆ ಸೋಂಕು ದೇಶದ ಸೀಮಿತ ಆರೋಗ್ಯ ವ್ಯವಸ್ಥೆಯ ತ್ರೆಶ್‌ಹೋಲ್ಡ್ ದಾಟಿ ಪ್ರಸಾರ ಗೊಂಡರೆ, ಮತ್ತೆ ಇದೇ ಸ್ಥಿತಿಗೆ ಹಿಂದಿರುಗುವುದು ಅನಿವಾರ್ಯ ಆಗಲಿದೆ.

ಈಗ ಲಾಕ್‌ಓಪನ್ ಹೇಗೆ ಮಾಡಬೇಕು ಎಂಬ ಚರ್ಚೆಗೆ ಅರ್ಥವಿಲ್ಲ. ಆದಷ್ಟು ಬೇಗನೆ ಲಾಕ್ಓಪನ್ ಆಗಬೇಕು. ಅದರ ಜೊತೆಗೆ ಸರ್ಕಾರ ಮತ್ತು ಜನರು ಈ ಕೆಳಗಿನ ಕೆಲಸಗಳನ್ನು ಬದ್ಧತೆಯಿಂದ ಮಾಡಬೇಕು:

1. “ಟೆಸ್ಟ್-ಟ್ರೇಸ್-ಟ್ರೀಟ್” ಕೆಲಸ ಕಾಟಾಚಾರಕ್ಕೆ ನಡೆಯದೆ, ಶ್ರದ್ಧೆಯಿಂದ ನಡೆಯಬೇಕು. ಅಗತ್ಯಬಿದ್ದರೆ ಅತಿಯಾದ ಜನಸಂದಣಿ ಸೇರುವ ಮದುವೆ, ಸಾರ್ವಜನಿಕ ಸಭೆ, ಜಾತ್ರೆಗಳನ್ನು ಸೀಮಿತಗೊಳಿಸಿ, ಜನಸಾರ್ವಜನಿಕ ಸ್ಥಳಗಳಲ್ಲಿರುವಾಗ ಮುನ್ನೆಚ್ಚರಿಕೆಗಳನ್ನು ಪಾಲಿಸುವಂತೆ ಮನವೊಲಿಸಬೇಕು.

2. ಸರ್ಕಾರದ ಲಸಿಕೆ ನೀತಿ ಏನೇ ಇದ್ದರೂ, ಸಾಮಾಜಿಕವಾಗಿ ಲಸಿಕೆಗಳನ್ನು “ಕೊ-ಮಾರ್ಬಿಡಿಟಿ” ಇರುವವರಿಗೆ, ವೃದ್ಧರಿಗೆ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಈವರ್ಷದ ಅಂತ್ಯದೊಳಗೆ ಆದ್ಯತೆಯ ಮೇರೆಗೆ ಒದಗಿಸುವುದನ್ನು ಖಚಿತಪಡಿಸಬೇಕು (ಅವರಒಟ್ಟುಸಂಖ್ಯೆ ಅಂದಾಜು 35 ಕೋಟಿ).

3. ಲಾಕ್‌ಡೌನಿನಿಂದ ಆರ್ಥಿಕವಾಗಿ ಹೊಡೆತ ತಿಂದಿರುವ ಜನಸಮುದಾಯಗಳನ್ನು ಪಂಚಾಯತಿ/ಪುರಸಭೆಮಟ್ಟದಲ್ಲಿ ಗುರುತಿಸಿ, ಅವರ ಚಟುವಟಿಕೆಗಳನ್ನು ಪುನರಾರಂಭಿಸಲು ಅವರಿಗೆ ಅಗತ್ಯ ಇರುವ ನೆರವುಗಳು ಆದ್ಯತೆಯ ಮೇರೆಗೆ ಸಿಗುವಂತಾಗಬೇಕು.

4. ತಾಲೂಕು ಮತ್ತು ಜಿಲ್ಲಾ ಮಟ್ಟದ ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಸರ್ಕಾರ ಮತ್ತು ದಾನಿಗಳ ನೆರವಿನಿಂದ ಸ್ಥಳೀಯವಾಗಿಯೇ ಬಲಪಡಿಸಿಕೊಳ್ಳುವ ಕೆಲಸ “ಊರ ಧಾರ್ಮಿಕ ಸ್ಥಳಗಳು ಜೋರ್ಣೋದ್ಧಾರ ಆದ ಮಾದರಿಯಲ್ಲೆ” ನಡೆಯಬೇಕು. ಅಲ್ಲಿನ ವೈದ್ಯಕೀಯ ಸಿಬ್ಬಂದಿಗೆ ರಾಜಕೀಯ ಒತ್ತಡಗಳಿಲ್ಲದೆ ಕೆಲಸ ಮಾಡಲು ಸಾಧ್ಯವಾಗುವಂತೆ ಊರ ಜನತೆ ಅವರೊಂದಿಗೆ ನಿಂತು ನೈತಿಕ‌ಬಲ ನೀಡಬೇಕು.

5. ಮಕ್ಕಳ ಶಿಕ್ಷಣ ಅಡೆತಡೆಯಿಲ್ಲದೆ ಮುಂದುವರಿಯಬೇಕು ಮತ್ತು ಮುಂದಿನ ಅಲೆ “ಮಕ್ಕಳಕಡೆ” ಎಂಬ ಮೂಢನಂಬಿಕೆಯನ್ನು ಅದಕ್ಕೆ ಸಾಕ್ಷ್ಯಾಧಾರಗಳು ಇಲ್ಲವೆಂದು ತಿರಸ್ಕರಿಸಿದ ಹೊರತಾಗಿಯೂ ಆ ಬಗ್ಗೆ ನಡೆಯುತ್ತಿರುವ “ತಯಾರಿ” ಪ್ರಯತ್ನಗಳು ಎಷ್ಟುಅಗತ್ಯ, ಅದರಲ್ಲಿ ವಿಷಯಕ್ಕೆ ಹೊರತಾದ ಹಿತಾಸಕ್ತಿಗಳು ಹೇಗೆ ಕೆಲಸ ಮಾಡುತ್ತಿವೆ?ಎಂಬ ಬಗ್ಗೆ ಸಾರ್ವಜನಿಕರು ನಿಗಾ ಇರಿಸಿಕೊಳ್ಳಬೇಕು. ಭ್ರಷ್ಟಾಚಾರದ ಕೊಳ್ಳು ಬಾಕತನಕ್ಕೆ ಇದು ಹಾದಿ ಮಾಡಿಕೊಡದಂತೆ ಎಚ್ಚರವಹಿಸಬೇಕು.

ಇದನ್ನೂ ಓದಿ:

BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ.

ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?

ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ?

1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.!

ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್!

ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ!

ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ?

ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ?

‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ.

‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ

ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ)

‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ?

ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..!

ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ!

ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ?

ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್!

ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ?

‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು.

ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು?

‘ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್!

‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ.

ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ?

ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್

ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ

ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ)

ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ

ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?

►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG (ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. www.kannadamedia.com