Advertisement

'ತಮಿಳುನಾಡಿನಲ್ಲಿ ಹೀಗೊಂದು ಸುಧಾರಣಾವಾದಿ ಕ್ರಾಂತಿ ಆರಂಭ'

Advertisement

ಬರಹ: ಡಾ. ಜೆ ಎಸ್ ಪಾಟೀಲ. (ಲೇಖಕರು ಜನಪರ ಚಿಂತಕರು) ಭಾರತದಲ್ಲಿ ಯಥಾಸ್ಥಿತಿವಾದಿಗಳು ಶತಮಾನಗಳಿಂದ ಶೂದ್ರರನ್ನು ಮತ್ತು ಸ್ತ್ರೀಯನ್ನು ಅಮಾನುಷವಾಗಿ ಶೋಷಿಸಿಕೊಂಡು ತಮ್ಮ ಪರಾವಲಂಬಿ ಬದುಕು ಬದುಕುತ್ತಿದ್ದಾರೆ. ಕಾಲಕಾಲಕ್ಕೆ ಈ ಸನಾತನಿಗಳ ಪ್ರಗತಿ ವಿರೋಧಿ ಕ್ರತ್ಯಗಳ ವಿರುದ್ಧ ಈ ಮಣ್ಣಿನಲ್ಲಿ ವೈಚಾರಿಕ ಕ್ರಾಂತಿಗಳು ಘಟಿಸಿವೆ. ತಮಿಳುನಾಡು ಹೇಳಿಕೇಳಿ ಅತಿ ಸಂಖ್ಯೆಯ ದೇವಸ್ಥಾನಗಳಿರುವ ರಾಜ್ಯ. ವಿಚಾರವಾದಿ ಪೆರಿಯಾರ್ ಅವರ ರಾಜ್ಯದಲ್ಲಿ ದೇವಸ್ಥಾನಗಳು ಶ್ರದ್ಧಾ ಕೇಂದ್ರಗಳಾಗದೆ ಸುಲಿಗೆ ಕೇಂದ್ರಗಳಾಗಿ ಜಾತಿ ತಾರತಮ್ಯವನ್ನು ಪಾಲಿಸಿಕೊಂಡು ಬರುತ್ತಿವೆ. ಅಲ್ಲಿನ ದೇವಸ್ಥಾನಗಳ ಅರ್ಚಕ ವ್ರತ್ತಿಯಲ್ಲಿರುವವರು ಎಲ್ಲರೂ ಮೇಲ್ವರ್ಗಕ್ಕೆ ಸೇರಿದವರೆ. ಈ ಅಸಮಾನತೆಯನ್ನು ಹೊಡೆದೋಡಿಸಲು ಅಲ್ಲಿ ಈ ಹಿಂದೆ ಅನೇಕ ಚಳುವಳಿಗಳು ಆಗೀಹೋಗಿವೆ. ಈಗ ಹೊಸದಾಗಿ ಆಯ್ಕೆಯಾಗಿರುವ ಡಿಎಂಕೆ ಸರಕಾರ ಈ ದಿಶೆಯಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ. ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ಇತ್ತೀಚಿಗೆ ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಸಚಿವ ಪಿ ಕೆ ಸೆಕರ್ ಬಾಬು ಅವರು ತಮ್ಮ ಅಧೀನದ ಇಲಾಖೆಯಡಿಯಲ್ಲಿ ರಾಜ್ಯದಲ್ಲಿರುವ 36,000 ಕ್ಕೂ ಹೆಚ್ಚು ದೇವಾಲಯಗಳಲ್ಲಿ ಎಲ್ಲ ಜಾತಿಯ ಹಿಂದೂ ಅರ್ಚಕರನ್ನು ನೇಮಕ ಮಾಡುವುದಾಗಿ ಘೋಷಿಸಿರುವ ಸುದ್ದಿ ಬಂದಿದೆ. ಎಲ್ಲ ಜಾತಿಯ ಹಿಂದೂಗಳಷ್ಟೇ ಅಲ್ಲದೆ ಸ್ತ್ರೀಯರನ್ನು ಕೂಡ ಸೂಕ್ತ ಆಗಮಿಕ ಶಾಸ್ತ್ರದ ತರಬೇತಿಯ ನಂತರ ವಿವಿಧ ದೇವಾಲಯಗಳಲ್ಲಿ ಅರ್ಚಕರಾಗಿ ನೇಮಿಸಲಾಗುವುದೆಂದು ಸಚಿವರು ಹೇಳಿದ್ದಾರೆನ್ನಲಾಗುತ್ತಿದೆ. ತಮಿಳುನಾಡಿನಲ್ಲಿ ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ತಮ್ಮ ಸರಕಾರ 100 ದಿನಗಳು ಪೂರೈಸುವ ಮೊದಲು ಅರ್ಹ ಅರ್ಚಕರ ನೇಮಕಾತಿ ಕೈಗೊಳ್ಳುಲಿದೆ ಎನ್ನುತ್ತವೆ ಮೂಲಗಳು. ಸಚಿವರ ಈ ಹೇಳಿಕೆಯು ದೇಶಾದ್ಯಂತ ಅದರಲ್ಲೂ ವಿಶೇಷವಾಗಿ ತಮಿಳುನಾಡಿನಲ್ಲಿ ಸಾಕಷ್ಟು ಬಿಸಿ ಚರ್ಚೆಗೆ ಕಾರಣವಾಗಿದೆ. ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ಹಲವಾರು ಸಾಮಾಜಿಕ ಕಾರ್ಯಕರ್ತರು ಶತಮಾನಗಳಿಂದ ಬೇರೂರಿರುವ ಜಾತಿ ತಾರಮತ್ಯ ಹಾಗು ಲಿಂಗ ತಾರತಮ್ಯ ಹೊಡೆದೋಡಿಸುವ ಸರಕಾರದ ಈ ಕ್ರಾಂತಿಕಾರಿ ನಿರ್ಧಾರವನ್ನು ಸ್ವಾಗತಿಸಿದರೆ, ಮಾಮೂಲಿನಂತೆ ಸಾಂಪ್ರದಾಯವಾದಿಗಳು ಸರ್ಕಾರವು ಪೂಜೆ ಮತ್ತು ಆಚರಣೆಗಳ ಕೈಪಿಡಿಯಾಗಿರುವ ಅಗಮ ಶಾಸ್ತ್ರದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದಿದ್ದಾರೆ. ತಮಿಳುನಾಡಿನ ದೇವಾಲಯಗಳಲ್ಲಿ ಬ್ರಾಹ್ಮಣೇತರ ಪುರೋಹಿತರನ್ನು ನೇಮಿಸುವ ಉಪಕ್ರಮವು ಸಾಮಾಜಿಕ ಸುಧಾರಣಾವಾದಿ ಮತ್ತು ವಿಚಾರವಾದಿ ಪೆರಿಯಾರ್ ಅವರಿಂದ ಆರಂಭಗೊಂಡಿತ್ತು. ಅವರು ದೇವಾಲಯಗಳನ್ನು ಬಹಿಷ್ಕರಿಸುವ ಚಳುವಳಿ ಆರಂಭಿಸಿದ್ದರು. ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? 1971 ರಲ್ಲಿ ಅಂದಿನ ಮುಖ್ಯಮಂತ್ರಿ ಕರುಣಾನಿಧಿ ಅವರು ಮಾನವ ಸಂಪನ್ಮೂಲ ಮತ್ತು ಧಾರ್ಮಿಕ ದತ್ತಿ ಕಾನೂನಿಗೆ ತಿದ್ದುಪಡಿ ಮಾಡಿ ಪುರೋಹಿತರ ವಂಶಪಾರಂಪರ್ಯ ನೇಮಕಾತಿಯನ್ನು ರದ್ದುಪಡಿಸಿದ್ದರು. ಈ ನಿರ್ಧಾರವು ತಮಿಳುನಾಡಿನಲ್ಲಿ ಪ್ರಥಮಬಾರಿಗೆ ಬ್ರಾಹ್ಮಣೇತರರಿಗೆ ಅರ್ಚಕರಾಗಲು ದಾರಿಮಾಡಿಕೊಟ್ಟಿತು. ಅನೇಕ ಸಾಂಪ್ರದಾಯವಾದಿ ಸಂಘಟನೆಗಳು ಈ ಕಾನೂನನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದವು. ಕರುಣಾನಿಧಿಯವರ ಈ ನಿರ್ಧಾರವು ಆಗ ಸರ್ವೋಚ್ಛ ನ್ಯಾಯಾಲಯ ಕೂಡ ತಿರಸ್ಕರಿಸಿತ್ತು. ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? 2006 ರಲ್ಲಿ, ಡಿಎಂಕೆ ಸರ್ಕಾರ ಇದೇ ಆದೇಶವನ್ನು ಪುನಃ ಹೊರಡಿಸಿತ್ತು. ಆಗ ಆಗಮ ಶಾಸ್ತ್ರದಲ್ಲಿ ಸೂಕ್ತ ಪರಿಣತಿ ಹೊಂದಿದ ಎಲ್ಲ ಜಾತಿಯ ಹಿಂದೂಗಳು ಅರ್ಚಕರಾಗಲು ಅರ್ಹರು ಎಂದು ಹೊಸ ನಿಯಮವನ್ನು ಸೇರಿಸಲಾಗಿತ್ತು. ಸರಕಾರವು ಎಲ್ಲ ಜಾತಿಯ ಹಿಂದೂಗಳಿಗೆ ಆಗಮ ಶಾಸ್ತ್ರದ ತರಬೇತಿ ನೀಡುವ ತರಬೇತಿ ಶಾಲೆಗಳನ್ನು ಕೂಡ ಆರಂಭಿಸಿತ್ತು. ಈ ಆದೇಶವನ್ನು ಪುನಃ ಶಿವಚಾರ್ಯಾರ ಸಂಘ ಮತ್ತು ಇತರ ಅನೇಕ ಸಾಂಪ್ರದಾಯವಾದಿಗಳ ಸಂಘಟನೆಗಳು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದವು. ಹಲವಾರು ವರ್ಷಗಳ ವಿಚಾರಣೆಯ ನಂತರ 2015 ರಲ್ಲಿ ಸರ್ವೋಚ್ಛ ನ್ಯಾಯಾಲಯವು ಸಕರಾಕದ ಈ ಸುಧಾರಣಾವಾದಿ ನಿರ್ಧಾರವನ್ನು ಎತ್ತಿ ಹಿಡಿದಿತ್ತು. 2006 ರ ಡಿಎಂಕೆ ಸರ್ಕಾರದ ಆದೇಶದನ್ವಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗನ್ನೊಳಗೊಂಡಂತೆ ಇತರ ಬ್ರಾಹ್ಮಣೇತರ ಸಮುದಾಯದ ಒಟ್ಟು 207 ಪುರುಷರಿಗೆ ತಮಿಳುನಾಡಿನ ಪ್ರಮುಖ ದೇವಾಲಯಗಳಲ್ಲಿ ಪೌರೋಹಿತ್ಯಕ್ಕಾಗಿ ಆಗಮ ಶಾಸ್ತ್ರದ ತರಬೇತಿಯನ್ನು ನೀಡಲಾಗಿತ್ತು. ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ಮೊದಲ ಸರದಿಯಲ್ಲಿ ಆರು ತರಬೇತಿ ಶಾಲೆಗಳಿಂದ ಸೂಕ್ತ ಆಗಮ ಶಾಸ್ತ್ರದ ತರಬೇತಿ ನೀಡಿದ ನಂತರ ಈ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿತ್ತು. ಈ ತನಕ, ತಮಿಳುನಾಡಿನ ದೇವಾಲಯಗಳಲ್ಲಿ ಸರ್ಕಾರಿ ಪ್ರಾಯೋಜಿತ ಆಗಮ ಶಾಸ್ತ್ರದ ತರಬೇತಿ ಪಡೆದ ಬ್ರಾಹ್ಮಣೇತರ ಪುರೋಹಿತರಲ್ಲಿ ಇಬ್ಬರು ಮಾತ್ರ ಅರ್ಚಕರಾಗಿ ನೇಮಕಗೊಂಡಿದ್ದಾರೆ ಎನ್ನಲಾಗಿದೆ. ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ತಿರುಚ್ಚಿ ಜಿಲ್ಲೆಯ ತುರೈಯೂರ್ ಮೂಲದ 37 ವರ್ಷದ ಷಣ್ಮುಗನಾಥನ್ ಅವರು 2007-08 ರಲ್ಲಿ ಆಗಮ ಶಾಸ್ತ್ರದ ತರಬೇತಿ ಪಡೆದ ಪುರೋಹಿತರಲ್ಲಿ ಒಬ್ಬರು. ಈ ತರಬೇತಿ ಪಡೆದವರಲ್ಲಿ 15-20 ಜನರು ಇತರ ದೇಶಗಳಿಗೆ ಕೆಲಸ ಹುಡುಕಿ ವಲಸೆ ಹೋದರೆ ಉಳಿದವರು ಇಲ್ಲಿಯೇ ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಮಾಡುತ್ತಿದ್ದಾರೆ ಎನ್ನುತ್ತಾರೆ ಷಣ್ಮುಗನಾಥನ್. ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? "ತರಬೇತಿ ನೀಡಿದ ನಂತರ ಸುದೀರ್ಘ ಅವಧಿ ಸರಕಾರ ನಮ್ಮನ್ನು ಕಾಯಿಸಿದೆ. ಇನ್ನು ಮುಂದಾದರೂ ಸರ್ಕಾರ ಅರ್ಚಕರಿಗೆ ತರಬೇತಿಯ ನಂತರ ಶೀಘ್ರದಲ್ಲೇ ನೇಮಕಾತಿ ಮಾಡಬೇಕು. ಮತ್ತೊಮ್ಮೆ ಸಂದರ್ಶನ ಪ್ರಕ್ರೀಯೆ ಮಾಡದೆ ಈಗಾಗಲೇ ಸಂದರ್ಶನ ಮಾಡಿದ ಅಭ್ಯರ್ಥಿಗಳಿಗೆ ನೇರವಾಗಿ ನೇಮಕ ಮಾಡಿಕೊಳ್ಳಬೇಕು" ಎನ್ನುತ್ತಾರೆ ಈ ಹಿಂದೆ ಸರಕಾರಿ ಪ್ರಾಯೋಜಿತ ಆಗಮ ಶಾಸ್ತ್ರ ತರಬೇತಿ ಪಡೆದು ಸಂದರ್ಶನ ಪ್ರಕ್ರೀಯೆಯನ್ನು ಕೂಡ ಪೂರೈಸಿದ ಅರ್ಚಕ ಅಭ್ಯರ್ಥಿಯೊಬ್ಬರು. ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ಶ್ರೀರಂಗಂನ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಮುರಳಿ ಬತ್ತಾರ್ ಅವರು, ಡಿಎಂಕೆ ಆಡಳಿತದಲ್ಲಿ ಈಗಾಗಲೇ ಬ್ರಾಹ್ಮಣೇತರರನ್ನು ಪುರೋಹಿತರನ್ನಾಗಿ ನೇಮಿಸುವ ಪದ್ದತಿ ಆಚರಣೆಯಲ್ಲಿದೆ. ಅಗಮ ಶಾಸ್ತ್ರದ ತರಬೇತಿ ಪಡೆದವರಿಗೆ ಮಾತ್ರ ನೇಮಕ ಮಾಡಿಕೊಳ್ಳಲಿದೆಯಾ ಎನ್ನುವ ಕುರಿತು ಸರಕಾರ ಈಗ ಪುನಃ ಸ್ಪಷ್ಟಪಡಿಸಬೇಕಾಗಿದೆ. ಹಾಗೊಂದು ವೇಳೆ ಆಗದಿದ್ದರೆ ನಾವು ಮತ್ತೆ ನ್ಯಾಯಾಲಯದ ಕಟ್ಟೆ ಹತ್ತುತ್ತೇವೆ ಎನ್ನುವುದು ಮುರುಳಿ ಬತ್ತಾರ್ ಅವರ ಅಭಿಪ್ರಾಯವಾಗಿದೆ ಎಂದು ವರದಿಯಾಗಿವೆ. ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ಮೂವತ್ತು ವರ್ಷಗಳಿಂದ ಅರ್ಚಕ ಕೆಲಸ ಮಾಡುತ್ತಿರುವ ಚಿದಂಬರಂನ ಪುರೋಹಿತರೊಬ್ಬರು ಸಂಪ್ರದಾಯವೇ ಬೇರೆ, ಕಾನೂನುಗಳೇ ಬೇರೆ ಎನ್ನುತ್ತಾರೆ. ಈಗಾಗಲೇ ಪುರುಷ ಪುರೋಹಿತರ ಗೈರುಹಾಜರಿಯಲ್ಲಿ ಅವರ ಕುಟುಂಬದ ಮಹಿಳೆಯರು ಪೂಜಾ ಕೈಂಕರ್ಯ ನೇರವೇರಿಸುವ ಪದ್ದತಿ ಜಾರಿಯಲ್ಲಿದೆ. ಆದರೆ ಪೂರ್ಣಾವಧಿ ಸ್ತ್ರೀ ಅರ್ಚಕರನ್ನು ನೇಮಿಸುವಲ್ಲಿ ಹಲವು ಪ್ರಾಯೋಗಿಕ ತೊಂದರೆಗಳಿವೆ. ಅವುಗಳಲ್ಲಿ ಭದ್ರತಾ ಕಾರಣವು ಮುಖ್ಯವಾಗಿದೆ. ದೇವಾಲಯಕ್ಕೆ ನಸುಕಿನ ಜಾವ ಪೂಜೆಗೆಂದು ಅರ್ಚಕರು ಮುಂಜಾನೆ 3 ರಿಂದ 3: 30 ರೊಳಗೆ ತಲುಪಬೇಕು. ಇಲ್ಲಿ ಮಹಿಳೆಯ ಸುರಕ್ಷತೆ ಇಲ್ಲವಾಗುತ್ತದೆ ಎನ್ನುವುದು ಈ ಸಾಂಪ್ರದಾಯವಾದಿಗಳ ವಾದವಾಗಿದೆ. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ಹಿಂದೂ ಮಕ್ಕಳ್ ಕಚ್ಚಿಯ ಮುಖಂಡ ಅರ್ಜುನ್ ಸಂಪತ್ ಕೂಡ ಮಹಿಳಾ ಅರ್ಚಕರನ್ನು ನೇಮಿಸುವುದು ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ಹೇಳಿರುವ ವರದಿಯಾಗಿದೆ. "ದೇವಾಲಯಗಳ ಆಂತರಿಕ ವಿಷಯಗಳಲ್ಲಿ ಸರ್ಕಾರಕ್ಕೆ ಹಸ್ತಕ್ಷೇಪ ಮಾಡುವ ಅಧಿಕಾರವಿಲ್ಲ. ಯಾವಾಗಲೂ ಸೂರ್ಯ ಪೂರ್ವ ದಿಕ್ಕಿನಲ್ಲಿ ಮಾತ್ರ ಉದಯಿಸುತ್ತಾನೆ, ಸರಕಾರ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಅಂತೆಯೇ, ಸಾವಿರಾರು ವರ್ಷಗಳಿಂದ ಜಾರಿಯಲ್ಲಿರುವ ಸಾಂಪ್ರದಾಯದ ನಿಯಮಗಳನ್ನು ಸರಕಾರ ಬದಲಾಯಿಸಲು ಸಾಧ್ಯವಿಲ್ಲ. ಧಾರ್ಮಿಕ ದತ್ತಿ ಇಲಾಖೆಯು ಕೇವಲ ದೇವಾಲಯಗಳ ನಿರ್ವಹಣೆಯ ಕಡೆಗೆ ಮಾತ್ರ ಗಮನ ಹರಿಸಬೇಕು. ದೇವಾಲಯಗಳ ಹೊರಗಿನ ವ್ಯವಹಾರಗಳನ್ನು ಮಾತ್ರ ನಿಯಂತ್ರಿಸಬೇಕು. ಬ್ರಾಹ್ಮಣೇತರ ಪುರೋಹಿತರು ಈಗಾಗಲೇ ಅನೇಕ ದೇವಾಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಕೋವಿಡ್ -19 ಬಿಕ್ಕಟ್ಟಿನಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಡಿಎಂಕೆ ಬಯಸಿದೆ." ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! "ಈ ಸರಕಾರವು ಹಿಂದೂಗಳು ಮತ್ತು ತಮಿಳರನ್ನು ವಿಘಟಿಸುತ್ತಿದೆ. ದೇಗುಲಗಳು ಆಚರಿಸುತ್ತಿರುವ ಸಂಪ್ರದಾಯಗಳು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿವೆ. ನೈಜ ದೈವಭಕ್ತಿಯುಳ್ಳ ಸ್ತ್ರೀಯರಾರೂ ಸ್ವತಃ ಅರ್ಚಕರಾಗಿ ಗರ್ಭಗುಡಿ ಪ್ರವೇಶಿಸಲಾರರು. ಮಹಿಳೆಯರಿಗೆ ಶಬರಿಮಲೈ ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶವಿಲ್ಲ. ಈ ನಿಯಮವೇ ಎಲ್ಲ ದೇವಸ್ಥಾನಗಳಿಗೂ ಅನ್ವಯವಾಗಬೇಕು ಎನ್ನುವುದು ಅರ್ಜುನ್ ಸಂಪತ್ ಅವರ ಅಭಿಪ್ರಾಯವಾಗಿರುವುದಾಗಿ ಮಾಧ್ಯಮಗಳು ಹೇಳುತ್ತಿವೆ. ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ತಮಿಳುನಾಡಿನಲ್ಲಿ ಶೈವ ಮತ್ತು ವೈಷ್ಣವ ಸಂಪ್ರದಾಯಗಳನ್ನು ಅನುಸರಿಸುವ ಹಲವು ದೇವಾಲಯಗಳಿವೆ. ಅವು ಕೆಲವು ಸಂಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಈ ದೇವಾಲಯಗಳು ತಮ್ಮದೇ ಆದ ರೀತಿ, ರಿವಾಜು, ನೀತಿ, ನಿಯಮಗಳನ್ನು ಹೊಂದಿವೆ. ಹಾಗಾಗಿ ಸರ್ಕಾರವು ಅಂತಹ ದೇವಾಲಯಗಳ ಪ್ರತಿನಿಧಿಗಳನ್ನು ಕರೆದು ಸೌಹಾರ್ದಯುತವಾಗಿ ಈ ಸಮಸ್ಯೆಯನ್ನು ಪರಿಹರಿಸಬೇಕು ಎನ್ನುವುದು ಯಥಾಸ್ಥಿತಿವಾದಿಗಳ ನಿಲುವಾಗಿದೆ. ಸರಕಾರದ ಈ ಸುಧಾರಣಾವಾದಿ ನಿರ್ಧಾರವನ್ನು ಕೆಲವು ಸುಧಾರಣಾ ವಿರೋಧಿ ಹಿಂದೂಪರ ಸಂಘಟನೆಗಳು ವಿರೋಧಿಸಿವೆ. ಆದರೆ, ಆಶ್ಚರ್ಯವೆನ್ನುವಂತೆ ತಾನೊಂದೇ ಹಿಂದೂಗಳ ಪಕ್ಷವೆಂದು ಬಿಂಬಿಸಿಕೊಳ್ಳುವ ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಎಲ್ ಮುರುಗನ್ ಸರಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತ ಪ್ರಾಚೀನ ಕಾಲದಿಂದಲೂ ಸ್ತ್ರೀಯರು ದೇವಾಲಯಗಳಲ್ಲಿ ಅರ್ಚಕರಾಗಿದ್ದಾರೆ ಎಂದು ಹೇಳಿದ್ದಾರಂತೆ. ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ಒಟ್ಟಾರೆ, ಪೆರಿಯಾರ್ˌ ಅಣ್ಣಾಮಲೈ ಮುಂತಾದ ಸುಧಾರಣಾವಾದಿಗಳ ನಾಡಾದ ತಮಿಳುನಾಡಿನಲ್ಲಿ ಸಾಂಪ್ರದಾಯವಾದಿಗಳಿಗೆ ಬಹುದೊಡ್ಡ ಹೊಡೆತ ನೀಡುವ ಸುಧಾರಣಾವಾದಿ ನಿರ್ಧಾರವನ್ನು ಅಲ್ಲಿನ ಹೊಸ ಡಿಎಂಕೆ ಸರಕಾರ ತೆಗೆದುಕೊಂಡಿರುವುದು ಸ್ವಾಗತಾರ್ಹವಾಗಿದೆ. ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG (ಜಾಹೀರಾತು ವಿಭಾಗ) ►►ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಇದನ್ನೂ ಓದಿ: ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?

Advertisement
Advertisement
Recent Posts
Advertisement