ಉಡುಪಿ

ಲಸಿಕೆ ನೀಡಿಕೆಯಲ್ಲಿ ಸರ್ಕಾರದ ತಾರತಮ್ಯ ಖಂಡಿಸಿ, ಸರ್ವರಿಗೂ ಉಚಿತ ಲಸಿಕೆಗೆ ಒತ್ತಾಯಿಸಿ ರಾಷ್ಟ್ರಪತಿಗಳಿಗೆ ಮನವಿ ಮಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್!

ದೇಶದ ಜನರಿಗೆ ಕೊರೋನಾ ಲಸಿಕೆ ನೀಡುವಲ್ಲಿ ಕೇಂದ್ರ ಸರಕಾರದ ತಾರತಮ್ಯ ನೀತಿಯನ್ನು ಖಂಡಿಸಿ ಮತ್ತು ಸರ್ವರಿಗೂ ಉಚಿತ ಲಸಿಕೆ ನೀಡಬೇಕೆಂದು ಒತ್ತಾಯಿಸಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ನಿರ್ದೇಶನದಂತೆ, ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಅಭಿಯಾನವನ್ನು ಆಯೋಜಿಸಿದ್ದು, ಅದರ ವಿವರಗಳನ್ನೊಳಗೊಂಡ ಮನವಿಯನ್ನು ಇಂದು ಉಡುಪಿ ಜಿಲ್ಲಾಕಾಂಗ್ರೆಸ್‍ ಅಧ್ಯಕ್ಷ ಶ್ರೀ ಅಶೋಕ್‍ ಕುಮಾರ್‍ ಕೊಡವೂರುರವರ ನೇತೃತ್ವದಲ್ಲಿ ಮಾನ್ಯ ರಾಷ್ಟಪತಿಯವರಿಗೆ ಉಡುಪಿ ಜಿಲ್ಲಾಧಿಕಾರಿಯವರ ಮೂಲಕ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ವಿನಯಕುಮಾರ್ ಸೊರಕೆ, ಮಾಜಿ ಶಾಸಕರಾದ ಶ್ರೀ ಗೋಪಾಲ ಪೂಜಾರಿ, ಕೆ.ಪಿ.ಸಿ.ಸಿ.ಪ್ಯಾನಲಿಸ್ಟ್ ಶ್ರೀಮತಿ ವೆರೋನಿಕಾ ಕರ್ನೇಲಿಯೋ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ಬಿ.ಕುಶಲ್ ಶೆಟ್ಟಿ, ಕಾರ್ಯದರ್ಶಿ ಶ್ರೀ ಪ್ರಶಾಂತ್‍ಜತ್ತನ್ನ, ಜಿಲ್ಲಾ ಸೋಶಿಯಲ್ ಮೀಡಿಯಾ ಸೆಲ್‍ ಅಧ್ಯಕ್ಷರಾದ ಶ್ರೀ ರೋಶನ್ ಶೆಟ್ಟಿ, ಅಶೋಕ್ ನಾಯರಿ ಮೊದಲಾದವರು ಉಪಸ್ಥಿತರಿದ್ದರು.

__________________________________

►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG (ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. www.kannadamedia.com