Advertisement

ಭಾರತದಲ್ಲಿ ದಿಢೀರ್‌ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ?

Advertisement

ಬರಹ: ಡಾ. ಜೆ ಎಸ್ ಪಾಟೀಲ (ಲೇಖಕರು ಜನಪರ ಚಿಂತಕರು )

ಭಾರತದಲ್ಲಿ ದಿಢೀರೆಂದು ಜನಪ್ರಿಯರಾಗಲು ಮತ್ತು ರಾಜಕೀಯ ಅಧಿಕಾರ ಅನುಭವಿಸಲು ಅನೇಕ ಸರಳ ಮಾರ್ಗಗಳು ಉಂಟು. ಅವುಗಳಲ್ಲಿ ಅತ್ಯಗತ್ಯವಾದದ್ದೆಂದರೆ ಮೇಲ್ವರ್ಗದಲ್ಲಿ ಹುಟ್ಟಿದವರಾಗಿರಬೇಕು, ಬಲಪಂಥೀಯ ಅಸಹಿಷ್ಣು ವಿಚಾರಧಾರೆ ಹೊಂದಿರಬೇಕು, ಆಗಾಗ ದೇಶದ ಸೌಹಾರ್ದತೆ ಕೆಡಿಸುವ ಪ್ರಚೋದನಾಕಾರಿ ಹೇಳಿಕೆಗಳು ಕೊಡುತ್ತಿರಬೇಕು ಮತ್ತು ಗುಂಪು ಹಲ್ಲೆ, ಮತೀಯ ದಂಗೆಗಳಲ್ಲಿ ಸ್ವತಃ ಪಾಲ್ಗೊಳ್ಳದೆ ಕೆಳವರ್ಗದ ಬಡವರ ಮಕ್ಕಳನ್ನು ಪ್ರಚೋದಿಸಿ ಅಪರಾಧಿಗಳನ್ನಾಗಿಸುವಲ್ಲಿ ನಿಷ್ಣಾತರಾಗಿರಬೇಕು. ಇದಕ್ಕೆ ಅನೇಕ ಉದಾಹರಣೆಗಳನ್ನು ಕೊಡಬಹುದು. ಪ್ರಸ್ತುತ ರಾಜಕೀಯದಲ್ಲಿ ದಿಢೀರಾಗಿ ಎದ್ದುನಿಂತು, ಅಷ್ಟೇ ಕ್ಷೀಪ್ರಗತಿಯಲ್ಲಿ ಅವಸಾನ ಕಂಡಂತ ಓರಿಸ್ಸಾ ಮೂಲದ ಕೇಂದ್ರದ ಮಾಜಿ ಮಂತ್ರಿ ಪ್ರತಾಪ್ ಚಂದ್ರ ಸಾರಂಗಿಯ ಹೆಸರು ಮುಂಚೂಣಿಯಲ್ಲಿದೆ.

ಪ್ರತಾಪ್ ಚಂದ್ರ ಸಾರಂಗಿಯ ಹಿನ್ನೆಲೆ

ಪ್ರತಾಪ್ ಚಂದ್ರ ಸಾರಂಗಿ ಓರಿಸ್ಸಾದ ಮೇಲ್ಜಾತಿಗೆ ಸೇರಿದ, ಆರ್ಥಿಕವಾಗಿ ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಒಂದು ಶಾಲೆಯಲ್ಲಿ ಸಾಮಾನ್ಯ ಗುಮಾಸ್ತ(ಕಾರಕೂನ)ನಾಗಿದ್ದವರು. ರಾಷ್ಟ್ರೀಯ ಸ್ವಯಂಸೇವಕ ಸಂಘ, ಹಿಂದೂ ಮಹಾಸಭಾ, ಭಜರಂಗದಳ ಮುಂತಾದ ಅಸಲಿಗೆ ಮೇಲ್ವರ್ಗದ ಹಿತಾಸಕ್ತಿಯ ಉದ್ದೇಶದಿಂದ ದೇಶಭಕ್ತಿ, ಧರ್ಮ ರಕ್ಷಣೆಯ ಮುಖವಾಡದಲ್ಲಿ ಹುಟ್ಟುಹಾಕಲಾಗಿರುವ ಸಂಘಟನೆಗಳಲ್ಲಿ ಪೂರ್ಣಾವಧಿ ಕಾರ್ಯಕರ್ತನಾಗಿ ಕೆಲಸ ಮಾಡಿದವರು. ಇವರು ಓರಿಸ್ಸಾ ಭಜರಂಗ ದಳದ ಮುಖ್ಯಸ್ಥನಾಗಿದ್ದಾಗ ಕ್ರೈಸ್ತ ಸನ್ಯಾಸಿ ಗ್ರಾಹಂ ಸ್ಟೇನ್ ಬರ್ಬರ್ ಹತ್ಯೆ ನಡೆದಿತ್ತು. ಅದರ ಮುಖ್ಯ ಆರೋಪಿಗೆ ಮರಣ ದಂಡನೆಯಾಗಿ ಸಾರಂಗಿ ಮತ್ತು ಇನ್ನಿತರರಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಆದರೆ ಸಾರಂಗಿಯವರು ಸಾಕ್ಷದ ಕೊರತೆಯ ಹಿನ್ನೆಲೆಯಲ್ಲಿ ಶಿಕ್ಷೆಯಿಂದ ಪಾರಾಗಿದ್ದರು. ಅದಷ್ಟೆ ಅಲ್ಲದೆ ಇವರು ಓರಿಸ್ಸಾದಲ್ಲಿ ಇನ್ನೂ ಅನೇಕ ಮತೀಯ ಗಲಭೆಗಳ ಆರೋಪವನ್ನು ಎದಿರಿಸಿದ್ದಾರೆ.

ಸಂಘ-ಪರಿವಾರದ ಹಿನ್ನೆಲೆಯ ಮೇಲ್ವರ್ಗಕ್ಕೆ ಸೇರಿದವರಿಗೆ ಬಿಜೆಪಿಯಲ್ಲಿ ರಾಜಕೀಯ ಏಳಿಗೆ ಅತ್ಯಂತ ಕ್ಷೀಪ್ರ ಹಾಗು ಅತಿ ಸುಲಭ ಎನ್ನುವ ಸಂಗತಿ ಎಲ್ಲರಿಗೆ ತಿಳಿದದ್ದೆ. ಆ ಪಕ್ಷವನ್ನು ಕಳೆದ 50 ವರ್ಷಗಳಿಂದ ತಳಮಟ್ಟದಲ್ಲಿ ಕಟ್ಟಿದ ಯಡಿಯೂರಪ್ಪನವರ ಸ್ಥಿತಿ ಎಂತದ್ದು ಎನ್ನುವುದನ್ನೂ ನಾವು ಬಲ್ಲೆವು. ಈ ಕಾರಣದಿಂದಲೇ ಅತ್ಯಂತ ಸಾಮಾನ್ಯ ಕುಟುಂಬಕ್ಕೆ ಸೇರಿದ ಪ್ರತಾಪ್ ಚಂದ್ರ ಸಾರಂಗಿ ಓರಿಸ್ಸಾ ವಿಧಾನಸಭೆಗೆ ಎರಡು ಸಲ ಶಾಸಕರಾಗುತ್ತಾರೆ. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗುತ್ತಾರೆ. 2014 ರಲ್ಲಿ ಸಂಸತ್ತಿನ ಚುನಾವಣೆಯಲ್ಲಿ ಸೋತು, 2019ರಲ್ಲಿ ಮತ್ತೊಮ್ಮೆ ಸ್ಪರ್ಧಿಸಿ ಗೆಲ್ಲುತ್ತಾರೆ, ಅಷ್ಟೇ ಅಲ್ಲದೆ ಮೋದಿ ಸಂಪುಟದಲ್ಲಿ ಪಶುಸಂಗೋಪನಾ ಇಲಾಖೆಯ ಸಚಿವರಾಗಿ ಆಯ್ಕೆಯಾಗುತ್ತಾರೆ. ಮೊದಲ ಸಲ ಸಂಸದರಾಗಿ ಆಯ್ಕೆಯಾಗಿದ್ದರೂ ಮಂತ್ರಿ ಸ್ಥಾನ ಉಳಿದವರಿಗಿಂತ ಬಹಳ ಸುಲಭವಾಗಿ ಇವರಿಗೆ ದಕ್ಕುತ್ತದೆ. ಅದೇ ಅಪಾರ ಅನುಭವವುಳ್ಳ ಮತ್ತು ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸಿದ ನಮ್ಮ ತುಮಕೂರು ಸಂಸದ ಬಸವರಾಜುಗೆ ಮಂತ್ರಿಯಾಗುವುದು ಸಾಧ್ಯವಾಗುವುದಿಲ್ಲ.

ಪ್ರತಾತ್ ಚಂದ್ರ ಸಾರಂಗಿ ಮೋದಿ ಸಂಪುಟದಲ್ಲಿ ಮಂತ್ರಿಯಾದಾಗ ಮೇಲ್ವರ್ಗದ ಹಿಡಿತದಲ್ಲಿರುವ ಇಡೀ ಭಾರತಿಯ ಎಲ್ಲ ಬಗೆಯ ಮಾಧ್ಯಮಗಳು ಈ ಸಾರಂಗಿಯನ್ನು ಇಂದ್ರ, ಚಂದ್ರ, ಸರಳ, ಸಜ್ಜನ, ಸನ್ಯಾಸಿ, ಬ್ರಹ್ಮಚಾರಿ, ದಕ್ಷ, ದೇಶಭಕ್ತ, ಕಠಿಣ ಪರಿಶ್ರಮಿ ಮುಂತಾಗಿ ಹೊಗಳಿ-ವರ್ಣಿಸಿ ಅಟ್ಟಕ್ಕೇರಿಸಿದಷ್ಟೇ ಸುದ್ದಿ. ಆನಂತರ ತನ್ನ ಮನೆತನ, ವ್ರತ್ತಿ ಮತ್ತು ಹವ್ಯಾಸಿ ಬದುಕಿಗೆ ಎನೇನೂ ಸಂಬಂಧವಿಲ್ಲದ ಪಶುಸಂಗೋಪನಾ ಇಲಾಖೆಯ ಸಚಿವನಾಗಿ ಆತ ಮುಂದೆ ಏನು ಕಡೆದು ಗುಡ್ಡೆ ಹಾಕಿದ ಎನ್ನುವ ಕುರಿತು ಇದೇ ಮಾಧ್ಯಮಗಳು ಮಾತನಾಡಲೇಯಿಲ್ಲ. ಮೋದಿ ಸಂಪುಟ ಏಕ ವ್ಯಕ್ತಿ ಸಂಪುಟವಾಗಿದ್ದು ಅಲ್ಲಿ ಬಹುತೇಕ ಘಟಾನುಘಟಿಗಳೇ ನಾಮಕಾ ವಾಸ್ತೆ ಸಚಿವರಾಗಿರುವಾಗ ಈ ಸಾರಂಗಿ ಯಾವ ಲೆಕ್ಕ ಬಿಡಿ. ಒಕ್ಕೂಟ ಸರಕಾರ ಅಂದರೆ ಮೋದಿ ಮತ್ತು ಶಾ ಮಾತ್ರ ಆಗಿದ್ದು, ಅವರನ್ನು ನಿಯಂತ್ರಿಸಿ ನೀತಿ ನಿರೂಪಕ ಕೆಲಸ ಮಾಡುವುದು ಅಸಂವಿಧಾನಿಕ ದೇಶಭಕ್ತಿ ಹೆಸರಿನ ಸಂಘಟನೆಗಳು ಎನ್ನುವುದು ಜನರು ಬಲ್ಲರು.

ನಿರೀಕ್ಷೆಯಂತೆ ಮೋದಿಯವರು ಕಳೆದ ವಾರ ತಮ್ಮ ಸಂಪುಟದಲ್ಲಿದ್ದ ಕೆಲವರನ್ನು ಕೈಬಿಟ್ಟು ಇನ್ನು ಹಲವರನ್ನು ಸೇರಿಸಿಕೊಂಡಿದ್ದಾರೆ. ಇಡೀ ಸಂಪುಟ ವಿಸ್ತರಣೆ ಮತ್ತು ಪುನಃರಚನೆಯ ಕಸರತ್ತು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವುದಾಗಿರದೆ ಅದು ಮುಂಬರುವ ಹಲವು ರಾಜ್ಯಗಳ ಚುನಾವಣೆಯನ್ನು ದ್ರಷ್ಟಿಯಲ್ಲಿಟ್ಟುಕೊಂಡು ಮಾಡಿದ್ದು ಎನ್ನುವುದು ವಿಧಿತ. ಈಗ ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾದ ಮಂತ್ರಿಗಳ ಕ್ರಿಮಿನಲ್ ಹಿನ್ನೆಲೆ ಮತ್ತು ಶ್ರೀಮಂತಿಕೆಯ ಕುರಿತು ಮತ್ತೊಂದು ಅಂಕಣ ಬರೆಯುವ ಅಗತ್ಯವಿದೆ. ಆದರೆ, ಕೇವಲ ಎರಡು ವರ್ಷಗಳ ಹಿಂದೆ ನಮ್ಮ ಮಾಧ್ಯಮಗಳಿಂದ ಅಸಹಜವಾಗಿ ಮತ್ತು ವಿಪರೀತವಾಗಿ ಹೊಳಗಿಸಿಕೊಂಡು ಪ್ರಚಾರ ಪಡೆದಿದ್ದ ಈ ಪ್ರತಾಪ್ ಚಂದ್ರ ಸಾರಂಗಿಯನ್ನು ಮೋದಿಯವರು ಸಂಪುಟದಿಂದ ಕೈಬಿಟ್ಟಿದ್ದೇಕೆ ಎಂದು ಅದೇ ಮಾಧ್ಯಮಗಳು ಬಾಯಿ ತೆಗೆಯಲೇಯಿಲ್ಲ. ಒಬ್ಬ ಹಿಂದೂ ಧರ್ಮ ರಕ್ಷಕ, ಮೇಲ್ವರ್ಗದ ವ್ಯಕ್ತಿ, ದಕ್ಷ, ಸರಳ, ಸಜ್ಜನ, ಬ್ರಹ್ಮಚಾರಿ ಈ ಹಿನ್ನೆಲೆ ಇದ್ದ ಮಾತ್ರಕ್ಕೆ ಈ ನೆಲಮೂಲದ ಶ್ರಮಿಕ ವರ್ಗದ ಬದುಕಿಗೆ ಸಂಬಂಧಿಸಿದ ಪಶುಸಂಗೋಪನಾ ಇಲಾಖೆಯಾಗಲಿ ಅಥವಾ ಇನ್ನಾವುದೇ ಇಲಾಖೆಯಾಗಲಿ ಮುನ್ನಡೆಸಲು ಸಾಧ್ಯವಾಗದು ಎನ್ನುವುದನ್ನು ಈ ಪ್ರತಾಪ್ ಚಂದ್ರ ಸಾರಂಗಿ ನಿರೂಪಿಸಿದಂತಾಯ್ತು.

ನಮ್ಮ ಭಾರತಿಯ ಮಾಧ್ಯಮಗಳು ಯಾರ ಕುರಿತಾದರು ಅತಿಯಾಗಿ ಪ್ರಚಾರ ಮಾಡಬೇಕಾದರೆ ಆ ವ್ಯಕ್ತಿಗೆ ಯಾವುದೇ ಯೋಗ್ಯತೆ ಇಲ್ಲದಿದ್ದರೂ ಆತ ಮೇಲ್ವರ್ಗಕ್ಕೆ ಸೇರಿದವನಾಗಿದ್ದರೆ ಸಾಕು, ಆತ ಮಾಡಿದನೆನ್ನಲಾಗುವ ಅನೇಕ ಅತ್ಯಾಚಾರಗಳು, ಅನ್ಯಾಯಗಳು, ಅಪರಾಧಗಳು, ಗಲಭೆಗಳೆಲ್ಲವು ನಗಣ್ಯವಾಗಿ ಬಿಡುತ್ತವೆ. ಅಂಥ ವ್ಯಕ್ತಿಯನ್ನು ರಾತ್ರಿ ಕಳೆದು ಬೆಳಕು ಹರಿಯುವಷ್ಟರಲ್ಲಿ ನಾಯಕನನ್ನಾಗಿಸುವ ಶಕ್ತಿ ಭಾರತಿಯ ಮೇಲ್ವರ್ಗದ ಮಾಧ್ಯಮಗಳಿಗಿದೆ. ಅದೇ ರೀತಿ ಒಬ್ಬ ವ್ಯಕ್ತಿ ಎಷ್ಟೇ ದಕ್ಷ, ಮತ್ತು ಅಪರಿಮಿತ ಕಾರ್ಯ ಕ್ಷಮತೆ ಹೊಂದಿರಲಿ, ಆತ ಬಲಪಂಥಿಯರ ವಿರೋಧಿ, ಶೋಷಿತರ ಪರವಾಗಿದ್ದರೆ ಆತನ ಒಂದು ಸಣ್ಣ ತಪ್ಪನ್ನು ದೊಡ್ಡದಾಗಿ ತೋರಿಸಿ ಆತನನ್ನು ಬೆಳಕು ಹರಿಯುವಷ್ಟರಲ್ಲಿ ಖಳನಾಯಕನನ್ನಾಗಿಸುವ ಶಕ್ತಿಯೂ ನಮ್ಮ ಮಾಧ್ಯಮಗಳಿಗಿದೆ. ಅದಕ್ಕೆ ಜೀವಂತ ಉದಾಹರಣೆಗಳೆಂದರೆ ಈ ಸಾರಂಗಿ ಮತ್ತು ಲಾಲು ಪ್ರಸಾದ್ ಯಾದವ ಎನ್ನುವುದು ನಾವು ಮರೆಯದಾರದು.

ರಾಜಕೀಯ ಬದುಕಿನುದ್ದಕ್ಕೂ ಸಂಘ-ಪರಿವಾರ ಮತ್ತು ಬಿಜೆಪಿಯೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳದ ಲಾಲು ಪ್ರಸಾದ್ ಯಾದವ್ ಅವರು ಮಾಡಿದರೆನ್ನಲಾದ ಮೇವು ಹಗರಣದ ಕುರಿತು ಭಾರತಿಯ ಮಾಧ್ಯಮಗಳು ಕನಿಷ್ಟ ಮೂರು ದಶಕಗಳ ಉದ್ದಕ್ಕೆ ಲಾಲು ವಿರುದ್ಧ ಬರೆದವು ಇಂದಿಗೂ ಬರೆಯುವುದನ್ನು ನಿಲ್ಲಿಸಿಲ್ಲ. ಆದರೆ ಅದೇ ಹಗರಣದಲ್ಲಿ ಹೆಸರಿಸಲಾಗಿದ್ದ ಜಗನ್ನಾಥ್ ಮಿಶ್ರ ಬಗ್ಗೆ ಮಾಧ್ಯಮಗಳು ಬಾಯಿ ತೆಗೆಯಲೇಯಿಲ್ಲ. ಬಹುಕೋಟಿ ಹುಡ್ಕೊ ಹಗರಣದ ಆರೋಪ ಎದುರಿಸಿದ್ದ ಅಂದಿನ ಕೇಂದ್ರ ಮಂತ್ರಿ ದಿವಂಗತ ಅನಂತಕುಮಾರ ಬಗ್ಗೆಯಾಗಲಿ, ಸಾಮಾಜ ಪರಿವರ್ತನ ಸಂಸ್ಥೆಯ ಹಿರೇಮಠ ಅವರಿಂದ ಭೂ ಒತ್ತುವರಿ ಆರೋಪಗಳನ್ನೆದುರಿಸಿದ ದಿನೇಶ್ ಗುಂಡೂರಾವ್ ಬಗ್ಗೆಯಾಗಲಿˌ ಅದೇ ಹಿರೇಮಠ ಅವರಿಂದ ಧಾರವಾಡದಲ್ಲಿ ಅನೇಕ ಹಗರಣಗಳ ಆರೋಪ ಎದುರಿಸಿದ ಇಂದಿನ ಕೇಂದ್ರದ ಮಂತ್ರಿ ಪ್ರಲ್ಹಾದ ಜೋಶಿ ಬಗ್ಗೆಯಾಗಲಿ ಏನನ್ನು ಚರ್ಚಿಸದ ನಮ್ಮ ಮಾಧ್ಯಮಗಳು ಪ್ರಜ್ಞಾಪೂರ್ವಕ ಮೌನ ತಾಳಿದವು.

ಪ್ರತಾಪ್ ಚಂದ್ರ ಸಾರಂಗಿ ಮೋದಿ ಸಂಪುಟ ಸೇರಿದ್ದರ ಹಿನ್ನೆಲೆ, ಆತ ಸಚಿವನಾಗಿ ಮಾಡಿದ ಸಾಧನೆಗಳ ಕುರಿತು ನಮ್ಮ ಮಾಧ್ಯಮಗಳು ಯಾಕೆ ಚರ್ಚಿಸಲಿಲ್ಲ, ಮತ್ತು ಮೊನ್ನೆ ಆತನನ್ನು ಸಂಪುಟದಿಂದ ಕಿತ್ತಿ ಹಾಕಿದಾಗ ಆತನ ವೈಫಲ್ಯಗಳ ಕುರಿತು ಯಾಕೆ ಚರ್ಚಿಸಲಿಲ್ಲ ಎನ್ನುವ ಸತ್ಯ ಸಂಗತಿ ಜನತೆಗೆ ಅರ್ಥವಾಗಲಿ ಎನ್ನುವ ಕಾರಣಕ್ಕೆ ನಾನು ಈ ಅಂಕಣ ಬರೆಯಬೇಕಾಯಿತು. ಇಲ್ಲದಿದ್ದರೆ ಸಾರಂಗಿಯಂತವರ ಬಗ್ಗೆ ಒಂದು ಅಂಕಣ ಬರೆದು ನನ್ನ ಶ್ರಮ ವ್ಯರ್ಥಗೊಳಿಸಿಕೊಳ್ಳುವ ಅಗತ್ಯ ನನಗಂತು ಇರಲಿಲ್ಲ. ಭಾರತದಲ್ಲಿ ಸುಲಭವಾಗಿ ಅಧಿಕಾರ ಲಭ್ಯತೆ ಮತ್ತು ಪುಕ್ಕಟ್ಟೆ ಪ್ರಚಾರಕ್ಕೆ ಮಾನದಂಡಗಳು ಏನು ಎನ್ನುವ ಸಂಗತಿ ಜನತೆಗೆ ತಿಳಿಹೇಳುವ ಸಲುವಾಗಿಯೇ ನಾನು ಈ ಸಾರಂಗಿಯ ಸಂಗತಿಯನ್ನು ಇಲ್ಲಿ ಚರ್ಚಿಸಬೇಕಾಯಿತು.

ಕರ್ನಾಟಕದಿಂದ ಆಯ್ಕೆಯಾಗಿ ದಿಲ್ಲಿಗೆ ಹೋಗಿರುವ ಅತ್ಯಂತ ಹೆಚ್ಚು ಅನುಭವಿ ಸಂಸದ ತುಮಕೂರಿನ ಬಸವರಾಜು ಮಂತ್ರಿಯಾಗಲು ಯೋಗ್ಯನಲ್ಲ ಎಂದು ಬಿಜೆಪಿ ನಿರೂಪಿಸಿತು. ಅಥವಾ ಬಸವರಾಜು ಸಂಘ-ಪರಿವಾರದ ಹಿನ್ನೆಲೆ ಹೊಂದಿರದೆ ಆತನೊಬ್ಬ ನೇರ, ನಿಷ್ಟುರವಾದಿ ಎನ್ನುವ ಸಂಗತಿಯೂ ಇಲ್ಲಿ ಬಸವರಾಜು ಅಧಿಕಾರ ವಂಚಿತರಾಗಲು ಕಾರಣವಾರಬಹುದು. ಅಷ್ಟೇ ಅಲ್ಲದೆ ಯಡಿಯೂರಪ್ಪ ತಾನು ಹುಟ್ಟಿದ ಲಿಂಗಾಯತ ಧರ್ಮದ ಸಂಸ್ಕ್ರತಿ ಆಚರಣೆಗಳನ್ನು ಮರೆತು, ತಮ್ಮ ಧರ್ಮಕ್ಕೆ ವ್ಯತಿರಿಕ್ತವಾದ ಹಣೆಯ ಮೇಲೆ ಇಷ್ಟಗಲ ಕುಂಕುಮ ತಿಲಕವಿಟ್ಟರುˌ ತನ್ನ ಮಗನಿಗೆ ಲಿಂಗಾಯತ ಸಂಸ್ಕ್ರತಿಗೆ ಹೊರಗಿನ ರಾಘವೇಂದ್ರ ಎಂಬ ಹೆಸರಿಟ್ಟರು, ಮತ್ತು ಬಸವಾದಿ ಶರಣರು ದಿಕ್ಕರಿಸಿ ವಿರೋಧಿಸಿದ ಹೋಮ-ಹವನಾದಿ ವೈದಿಕ ಆಚರಣೆಗಳನ್ನು ಕೇರಳ ತಂತ್ರಿಗಳ ಮೂಲಕ ಮಾಡಿಸಿದರೂ ಕೂಡ ಶೂದ್ರತ್ವದ ಪಟ್ಟದಿಂದ ಯಡಿಯೂರಪ್ಪನವರಿಗೆ ಮೋಕ್ಷ ಸಿಗಲಾರದು ಮತ್ತು ಬಿಜೆಪಿಯ ಯಜಮಾನರಿಗೆ ಯಡಿಯೂರಪ್ಪ ಯಾವತ್ತೂ ಹತ್ತಿರವಾಗಲಾರರು ಎನ್ನುವ ಸತ್ಯ ಸಂಗತಿ ಲಿಂಗಾಯತ ಸಮುದಾಯ ಮತ್ತು ಒಟ್ಟಾರೆ ಶೂದ್ರ ಜನಾಂಗ ಅರಿತುಕೊಳ್ಳಬೇಕಾಗಿದೆ.

►►ಇದನ್ನೂ ಓದಿ:

►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ.

►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?

►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ?

►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.!

►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್!

►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ!

►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ?

►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ?

►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ.

►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ

►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ)

►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ?

►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..!

►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ!

►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ?

►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್!

►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ?

►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು.

►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು?

►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್!

►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ.

►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ?

►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್

►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ

►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ)

►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ

►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?

Advertisement
Advertisement
Recent Posts
Advertisement