Advertisement

ಗೆಲ್ಲಲೇ ಬೇಕಾದ ಸಾಮಾಜಿಕ ಕಳಕಳಿಯ ಯುವ ಮುಖಂಡ ಉಮೇಶ್ ನಾಯರಿ

Advertisement

ಬರಹ: ಕಮಲಾಕರ ಕಾರಣಗಿರಿ ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ನಿಂದ ಈ ಬಾರಿ ಸಾಮಾಜಿಕ ಕಳಕಳಿಯ ಯುವಮುಖಂಡ ಉಮೇಶ್ ನಾಯರಿ ಸ್ಪರ್ಧಿಸುತ್ತಿದ್ದಾರೆ. ತನ್ನ ಬಾಲ್ಯದಿಂದಲೂ ಪರಿಸರದ ಅಶಕ್ತರಿಗೆ ತನ್ನಿಂದಾದ ಕೆಲಸ ಮಾಡಿಕೊಡುವ ಮೂಲಕ ಗುರುತಿಸಿಕೊಂಡಿರುವ ಉಮೇಶ್ ರವರು ಇದೀಗ ಗ್ರಾಮ ಪಂಚಾಯತ್ ಗಳ ಅವ್ಯವಸ್ಥೆಗಳನ್ನು ವ್ಯವಸ್ಥಿತಗೊಳಿಸುವ ಮೂಲಕ ಸರ್ಕಾರದ ಸವಲತ್ತುಗಳಾದ ಬಸವ ವಸತಿ ಯೋಜನೆ, ಉದ್ಯೋಗ ಖಾತ್ರಿ ಯೋಜನೆ, ಅಂಗವಿಕಲ ಮಾಶಾಸನ, ಮನಸ್ವಿನಿ ಯೋಜನೆ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಕಟ್ಟಡ ಪರವಾನಿಗೆ, ಉದ್ಯೋಗ ಪರವಾನಿಗೆ, ವಿದ್ಯುತ್ ನಿರಾಕ್ಷೇಪಣಾ ಪತ್ರ ಮುಂತಾದವುಗಳಿಗಾಗಿ ಜನರ ಅಲೆದಾಟ ತಪ್ಪಿಸಿ, ಅವುಗಳನ್ನು ಸ್ಥಳದಲ್ಲೆ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನದ ಕನಸು ಹೊಂದಿದ್ದಾರೆ. ಅಧಿಕಾರ ದೊರೆತರೆ ಪಂಚಾಯತ್ ನ ಅನಾವಶ್ಯಕ ಖರ್ಚುವೆಚ್ಚಗಳನ್ನು ಖಡಿತಗೊಳಿಸಿ ಸರ್ಕಾರದ ಅನುದಾನ ಬಳಸಿ ಮೂಲಭೂತ ಸೌಲಭ್ಯಗಳಾದ ರಸ್ತೆ, ವಿದ್ಯುತ್, ರಸ್ತೆದೀಪ, ಚರಂಡಿ, ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡುವ ಮೂಲಕ ಕಿರಿಮಂಜೇಶ್ವರ ಪಂಚಾಯತ್ ಅನ್ನು ಜಿಲ್ಲೆಯಲ್ಲೆ ಮಾದರಿ ಪಂಚಾಯತ್ ಆಗಿ ಪರಿವರ್ತಿಸುವ ಯೋಜನೆ ಹಾಕಿಕೊಂಡಿದ್ದಾರೆ ಉಮೇಶ್. ಭ್ರಷ್ಟಾಚಾರ ಹಾಗೂ ಕೋಮುವಾದಗಳಿಂದ ರಾಜಕಾರಣ ಹೊಲಸಾಗುತ್ತಿರುವ ಈ ಹೊತ್ತಿನಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ಜಾರಿಯ ಕುರಿತು ಪ್ರಾಮಾಣಿಕ ಕಾಳಜಿ ಹೊಂದಿರುವ ಉಮೇಶರಂತಹ ಜನಪರ ಯುವಕರು ರಾಜಕಾರಣಕ್ಕೆ ಬರಬೇಕು. ಅದರಿಂದ ಮಾತ್ರವೇ ಗ್ರಾಮಗಳು ಅಭಿವೃದ್ಧಿ ಹೊಂದಲು ಸಾಧ್ಯ, ಗ್ರಾಮಗಳ ಅಭಿವೃದ್ದಿಯೇ ರಾಜ್ಯದ, ದೇಶದ ಅಭಿವೃದ್ಧಿ ಆಗಿದೆ ಎನ್ನುತ್ತಾರೆ ಕಿರಿಮಂಜೇಶ್ವರದ ಸಾಮಾನ್ಯ ಜನತೆ. ಉಮೇಶ್ ರವರು 'ಟ್ರ್ಯಾಕ್ಟರ್' ಚಿಹ್ನೆಯಡಿ ಸ್ಪರ್ಧಿಸುತ್ತಿದ್ದರೆ, ಮಹಿಳಾ ಅಭ್ಯರ್ಥಿಗಳಾದ ಶೋಭಾ ದೇವಾಡಿಗ ರವರು 'ಹೊಲಿಗೆ ಮೆಷಿನ್' ಹಾಗೂ ಸುಮಂಗಲಾ ಕಾರಂತರವರು 'ಮೇಜು' ಚಿಹ್ನೆಯಡಿ ಸ್ಪರ್ಧಿಸುತ್ತಿದ್ದಾರೆ. ____________________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement