Advertisement

ಉಕ್ರೇನ್: ರಷ್ಯಾ ಸೈನಿಕರಿಂದ ಭಾರತೀಯ ವಿಧ್ಯಾರ್ಥಿನಿಯರ ಅಪಹರಣ? ಈ ಕುರಿತು ಸ್ಪೋಟಕ ವಿಡಿಯೋ ಹಂಚಿಕೊಂಡ ಪ್ರಿಯಾಂಕಾ ಗಾಂಧಿ

Advertisement

'ಯುದ್ಧಪೀಡಿತ ಉಕ್ರೇನ್ ‌ನಿಂದ ರಕ್ಷಣೆ ಅರಸಿ ಕಾಲ್ನಡಿಗೆಯಲ್ಲಿ ನೆರೆರಾಷ್ಟ್ರಗಳಾದ ರೋಮೇನಿಯಾ, ಪೋಲೆಂಡ್, ಹಂಗೇರಿ ಮುಂತಾದ ರಾಷ್ಟ್ರಗಳಿಗೆ ತೆರಳುತ್ತಿರುವ ಹಲವು ಭಾರತೀಯ ವಿಧ್ಯಾರ್ಥಿನಿಯರನ್ನು ರಷ್ಯನ್ ಸೈನಿಕರು ಅಪಹರಿಸಿದ್ದಾರೆ ಆ ವಿಧ್ಯಾರ್ಥಿನಿಯರು ಇದೀಗ ಎಲ್ಲಿದ್ದಾರೆಂದು ಗೊತ್ತಿಲ್ಲ' ಎಂಬ ಸ್ಪೋಟಕ ಮಾಹಿತಿಯೊಂದು ಇದೀಗ ಬಹಿರಂಗಗೊಂಡಿದೆ. ಈ ಕುರಿತು ಮಾಹಿತಿಯನ್ನು ಹಂಚಿಕೊಂಡು ಭಾರತದ ಪ್ರಧಾನಿ ಮೋದಿಯವರಲ್ಲಿ ವಿನಂತಿಸಿ ವಿಡಿಯೋ ಮಾಡಿರುವ ಉಕ್ರೇನ್ ನಲ್ಲಿರುವ ಲಕ್ನೋ ಮೂಲದ ಗಿಢ್ವಾಮಿಶ್ರ ಎಂಬ ಹೆಸರಿನ ವಿಧ್ಯಾರ್ಥಿನಿ 'ದಯವಿಟ್ಟು ನಮ್ಮನ್ನು ಇಲ್ಲಿಂದ ರಕ್ಷಣೆ ಕೊಟ್ಟು ಕರೆದುಕೊಂಡು ಹೋಗಿ' ಎಂದು ಕೈಮುಗಿದು, ಕಣ್ಣೀರಿಟ್ಟು ಕೇಳಿಕೊಂಡಿದ್ದಾರೆ. ಈ ವಿಡಿಯೋ ವನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯವರು ಅತ್ಯಂತ ತ್ವರಿತವಾಗಿ ಭಾರತೀಯ ವಿಧ್ಯಾರ್ಥಿನಿಯರನ್ನು ರಕ್ಷಿಸುವ ಕಾರ್ಯವನ್ನು ಕೈಗೊಳ್ಳುವಂತೆ ವಿನಂತಿಸಿದ್ದಾರೆ. ಟ್ವೀಟ್‌ನ ವಿವರಗಳು ಇಂತಿವೆ: 'ಪ್ರಧಾನಿ ನರೇಂದ್ರ ಮೋದಿಯವರೆ, ಡಾ. ಎಸ್. ಜೈಶಂಕರ್ ರವರೆ, ಉಕ್ರೇನ್‌ನಿಂದ ಬಂದಿರುವ ಭಾರತೀಯ ವಿದ್ಯಾರ್ಥಿನಿಯ ಈ ವೀಡಿಯೋ ತುಂಬಾ ಆತಂಕಕಾರಿಯಾಗಿವೆ. ಏನನ್ನಾದರೂ ಮಾಡಿ ಸಿಲುಕಿಕೊಂಡಿರುವ ಈ ಮಕ್ಕಳನ್ನು ಭಾರತಕ್ಕೆ ಕರೆತನ್ನಿ. ಇಡೀ ರಾಷ್ಟ್ರವು ಈ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳೊಂದಿಗೆ ಇದೆ ಹೇಗಾದರೂ ಅವರನ್ನು ಸುರಕ್ಷಿತವಾಗಿ ಮರಳಿ ತರಲು ಸರ್ಕಾರ ಪ್ರಯತ್ನಿಸಬೇಕು' ಎಂದವರು ವಿನಂತಿಸಿದ್ದಾರೆ. ವಿಡಿಯೋ ದಲ್ಲಿ ವಿಧ್ಯಾರ್ಥಿನಿಯು ' ನಾವು ಕೀವ್ ಪ್ರದೇಶದಲ್ಲಿ ಸಿಲುಕಿ ಹಾಕಿಕೊಂಡಿದ್ದೇವೆ. ನಮಗೆ ಇಲ್ಲಿ ಯಾರಿಂದಲೂ ಸಹಾಯ ಒದಗಿಬರುತ್ತಿಲ್ಲ. ಇಲ್ಲಿನ ಸ್ಥಳೀಯರು ನಾವು ರಕ್ಷಣೆ ಪಡೆದಿರುವ ಕಟ್ಟಡದ ಬಾಗಿಲು ಒಡೆದು ಒಳ ಪ್ರವೇಶಿಸಲು ಯತ್ನಿಸುತ್ತಿದ್ದಾರೆ. ಇಲ್ಲಿನ ಪರಿಸ್ಥಿತಿ ಆತಂಕಕಾರಿಯಾಗಿದೆ. ಯಾವ ಕ್ಷಣದಲ್ಲಿ ಏನಾಗುತ್ತೋ ಎಂಬ ಭೀತಿ ನಮ್ಮನ್ನು ಆವರಿಸಿದೆ. ಇಂಡಿಯನ್ ಎಂಬಸ್ಸಿಗೆ ಕರೆ ಮಾಡಿದರೆ ಅಲ್ಲಿಂದ ಯಾವ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳಬೇಕಾದ ಅವರು ನಮಗೆ ಸ್ಪಂದಿಸುತ್ತಿಲ್ಲ. ಬಂಕರ್ ಗಳಿಂದ ರಕ್ಷಣೆಗಾಗಿ ಗಡಿಭಾಗಕ್ಕೆ ತೆರಳುತ್ತಿರುವ ತೆರಳುವ ವಿಧ್ಯಾರ್ಥಿನಿಯರ ಜೊತೆ ರಷ್ಯಾ ಸೈನಿಕರು ಅತ್ಯಂತ ಕೆಟ್ಟದ್ದಾಗಿ ವರ್ತಿಸುತ್ತಿದ್ದಾರೆ. ಇದನ್ನು ವಿರೋಧಿಸಿದ ವಿಧ್ಯಾರ್ಥಿಗಳ ಮೇಲೆ ಫೈರಿಂಗ್ ಮಾಡಲಾಗಿದೆ. ವಿಧ್ಯಾರ್ಥಿನಿಯರನ್ನು ಅಜ್ಞಾತ ಸ್ಥಳದೆಡೆಗೆ ಅಪಹರಿಸಲಾಗಿದೆ. ಇದೀಗ ಅವರುಗಳು ಎಲ್ಲಿದ್ದಾರೆಂದು ಯಾರಿಗೂ ಗೊತ್ತಿಲ್ಲ. ದಯವಿಟ್ಟು ನಮ್ಮನ್ನು ಮತ್ತಿತರ ಭಾರತೀಯರನ್ನು ರಕ್ಷಿಸಿ' ಎಂದು ಕಣ್ಣೀರಿಟ್ಟು ವಿನಂತಿಸಿದ್ದಾರೆ.

Advertisement
Advertisement
Recent Posts
Advertisement