Advertisement

ರಂಗಾಯಣ ಶಿವಮೊಗ್ಗ ಇವರಿಂದ ಕುಂದಾಪುರದಲ್ಲಿ 'We the people of India' ನಾಟಕ ಪ್ರದರ್ಶನ

Advertisement
ಭಾನುವಾರ ಸಂಜೆ ಕುಂದಾಪುರದ ಅಂಬೇಡ್ಕರ್ ಸಭಾಭವನದಲ್ಲಿ ಸಮುದಾಯ ಕುಂದಾಪುರದ ಆಶ್ರಯದಲ್ಲಿ ಜೆಸಿಐ ಕುಂದಾಪುರ ಸಹಯೋಗದೊಂದಿಗೆ 'ರಂಗಾಯಣ ಶಿವಮೊಗ್ಗ' ಇದರ ಕಲಾವಿದರಿಂದ
“ವಿ ದ ಪೀಪಲ್ ಆಫ್ ಇಂಡಿಯಾ” ನಾಟಕ ಪ್ರದರ್ಶನ ನಡೆಯಿತು.

ಡಾ. ರಾಜಪ್ಪ ದಳವಾಯಿ ಯವರ ರಚನೆಯ, ಲಕ್ಷ್ಮಣ್ ಕೆ.ಪಿ ಯವರ ನಿರ್ದೇಶನದ, ಸಂದ್ಯಾ ಅರಕೆರೆ ಸಹ ನಿರ್ದೇಶನದ ಈ ನಾಟಕ 'ಸರ್ವರಿಗೂ ಸಂವಿಧಾನ' ಯೋಜನೆಯಡಿ ಪ್ರದರ್ಶನಗೊಂಡಿತು.

ಅಂಬೇಡ್ಕರ್ ರಚನೆಯ ಭಾರತದ ಸಂವಿಧಾನ ಒಂದು ಮಹಾ ಸಾಗರ. ಅದರಲ್ಲಿನ ಕೆಲವು ಬಹುಮುಖ್ಯವೂ, ಅಮೂಲ್ಯವೂ ಹಾಗೂ ಸ್ಪೂರ್ತಿದಾಯಕ ಅಂಶಗಳನ್ನು ಆಧರಿಸಿ 'ಸರ್ವರಿಗೂ ಸಂವಿಧಾನ' ಎಂಬ ಯೋಜನೆಯಡಿ ರಂಗಾಯಣ ಶಿವಮೊಗ್ಗ ಪ್ರಸ್ತುತ ಪಡಿಸಿದ ನಾಟಕ 'ವಿ ದ ಪೀಪಲ್ ಆಫ್ ಇಂಡಿಯಾ' We the people of India. ಈ ನಾಟಕವು ಸಂವಿಧಾನದ ಆಶಯಗಳನ್ನು ಮತ್ತದರ ಸ್ಪೂರ್ತಿಯನ್ನು ಆದರಿಸಿದ ಒಂದು ದೃಶ್ಯಕಾವ್ಯ. ಶುಷ್ಕವಾಗದಂತೆ ಹೆಚ್ಚು ಕಲಾತ್ಮಕವಾಗಿ ನಿರೂಪಿತಗೊಂಡು ರಂಗದ ಮೇಲೆ ಅಭಿವ್ಯಕ್ತವಾದ ಈ ನಾಟಕ ಅಂತರ್ವಾಹಿನಿಯಾಗಿ ಸಂವಿಧಾನ ಎನ್ನುವುದು ತಾಯ್ತನ ಎಂಬುವುದನ್ನು ಪ್ರಸ್ತುತಪಡಿಸುತ್ತದೆ. ಸಾಮಾನ್ಯ ಜನರೇ ಮಿಕ್ಕಳಿದ ಸಾಮಾನ್ಯರತ್ತ ಸಂವಿಧಾನದ ಆಶಯಗಳನ್ನು ಒಯ್ಯುವ ಒಂದು ಬಹುದೊಡ್ಡ ಪ್ರಯತ್ನ ಇಲ್ಲಿ ವ್ಯಕ್ತವಾಗಿದೆ.

ಮನೆಮನೆಗೆ ತೆರಳಿ ಹಾಡು ಹೇಳಿ ಬಿಕ್ಷೆ ಬೇಡಿ ಹೊಟ್ಟೆ ಹೊರೆದುಕೊಳ್ಳುವ ಗಾಯಕರ ಒಂದು ಗುಂಪು ವೇದಿಕೆಯ ಮುಂದಿನ ಪ್ರೇಕ್ಷಕರ ಹಿಂದಿನಿಂದ ಹಾಡು ಹೇಳುತ್ತಾ ಬಂದು ಸಂವಿಧಾನ ತಿಳಿಯದವರ ಬಗೆಗೆ ತಿಳಿದು ಆ ನಂತರ ಸಂವಿಧಾನದ ಕತೆಯನ್ನು ನಿರೂಪಿಸುವ, ಹಾಡುವ ಮೂಲಕ ಬಾಬಾಸಾಹೇಬ್ ಡಾ. ಅಂಬೇಡ್ಕರ್ ಅವರು ಸಂವಿಧಾನವನ್ನು ರಾಷ್ಟ್ರಾಧ್ಯಕ್ಷರಿಗೆ ಒಪ್ಪಿಸುವುದು. ಡಾ. ಅಂಬೇಡ್ಕರ್ ಅವರ ಕುರಿತು ಟಿ.ಟಿ ಕೃಷ್ಣಮಾಚಾರಿಯವರು ಅಭಿಪ್ರಾಯ ವ್ಯಕ್ತಪಡಿಸುವಿಕೆ. ಸಂವಿಧಾನ ಪೂರ್ವರಂಗದಲ್ಲಿ ಸರ್ದಾರ್ ಪಟೇಲ್ ಹಾಗೂ ಚಾಚಾ ನೆಹರೂರವರ ಚರ್ಚೆ, ಸಂವಿಧಾನ ರಚನಾ ಸಭೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ, ಭಿನ್ನಲಿಂಗಿಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕ್ಷಮೆ ಕೇಳುವಿಕೆ. ಭಾರತ ಯಾಕೆ ಜಾತ್ಯತೀತ ರಾಷ್ಟ್ರವಾಗಬೇಕು ಮತ್ತು ಏಕೆ ಹಿಂದೂ ರಾಷ್ಟ್ರವಾಗಬಾರದು ಎಂಬ ಕುರಿತು ಚರ್ಚೆ. ಇವೆಲ್ಲವೂ ಸಾಮಾನ್ಯ ಜನರಿಗಿರುವ ಸಂವಿಧಾನದ ರಕ್ಷಣೆಯ ಕುರಿತಾದ ಜವಾಬ್ದಾರಿಗಳನ್ನು ಹೆಚ್ಚು ಕಲಾತ್ಮಕವಾದ ಅಭಿವ್ಯಕ್ತಿ ಈ ನಾಟಕದಲ್ಲಿ ಪ್ರಕಟಗೊಂಡಿದೆ.

ಸಂವಿಧಾನದ ವಿಷಯ ನಾಟಕವಾಗಿಸುವುದು ಸವಾಲಿನ ಕೆಲಸವೆ ಆದರೂ ಈ ರಂಗಪ್ರಯೋಗ ನುರಿತ ನಿರ್ದೇಶಕರು, ಕಲಾವಿದರ ಮೂಲಕ ಬಹುಮುಖ್ಯವಾದ ಸಂವಿಧಾನದ ಆಶಯಗಳನ್ನು ಎಳೆಎಳೆಯಾಗಿ ಹಾಗೂ ಕಲಾತ್ಮಕವಾಗಿ ರಂಗಾಭಿವ್ಯಕ್ತಿಯ ಮೂಲಕ ಪ್ರೇಕ್ಷಕರಿಗೆ ಮನಮುಟ್ಟುವಂತೆ ತಲುಪಿಸುವ ಕಾರ್ಯವನ್ನೆಸಗಿದೆ.
ಮನುವಾದಿಗಳ ಆಕ್ರಮಣಕ್ಕೊಳಗಾಗಿರುವ ಅಂಬೇಡ್ಕರ್ ಸಂವಿಧಾನ, ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಗಳು ಅಪಾಯದಲ್ಲಿರುವ ಈ ಕಾಲಘಟ್ಟದಲ್ಲಿ ಇಂತಹ ಕಲಾತ್ಮಕ ರಂಗ ಪ್ರಯೋಗಗಳು ಯುವ ಜನರ ನಡುವೆ ಇನ್ನೂ ಹೆಚ್ಚು ಹೆಚ್ಚಾಗಿ ನಡೆಯಬೇಕಿದೆ. ಇಂತಹ ಒಂದು ಸಾಮಾಜಿಕ ಕಾಳಜಿಯ ಪ್ರಯೋಗವನ್ನು ರಂಗದ ಮೇಲೆ ಪ್ರಸ್ತುತ ಪಡಿಸಿದ 'ರಂಗಾಯಣ ಶಿವಮೊಗ್ಗ' ತಂಡಕ್ಕೆ ಕನ್ನಡ ಮೀಡಿಯಾ ಡಾಟ್ ಕಾಮ್ ಅಭಿನಂದನೆಗಳನ್ನು ಸಲ್ಲಿಸುತ್ತದೆ.

ಅಂಬೇಡ್ಕರ್ ಆಗಿ ಯುವಕ ಸುಭಾಷ್ ಎ.ಎಸ್ ಅಭಿನಯ ಅಭೂತಪೂರ್ವವಾದುದು. ಇತರ ಪಾತ್ರ ವರ್ಗದಲ್ಲಿ ಪರಶುರಾಮ, ರೂಪಾ ಬಿ.ಸಿ, ರೇವತಿ ರಾಂ ಕುಂದನಾಡು, ಮಹಾದೇವ ಕಾಂಬಳೆ, ವೇಣು. ಬಿ, ಗಂಗಾಧರ ಡಿ.ಎಂ, ವಿರೇಶ್ ರಾಯಚೂರು, ಪರಶುರಾಮ ಪತ್ರೋಟ, ಗಣೇಶ್ ಕೆ.ವಿ, ಅಕ್ಷತಾ ಯು.ಎಸ್, ಮೀನಾಕ್ಷಿ ವಗದಾಳೆ, ಹಣಮಂತ ಲಕ್ಷ್ಮಣ, ಟಿ.ಶ್ಯಾಮಲಾ, ಭಾಸ್ಕರ್ ಹಿತ್ತಲಮನೆ, ಅರುಣ್ ಕುಮಾರ್ ಮೇದಾರ್, ಲಕ್ಕಿಮರದ ಬಸವರಾಜ, ಕವಿತಾ ಎ.ಎಂ ಅದ್ಬುತವಾಗಿ ನಟಿಸಿದ್ದಾರೆ.
ಈ ಅಧ್ಬುತ ನಾಟಕದ ರಂಗವಿನ್ಯಾಸ ವಿನೀತ್ ಕುಮಾರ್ ಎಂ, ಸಂಗೀತ ಸಂಯೋಜನೆ ಪೂರ್ವಿ ಕಲ್ಯಾಣಿ, ಶೋಧನ್ ಬಸ್ರೂರು, ಲಕ್ಕಿಮರದ ಬಸವರಾಜ, ರೇವತಿರಾಂ ಕುಂದನಾಡು, ಸಂಗೀತ ನಿರ್ವಹಣೆ ಶೋಧನ್ ಬಸ್ರೂರು, ಚಂದ್ರಮ್ಮ ಆರ್, ಬೆಳಕಿನ ವಿನ್ಯಾಸ ಮತ್ತು ನಿರ್ವಹಣೆಯನ್ನು ವಿನೀತ್ ಕುಮಾರ್ ಎಂ ನಿರ್ವಹಿಸಿದ್ದಾರೆ.
Advertisement
Advertisement
Recent Posts
Advertisement