Advertisement

ಉಕ್ರೇನ್ ನಿಂದ ಆಗಮಿಸಿರುವ ವೈಧ್ಯಕೀಯ ವಿಧ್ಯಾರ್ಥಿಗಳಿಗೆ ದೇಶದಲ್ಲೆ ಶಿಕ್ಷಣ ಮುಂದುವರಿಸಲು ಅನುವು ಮಾಡಿಕೊಡಿ: ಪ್ರಧಾನಿಗೆ ಎಂ.ಬಿ ಪಾಟೀಲ್ ಪತ್ರ

Advertisement
ಯುದ್ಧಪೀಡಿತ ಉಕ್ರೇನಿನಿಂದ ಸ್ವದೇಶಕ್ಕೆ ಹಿಂತಿರುಗಿರುವ ವೈದ್ಯಕೀಯ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಅತಂತ್ರಗೊಂಡಿದೆ. ಈ ಸಂದಿಗ್ಧ ಸಂಧರ್ಭದಲ್ಲಿ ಹಾಲಿ ಇರುವ ನಿಯಮಗಳಿಗೆ ವಿನಾಯಿತಿ ನೀಡಿ ಆ ವಿಧ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಆದ ಕಾರಣ ಆ ವಿಧ್ಯಾರ್ಥಿಗಳಿಗೆ ದೇಶದಲ್ಲೆ ಶಿಕ್ಷಣ ಮುಂದುವರೆಸಲು ಅವಕಾಶ ಮಾಡಿಕೊಡುವ ಮೂಲಕ ಅವರುಗಳಿಗೆ ಎದುರಾಗಿರುವ ಶೈಕ್ಷಣಿಕ ಸಮಸ್ಯೆ ಬಗೆ ಹರಿಸುವಂತೆ ಕೋರಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಕೆಪಿಸಿಸಿ ಪ್ರಚಾರಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಂ‌.ಬಿ ಪಾಟೀಲ್ ರವರು ಪತ್ರ ಬರೆದು ವಿನಂತಿಸಿದ್ದಾರೆ.

ಯುದ್ದ ಕೊನೆಗೊಂಡರೂ ಉಕ್ರೇನ್ ನಲ್ಲಿ ಸದ್ಯಕ್ಕೆ ಕಾಲೇಜು ಆರಂಭವಾಗುವ ಸೂಚನೆಗಳಿಲ್ಲ. ಉಕ್ರೇನ್–ರಷ್ಯಾ ಯುದ್ಧದ ನಿಮಿತ್ತ ಇದೊಂದು ಬಾರಿ ಹಾಲಿ ನಿಯಮಗಳಿಗೆ ವಿನಾಯಿತಿ ಕೊಟ್ಟು ಸ್ವದೇಶದಲ್ಲೇ ಎಲ್ಲ ವೈದ್ಯ ವಿದ್ಯಾರ್ಥಿಗಳಿಗೂ ಶಿಕ್ಷಣ ಮುಂದುವರೆಸಲು ಅವಕಾಶ ಕಲ್ಪಿಸುವ ವಿಶೇಷ ನೀತಿಯನ್ನು ಕೇಂದ್ರ ಸರ್ಕಾರ ರೂಪಿಸಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

18ಸಾವಿರದಷ್ಟು ಭಾರತೀಯ ವಿಧ್ಯಾರ್ಥಿಗಳು ಉಕ್ರೇನ್ ದೇಶದಲ್ಲಿ ವೈಧ್ಯಕೀಯ ಶಿಕ್ಷಣ ಪಡೆಯುತ್ತಿದ್ದು, ಅವರುಗಳ ಜೊತೆ ಕರ್ನಾಟಕ ರಾಜ್ಯದ ಸುಮಾರು 840ವಿಧ್ಯಾರ್ಥಿಗಳು ವಾಪಾಸಾಗಿದ್ದಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ. ಹಾಗೆಯೇ ತನ್ನ ವಿಧಾನಸಭಾ ಕ್ಷೇತ್ರ ವಿಜಯಪುರದ ವಿದ್ಯಾರ್ಥಿಗಳಿಗೆ BLDE ಡೀಮ್ಡ್ ವಿವಿ ಯಿಂದ ಉಚಿತ ಪಾಠ, ತರಬೇತಿ, ಗ್ರಂಥಾಲಯ ಸೌಲಭ್ಯ ಕಲ್ಪಿಸಿರುವ ಕುರಿತು ಪ್ರಧಾನಿಯವರ ಗಮನಕ್ಕೆ ತಂದಿದ್ದಾರೆ.

ಎಂ.ಬಿ ಪಾಟೀಲ್ ಪತ್ರ:

Advertisement
Advertisement
Recent Posts
Advertisement