Advertisement

ಕಳೆದ ಅರವತ್ತು ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ಈ ದೇಶಕ್ಕೇನು ಕೊಟ್ಟಿದೆ?

Advertisement

ಬರಹ: ಅನಾಮಿಕ

ಈ ದೇಶದ ಇತಿಹಾಸ ಕಂಡ ಪ್ರಮುಖ ರಾಜಕೀಯ ಪಕ್ಷ ಹಾಗೂ ಜನಪರತೆಯ ಆಧಾರದ ಮೇಲೆ ಎಲ್ಲ ವರ್ಗಗಳ ಏಳಿಗೆಗಾಗಿ ಶ್ರಮಿಸುತ್ತಾ ಸಮಾನ ಅವಕಾಶಗಳನ್ನು ಸೃಷ್ಟಿಸಿದ್ದು ಕಾಂಗ್ರೆಸ್ ಪಕ್ಷ.

ಸ್ವಾತಂತ್ರ್ಯಾ ನಂತರದಲ್ಲಿ ಅತ್ಯಂತ ಆರೋಗ್ಯಪೂರ್ಣವಾಗಿ ದೇಶವನ್ನು ಮುನ್ನಡೆಸಿದ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು.

ಅದರಲ್ಲೂ ದೇಶ ವಿಭಜನೆಯ ತಂತ್ರಗಳನ್ನು ಅನುಸರಿಸುತ್ತಾ ಸದಾ ದೇಶದೊಳಗೆ ಕ್ಷೋಭೆ ಹಾಗೂ ಅಶಾಂತಿಯನ್ನೇ ಉಂಟುಮಾಡಲು ಶ್ರಮಿಸುತ್ತಿದ್ದ ದುಷ್ಟ ಮನುವಾದಿಗಳ ನಿಯಂತ್ರಣಕ್ಕೆ ದೇಶವನ್ನು ಒಪ್ಪಿಸದೇ ಸುದೀರ್ಘ ಕಾಲ ದೇಶದ ಅಧಿಕಾರ ಚುಕ್ಕಾಣಿ ಹಿಡಿದು ಬಾಬಾ ಸಾಹೇಬರ ಸಂವಿಧಾನದ ನೆರವಿನಿಂದ ವ್ಯವಸ್ಥಿತವಾಗಿ ದೇಶದ ಮುನ್ನಡೆಗೆ ಕಾರಣವಾದ ಕಾಂಗ್ರೆಸ್ ಪಕ್ಷವು ನೂರೆಂಟು ಜನಪರ ಕಾಯ್ದೆಗಳ ಮೂಲಕ ಜನರ ಬದುಕಿನ ಹಿತ ಕಾಯುವಂತಹ ಕೆಲಸ ಮಾಡಿತು ಎಂಬುದನ್ನು ಹೇಳದೇ ಹೋದರೆ ಅದು ಆತ್ಮ ವಂಚನೆ ಆಗುತ್ತದೆ

60 ವರ್ಷಗಳ ತನ್ನ ಅಧಿಕಾರದ ಅವಧಿಯಲ್ಲಿ ಜನ ಸಮುದಾಯಗಳ ಸಮಾನ ಏಳಿಗೆಗಾಗಿ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಕಾಯ್ದೆಗಳು ಮತ್ತು ಯೋಜನೆಗಳು ಅಪಾರವಾಗಿತ್ತು.

ಇನ್ನು 60 ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದ ಕೆಲಸಗಳು ಬೆಟ್ಟದಷ್ಟು. ಅವುಗಳನ್ನು ಈ ಕೆಳಂಡಂತೆ ನೀಡಲಾಗಿದ್ದು ಇದನ್ನು ಎಲ್ಲರೂ ಒಮ್ಮೆ ಗಮನಿಸಬೇಕು ಮತ್ತು " 60 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ" ಎಂಬ ತಲೆ ಇಲ್ಲದ ಪ್ರಶ್ನೆ ಕೇಳುವ ಎಲ್ಲರಿಗೂ ಇದನ್ನು ತೋರಿಸಬೇಕು

1947 ರ ಭಾರತದ ಸ್ವಾತಂತ್ರ್ಯ ಕಾಯ್ದೆ –

ಬ್ರಿಟಿಷರ ಹಸ್ತಕ್ಷೇಪವಿಲ್ಲದೇ ಭಾರತದ ಆಂತರಿಕ ಸುಧಾರಣೆಗಳನ್ನು ಮಾಡಿಕೊಳ್ಳಲು ಪೂರಕವಾದ ನಿಯಮಾವಳಿಗಳನ್ನು ಕಾಂಗ್ರೆಸ್ ರೂಪಿಸಿತು.

1948 ರ ಕನಿಷ್ಠ ವೇತನ ಕಾಯ್ದೆ :
ಕೌಶಲ್ಯಭರಿತ ಮತ್ತು ಕೌಶಲ್ಯರಹಿತ ಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿ ಕಾಯ್ದೆಯನ್ನು ಜಾರಿಗೊಳಿಸಿದ್ದು.

1949 ರಲ್ಲಿ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಜಾರಿ :
ಭಾರತೀಯ ಬ್ಯಾಂಕಿಂಗ್ ಸಂಸ್ಥೆಗಳನ್ನು ನಿಯಂತ್ರಿಸಲು ಈ ಕಾಂಯ್ದೆಯನ್ನು ಕಾಂಗ್ರೆಸ್ ಜಾರಿಗೊಳಿಸಿತು.

1949 ಕರಾಚಿ ಒಪ್ಪಂದ :

ಯುದ್ಧಗಳು ನಡೆದು ಆಗಬಹುದಾದ ಹಿಂಸೆಯನ್ನು ತಪ್ಪಿಸಲು ಕಾಶ್ಮೀರದಲ್ಲಿ ಪಾಕಿಸ್ತಾನದ ಜೊತೆಗೆ ಕದನ ವಿರಾಮ ಒಪ್ಪಂದವನ್ನು ಮಾಡಿಕೊಳ್ಳಲಾಯಿತು.

1950 ರಲ್ಲಿ ಸಂವಿಧಾನವನ್ನು ಜಾರಿಗೊಳಿಸಿದ್ದು;
ಕಾಂಗ್ರೆಸ್ ಪಕ್ಷವು ಬಹುಕೋಟಿ ಜನಸಂಖ್ಯೆಯ ವೈವಿಧ್ಯಮಯ ಭಾರತದ ಪ್ರಾದೇಶಿಕ ಅಗತ್ಯಕ್ಕೆ ಅನುಸಾರವಾಗಿ ಸಂವಿಧಾನವನ್ನು ಜಾರಿಗೊಳಿಸಿತು.

1950 ರ ಜನ ಪ್ರತಿನಿಧೀಕರಣ ಕಾಯ್ದೆ
ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಚುನಾವಣೆಗಳಲ್ಲಿ ತಮ್ಮ ಚುನಾವಣಾ ಹಕ್ಕನ್ನು ಚಲಾಯಿಸಲು ಪೂರಕವಾದ ಕಾಯ್ದೆಯನ್ನು ರೂಪಿಸಲಾಯಿತು.

1951 ರ ಪಂಚ ವಾರ್ಷಿಕ ಯೋಜನೆಗಳು :
ಭಾರತದ ಅಭಿವೃದ್ಧಿಗೆ ಪೂರಕವಾಗಿ ನಿರ್ದಿಷ್ಟ ಕ್ಷೇತ್ರಾಭಿವೃದ್ಧಿಯ ಉದ್ದೇಶವನ್ನು ಇಟ್ಟುಕೊಂಡು ಈ ಯೋಜನೆಯ್ನನು ಜಾರಿಗೊಳಿಸಲಾಯಿತು.

1952 ರಲ್ಲಿ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ :
ಗ್ರಾಮೀಣ ಜನರ ಅಭಿವೃದ್ಧಿಗಾಗಿ ಈ ಕಾರ್ಯಕ್ರಮವನ್ನು ರೂಪಿಸಲಾಯಿತು.

1953 ಭಾರತೀಯ ಚಹಾ ಮಂಡಳಿಯ ಸ್ಥಾಪನೆ :
ಚಹಾ ಬೆಳೆಗಾರರಿಗೆ ಅನುಕೂಲ ಮಾಡುವ ದೃಷ್ಟಿಯಿಂದ 1953 ರಲ್ಲಿ ಚಹಾ ಕಾಯ್ದೆಯನ್ನು ಜಾರಿಗೊಳಿಸಲಾಯಿತು.

1954 ರ ವಿಶೇಷ ವಿವಾಹ ಕಾಯ್ದೆ:
ಧರ್ಮಾತೀತವಾಗಿ ವಿವಾಹ ನೊಂದಣಿಗಳಿಗೆ ಅರ್ಜಿ ಸೌಲಭ್ಯವನ್ನು ನೀಡಲಾಯಿತು.

1955 ರ ನಾಗರೀಕ ಕಾಯ್ದೆ :
ಭಾರತೀಯ ಪ್ರಜೆಗಳಿಗೆ ಅಧಿಕೃತ ಪೌರತ್ವವನ್ನು ನೀಡಿ ಅವರ ಅಸ್ತಿತ್ವವನ್ನು ಬಲಪಡಿಸಲಾಯಿತು.

1955 ರ ನಾಗರೀಕ ಹಕ್ಕುಗಳ ರಕ್ಷಣಾ ಕಾಯ್ದೆ :
ಅಸ್ಪೃಷ್ಯತೆ ಹಾಗೂ ಇನ್ನಿತರೆ ಮೇಲ್ಜಾತಿಯ ಶೋಷಣೆಗಳಲ್ಲಿ ಬಳಲಿದ್ದ ಜನರು ಮತ್ತು ಮಹಿಳೆಯರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಲು ನಾಗರೀಕ ಹಕ್ಕುಗಳ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಲಾಯಿತು.

1956 ರ ಕೈಗಾರಿಕಾ ನೀತಿ ಜಾರಿ:
ದೇಶದೊಳಗೆ ಶೀಘ್ರ ಆರ್ಥಿಕ ಅಭಿ

1956 ರಾಜ್ಯಗಳ ಮರುಜೋಡಣಾ ಕಾಯ್ದೆ:
ಭಾಷಾವಾರು ಪ್ರಾಂತ್ಯಗಳನ್ನು ವಿಂಗಡಿಸಿ ಅವುಗಳನ್ನು ಸಂವಿಧಾನದ ನೇರ ವ್ಯಾಪ್ತಿಗೆ ತರಲಾಯಿತು.

1957 ರ ಕಾಪಿರೈಟ್ ಕಾಯ್ದೆ:

ಎಲ್ಲಾ ಮೂಲ ಕಲೆ, ಸಾಹಿತ್ಯ, ಸಂಗೀತ ಹಾಗೂ ನಾಟಕ, ಸಿನಿಮಾ ಸಾಹಿತ್ಯ ಹಾಗೂ ಧ್ವನಿ ಮುದ್ರಣದ ಅಸಲೀ ಹಕ್ಕುಗಳನ್ನು ರಕ್ಷಿಸಲು ಈ ಕಾಯ್ದೆಯು ಜಾರಿಗೆ ಬಂದಿತು.

1958 ರ ಐತಿಹಾಸಿಕ ಕಟ್ಟಡಗಳ ಸಂರಕ್ಷಣಾ ಕಾಯ್ದೆ :
ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಐತಿಹಾಸಿಕ ಕಟ್ಟಡಗಳನ್ನು ರಕ್ಷಿಸಲು ಕಾಂಗ್ರೆಸ್ ಸರ್ಕಾರವು ಕಾಯ್ದೆಯನ್ನು ರೂಪಿಸಿತು.

1959 ರಲ್ಲಿ ಸ್ಟೇಟ್ ಬ್ಯಾಂಕುಗಳ ವಿಸ್ತರಣಾ ಕಾಯಿದೆ :
ಗ್ರಾಮೀಣ ಮಟ್ಟಕ್ಕೆ ಬ್ಯಾಂಕಿಂಗ್ ಸೌಲಭ್ಯ ದೊರೆಯಲು ಬ್ಯಾಂಕಿಂಗ್ ವಲಯವನ್ನು ವಿಸ್ತರಿಸಲಾಯಿತು.

1960 – ಪ್ರಾಣಿಗಳ ಮೇಲಿನ ಹಿಂಸಾ ನಿಷೇದ ಕಾಯಿದೆ :
ಪ್ರಾಣಿಗಳ ಮೇಲೆ ಅನಗತ್ಯವಾಗಿ ಮತ್ತು ಇತರೆ ಕಾರಣಗಳಿಗೆ ಮಾಡಲಾಗುವ ಹಿಂಸೆಯನ್ನು ತಪ್ಪಿಸಲು ಈ ಕಾಯ್ದೆಯನ್ನು ಜಾರಿಗೆ ತರಲಾಯಿತು.

1961 ವರದಕ್ಷಿಣೆ ನಿಷೇಧ ಕಾಯ್ದೆ:

ಮಹಿಳೆಯರ ಪಾಲಿಗೆ ಭೂತವಾಗಿ ಕಾಡುತ್ತಿದ್ದ ವರದಕ್ಷಿಣೆಯ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್ ಜಾರಿಗೊಳಿಸಿತು. ಇದೊಂದು ಐತಿಹಾಸಿಕ ಸಾಧನೆಯಾಗಿದೆ.

1962 ರ ಪರಮಾಣು ಶಕ್ತಿ ಕಾಯಿದೆ :
ಜನರ ಕಲ್ಯಾಣದ ದೃಷ್ಟಿಯಿಂದ ಪರಮಾಣು ಶಕ್ತಿಯನ್ನು ಪೂರೈಸುವ ಮತ್ತು ಅದನ್ನು ನಿಯಂತ್ರಿಸುವಂತಹ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.

1963 ರ ಅಧಿಕೃತ ಭಾಷೆಗಳ ಕಾಯಿದೆ :
ಅಧಿಕೃತವಾಗಿ ಕಚೇರಿ ಭಾಷಾ ಬಳಕೆಯ ಉದ್ದೇಶಕ್ಕಾಗಿ ಈ ಕಾಯ್ದೆಯನ್ನು ಜಾರಿಗೊಳಿಸಲಾಯಿತು.

1964 ರ ಫುಡ್ ಕಾರ್ಪೋರೇಷನ್ ಕಾಯ್ದೆ :
ಆಹಾರ ಮತ್ತು ಇತರೆ ಧಾನ್ಯಗಳ ವಾಣಿಜ್ಯದ ಉದ್ದೇಶಕ್ಕಾಗಿ ಈ ಕಾಯ್ದೆಯನ್ನು ಜಾರಿಗೊಳಿಸಲಾಯಿತ. ಈ ಕ್ರಮವು ವಾಣಿಜ್ಯ ಕೃಷಿ ಮಾರುಕಟ್ಟೆ ಬೆಳವಣಿಗೆಗೆ ನಾಂದಿಯಾಯಿತು.

1965 ಬೋನಸ್ ಪಾವತಿ ಕಾಯ್ದೆ :
ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ/ನೌಕರರಿಗೆ ಬೋನಸ್ ನೀಡಲು ಪೂರಕವಾಗುವಂತೆ ಈ ಕಾಯ್ದೆಯನ್ನು ರೂಪಿಸಲಾಯಿತು.

1966 ರಲ್ಲಿ ಪ್ರತ್ಯೇಕ ರಾಜ್ಯಗಳ ನಿರ್ಮಾಣ :
ಸುಗಮ ಆಡಳಿತ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಪಂಜಾಬ್, ಹರಿಯಾಣ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳನ್ನು ರಚಿಸಲಾಯಿತು.

1967 ರ ಹಸಿರು ಕ್ರಾಂತಿ :

ಆಹಾರ ಪೂರೈಕೆಯಲ್ಲಿ ತೀವ್ರ ಕೊರತೆ ಎದುರಿಸುತ್ತಿದ್ದ ಭಾರತವು ಈ ಕ್ರಮದಿಂದಾಗಿ ಕೃಷಿ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿತು.

1968 ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿ :

ಹಳೆಯ ಸಂಪ್ರದಾಯವಾದಿಗಳ ಪ್ರತಿರೋಧದ ನಡುವೆ ಎಲ್ಲರಿಗೂ ಶಿಕ್ಷಣವನ್ನು ನೀಡಲು ಮತ್ತು ವಿಶೇಷವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಈ ಕಾಯ್ದೆಯನ್ನು ಜಾರಿಗೊಳಿಸಲಾಯಿತು.

1969 ರ ಜನನ ಹಾಗೂ ಮರಣ ನೊಂದಣಿ ಕಾಯಿದೆ :

ಆಡಳಿತಾತ್ಮಕ ಉದ್ದೇಶದಿಂದ ಜನನ ಹಾಗೂ ಮರಣದ ನೊಂದಣಿ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲು ಕಾಯ್ದೆಯನ್ನು ರೂಪಿಸಲಾಯಿತು.

1970 ರ ಶ್ವೇತ ಕ್ರಾಂತಿ :
ಗ್ರಾಮೀಣ ಮಟ್ಟದಲ್ಲಿ ಹಾಲು ಉತ್ಪಾದನೆ ಮಾಡಿ ಅದನ್ನು ನಗರಗಳಿಗೂ ಪೂರೈಸುವ ನಿಟ್ಟಿನಲ್ಲಿ ಶ್ವೇತ ಕ್ರಾಂತಿಯನ್ನು ಆರಂಭಿಸಲಾಯಿತು.

1972-73 ರ ನೀರಿನ ಪೂರೈಕೆ ಕಾಯಿದೆ :
ಗ್ರಾಮೀಣ ಮಟ್ಟದಲ್ಲಿ ಸಮರ್ಪಕವಾಗಿ ನೀರನ್ನು ಪೂರೈಸಲು ಈ ಕಾಯ್ದೆಯನ್ನು ಜಾರಿಗೊಳಿಸಲಾಯಿತು.

1973 ರಲ್ಲಿ ಹೋಮಿಯೋಪತಿ ಕೇಂದ್ರ ಸಮಿತಿಯ ರಚನೆ :
ಭಾರತದಲ್ಲಿ ಹೋಮಿಯೋಪತಿ ಶಿಕ್ಷಣವನ್ನು ನಿಯಂತ್ರಿಸಲು ಈ ಕಾಯ್ದೆಯನ್ನು ಜಾರಿಗೊಳಿಸಲಾಯಿತು

1974 ರ ಮೊದಲ ಅಣು ಪರೀಕ್ಷೆ :

ಅಣುಬಾಂಬ್ ಪರೀಕ್ಷೆಯನ್ನು ಪೋಕ್ರಾನ್ ನಲ್ಲಿ ಮೊದಲ ಬಾರಿಗೆ ಮಾಡಲಾಯಿತು.

1975 ರ 20 ಅಂಶಗಳ ಕಾರ್ಯಕ್ರಮ :
ಶೋಷಿತರು ಮತ್ತು ದುರ್ಬಲರ ಏಳಿಗೆಗಾಗಿ ಮತ್ತು ಗುಣಮಟ್ಟದ ಜೀವನವನ್ನು ಕಲ್ಪಿಸಲು ಹಲವು ಯೋಜನೆಗಳನ್ನು ಜಾರಿಗೊಳಿಸಲಾಯಿತು.

1976 ರಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರದ ಸ್ಥಾಪನೆ :
ಸುಸ್ಥಿರ ಅಭಿವೃದ್ಧಿಗಾಗಿ ಡಿಜಿಟಲ್ ಅವಕಾಶಗಳನ್ನು ಸೃಷ್ಟಿಸಲು ಕ್ರಮವನ್ನು ಕೈಗೊಳ್ಳಲಾಯಿತು

1976 ರ ಜೀತ ಪದ್ದತಿ ನಿಷೇಧ :
ಸಮಾಜದಲ್ಲಿ ಅನಿಷ್ಠ ಪದ್ದತಿಯಾಗಿ ಬೆಳೆಯುತ್ತಿದ್ದ ದೈಹಿಕ ಮತ್ತು ಮಾನಸಿಕ ಶೋಷಣೆಯ ಜೀತ ಪದ್ದತಿಯನ್ನು ನಿಷೇಧಿಸಿ ಲಕ್ಷಾಂತರ ಜನರ ಮುಖದಲ್ಲಿ ನೆಮ್ಮದಿಯನ್ನು ತರುವ ಕೆಲಸವನ್ನು ಮಾಡಲಾಯಿತು.

1977 ರ ನೀರು ಮತ್ತು ಮಾಲೀನ್ಯ ಸಂರಕ್ಷಣಾ ಕಾಯಿದೆ :
ನೀರಿನ ಸಂರಕ್ಷಣೆ ಮತ್ತು ಕೊಳಚೆ ನೀರಿನ್ನು ನಿರ್ವಹಿಸಲು ಈ ಕಾಯಿದೆಯನ್ನು ಜಾರಿಗೊಳಿಸಲಾಯಿತು.

1978 ರ ಮಾಧ್ಯಮ ಸಮಿತಿ ಕಾಯ್ದೆ :
ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸಿ ಮಾಧ್ಯಮದ ಪ್ರಮಾಣೀಕೃತ ಗುಣಮಟ್ಟವನ್ನು ಹೆಚ್ಚಿಸಲು ಪೂರಕವಾಗಿ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು.

1980 ರ ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ :
ಬಡತನ ರೇಖೆಗಿಂತ ಕೆಳಗಿರುವವರಿಗೆ ಅನುಕೂಲ ಮಾಡಲು ಈ ಕಾಯ್ದೆ ಜಾರಿಗೆ ಬಂತು.

1981 ವಾಯು ಮಾಲೀನ್ಯ ನಿಯಂತ್ರಣ ಕಾಯಿದೆ :
ಕೈಗಾರಿಕೆ ಮತ್ತು ಇತರೆ ಸಂಗತಿಗಳಿಂದ ಉಂಟಾಗುತ್ತಿದ್ದ ವಾಯು ಮಾಲೀನ್ಯವನ್ನು ತಪ್ಪಿಸಲು ಈ ಕಾಯ್ದೆಯನ್ನು ಜಾರಿಗೊಳಿಸಿ ನಿಯಂತ್ರಣಾ ಕ್ರಮಗಳನ್ನು ಗೊತ್ತುಪಡಿಸಲಾಯಿತು.

1982 ರ ಹೈಜಾಕಿಂಗ್ ವಿರೋದಿ ಕಾಯ್ದೆ:
ನಮ್ಮ ವಿಮಾನಗಳನ್ನು ಅನಧಿಕೃತವಾಗಿ ನಿಯಂತ್ರಿಸುವುದರ ವಿರುದ್ಧ ಕಾಯ್ದೆಯನ್ನು ರೂಪಿಸಲಾಯಿತು.

1983 ರ ಗ್ರಾಮೀಣ ಭೂ ರಹಿತರಿಗೆ ಉದ್ಯೋಗ ಖಾತ್ರಿ ಯೋಜನೆ :
ಭೂ ರಹಿತ ಕಾರ್ಮಿಕರಿಗೆ ಕನಿಷ್ಠ 100 ದಿನಗಳ ಕಾಲ ಉದ್ಯೋಗವನ್ನು ಖಾತ್ರಿಪಡಿಸುವಂತಹ ಯೋಜನೆಯನ್ನು ಜಾರಿಗೊಳಿಸಲಾಯಿತು.

1983 ರ ಸಮಗ್ರ ಮಿಸೈಲ್ ಅಭಿವೃದ್ಧಿ ಕಾರ್ಯಕ್ರಮ :
ಮಿಸೈಲ್ ತಂತ್ರಜ್ಞಾನದಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಅಬ್ದುಲ್ ಕಲಾಂ ಅವರ ನೇತೃತ್ವದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಯಿತು.

1984 ರ ಕೌಟುಂಬಿಕ ನ್ಯಾಯಾಲಯಗಳ ಕಾಯ್ದೆ :
ವಿವಾಹ ಹಾಗೂ ಇನ್ನಿತರೆ ಕೌಟುಂಬಿಕ ಸಮಸ್ಯೆಗಳನ್ನು ನಿರ್ವಹಿಸುವದಕ್ಕೆ ಪೂರಕವಾಗಿ ಈ ಕಾಯ್ದೆಯನ್ನು ಜಾರಿಗೊಳಿಸಲಾಯಿತು.

1984 ರ ಟಿಲಿಕಾಂ ಕಾಯ್ದೆ :
ಭಾರತದಲ್ಲಿ ದೂರವಾಣಿ ಕ್ರಾಂತಿಯನ್ನು ಸಾಧಿಸುವ ನಿಟ್ಟಿನಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸಲಾಯಿತು.

1985 ರ ಸಮಗ್ರ ಬೆಳೆ ವಿಮಾ ಯೋಜನೆ :
ಪ್ರಕೃತಿ ವಿಕೋಪದಿಂದ ನಾಶ ಹೊಂದುವ ರೈತರ ಬೆಳೆಗಳಿಗೆ ಸಾಂತ್ವನವನ್ನು ಒದಗಿಸಲು ಈ ಯೋಜನೆಯನ್ನು ಕೈಗೊಳ್ಳಲಾಯಿತು.

1985 ರ ಪಕ್ಷಾಂತರ ವಿರೋಧಿ ಕಾಯ್ದೆ :
ಒಂದು ಪಕ್ಷದಿಂದ ಚುನಾಯಿತರಾಗಿ ಇನ್ನೊಂದು ಪಕ್ಷಕ್ಕೆ ಹೋಗುವ ಪ್ರತಿನಿಧಿಗಳನ್ನು ಪಕ್ಷದಿಂದ ಅನರ್ಹಗೊಳಿಸುವ ಕಾಯ್ದೆ ಇದಾಗಿದೆ.

1986 ರ ಕುಡಿಯುವ ನೀರು ಮಿಷನ್ ಸ್ಥಾಪನೆ :
ಕಡಿಮೆ ವೆಚ್ಚದಲ್ಲಿ ಗ್ರಾಮಗಳಿಗೆ ಕುಡಿಯುವ ನೀರಿನ ಪೂರೈಕೆಯನ್ನು ಮಾಡುವ ವ್ಯವಸ್ಥೆಗೆ ಪೂರಕವಾಗಿ ಕ್ರಮವನ್ನು ಕೈಗೊಳ್ಳಲಾಯಿತು.

1987 ರ ರಾಷ್ಟ್ರೀಯ ಬಾಲ ಕಾರ್ಮಿಕರ ನೀತಿಯ ಜಾರಿ :
ಬಾಲ ಕಾರ್ಮಿಕರನ್ನು ನಿಷೇಧಿಸಿ ಅವರನ್ನು ಮತ್ತೆ ಶಿಕ್ಷಣ ಪಡೆಯಲು ಸಾಧ್ಯವಾಗುವಂತೆ ಮಾಡುವ ಕಾಯ್ದೆ ಇದಾಗಿದೆ.

1988 ರ ಭ್ರಷ್ಟಾಚಾರ ತಡೆ ಕಾಯ್ದೆ :
ಸರ್ಕಾರೀ ಕಚೇರಿ ಹಾಗೂ ಇನ್ನಿತರೆ ಕಡೆಗಳಲ್ಲಿ ಭ್ರಷ್ಟಾಚಾರವನ್ನು ತಪ್ಪಿಸಲು ಜಾರಿಗೆ ತಂದ ಈ ಕಾಯ್ದೆ ಐತಿಹಾಸಿಕ ಮಹತ್ವವನ್ನು ಹೊಂದಿದೆ.

Image result for sc st act 1989
1989 ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆ :
ದಲಿತರ ಮೇಲಿನ ಹಲ್ಲೆ ಹಾಗೂ ನಿಂದನೆಗಳನ್ನು ತಪ್ಪಿಸಲು ಈ ಕಾಯ್ದೆಯನ್ನು ಕಾಂಗ್ರೆಸ್ ಜಾರಿಗಳಿಸಿತು. ಬಹುಶಃ ಇದು ಇಂದಿಗೂ ದಲಿತರ ಪಾಲಿನ ಸಂಜೀವಿನಿಯೇ ಆಗಿದೆ.

1991 ರ ಆರ್ಥಿಕ ಉದಾರೀಕರಣ :
ಭಾರತದ ಮುಕ್ತ ಆರ್ಥಿಕತೆಯು ತೆರೆದುಕೊಳ್ಳಲು ಇದು ಪೂರಕವಾಗಿ ಕೆಲಸ ಮಾಡಿತು.

1991 ರ ಪೂರ್ವೋತ್ತರ ನೀತಿ :
ಆರ್ಥಿಕ ಮತ್ತು ರಾಜ ತಾಂತ್ರಿಕತೆಯ ಸಂಬಂಧಗಳನ್ನು ಹೆಚ್ಚಿಸಲು ಪೂರಕವಾಗಿ ಈ ನೀತಿಯು ಜಾರಿಗೆ ಬಂದಿತು.

1991 ರ ಹೊಸ ಕೈಗಾರಿಕಾ ನೀತಿ :

ಕೈಗಾರಿಕಾ ಕ್ಷಮತೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಹೆಚ್ಚಿಸಲು ಪೂರಕವಾಗಿ ಈ ಯೋಜನೆ ರೂಪುಗೊಂಡಿತು.

1992 ರ ಗ್ರಾಮ ಪಂಚಾಯತಿಗಳ ರಚನೆ
ಅಧಿಕಾರ ವಿಕೇಂದ್ರೀಕರಣಕ್ಕೆ ಪೂರಕವಾಗಿ ಈ ಮಹತ್ವದ ಯೋಜನೆಯನ್ನು ರೂಪಿಸಲಾಯಿತು.

1992 ರ ಭಾರತೀಯ ಭದ್ರತಾ ಹಾಗೂ ವಿನಿಮಯ ಮಂಡಳಿ ಕಾಯ್ದೆ :

ಹೂಡಿಕೆದಾರರ ಹಿತವನ್ನು ಕಾಪಾಡಲು ಈ ಕಾಯ್ದೆಯನ್ನು ಜಾರಿಗೊಳಿಸಲಾಯಿತು.
1993 ರ ಸಂಸದರ ಸ್ಥಳೀಯ ಅಭಿವೃದ್ಧಿ ಕಾಯ್ದೆ
ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ನೆರವಾಗಲು ಪೂರಕವಾಗಿ ಈ ಕಾಯ್ದೆಯನ್ನು ರೂಪಿಸಲಾಗಿದೆ.

1993 ರ ಮಹಿಳಾ ಸಮೃದ್ಧಿ ಯೋಜನಾ :
ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ಸುಭದ್ರತೆಯನ್ನು ಒದಗಿಸಲು ಈ ಯೋಜನೆಯನ್ನು ರೂಪಿಸಲಾಯಿತು.

1994 ಪ್ರಸವ ಪೂರ್ವ ಹಾಗೂ ಪ್ರಸವದ ನಂತರದ ಚಿಕಿತ್ಸಾ ಕಾಯ್ದೆ :
ಕುಸಿದಿದ್ದ ಲಿಂಗಾನುಪತವನ್ನು ಅಭಿವೃದ್ಧಿ ಪಡಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಯಿತು.

1995 ರ ಅಕ್ಷರ ದಾಸೋಹ ಯೋಜನೆ :
ಮಕ್ಕಳಲ್ಲಿ ಪೌಷ್ಠಿಕಾಂಶವನ್ನು ಮತ್ತು ಹಾಜರಾತಿಯನ್ನು ಹೆಚ್ಚಿಸುವ ಸಲುವಾಗಿ ಶಾಲೆಗಳಲ್ಲಿ ಬಿಸಿಯೂಟದ ಯೋಜನೆಯನ್ನು ಜಾರಿಗೊಳಿಸಲಾಯಿತು.

1995 ರ ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮ :
ಎಲ್ಲರಿಗೂ ಕನಿಷ್ಠ ಸಾಮಾಜಿಕ ಸಹಾಯವು ದೊರೆಯುವಂತೆ ಈ ಕಾರ್ಯಕ್ರಮವನ್ನು ರೂಪಿಸಲಾಯಿತು.

2004 ರ ಕಸ್ತೂರ ಬಾ ಗಾಂಧಿ ಬಾಲಿಕಾ ವಿದ್ಯಾಲಯ ಸ್ಥಾಪನೆ :

ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಪ್ರಾಥಮಿಕ ಶಾಲೆಗಳನ್ನು ತೆರೆಯಲಾಯಿತು.

2005 ರಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಕೇಂದ್ರಗಳ ಸ್ಥಾಪನೆ :

ಗುಣಮಟ್ಟದ ಮತ್ತು ಕಡಿಮೆ ವೆಚ್ಚದ ಆರೋಗ್ಯ ಸೌಲಭ್ಯಗಳನ್ನು ನೀಡಲು ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಯಿತು.

2005 ರಲ್ಲಿ ಜನನಿ ಸುರಕ್ಷಾ ಯೋಜನೆ ಜಾರಿ :

ಪ್ರಸವ ಪೂರ್ವ ಹಾಗೂ ಪ್ರಸವದ ನಂತರದ ಶಿಶು ಮರಣವನ್ನು ತಪ್ಪಿಸಲು ಈ ಕ್ರಮವನ್ನು ಕೈಗೊಳ್ಳಲಾಯಿತು.

2005 ರ ಭಾರತ್ ನಿರ್ಮಾಣ ಯೋಜನೆ :

ಗ್ರಾಮೀಣ ಮಟ್ಟದಲ್ಲಿ ಮೂಲ ಸೌಕರ್ಯ ಹಾಗೂ ಕುಡಿಯುವ ನೀರು, ವಿದ್ಯುತ್ ಮತ್ತು ಇನ್ನಿತರೆ ಸೌಲಭ್ಯಗಳ್ನು ಕಲ್ಪಿಸಲು ಈ ಯೋಜನೆಯನ್ನು ಕೈಗೊಳ್ಳಲಾಯಿತು.

2005 ರಲ್ಲಿ ರಾಜೀವ್ ಗಾಂಧೀ ಗ್ರಾಮೀಣ ವಿದ್ಯುತ್ ಯೋಜನೆ :

ಗ್ರಾಮೀಣದ ಮಟ್ಟದ ಮನೆಗಳಿಗೆ ವಿದ್ಯುತ್ ಪೂರೈಕೆಗಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಯಿತು.

2005 ರಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿ :

ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಮಾಹಿತಿ ಹಕ್ಕನ್ನು ಕಾಂಗ್ರೆಸ್ ಜಾರಿಗೊಳಿಸಿತು. ಇದೊಂದು ಐತಿಹಾಸಿಕ ಯೋಜನೆಯಾಗಿದೆ.

2005 ಮಹಿಳೆಯರ ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯ್ದೆ :

ಮಹಿಳೆಯರ ಮೆಲೆ ಕೌಟುಂಬಿಕವಾಗಿ ನಡೆಯುತ್ತಿದ್ದ ದೌರ್ಜನ್ಯಗಳನ್ನು ತಪ್ಪಿಸಲು ಈ ಕಾಯ್ದೆ ನೆರವಾಯಿತು.

2005 ರಲ್ಲಿ ವಿಶೇಷ ಆರ್ಥಿಕ ವಲಯಗಳ ಸ್ಥಾಪನೆ :

ಭಾರತದಲ್ಲಿ ರಫ್ತನ್ನು ಉತ್ತೇಜಿಸುವುದಕ್ಕಾಗಿ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಯಿತು.

2005-06 ರಲ್ಲಿ ರಾಜೀವ್ ಗಾಂಧಿ ಶಿಷ್ಯ ವೇತನ ಯೋಜನೆಗೆ ಚಾಲನೆ :

ಕೆಳವರ್ಗದವರಿಗೆ ಸಂಶೋಧನೆ ಮತ್ತು ಉನ್ನತ ವ್ಯಾಸಂಗ ಮಾಡಲು ನೆರವಾಗುವಂತೆ ಅವರಿಗೆ ಈ ಯೋಜನೆಯಡಿ ಧನ ಸಹಾಯದ ಸೌಲಭ್ಯ ಕಲ್ಪಿಸಲಾಯಿತು.

2006 ರ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ :

ಪ್ರತಿ ಕುಟುಂಬದ ಸದಸ್ಯರಿಗೆ ಕನಿಷ್ಠ 100 ದಿನಗಳ ಉದ್ಯೋಗವನ್ನು ಒದಗಿಸುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಕಾಂಗ್ರೆಸ್ ಸರ್ಕಾರವು ಚಾಲನೆ ನೀಡಿತು.

2006 ರಲ್ಲಿ ರಾಷ್ಟ್ರಿಯ ಪರಿಸರ ನೀತಿಯ ಜಾರಿ :

ಸ್ವಚ್ಛ ಹಾಗೂ ಆರೋಗ್ಯಕರ ಪರಿಸರಕ್ಕಾಗಿ ರಾಷ್ಟ್ರಿಯ ಪರಿಸರ ನೀತಿಯನ್ನು ಕಾಂಗ್ರೆಸ್ ಜಾರಿಗೊಳಿಸಿತು.

2006-07 ರಲ್ಲಿ ಬಾಲ್ಯ ವಿವಾಹ ಕಾಯ್ದೆಯ ನಿಷೇಧ :

ಮಕ್ಕಳನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿಸುವ ಈ ಅನಿಷ್ಠ ಪದ್ಧತಿಯನ್ನು ಇವರು ನಿಷೇಧಿಸಿದರು.

2007 ರಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ :

ರೈತರ ಬೇಡಿಕೆಗಳಿಗೆ ಅನುಸಾರವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಯಿತು.

2008 ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ಸ್ಥಾಪನೆ (ಎನ್ ಐಎ) :

ಭಯೋತ್ಪಾದನೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸಲಾಯಿತು.

2008 ರಲ್ಲಿ ಭಾರತ – ಅಮೇರಿಕಾ ಅಣು ಒಪ್ಪಂದ :

ಸೌಹಾರ್ದತೆಯ ದೃಷ್ಟಿಯಲ್ಲಿ ಅಮೇರಿಕದೊಂದಿಗೆ ನಾಗರೀಕ ಅಣು ಒಪ್ಪಂದವನ್ನು ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿಕೊಂಡಿತು.

2009 ರ ಶಿಕ್ಷಣ ಹಕ್ಕು ಕಾಯ್ದೆ :

6 ರಿಂದ 14 ವರ್ಷದ ಎಲ್ಲಾ ಮಕ್ಕಳಿಗೆ ಮೂಲಭೂತವಾಗಿ ಅಗತ್ಯವಾದ ಶಿಕ್ಷಣವು ದೊರೆಯಲು ಈ ಕಾಯ್ದೆಯನ್ನು ರೂಪಿಸಲಾಯಿತು.

2009 ರಲ್ಲಿ ಆಧಾರ್ ಕಾರ್ಡ್ ಪರಿಚಯ :

ಎಲ್ಲರಿಗೂ ವಿಭಿನ್ನವಾದ ಗುರುತಿನ ಸಂಖ್ಯೆ ನೀಡುವ ಉದ್ದೇಶದಿಂದ ಈ ಸೌಲಭ್ಯವನ್ನು ಪರಿಚಯಿಸಲಾಯಿತು.

2009 ರ ಕೇಂದ್ರೀಯ ವಿಶ್ವವಿದ್ಯಾಲಯಗಳ ಕಾಯ್ದೆ :

ಎಲ್ಲಾ ರಾಜ್ಯಗಳಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಆ ಮೂಲಕ ಶೈಕ್ಷಣಿಕ ಪ್ರಗತಿಯನ್ನು ಹೊಂದುವ ಉದ್ದೇಶಕ್ಕಾಗಿ ಈ ಯೋಜನೆಯನ್ನು ಕಾಂಗ್ರೆಸ್ ಜಾರಿಗೊಳಿಸಿತು.

2009 ರಲ್ಲಿ ಅಲ್ಪಸಂಖ್ಯಾತರಿಗೆ ಫೆಲೋಷಿಪ್ ಯೋಜನೆ :

ಅಲ್ಪಸಂಖ್ಯಾತ ಬಡ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಾಂಗಕ್ಕೆ ಅನುಕೂಲವಾಗುವಂತೆ ಮೌಲಾನ ಅಬ್ದುಲ್ ಕಲಾಂ ಆಜಾದ್ ಫೆಲೋಷಿಪ್ ಅನ್ನು ಕಾಂಗ್ರೆಸ್ ಜಾರಿಗೊಳಿಸಿತು.

2010 ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಲಯ ಕಾಯ್ದೆ :

ಪರಿಸರ ಹಾಗೂ ಹಸಿರು ಸಂರಕ್ಷಣೆಗಾಗಿ ಈ ಕಾಯ್ದೆಯನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಜಾರಿಗೊಳಿಸಿತು.

2012 ರಲ್ಲಿ ಸಣ್ಣ ಮತ್ತು ಮಾಧ್ಯಮ ಉದ್ಯಮಗಳಿಗೆ ಪ್ರೊಕ್ಯೂರ್ ಮೆಂಟ್ ನೀತಿ ಘೋಷಣೆ:

ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳನ್ನು ಉತ್ತೇಜಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಯಿತು.

2013 ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಜಾರಿ:

ಬಡವರ್ಗದ ಎಲ್ಲಾ ಸಾರ್ವಜನಿಕರಿಗೂ ಸಮಾನವಾಗಿ ಮತ್ತು ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸುವ ಮತ್ತು ಆ ಮೂಲಕ ಹಸಿವು ಮುಕ್ತ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಕಾಂಗ್ರೆಸ್ ರೂಪಿಸಿತು.

2013 ರ ನಿರ್ಭಯಾ ಕಾಯ್ದೆ :

ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ತಪ್ಪಿಸಲು ಮತ್ತು ಕಠಿಣ ಕ್ರಮಗಳನ್ನು ಜರುಗಿಸಲು ಈ ಕಾರ್ಯಕ್ರಮವನ್ನು ಕಾಂಗ್ರೆಸ್ ರೂಪಿಸಿತು.

2013 ರ ಔದ್ಯೋಗಿಕ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯ ಜಾರಿ :

ಔದ್ಯೋಗಿಕವಾಗಿ ಮಹಿಳೆಯರಿಗೆ ರಕ್ಷಣೆ ನೀಡಿ ಅವರಲ್ಲಿ ವಿಶ್ವಾಸ ತುಂಬಲು ಈ ಯೋಜನೆಯನ್ನು ರೂಪಿಸಲಾಯಿತು.

2013 ರಲ್ಲಿ ಲೋಕ್ ಪಾಲ್ ಬಿಲ್ ಜಾರಿ :

ಭ್ರಷ್ಟಾಚಾರವನ್ನು ತಡೆಗಟ್ಟುವ ಸಲುವಾಗಿ ಲೋಕ್ ಪಾಲ್ ಬಿಲ್ ಅನ್ನು ಕಾಂಗ್ರೆಸ್ ಜಾರಿಗೊಳಿಸಿತು.

2013 ರ ಭೂ ಕಬಳಿಕೆ ಕಾಯ್ದೆ :

ಭೂ ರಹಿತರಿಗೆ ಭೂಮಿ ದೊರೆಯಲು ಪೂರಕವಾಗುವಂತೆ ಈ ಕಾಯ್ದೆಯನ್ನು ಜಾರಿಗೊಳಿಸಲಾಯಿತು.

2013 ರ ಕಂಪನಿ ಕಾಯ್ದೆ :

ಕಾರ್ಪೋರೇಟ್ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸಲು ಈ ಕಾರ್ಯಕ್ರಮವನ್ನು ರೂಪಿಸಲಾಯಿತು.

2014 ರಲ್ಲಿ ಬೀದಿ ವ್ಯಾಪಾರಿಗಳ ಕಾಯ್ದೆ :
ಬೀದಿ ಬದಿ ವ್ಯಾಪಾರಿಗಳ ಹಿತ ರಕ್ಷಣೆಯನ್ನು ಮಾಡಲು ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಯಿತು.

ಇದಿಷ್ಟೇ ಅಲ್ಲದೇ ಭಾರತ ನಿರ್ಮಾಣಕ್ಕೆ ಪೂರಕವಾದ ಏಮ್ಸ್, ಐಐಟಿ, ಐಐಎಂ, ಹಾಗೂ ರಾಷ್ಟ್ರೀಯ ತಾಂತ್ರಿಕ ವಿದ್ಯಾಲಯಗಳು, ಬಡ ಮಕ್ಕಳಿಗೆ ನವೋದಯ ವಿದ್ಯಾಲಯ, ಹಾಗೂ ಹೆಮ್ಮೆಯ ಇಸ್ರೋ, ಮತ್ತು ಇನ್ನೂ ಅನೇಕ ರೀತಿಯ ಸಂಸ್ಥೆಗಳನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದು ಇವೆಲ್ಲವೂ ಸಧೃಡ ಭಾರತದ ನಿರ್ಮಾಣಕ್ಕೆ ಪೂರಕವಾದ ಅಂಶವಾಗಿದೆ.

Advertisement
Advertisement
Recent Posts
Advertisement