Advertisement

ವಿಶ್ವದ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಬಲ್ಲ ಶಕ್ತಿ ಕಾರ್ಟೂನುಗಳಿಗಿದೆ.

Advertisement

"ಹತ್ತಾರು ಪುಟಗಳಲ್ಲಿ ವಿವರಿಸಬಹುದಾದ ಇಡೀ ವ್ಯವಸ್ಥೆಯ ಹುಳುಕನ್ನು, ಕಾರ್ಟೂನುಗಳು ಕೇವಲ ಒಂದು ವಾಕ್ಯದಲ್ಲಿ ಹೇಳುತ್ತದೆ. ಕಾರ್ಟೂನುಗಳಿಗೆ ಅಂತಹ ಅಧ್ಬುತವಾದ ಶಕ್ತಿಯಿದೆ. ಬಹು ಹಿಂದಿನಿಂದಲೂ, ಪ್ರಪಂಚದಾದ್ಯಂತ ಕಾರ್ಟೂನಿಷ್ಠರು ಆಯಾಯ ದೇಶಗಳ, ಆಯಾಯ ಕಾಲದ ರಾಜಕೀಯ, ಸಾಮಾಜಿಕ ಸ್ಥಿತಿಗತಿಗಳನ್ನು ತಿದ್ದಿತೀಡುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕುಂದಾಪುರದ ವ್ಯಂಗ್ಯಚಿತ್ರಕಾರರ ಬಳಗ ಕಳೆದ ಒಂಭತ್ತು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಕಾರ್ಟೂನು ಹಬ್ಬವು ವಿರಳವಾಗುತ್ತಿರುವ ಕಾರ್ಟೂನು ಕಲೆಯನ್ನು ಇಂದಿನ ವಿಧ್ಯಾರ್ಥಿಗಳಲ್ಲಿ, ಯುವಜನರಲ್ಲಿ ಮತ್ತೆ ಚಿಗುರಿಸುವ ಅಪೂರ್ವವಾದ ಕೆಲಸವನ್ನು ಮಾಡುತ್ತಿದೆ" ಎಂದು ನಿವೃತ್ತ ಪ್ರಾಂಶುಪಾಲ, ಚಿಂತಕ ಡಾ. ಮೊಳಹಳ್ಳಿ ದಿನೇಶ್ ಹೆಗ್ಡೆ ಹೇಳಿದ್ದಾರೆ.

ಅವರು ಬುಧವಾರ ಕುಂದಾಪುರದ ಕಲಾಮಂದಿರದಲ್ಲಿ ನಡೆದ ಒಂಭತ್ತನೆಯ ವರ್ಷದ ಕಾರ್ಟೂನು ಹಬ್ಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಟೂನು ಪ್ರದರ್ಶನ, ವಿಧ್ಯಾರ್ಥಿಗಳಿಗಾಗಿ ಕಾರ್ಟೂನು ಸ್ಪರ್ದೆ ಮುಂತಾದ ಕಾರ್ಯಕ್ರಮಗಳನ್ನು ಒಳಗೊಂಡ ಕಾರ್ಟೂನು ಹಬ್ಬವು ಈ ವರ್ಷ ಸತತ ಐದು ದಿನಗಳ ಕಾಲ ನಡೆಯಲಿದೆ. ಈ ಕಾರ್ಯಕ್ರಮದ ಸಮಾರೋಪ ಸಮಾರಂಭವು ನವೆಂಬರ್ 27ರಂದು ನಡೆಯಲಿದೆ.

ಈ ಐದೂ ದಿನಗಳ ಕಾಲ ವ್ಯಂಗ್ಯಚಿತ್ರಕಾರರುಗಳಾದ ಸತೀಶ್ ಆಚಾರ್ಯ, ಪಂಜು ಗಂಗೊಳ್ಳಿ, ಚಂದ್ರಶೇಖರ ಶೆಟ್ಟಿ, ಕೇಶವ ಸಸಿಹಿತ್ಲು, ಜಿ.ಬಿ ಕಲೈಕಾರ್, ಚಂದ್ರ ಗಂಗೊಳ್ಳಿ, ಜಯರಾಂ ಉಡುಪ, ರವಿರಾಜ ಹಾಲಂಬಿ, ಮೇಗರವಳ್ಳಿ ಸುಬ್ರಹ್ಮಣ್ಯ ಮುಂತಾದವರ ಕಾರ್ಟೂನುಗಳ ಪ್ರದರ್ಶನ ನಡೆಯಲಿದೆ.

ಈ ಸಂಧರ್ಭದಲ್ಲಿ ಕಾಂತಾರ ಸಿನೇಮಾದ ನಿರ್ಮಾಪಕ‌ ಕಾರ್ತಿಕ್ ಗೌಡ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಕಾರ್ಯಕ್ರಮದ ನಂತರ ಸಂವಾದ ಕಾರ್ಯಕ್ರಮ ನಡೆಯಿತು. ಸಾರ್ವಜನಿಕರು ಮತ್ತು ಭಂಡಾರ್‌ಕಾರ್ಸ್ ಮುಂತಾದ ಕಾಲೇಜುಗಳ ಪತ್ರಿಕೋಧ್ಯಮ ವಿಭಾಗದ ವಿಧ್ಯಾರ್ಥಿಗಳು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಇದೇ ಸಂಧರ್ಭದಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಇವರು ಕೊರೋನಾ ಕಾಲಘಟ್ಟದಲ್ಲಿ ರಚಿಸಿದ ಕಾರ್ಟೂನುಗಳ ಸಂಗ್ರಹದ ಪುಸ್ತಕ "ಗೋ ಕೊರೋನಾ ಗೋ- 2" ಪುಸ್ತಕವನ್ನು ಮತ್ತೊಬ್ಬ ಖ್ಯಾತ ವ್ಯಂಗ್ಯಚಿತ್ರಕಾರ, ತರಂಗ ಪತ್ರಿಕೆಯ ಜೇಮ್ಸ್ ವಾಜ್ ರವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕವಿ, ಬರಹಗಾರ ಹಾಗೂ ಸಾಮಾಜಿಕ ಚಿಂತಕ ಕೆಂಚನೂರು ಶಂಕರ, ರಾಷ್ಟ್ರಪ್ರಶಸ್ತಿ ವಿಜೇತ ಸಿನೇಮಾ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ, ಉಧ್ಯಮಿ ಹಾಗೂ ಪತ್ರಕರ್ತ ವಿನಯ ಪಾಯಸ್ ಕಾರ್ಟೂನು ಹಬ್ಬ ತಂಡಕ್ಕೆ ಶುಭ ಹಾರೈಸಿದರು.

ಈ ಸಂಧರ್ಭದಲ್ಲಿ ವ್ಯಂಗ್ಯಚಿತ್ರಕಾರರುಗಳಾದ ಜೀವನ್ ಶೆಟ್ಟಿ, ರಾಮಕೃಷ್ಣ ಹೇರ್ಳೆ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement
Recent Posts
Advertisement