Advertisement

"ದೇಶಕ್ಕಾಗಿ ಆರೆಸ್ಸೆಸ್ ಬಿಟ್ಟೆ" ಪುಸ್ತಕ ವಿಮರ್ಶೆ

Advertisement

ಬರಹ: ಬಿ.ಎಲ್ ವೇಣು. ಹಿರಿಯ ಲೇಖಕರು.

ಖ್ಯಾತ ಸಾಹಿತಿ ಎಲ್.ಎನ್ ಮುಕುಂದರಾಜ್ ಬರೆದ ದೇಶಕ್ಕಾಗಿ ಆರ್ ಎಸ್ ಎಸ್ ಬಿಟ್ಟೆ ಎಂಬ ವೈಚಾರಿಕ ಪುಸ್ತಕವನ್ನು ಮಿತ್ರ ಆರ್.ಜಿ ಹಳ್ಳಿ ನಾಗರಾಜ್ ಕಳುಹಿಸಿದಾಗ, ಪುಸ್ತಕದ ಬಗ್ಗೆ ಈ ಮೊದಲೆ ಕೇಳಿ ಸಂತೋಷಪಟ್ಟಿದ್ದ ನಾನು ಕುತೂಹಲದಿಂದ ಓದಲಾರಂಭಿಸಿದೆ. ಇದಕ್ಕೂ ಮುನ್ನ ದೇವನೂರು ಬರೆದ "ಆರ್ ಎಸ್ ಎಸ್ ಆಳ ಮತ್ತು ಅಗಲ" ಪುಸ್ತಕವನ್ನೂ ಒಂದೇ ಗುಕ್ಕಿಗೆ ಓದಿ ಬಿಟ್ಟಿದ್ದೆ. ದೇವನೂರು ಆ ಪುಸ್ತಕದಲ್ಲಿ ವೈದಿಕಶಾಹಿಗಳ ಹಿಡನ್ ಅಜೆಂಡಾಗಳನ್ನು, ಕುತಂತ್ರಗಳನ್ನು ಬಟಾಬಯಲು ಮಾಡಿದ್ದರೆ, ಇಲ್ಲಿ ಮುಕುಂದರಾಜ್ ಇನ್ನೂ ಹೆಚ್ಚಿನ ವಾಸ್ತವಗಳನ್ನು ತೆರೆದಿಟ್ಟಿದ್ದಾರೆ.

"ದೇಶಕ್ಕಾಗಿ ಆರ್.ಎಸ್.ಎಸ್" ಎನ್ನುವವರ ನಡುವೆ, "ದೇಶಕ್ಕಾಗಿ ಆರ್ ಎಸ್ ಎಸ್ ಬಿಟ್ಟೆ" ಎನ್ನುವ ಇವರು ಸಂಘಿಗಳ ಸಹವಾಸದಲ್ಲಿದ್ದೇ ಅದರ ಕುತಂತ್ರ ಕುತ್ಸಿತ ಬುದ್ಧಿ ಕಂಡವರು. ಅದನ್ನೇ 60 ಪುಟಗಳ ತುಂಬಾ ತಾವು ಕಂಡುಂಡ ಸತ್ಯದರ್ಶನವನ್ನು ನಮಗೂ ಮಾಡಿಸಲು ಹೆಣಗಿದ್ದಾರೆ. ಇಡೀ ಪುಸ್ತಕ ಜೀವಪರವಾಗಿದ್ದು ಆರೆಸ್ಸೆಸ್ ನವರು ಹೇಗೆ ವಿಧಾನಸೌಧ ಹಾಗೂ ಪಾರ್ಲಿಮೆಂಟ್ ನ ಆಯಕಟ್ಟಿನ ಜಾಗದಲ್ಲಿದ್ದುಕೊಂಡು ಜನರ ತೆರಿಗೆ ಹಣ ನುಂಗುತ್ತಾ ಆರಾಮಾಗಿದ್ದಾರೆ. ಮೀಸಲಾತಿ ವಿರೋಧಿಸುತ್ತಿದ್ದವರೇ ಈಗ 10% ಮೀಸಲಾತಿ ಪಡೆದಿದ್ದಾರೆ. ಆಯ್ಕೆಯಾದ ಶಾಸಕ ಮಂತ್ರಿಗಳಿಗಿಂತ ಆರೆಸ್ಸೆಸ್ ತೆರೆಮರೆಯಲ್ಲಿ ಹೆಚ್ಚಿನ ಅವಕಾಶ ಅಧಿಕಾರ ಚಲಾಯಿಸುತ್ತಿದ್ದಾರೆಂಬುದನ್ನು ಹಾಗೂ ಮುಂದಿನ ದಿನಗಳಲ್ಲಿ ಬಾಬಾ ಸಾಹೇಬರ ಸಂವಿಧಾನವನ್ನು, ಪ್ರಜಾಪ್ರಭುತ್ವವನ್ನೂ ಏಕಕಾಲದಲ್ಲಿ ಧ್ವಂಸ ಮಾಡಲಿದ್ದಾರೆಂಬುದನ್ನು ಲೇಖಕರು ವಿವರಿಸಿದ್ದಾರೆ.

ಈ ಸಂಘಿಗಳು ದೇಶ ಭಕ್ತರಲ್ಲ, ದ್ವೇಷ ಭಕ್ತರು. ಜಾತಿ ಮತ ಧರ್ಮದ ಹೆಸರಿನಲ್ಲಿ ಜನಗಳ ನಡುವೆ ದ್ವೇಷ ಬಿತ್ತುತ್ತಿದ್ದಾರೆಂಬುದನ್ನು ಮನಗಾಣಿಸುತ್ತಾ ಲೇಖಕರು ಸಂಘಿಗಳಿಂದ ತಾವು ಆಚೆ ಬರಲು ಕಾರಣರಾದ ಹಿರಿಯ ಸಾಹಿತಿ ಕಿ.ರಂ.ರನ್ನು ನೆನೆಯುತ್ತಾರೆ. ಚಾಣಕ್ಯನ ತೆರಿಗೆ ನೀತಿಯಿಂದಾಗಿ ದೇವಸ್ಥಾನಗಳಲ್ಲಿ, ಅಗ್ರಹಾರಗಳಲ್ಲಿ ಹೇಗೆ ಚಿನ್ನಾಭರಣಗಳು ಸಾವಿರಾರು ವರ್ಷಗಳಿಂದ ಶೇಖರಣೆಯಾದವು ಎಂಬುದನ್ನು ಅರಹುತ್ತಾ ಮುಸ್ಲಿಂ ದೊರೆಗಳ ದಾಳಿ ನಡೆದಾಗ ಅದನ್ನು ಕಾಪಾಡಿಕೊಳ್ಳುವ ಅರ್ಹತೆ ತಾಕತ್ತು ಇಲ್ಲದೆ ಅಗ್ರಹಾರದವರು ಪರರ ಪಾಲು ಮಾಡಿದ್ದನ್ನು ಉಲ್ಲೇಖಿಸುತ್ತ, ಇದೇ ಸಂಪತ್ತು ಎಲ್ಲಾ ಜಾತಿ ಜನಾಂಗದವರಿಗೆ ಹಂಚಿ ಬಿಟ್ಟಿದ್ದರೆ ದೇಶದಲ್ಲಿ ಬಡತನವೆ ಇರುತ್ತಿರಲಿಲ್ಲವೆಂದು ಮರಗುತ್ತಾರೆ.

ಜಾತಿ ನಾಶಕ್ಕಾಗಿ ದನಿಯೆತ್ತಿದ ಕವಿ ಪಂಪನ ವೈಚಾರಿಕತೆ ಹಾಗೆ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಕುವೆಂಪು ಅವರ ಹೋರಾಟವನ್ನು ಸ್ಮರಿಸುವ ಎಲ್.ಎನ್ ಮುಕುಂದರಾಜ್ ಬಗ್ಗೆ ಹೆಮ್ಮೆ ಮೂಡದಿರದು. ದೀನ, ದಲಿತರ ಕುತ್ತಿಗೆಯನ್ನು ಧರ್ಮ ಹೆಸರಲ್ಲಿ ಮೆಟ್ಟಿ ತುಳಿದಂತೆ ಇನ್ನಾವ ಧರ್ಮವೂ ತುಳಿದಿಲ್ಲವೆಂಬ ಸ್ವಾಮಿ ವಿವೇಕಾನಂದರ ಮಾತನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಅನಿಸುತ್ತದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಪುಸ್ತಕವನ್ನು ಕೊಂಡು ಓದಿ ಪುಳಕಗೊಳ್ಳಬಹುದು.

ಪುಸ್ತಕಗಳಿಗಾಗಿ: ಕವಿ ಎಲ್ ಎನ್ ಮುಕುಂದರಾಜ್ ಬರೆದ ದೇಶಕ್ಕಾಗಿ ಆರೆಸ್ಸೆಸ್ಸ್ ಬಿಟ್ಟೆ ಎಂಬ ಈ ಕೃತಿಯ 10 ರಿಂದ 25 ಪ್ರತಿಗಳವರೆಗೆ ₹40/- ರಂತೆ ಲೆಕ್ಕಹಾಕಿ ಕಳುಹಿಸಬಹುದು. (ಮೂಲ ಬೆಲೆ ₹50/-)
30 ರಿಂದ 50 ಪ್ರತಿ, ಅದಕ್ಕಿಂತ ಹೆಚ್ಚು ತರಿಸಿಕೊಂಡರೆ 40% ವಿಶೇಷ ರಿಯಾಯಿತಿ ಕೊಡಲಾಗುವುದು. (ರಿಜಿಸ್ಟರ್ ಅಂಚೆ ವೆಚ್ಚ ಪ್ರತ್ಯೇಕ)

ನೀವೆಲ್ಲ ಓದಿ, ಇತರರಿಗೂ ಓದಲು ಪ್ರೇರೇಪಿಸುವ ಕನ್ನಡ ನೆಲದಲ್ಲಿನ ಸಾಹಿತ್ಯದ ಸೌಹಾರ್ದ, ಪ್ರೀತಿ, ಕರುಣೆ, ಮಾನವೀಯತೆ ಬಗ್ಗೆ ಅರಿವು ಮೂಡಿಸುವ ಕೃತಿ. RSS ಏಕೆ ಮನುಷ್ಯನನ್ನು ಮನಸ್ಸನ್ನು ಕುಬ್ಜಗೊಳಿಸುತ್ತೆ? ಎಂಬುದರ ಸೂಕ್ಷ್ಮ ಒಳನೋಟದ ಕೃತಿ ಇದು.

ಬೆಂಗಳೂರಲ್ಲಿ ತತ್ ಕ್ಷಣ ನವ ಕರ್ನಾಟಕ ಪಬ್ಲಿಕೇಷನ್ಸ್, ಸಪ್ನಾ ಬುಕ್ ಸ್ಟಾಲ್ ಸೋಮವಾರ ಲಡಾಯಿ ಪ್ರಕಾಶನ, ಗದಗ; ಅಭಿರುಚಿ ಪ್ರಕಾಶನ ಮೈಸೂರು ಸಿಗುತ್ತದೆ. ಧಾರವಾಡ, ಬಳ್ಳಾರಿ, ಕಲಬುರ್ಗಿ, ಹರಿಹರ ಮೊದಲಾದೆಡೆ ದೊರೆಯುತ್ತವೆ.
ಅಂಚೆ ಮೂಲಕ ಕೂಡಾ ಕಳುಹಿಸಲಾಗುವುದು.‌

ಪ್ರತಿಗಳಿಗಾಗಿ ಸಂಪರ್ಕಿಸಿ: 99005 66020

Advertisement
Advertisement
Recent Posts
Advertisement