ನಿಧನ: ಬಿಲ್ಲಾಡಿ ನಾರಾಯಣ ಶೆಟ್ಟಿ

ಸೌಕೂರು ಸೇರ್ವೆಗಾರರ ಮನೆ ನಾರಾಯಣ ಶೆಟ್ಟಿ (90ವರ್ಷ) ಇವರು ಅಲ್ಪಕಾಲದ ಅಸೌಖ್ಯದಿಂದ (ಫೆಬ್ರವರಿ 21) ಮಂಗಳವಾರ ಗುಲ್ವಾಡಿಯ ಸ್ವಗೃಹದಲ್ಲಿ ನಿಧನರಾದರು. ತಾಲೂಕಿನಾಧ್ಯಂತ ಬಿಲ್ಲಾಡಿ ನಾಣುವಣ್ಣ ಎಂದೇ ಖ್ಯಾತರಾಗಿರುವ ಶ್ರೀಯುತರು ಸೌಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರರಾಗಿ ಸುಮಾರು 30ವರ್ಷಗಳಷ್ಟು ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ಮೃತರು ಮೂವರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಭಾಂದವರನ್ನು ಅಗಲಿದ್ದಾರೆ. ಈ ಸಂಧರ್ಭದಲ್ಲಿ ಮಾಜಿ ಶಾಸಕ, ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಅಪ್ಪಣ್ಣ ಹೆಗ್ಡೆ ಮತ್ತಿತರ ಗಣ್ಯರು ಆಗಮಿಸಿ ಶ್ರದ್ಧಾಂಜಲಿ ಅರ್ಪಿಸಿದರು.