Advertisement

ಸೆಂಗೋಲ್ ಎಂಬ ರಾಜದಂಡದ ಕುರಿತಾದ ಐತಿಹಾಸಿಕ ಸತ್ಯಗಳು!

Advertisement

ಬರಹ: ಜಗದೀಶ್ ಕೊಪ್ಪ (ಲೇಖಕರು ಜನಪರ ಚಿಂತಕರು)

ಇಂದು, ಮೇ 28 ರ ಭಾನುವಾರದಂದು ದೆಹಲಿಯಲ್ಲಿ ಉದ್ಘಾಟನೆಯಾಗಿರುವ ವಿಸ್ತಾರ ಎಂಬ ಹೆಸರಿನ ನೂತನ ಸಂಸತ್ತಿನ ಕಟ್ಟಡದಲ್ಲಿ ಲೋಕಸಭಾ ಅಧ್ಯಕ್ಷರ ಪೀಠದ ಪಕ್ಕ ತಮಿಳುನಾಡು ಮೂಲದ ಚೋಳ ಸಾಮ್ರಾಜ್ಯ ಪರಂಪರೆಯ ಸೆಂಗೋಲ್ ಎಂಬ ರಾಜದಂಡವನ್ನು ಸ್ಥಾಪಿಸಲಾಗುತ್ತಿದೆ.

ಕಾಂಗ್ರೆಸನ್ನು ಕಬಳಿಸಲು ಆರೆಸ್ಸೆಸ್ ಸಂಚು ಹೂಡಿತ್ತೇ?

ಮೂಲಭೂತವಾಗಿ ರಾಜಪ್ರಭುತ್ವ ಎಂದರೆ, ಯಾರೂ ಏನನ್ನೂ ಪ್ರಶ್ನಿಸಲಾರದ ಸರ್ವಾಧಿಕಾರ ಎಂದರ್ಥ. ಇಪ್ಪತ್ತನೆಯ ಶತಮಾನದ ಜಗತ್ತಿನ ಎಲ್ಲಾ ಸರ್ವಾಧಿಕಾರಿಗಳಿಗೆ ಪ್ರೇರಣೆಯಾದದ್ದು ಇಂತಹ ರಾಜಪ್ರಭುತ್ವದ ನೀತಿಗಳೇ ಹೊರತು, ಬುದ್ಧ ಅಥವಾ ಬಸವಣ್ಣನ ನೀತಿಗಳಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿರುವ ಭಾರತದ ಸಂಸತ್ ಭವನಕ್ಕೆ ಸರ್ವಾಧಿಕಾರದ ಚಿಹ್ನೆಯಂತಿರುವ ಈ ರಾಜದಂಡ ಬೇಕಾಗಿತ್ತೆ? ಇದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕನೂ ತನ್ನ ಆತ್ಮಸಾಕ್ಷಿಗೆ ಹಾಕಿಕೊಳ್ಳಬೇಕಾದ ಪ್ರಶ್ನೆ.

ಮಣಿಪುರದ ಪರಿಸ್ಥಿತಿ ಇಡೀ ದೇಶದಲ್ಲಿ ಬರುವ ಮೊದಲು ಎಚ್ಚೆತ್ತುಕೊಳ್ಳಿ!

ಸೆಂಗೋಲ್ ಎಂದು ಚೋಳರ ಆಳ್ವಿಕೆಯಲ್ಲಿ ಕರೆಸಿಕೊಳ್ಳುತ್ತಿದ್ದ ಈ ರಾಜದಂಡಕ್ಕೆ ಒಂದು ಐತಿಹಾಸಿಕ ಪರಂಪರೆಯಿದೆ. ಹತ್ತು ಮತ್ತು ಹನ್ನೊಂದನೇ ಶತಮಾನದಲ್ಲಿ ದೊರೆಯಿಂದ ಆತನ ಪುತ್ರನಿಗೆ ಅಥವಾ ಉತ್ತರಾಧಿಕಾರಿಗಳಿಗೆ ಸಿಂಹಾಸನ ಮತ್ತು ಅಧಿಕಾರವನ್ನು ಹಸ್ತಾಂತರಿಸುವಾಗ ಸೆಂಗೋಲ್ ಎನ್ನುವ ಐದು ಅಡಿ ಉದ್ದದ ಚಿನ್ನದ ರಾಜದಂಡವನ್ನು ನೀಡಲಾಗುತ್ತಿತ್ತು. ಚೋಳರು ಶೈವ ಪರಂಪರೆಯ ಶಿವನ ಆರಾಧಕರಾಗಿದ್ದ ಕಾರಣ ದಂಡದ ಮೇಲಿನ ತುದಿಯಲ್ಲಿ ಪುಟ್ಟ ನಂದಿ ವಿಗ್ರಹ ಕೂಡ ಇರುತ್ತಿತ್ತು. ಇದೀಗ ಅಲಹಾಬಾದ್ ಮ್ಯೂಸಿಯಂ ನಲ್ಲಿ ಇದ್ದ ಹಾಗೂ ಭಾರತದ ಪ್ರಥಮ ಪ್ರಧಾನಿ ನೆಹರೂ ಅವರಿಗೆ ತಮಿಳುನಾಡಿನ ಜನತೆ ಉಡುಗೊರೆಯಾಗಿ ನೀಡಿದ್ದ ರಾಜದಂಡವನ್ನು ಆಧುನಿಕ ಚಾಣಕ್ಯ ಎನಿಸಿರುವ ಅಮಿತ್ ಶಾ ಪಾರ್ಲಿಮೆಂಟ್ ಭವನದಲ್ಲಿ ಸ್ಥಾಪಿಸಲು ತನ್ನ ಸಾಮ್ರಾಟನಿಗೆ ಸಲಹೆ ನೀಡಿದ್ದಾನೆ.

ಕಾಂಗ್ರೆಸ್ ಈ ದೇಶಕ್ಕೇನು ಕೊಟ್ಟಿದೆ?

ಈ ಕುರಿತು ವಾಟ್ಸ್ ಆ್ಯಪ್ ವಿಶ್ವ ವಿದ್ಯಾನಿಲಯದ ಅಧ್ಯಾಪಕರು ಮತ್ತು ಪದವೀಧರರು ಸೆಂಗೋಲ್ ಕುರಿತಾಗಿ ವಿವಿಧ ಕಪೋಲಕಲ್ಪಿತ ಕಥನಗಳನ್ನ ರಚಿಸಿ ತಮ್ಮ ಪ್ರಕೋಷ್ಠ ಎಂಬ ಹೇಸಿಗೆಯ ತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಬ್ರಿಟೀಷರ ಬಳಿ ಇದ್ದ ಈ ರಾಜದಂಡವನ್ನು ಗಂಗಾನದಿಯಲ್ಲಿ ಶುಚಿಗೊಳಿಸಿ ನಂತರ ಮ್ಯೂಸಿಯಂ ನಲ್ಲಿ ಇಡಲಾಗಿತ್ತು ಎಂಬ ಕಥೆಯೂ ಹರಿದಾಡುತ್ತಿದೆ. ಜೊತೆಗೆ ಭಾರತದ ಗವರ್ನರ್ ಜನರಲ್ ಲಾರ್ಡ್ ಮೌಂಟ್ ಬ್ಯಾಟನ್ ಅವರಿಗೆ ಮದ್ರಾಸ್ ಪ್ರೆಸಿಡೆನ್ಸಿ ಜನತೆ ನೀಡಿದ ಉಡುಗರೆ ಎಂಬ ಕಥೆಯೂ ಸಹ ಹರಿದಾಡುತ್ತಿದೆ.

"ಅದಾನಿ ಕಂಪೆನಿಗೆ 20 ಸಾವಿರ ಕೋಟಿ ಎಲ್ಲಿಂದ ಬಂತು? ಪ್ರಧಾನಿ- ಅದಾನಿ ಸಂಬಂಧ ಏನು?" ಈ ಮಾತುಗಳಿಗೆ ಮೋದಿ ಬೆದರಿದರೇ?

ವಾಸ್ತವವಾಗಿ ಸೆಂಗೋಲ್ ನ ಪರಿಕಲ್ಪನೆ ಹುಟ್ಟಿಕೊಂಡಿದ್ದು ನೆಹರೂ ಮತ್ತು ಪಟೇಲ್ ಅವರ ಒಡನಾಡಿನಾಗಿದ್ದ ತಮಿಳುನಾಡು ಮೂಲದ ರಾಜಾಜಿ ಅವರಿಂದ. ಬ್ರಿಟೀಷರಿಂದ ಭಾರತೀಯರಿಗೆ ಅಧಿಕಾರ ಹಸ್ತಾಂತರವಾಗುತ್ತಿರುವ ಘಟನೆಯ ಸ್ಮೃರಣೆಗಾಗಿ ಆ ಕಾಲಘಟ್ಟದ ತಮಿಳುನಾಡಿನ ಹೆಸರಾಂತ ಚಿನ್ನಾಭರಣಗಳ ತಯಾರಕರಾದ ವೆಮ್ಮಿಡಿ ಬಂಗಾರು ಚೆಟ್ಟಿ ಕುಟುಂಬದಿಂದ ಚೋಳರ ರಾಜದಂಡ ಮಾದರಿಯಲ್ಲಿ ಈ ಸೆಂಗೋಲ್ ಅನ್ನು ಸಿದ್ಧಪಡಿಸಿದರು. ಜೊತೆಗೆ ತಮಿಳುನಾಡಿನ ಶೈವ ಪರಂಪರೆಯ ಪೀಠವಾದ ತಿರುವದುತೊರೈ ಅಧೀನಂ ಫೀಠದ ಮುಖ್ಯಸ್ಥರು ಹಾಗೂ ಅಲ್ಲಿನ ದೇವಾಲಯಗಳಲ್ಲಿ ದೇವರ ಪ್ರಾರ್ಥನೆಗಳನ್ನು ಹಾಡುತ್ತಿದ್ದ ಓದುವರ್ ಎಂಬ ಅರ್ಚಕರು ಮತ್ತು ಪ್ರಸಿದ್ಧ ನಾದಸ್ವರ ವಾದಕ ರಾಜರತ್ನಂ ಪಿಳ್ಳೈ ಒಳಗೊಂಡ ತಂಡವೊಂದು ಆಗಸ್ಟ್ ತಿಂಗಳಿನಲ್ಲಿ ಮದ್ರಾಸ್ ನಗರದಿಂದ ದೆಹಲಿಗೆ ಆಗಮಿಸಿ ನೆಹರೂ ಅವರಿಗೆ ಸೆಂಗೂಲ್ ಅನ್ನು ಸ್ವಾತಂತ್ರ್ಯದ ಸ್ಮರಣಿಕೆಯನ್ನಾಗಿ ನೀಡಿತು.

ಸಂಘಿಗಳ ಉರಿನಂಜಿಗೆ ಕಾರಣವಾದ ಟಿಪ್ಪು ತಂದ ಸುಧಾರಣೆ: "ಪಾಳೇಗಾರರಿಂದ- ಬ್ರಾಹ್ಮಣಶಾಹಿಯಿಂದ ರೈತಾಪಿಯ ಬಿಡುಗಡೆ"

1947 ರ ಆಗಸ್ಟ್ 11 ರಂದು ದ ಹಿಂದೂ ಇಂಗ್ಲೀಷ್ ದಿನಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿರುವ ವರದಿಯಲ್ಲಿ ಆಗಸ್ಟ್ 10 ರಂದು ತಮಿಳು ಶಾಸ್ತ್ರ ಸಂಪ್ರದಾಯಗಳನ್ನು ಒಳಗೊಂಡ ಪೂಜೆಯನ್ನು ಜವಹರಲಾಲ್ ನೆಹರೂ ನಿವಾಸದಲ್ಲಿ ನೆರವೇರಿಸಿ ನಂತರ ಅವರಿಗೆ ಪೀಠಾಧಿಪತಿಯಿಂದ ತೀರ್ಥ ಪ್ರಸಾದವನ್ನು ನೀಡಲಾಯಿತು. ಜೊತೆಗೆ ಸೆಂಗೂಲ್ ಅನ್ನು ಉಡುಗೊರೆಯಾಗಿ ಅರ್ಪಿಸಲಾಯಿತು ಎಂದು ವಿವರವಾಗಿ ದಾಖಲಿಸಲಾಗಿದೆ. (ಕಪ್ಪು ಬಿಳುಪಿನ ಚಿತ್ರವನ್ನು ಗಮನಿಸಿ)

ಜವಹರಲಾಲ್ ನೆಹರೂ ಅವರು ಇಂಗ್ಲೇಂಡಿನ ಆಕ್ಸ್ ಪರ್ಡ್ ನಲ್ಲಿ ಓದಿದ ಪದವೀಧರರು ಜೊತೆಗೆ ಇತಿಹಾಸ ಮತ್ತು ರಾಜಕೀಯ ಕುರಿತಂತೆ ಅಪರಿಮಿತ ಜ್ಞಾನವುಳ್ಳ ವಿದ್ವಾಂಸರು. ಅವರು ಎಂದೂ ವಿಶ್ವ ವಿದ್ಯಾನಿಲಯಕ್ಕೆ ಹೋಗದೆ, ಎಂಟೈರ್ ಪೊಲಿಟಿಕ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರಲ್ಲ. ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಎಂಬ ಸಾಮಾನ್ಯ ಜ್ಞಾನ ಅವರಲ್ಲಿತ್ತು. ಹಾಗಾಗಿ ಅವರು ಈ ಸೆಂಗೋಲ್ ಎಂಬ ಸರ್ವಾಧಿಕಾರವನ್ನು ಪ್ರತಿನಿಧಿಸುವ ರಾಜದಂಡವನ್ನು ಸಾರ್ವಜನಿಕವಾಗಿ ಪ್ರದರ್ಶಿಸದೆ ತಮ್ಮ ನಿವಾಸದಲ್ಲಿ ಇರಿಸಿಕೊಂಡಿದ್ದರು.

ಹಿಂದುತ್ವವನ್ನು ಬೆಂಬಲಿಸೋಣ. ಹಿಂದುತ್ವ ವಿರೋಧಿ ಕಾಂಗ್ರೆಸ್ ಅನ್ನು ನಾಶಗೊಳಿಸೋಣ.

ಈಗ ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸಂಪೂರ್ಣ ಬಾಗಿಲು ಮುಚ್ಚಿರುವುದರಿಂದ ತಮಿಳರ ಮನ ಗೆಲ್ಲಲು ಚಾಣಕ್ಯನು ಹೊಸ ನೀತಿಯನ್ನು ರೂಪಿಸಿ ಮುನ್ನೆಲೆಗೆ ತಂದಿದ್ದಾನೆ. ಕರ್ನಾಟಕದಲ್ಲಿ ಒಕ್ಕಲಿಗರ ಮನ ಗೆಲ್ಲಲು ಉರಿಗೌಡ ಮತ್ತು ನಂಜೇಗೌಡರನ್ನು ಮುನ್ನೆಲೆಗೆ ತಂದು ಮಕಾಡೆ ಮಲಗಿದ ನಂತರ ಚಾಣಕ್ಯನ ತಲೆಯೊಳಗೆ ಈಗ ಹೊಸ ನೀತಿ ಉದ್ಭವವಾಗಿದೆ. ಇದು ಪ್ರಜಾಪ್ರಭುತ್ವದ ದಿವ್ಯ ಪರಂಪರೆಗೆ ಎಸೆಗುವ ಅಪಮಾನವಲ್ಲದೆ ಬೇರೂನು ಅಲ್ಲ.

ಚಿತ್ರಗಳು ಮತ್ತು ಮಾಹಿತಿ ಸೌಜನ್ಯ- ದ ಹಿಂದೂ, ಚೆನ್ನೈ.


ಜಗದೀಶ್ ಕೊಪ್ಪ

Advertisement
Advertisement
Recent Posts
Advertisement