Advertisement

ನಾವುಂದ ಗ್ರಾಮ ಪಂಚಾಯತ್ ನ ಮತ್ತೊಂದು ಅವಧಿಯ ಅಧ್ಯಕ್ಷರಾಗಿ ನರಸಿಂಹ ದೇವಾಡಿಗ.

Advertisement

ಚುನಾವಣೆಗಳಲ್ಲಿ ಪ್ರಾಮಾಣಿಕತೆ ಹಾಗೂ ಜನಪರ ಕಾಳಜಿಯ ನಾಯಕರು ಆಯ್ಕೆಯಾಗಿ ಬಂದಲ್ಲಿ ಮಾತ್ರವೇ ಸರ್ಕಾರಿ ಸವಲತ್ತುಗಳು ಪ್ರಾಮಾಣಿಕವಾಗಿ ಫಲಾನುಭವಿಗಳಿಗೆ ತಲುಪುತ್ತವೆ ಅದುವೇ ಪ್ರಜಾಪ್ರಭುತ್ವದ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂದಿಯವರ ಆಶಯವಾಗಿದೆ.

ಹಾಗೆಯೇ ಸಹಜವಾಗಿಯೇ 'ಪ್ರಾಮಾಣಿಕತೆ ಹಾಗೂ ಜನಪರ ಕಾಳಜಿಯ ನಾಯಕ' ಎಂದೊಡನೆ ಮೊಟ್ಟ ಮೊದಲಿಗೆ ನೆನಪಿಗೆ ಬರುವುದೇ 'ಸೋಲಿಲ್ಲದ ಸರದಾರ' ಖ್ಯಾತಿಯ ಸದಾ ನಗುಮೊಗದ ನಾವುಂದ ಗ್ರಾಮ ಪಂಚಾಯತ್‌ನ ನರಸಿಂಹ ದೇವಾಡಿಗರ ಹೆಸರು. ಏಕೆಂದರೆ ಆ ಭಾಗದಲ್ಲಿ ಕಳೆದ 40ವರ್ಷಗಳಿಗಿಂತಲೂ ಹೆಚ್ಚುಕಾಲ ನಿರಂತರವಾಗಿ ಗೆಲುವು ಸಾಧಿಸುವ ಮೂಲಕ 6 ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ, 2ಬಾರಿ ಅಧ್ಯಕ್ಷರಾಗುವ ಮೂಲಕ ಜನಸೇವೆ ಮಾಡಿಕೊಂಡು ಬಂದಿರುವ ಅವರೊಬ್ಬ ಅಜಾತ ಶತ್ರು ಎಂದರೆ ಖಂಡೀತವಾಗಿಯೂ ಅದು ಅತಿಶಯೋಕ್ತಿಯಾಗಲಾರದು. ಇದೀಗ ಅವರು 3ನೇಯ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಅಪಾರ ತಿಳುವಳಿಕೆ ಹೊಂದಿರುವ, ಜನಪರ ಕಾಳಜಿಯ ಇವರು ಗ್ರಾಮದ ಯಾರಾದರೂ ಅಶಕ್ತ ಸಾರ್ವಜನಿಕರು ನಡುರಾತ್ರಿಯಲ್ಲಿ ಫೋನ್ ಮೂಲಕ ತಮ್ಮ ಸಮಸ್ಯೆ ಹೇಳಿದರೂ ಸರ್ಕಾರಿ ಸವಲತ್ತನ್ನು ಅವರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡುವ ಓರ್ವ ನಿಜವಾದ ಜನಸೇವಕ ಅಥವಾ ಜನನಾಯಕ ಎಂಬುವುದು ಪಕ್ಷಾತೀತವಾಗಿ ನರಸಿಂಹ ದೇವಾಡಿಗರ ಕುರಿತು ನಾವುಂದ ಪರಿಸರದ ಜನರ ಒಮ್ಮತದ ಅಭಿಪ್ರಾಯವಾಗಿದೆ.

ತನ್ನ ನಗುಮೊಗ, ಸಾಮಾಜಿಕ ಕಳಕಳಿ, ಕಷ್ಟಕ್ಕೆ ಸ್ಪಂದಿಸುವ ಗುಣಗಳಿಂದ ಹಾಗೂ ಸದಾ ಸಾಮಾಜಿಕ ನ್ಯಾಯದ ಕುರಿತು ಮಾತನಾಡುವ ನರಸಿಂಹಣ್ಣನವರ ಅಧ್ಯಕ್ಷ ಅವಧಿಯಲ್ಲಿ ನಾವುಂದ ಪಂಚಾಯತ್‌, ರಾಜ್ಯ ಸರ್ಕಾರದ ಪಂಚಾಯತ್ ರಾಜ್ ಇಲಾಖೆ ಕೊಡಮಾಡುವ 'ನಿರ್ಮಲ ಗ್ರಾಮ ಪುರಸ್ಕಾರ' ಪ್ರಶಸ್ತಿ ಪುರಸ್ಕೃತವಾಗಿದೆ. ನರಸಿಂಹ ದೇವಾಡಿಗರ ಅದ್ಯಕ್ಷತೆಯ ಅವಧಿಯಲ್ಲಿ ಈ ಹಿಂದಿನ ಹಲವು ವರ್ಷಗಳಿಂದ ಅವಿಭಜಿತ ಕುಂದಾಪುರ ತಾಲೂಕಿನಲ್ಲೆ ಅಭಿವೃದ್ಧಿಯಲ್ಲಿ ಎರಡನೆಯ ಸ್ಥಾನವನ್ನು ನಾವುಂದ ಪಂಚಾಯತ್ ಉಳಿಸಿಕೊಂಡು ಬಂದಿತ್ತು. ಉದ್ಯೋಗ ಖಾತ್ರಿ ಯೋಜನೆಯಲ್ಲಿ 'ಅತ್ಯುತ್ತಮ ಸಾಧನೆ' ಪ್ರದರ್ಶಿಸಿರುವ ನಾವುಂದ ಪಂಚಾಯತ್ ಬೈಂದೂರು ತಾಲೂಕಿನಲ್ಲೆ ಅತ್ಯಂತ ಸುಸಜ್ಜಿತ ಹಾಗೂ ಅತ್ಯಂತ ವಿಶಾಲವಾದ ಸ್ವಂತ ಕಟ್ಟಡ ಹೊಂದಿರುವ ಪಂಚಾಯತ್ ಎಂಬ ಹೆಗ್ಗಳಿಕೆ ಪಡೆದಿದೆ ಹಾಗೂ ತಾಲೂಕಿನಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಹೊಂದಿದ ಬೆರಳೆಣಿಕೆಯ ಪಂಚಾಯತ್ ಗಳಲ್ಲಿ ನಮ್ಮ ಪಂಚಾಯತ್ ಒಂದು ಎಂದು ಪರಿಸರದ ಜನತೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ತಮ್ಮ ಸುಮಾರು ನಲವತ್ತು ವರ್ಷಗಳ ರಾಜಕೀಯ ಜೀವನದುದ್ದಕ್ಕೂ ಕಾಂಗ್ರೆಸ್ ಪಕ್ಷದ 'ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು' ಸಿದ್ಧಾಂತವನ್ನು ಪ್ರತಿಪಾದಿಸಿಕೊಂಡಿರುವ ಕಾರಣಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಧರ್ಮಗಳ ಹಾಗೂ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಅಭಿಮಾನಿ ವರ್ಗವನ್ನು ಹೊಂದಿರುವ ನರಸಿಂಹ ದೇವಾಡಿಗರು ಈ ಬಾರಿ ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

'ಕನ್ನಡ ಮೀಡಿಯಾ ಡಾಟ್ ಕಾಮ್' ಸುದ್ದಿ ಜಾಲತಾಣದ ಓರ್ವ ಪ್ರೋತ್ಸಾಹಕರಾಗಿರುವ ನರಸಿಂಹ ದೇವಾಡಿಗರ ಸದ್ರಿ ಅಧ್ಯಕ್ಷೀಯ ಅವಧಿಯಲ್ಲಿ ಗ್ರಾಮ ಇನ್ನಷ್ಟು ಅಭಿವೃದ್ಧಿ ಹೊಂದುವಂತಾಗಲಿ ಎಂದು ಹಾರೈಸುತ್ತೇವೆ.

-ಸಂಪಾದಕರು

Advertisement
Advertisement
Recent Posts
Advertisement