Advertisement

ಕಾರ್ಟೂನ್ ಹಬ್ಬ: ಕಾರ್ಟೂನು ಸ್ಪರ್ಧೆಯ ವಿಜೇತರ ವಿವರ

Advertisement

ಕುಂದಾಪುರದ ಕಲಾಮಂದಿರದಲ್ಲಿ "ಕಾರ್ಟೂನು ಹಬ್ಬ ಬಳಗ- ಕುಂದಾಪುರ" ಇವರ ನೇತೃತ್ವದಲ್ಲಿ ನಡೆಯುತ್ತಿರುವ 10ನೆಯ ವರ್ಷದ "ಕಾರ್ಟೂನು ಹಬ್ಬ"ದ ಭಾಗವಾಗಿ ಡಿಸೆಂಬರ್ 9ರಂದು ನಡೆದ ಕಾರ್ಟೂನು ಸ್ಪರ್ಧೆಯಲ್ಲಿ ಉಡುಪಿ- ದ.ಕ ಜಿಲ್ಲೆಯ ಸುಮಾರು 400ಕ್ಕೂ ಮಿಕ್ಕಿ ಶಾಲಾ ಕಾಲೇಜು ವಿಧ್ಯಾರ್ಥಿಗಳು ಭಾಗವಹಿಸಿದ್ದು ಇದರಲ್ಲಿ ವಿಜೇತರಾದವರ ವಿವರ ಇಂತಿದೆ:

4ರಿಂದ 7ನೇಯ ತರಗತಿಯ ತನಕದ ವಿದ್ಯಾರ್ಥಿಗಳ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ: ವಿನಿಷ್ ಆಚಾರ್ಯ. ದ್ವೀತಿಯ: ಅಮಿತ್ ಕೆ. ಶೆಟ್ಟಿ‌. ತೃತೀಯ: ಅದಿತಿ ಪಡೆದಿದ್ದಾರೆ. ಸಮಾಧಾನಕರ ಬಹುಮಾನ: ಯಕ್ಷತ್ ಶೆಟ್ಟಿ, ಸಂಜಿತ್ ಎಂ. ದೇವಾಡಿಗ, ನಿಹಾರ್ ಜೆ.ಎಸ್, ಅಕ್ಷರ, ನಿದೀಶ್ ಪಡೆದಿದ್ದಾರೆ.

8ರಿಂದ 10ರ ತರಗತಿಯ ತನಕದ ವಿದ್ಯಾರ್ಥಿಗಳ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ: ಶರಧಿ. ದ್ವಿತೀಯ: ಅನಘಾ ಮಧುಕರ್. ತೃತೀಯ: ಸೋಹನ್ ಆಚಾರ್ಯ. ಸಮಾಧಾನಕರ ಬಹುಮಾನ: ರಕ್ಷಣ್, ನಿಖಿತ್, ಸಿಂಚನಾ ಮೆಂಡನ್, ಪ್ರೀತಮ್ ಸಂತೋಷ್ ಖಾರ್ವಿ, ನಿರ್ಭಯ್ ಯು.‌ ಶೆಟ್ಟಿ ಪಡೆದಿದ್ದಾರೆ.

ಪಿಯುಸಿ ಮತ್ತು ಮೇಲ್ಪಟ್ಟ ತರಗತಿಯ ತನಕದ ವಿದ್ಯಾರ್ಥಿಗಳ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ: ರೋಹಿತ್ ಆಚಾರ್ಯ. ದ್ವೀತಿಯ: ಸುಹಾನ್ ಎಸ್. ಶೆಟ್ಟಿ. ತೃತೀಯ: ಸ್ವಸ್ಥಿಕ್ ದೇವಾಡಿಗ. ಸಮಾಧಾನಕರ ಬಹುಮಾನ: ಗಗನ್ ಜಿ. ಸುವರ್ಣ, ಅಮಿತ್ ರಾಜ್, ರಮಿತಾ ಜಿ. ಮರಾಠಿ, ಸ್ಪೂರ್ತಿ ಜಿ. ಅದ್ವೈತ್ ಆಚಾರ್ಯ ಪಡೆದಿದ್ದಾರೆ.

ಈ ಸಂಧರ್ಭದಲ್ಲಿ ಉದಯೋನ್ಮುಖ ಮಹಿಳಾ ಕಾರ್ಟೂನಿಷ್ಠರನ್ನು ಬೆಂಬಲಿಸುವ ನಿಟ್ಟಿನಲ್ಲಿ 4 ವಿಶೇಷ ಬಹುಮಾನಗಳನ್ನು ನೀಡಲಾಗಿದ್ದು ಅವುಗಳನ್ನು ವಿವಿಧ ಪ್ರೌಢಶಾಲಾ ವಿಧ್ಯಾರ್ಥಿನಿಯರಾದ ನಮಿತಾ, ಯಾಘ್ನಿಕಾ ಎನ್, ದೃಷ್ಟಿ ಎಸ್, ಸಾನ್ವಿ ಪವನ್ ಪಡೆದಿದ್ದಾರೆ.

ಡಿಸೆಂಬರ್ 12ರ ತನಕ ಕುಂದಾಪುರ ತಾಲೂಕಿನ ವ್ಯಂಗ್ಯಚಿತ್ರಕಾರರುಗಳಾದ ಪಂಜು ಗಂಗೊಳ್ಳಿ, ಸತೀಶ್ ಆಚಾರ್ಯ, ಚಂದ್ರಶೇಖರ ಶೆಟ್ಟಿ, ರಾಮಕೃಷ್ಣ ಹೇರ್ಲೆ, ಕೇಶವ ಸಸಿಹಿತ್ಲು, ಜಿ.ಬಿ ಕಲೈಕಾರ್, ಸಂತೋಷ್ ಸಸಿಹಿತ್ಲು, ಚಂದ್ರ ಗಂಗೊಳ್ಳಿ, ಜಯರಾಂ ಉಡುಪ ಮುಂತಾದವರ ಆಯ್ದ, ಪ್ರಕಟಿತ ವ್ಯಂಗ್ಯಚಿತ್ರಗಳ ಪ್ರದರ್ಶನ ಹಾಗೂ ಖ್ಯಾತ ವ್ಯಂಗ್ಯಚಿತ್ರಕಾರರಿಂದ ಆಸಕ್ತ ಸಾರ್ವಜನಿಕರ ವ್ಯಂಗ್ಯಭಾವಚಿತ್ರ ರಚನೆ ನಡೆಯಲಿದೆ.

ಡಿಸೆಂಬರ್ 11 ಮತ್ತು 12ರಂದು ಕುಂದಾಪುರದ ಪರಿಸರದ ವಿವಿಧ ಶಾಲೆಗಳ ಆಯ್ದ ಕಾರ್ಟೂನಾಸಕ್ತ ವಿಧ್ಯಾರ್ಥಿಗಳಿಗೆ ಖ್ಯಾತ ವ್ಯಂಗ್ಯಚಿತ್ರಕಾರರಿಂದ ವ್ಯಂಗ್ಯಚಿತ್ರ ರಚನಾ ತರಬೇತಿ ಕಾರ್ಯಕ್ರಮ ನಡೆಯಲಿದೆ ಎಂದು 'ಕಾರ್ಟೂನು ಹಬ್ಬ ಬಳಗ' ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Advertisement
Advertisement
Recent Posts
Advertisement