Kannada Media Kannada News | Latest And Breaking News Wednesday, January 27, 2021
Menu
  • ಮುಖಪುಟ
  • ರಾಷ್ಟ್ರೀಯ
  • ರಾಜ್ಯ
  • ಜಿಲ್ಲಾವಾರು
    • ಶಿವಮೊಗ್ಗ
    • ಉಡುಪಿ
    • ತುಮಕೂರು
  • ಸಂಪಾದಕೀಯ
  • ಸುದ್ದಿ ವಿಶ್ಲೇಷಣೆ
  • ಅಂಕಣ
  • ಮುಖಪುಟ
  • ರಾಷ್ಟ್ರೀಯ
  • ರಾಜ್ಯ
  • ಜಿಲ್ಲಾವಾರು
    • ಶಿವಮೊಗ್ಗ
    • ಉಡುಪಿ
    • ತುಮಕೂರು
  • ಸಂಪಾದಕೀಯ
  • ಸುದ್ದಿ ವಿಶ್ಲೇಷಣೆ
  • ಅಂಕಣ
ರಾಜ್ಯ

ಡ್ರಗ್ಸ್ ತನಿಖೆ ಪ್ರಾಮಾಣಿಕ ಹಾದಿಯಲ್ಲಿಲ್ಲ- ಸರ್ಕಾರದ ಹಗರಣಗಳನ್ನು ಮುಚ್ಚಿಹಾಕುವ ನಾಟಕ; ಸಿದ್ದರಾಮಯ್ಯ ಸರಣಿ ಟ್ವೀಟ್ !

13 September 2020 6:24 AM by Kannada Media Views: 167

ದೇಶಾದ್ಯಂತ ಹರಡಿಕೊಂಡಿರುವ ಡ್ರಗ್ಸ್ ಜಾಲ ಯುವ ಜನರ ಭವಿಷ್ಯವನ್ನು ನಾಶ ಗೊಳಿಸುತ್ತಿದೆ. ಹಾಗೆಯೇ ಈ ದಂಧೆಯಲ್ಲಿ ಸಿಕ್ಕಿ ಹಾಕಿಕೊಂಡಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ ತನಿಖೆಯ ವೇಳೆ ಕೆಲವು ಪ್ರಮುಖ ಮುಖಂಡರ ಹೆಸರನ್ನು ಹೇಳಿರುವುದು ಆದರೆ ಆ ನಿಟ್ಟಿನಲ್ಲಿ ಯಡಿಯೂರಪ್ಪ ಸರ್ಕಾರ ತನಿಖೆ ನಡೆಸದೆ ಇರದಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಮತ್ತು ಆತಂಕ ಹುಟ್ಟುಹಾಕಿದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯನವರ ಈ ಟ್ವೀಟ್ ಬಿಜೆಪಿ ಸರ್ಕಾರದೊಳಗೆ ತಲ್ಲಣ ಮೂಡಿಸಿದೆ.



ಡ್ರಗ್ಸ್ ಹಗರಣದ ತನಿಖೆ ನಡೆಯುತ್ತಿರುವ ಹಾದಿಯನ್ನು ನೋಡಿದರೆ ಯಡಿಯೂರಪ್ಪ ಸರ್ಕಾರಕ್ಕೆ ಅಪರಾಧಿಗಳನ್ನು ಶಿಕ್ಷಿಸುವ ಉದ್ದೇಶಕ್ಕಿಂತಲೂ ಕೊರೊನಾ ಹಾವಳಿ ಮತ್ತು ಅತಿವೃಷ್ಟಿ ಪರಿಹಾರದ ತನ್ನ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ದುರುದ್ದೇಶ ಮುಖ್ಯವಾಗಿರುವಂತೆ ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.



ಡ್ರಗ್ಸ್ ಹಗರಣದಲ್ಲಿ ನಿಜಕ್ಕೂ ಭಾಗಿಯಾಗಿದ್ದಾರೆನ್ನಲಾದ ಕೆಲವು ಬಿಜೆಪಿ ನಾಯಕರನ್ನು ರಕ್ಷಿಸುವ ಮತ್ತು ಈ ಹಗರಣವನ್ನು ಬಳಸಿಕೊಂಡು ವಿರೋಧ ಪಕ್ಷದ ನಾಯಕರ ಚಾರಿತ್ರ್ಯಹರಣ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ.

ಮಾದಕ ವಸ್ತುಗಳ ಹಾವಳಿಯ ನಿರ್ಮೂಲನೆಯ ಪ್ರಾಮಾಣಿಕ ಉದ್ದೇಶ ಯಡಿಯೂರಪ್ಪ ಸರಕಾರಕ್ಕೆ ಇರುವುದಾದರೆ, ಸಾರ್ವಜನಿಕವಾಗಿ ವಿರೋಧ ಪಕ್ಷದ ನಾಯಕರ ಬಗ್ಗೆ ಯಾವುದೇ ದಾಖಲೆಗಳಿಲ್ಲದೆ ಸುಳ್ಳು ಆರೋಪಗಳನ್ನು ಮಾಡಿ ತನಿಖೆಯ ಹಾದಿ ತಪ್ಪಿಸುತ್ತಿರುವ ಸಂಪುಟದ ಸಚಿವರು ಮತ್ತು ಬಿಜೆಪಿ ನಾಯಕರ ಬಾಯಿ ಮುಚ್ಚಿಸುವ ಮೂಲಕ ಪೊಲೀಸರಿಗೆ ಮುಕ್ತ ತನಿಖೆಗೆ ಅವಕಾಶ ನೀಡಬೇಕು ಎಂದವರು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ.

“ಡಿಜೆಹಳ್ಳಿ ಗಲಭೆ ಬಗ್ಗೆ ನಿಮ್ಮದೇ ತನಿಖೆಯ ಪ್ರಹಸನ ನಡೆಸಿ ಪೊಲೀಸ್ ತನಿಖೆಯ ಮೇಲೆ ಪ್ರಭಾವ ಬೀರಿದ್ದೀರಿ, ಈಗ ಡ್ರಗ್ಸ್ ಹಗರಣದ ತನಿಖೆಯ ವಿವರಗಳನ್ನು ಸೋರಿ ಬಿಟ್ಟು ಪೊಲೀಸ್ ತನಿಖೆಯ ಹಾದಿ ತಪ್ಪಿಸುತ್ತಿದ್ದೀರಿ. ನಿಮಗೆ ವಿಶ್ವಾಸ ಇಲ್ಲದಿರುವುದು ಪೊಲೀಸರ ಮೇಲೋ ಅಥವಾ ಗೃಹ ಸಚಿವರ ಮೇಲೋ? ಪ್ರತಿಬಾರಿ ನಿಮ್ಮ ಆಡಳಿತದ ವೈಫಲ್ಯವನ್ನು ಮುಚ್ಚಿ ಹಾಕಲು ವಿರೋಧ ಪಕ್ಷಗಳ ನಾಯಕರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುವ ಕುತಂತ್ರ ಮಾಡುತ್ತಾ ಬಂದಿದ್ದೀರಿ. ಡ್ರಗ್ಸ್ ಹಗರಣದಲ್ಲಿ ಕೂಡಾ ಅದನ್ನೇ ಮಾಡುತ್ತಾ ಇದ್ದೀರಿ. ಸತ್ಯವನ್ನು ಮುಚ್ಚಿಡಬಹುದು, ನಾಶ ಮಾಡಲು ಆಗುವುದಿಲ್ಲ, ನೆನಪಿರಲಿ. ಆರೋಪಿಗಳ ಜೊತೆಗಿನ ಇತರ ಪಕ್ಷಗಳ ರಾಜಕಾರಣಿಗಳ ಮದುವೆ ಇನ್ನಿತರ ಸಮಾರಂಭದಲ್ಲಿ ತಗೆದ ಪೋಟೊ ಹಾಕಿ ಅವರ ಹೆಸರನ್ನು ಹಗರಣದ ಜೊತೆ ಜೋಡಿಸುವುದು ಅಥವಾ ಅವರ ವಿರುದ್ಧ ಅಪಪ್ರಚಾರ ನಡೆಸುವುದು ಅತ್ಯಂತ ಕೆಟ್ಟ ಚಾಳಿಯಾಗಿದೆ. ಸಭೆ-ಸಮಾರಂಭಗಳಲ್ಲಿ ಜೊತೆಗೆ ನಿಂತವರೆಲ್ಲರ ಜಾತಕ ಬಿಡಿಸಿ ನೋಡಲಾಗುವುದಿಲ್ಲ. ಆದರೆ ಅಧಿಕೃತ ಸಮಾರಂಭಗಳಿಗೆ ಅಂತಹವರನ್ನು ಆಹ್ವಾನಿಸುವಾಗ, ಚುನಾವಣಾ ಪ್ರಚಾರಗಳಲ್ಲಿ ಬಳಸುವಾಗ ಎಚ್ಚರದಿಂದ ಇರಬೇಕಾಗುತ್ತದೆ” ಎಂದು ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ನಟಿ ರಾಗಿಣಿ ಬಿಜೆಪಿಯ ಚುನಾವಣಾ ಪ್ರಚಾರದ ಹಲವು ವೇದಿಕೆಯಲ್ಲಿ ಭಾಗವಹಿಸಿದ್ದ ಕುರಿತು, ಹಲವು ವರ್ಷಗಳಿಂದ ಬಿಜೆಪಿ ಪಕ್ಷದ ಜೊತೆ ಸಂಪರ್ಕ ಹೊಂದಿದ್ದ ಕುರಿತು ಆಕೆಯ ಹೆಸರನ್ನು ಉಲ್ಲೇಖಿಸದೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನೇರವಾಗಿ ಟ್ವಿಟ್ ಮಾಡುವ ಮೂಲಕ ಕಡಕ್ ಸಂದೇಶ ರವಾನಿಸಿದ್ದಾರೆ.

Post Views: 41
0Shares
Tags: Indian National Congress, KPCC Social Media, Siddaramaiah

Follow Us

Follow us on Facebook Follow us on Twitter Contact us on WhatsApp

Kannada Media

Copyright © 2021 Kannada Media. Designed by Indira India