Advertisement

ರೈತರ ಸಂಘಟಿತ ಹೋರಾಟಕ್ಕೆ ಸಂದ ಜಯ : ಕಿಸಾನ್ ಕಾಂಗ್ರೆಸ್‌ ಉಡುಪಿ ಜಿಲ್ಲೆ

Advertisement

ಸ್ವತಂತ್ರ ಭಾರತದ ಇತಿಹಾಸದಲ್ಲಿ ರೈತರ ಸಂಘಟಿತ ಹೋರಾಟಕ್ಕೆ ಸಿಕ್ಕಿದ ಐತಿಹಾಸಿಕ ವಿಜಯ ಇದಾಗಿದೆ. ಕೊನೆಗೂ ಎಚ್ಚೆತ್ತುಕೊಂಡ ಕೇಂದ್ರ ಸರಕಾರ ರೈತರ ಒತ್ತಡಕ್ಕೆ ಮಣಿದು ಈ ಕರಾಳ ಕಾಯ್ದೆಯನ್ನು ಹಿಂಪಡೆದುಕೊ0ಡಿದೆ. ಆದರೆ ಈ ಸರಕಾರ ಮುಂಚೆಯೇ ಎಚ್ಚೆತ್ತುಕೊಂಡಿದ್ದರೆ ಸುಮಾರು 300-400 ರೈತರ ಪ್ರಾಣ ಹೋಗುವುದು ಉಳಿಯುತ್ತಿತ್ತು. ರೈತರ ಜೀವಹಾನಿಗೆ ನೇರವಾಗಿ ಕೇಂದ್ರ ಸರಕಾರವೇ ಹೊಣೆಯಾಗುತ್ತದೆ. ರೈತರ ಕುಟುಂಬಕ್ಕೆ ಕಾನೂನಾತ್ಮಕ ಆದ ಒಂದು ಪರಿಹಾರವನ್ನು ಈ ಕೇಂದ್ರ ಸರಕಾರ ನೀಡಬೇಕು. ಅಲ್ಲದೆ 11 ತಿಂಗಳ ಈ ಒಂದು ಹೋರಾಟದ ಖರ್ಚನ್ನು ಕೂಡ ಕೇಂದ್ರ ಸರ್ಕಾರ ಕೊಡುವಂತೆ ಸರ್ವೋಚ್ಚ ನ್ಯಾಯಾಲಯ ಕೇಂದ್ರಕ್ಕೆ ನಿರ್ದೇಶನ ನೀಡಬೇಕು. ಸರಕಾರದ ಈ ಒಂದು ಮೊಂಡು ಹಠಕ್ಕೆ ನೂರಾರು ಜನ ರೈತರು ಈಗಾಗಲೇ ಪ್ರಾಣವನ್ನು ಕಳೆದುಕೊಂಡಿದ್ದಾರೆ, ಇಂಥ ಕಾಯ್ದೆಗಳನ್ನು ತರುವಾಗ ಲೋಕಸಭೆಯಲ್ಲಿ ಚರ್ಚಿಸಿ ಅದನ್ನು ಸಾಧಕ-ಬಾಧಕ ವನ್ನು ವಿಚಾರಿಸಿ ಜಾರಿಗೊಳಿಸಬೇಕು. ಕರ್ನಾಟಕದಲ್ಲಿ ಭೂ ಸುಧಾರಣೆ ಎಂಬ ಹೆಸರಿನಲ್ಲಿ ಜಾರಿಗೊಳಿಸಿದ 2 ಕರಾಳ ಕಾಯ್ದೆಗಳನ್ನು ಕೂಡ ರದ್ದುಗೊಳಿಸಬೇಕು ಇದರಿಂದ ರೈತರಿಗೆ ಬಹಳಷ್ಟು ತೊಂದರೆಗಳು ಉಂಟಾಗುತ್ತವೆ. ಆದ್ದರಿಂದ ಈ ಕಾಯ್ದೆಗಳನ್ನು ಕೂಡ ರದ್ದುಪಡಿಸಬೇಕೆಂದು ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಎಲ್ಲೂರು ಶಶಿಧರ್ ಶೆಟ್ಟಿ ಅವರು ಮನವಿ ಮಾಡಿದ್ದಾರೆ.

Advertisement
Advertisement
Recent Posts
Advertisement