Advertisement

'ಹಿಜಾಬ್ ವಿರೋಧಿ ಅಭಿಯಾನ'ದಲ್ಲಿ ಸಕ್ರೀಯಳಾಗಿದ್ದ ದಿವ್ಯಾ ಹಾಗರಗಿ ಮತ್ತು ಬಂಧನಕ್ಕೊಳಗಾಗುವ ಸಂಧರ್ಭದಲ್ಲಿ ಆಕೆ ಮಾನ(?) ರಕ್ಷಣೆಗಾಗಿ ಉಪಯೋಗಿಸಿದ ಹಿಜಾಬ್!

Advertisement
ಬರಹ: ಡಾ. ಸುಬ್ರಹ್ಮಣ್ಯ ಭಟ್., ಬೈಂದೂರು. (ಲೇಖಕರು ಜನಪರ ಚಿಂತಕರು)

ಪಿ ಎಸ್ ಐ ಪರೀಕ್ಷೆಯ ಅಕ್ರಮದಲ್ಲಿ ಪ್ರಮುಖ ಆರೋಪಿಯಾದ ದಿವ್ಯಾ ಹಾಗರಗಿ ಹಿಜಾಬ್ ಧರಿಸಿ ಜೈಲಿಗೆ ಹೋಗುತ್ತಿರುವ ದೃಶ್ಯ ಕಂಡು ಅಚ್ಚರಿಯಾಯಿತು…! ಏಕೆಂದರೆ ಹಿಜಾಬ್ ಅನ್ನು ತಮ್ಮ ಮಾನರಕ್ಷಣೆಗಾಗಿ ಹಾಗೂ ಸಾಂಪ್ರದಾಯಿಕ ಉಡುಗೆ ಎಂದು ಮುಸ್ಲಿಂ ಹೆಣ್ಣುಮಕ್ಕಳು ಧರಿಸಿ ಕಾಲೇಜಿಗೆ ಬರುತ್ತೇವೆ ಎಂದು ಹೇಳಿದಾಗ ಅದರ ವಿರುದ್ಧ ಧ್ವನಿ ಎತ್ತಿ, ತಿಲಕ ಇಡುವ ಅಭಿಯಾನದಲ್ಲಿ ಈ ದಿವ್ಯಾ ಹಾಗರಗಿ ಕೂಡ ಇದ್ದರು…!
ಆದರೆ, ಈಗ ಗಂಭೀರ ಪ್ರಕರಣವೊಂದರ ಪ್ರಮುಖ ಆರೋಪಿಯಾಗಿ ಬಂಧನಕ್ಕೆ ಒಳಗಾಗಿ ಜೈಲು ಸೇರುವಾಗ ಮುಖಕ್ಕೆ ಹಾಗೂ ತಲೆ, ಕುತ್ತಿಗೆಗೆ ಶಿರವಸ್ತ್ರ ಅಥವಾ ಹಿಜಾಬ್ ಅನ್ನು ಧರಿಸಿ ತನ್ನ ಮಾನರಕ್ಷಣೆ ಮಾಡಿಕೊಂಡದ್ದು ತಪ್ಪೇನಿಲ್ಲ. ಆದರೆ ಪ್ರತಿಯೊಂದು ಹೆಣ್ಣಿಗೂ ಅವಳು ಯಾವುದೇ ಧರ್ಮ, ಜಾತಿಯವಳಾಗಲೀ ಅವಳದ್ದೇ ಆದ ಮಾನ ಮರ್ಯಾದೆಗಳಿರುತ್ತವೆ ಹಾಗಾಗಿ ಅದರ ರಕ್ಷಣೆಗಾಗಿ ಅವಳದ್ದೇ ಆದ ಸಾಂಪ್ರದಾಯಿಕ ಉಡುಗೆ ತೊಡುತ್ತಾಳೆ. ಅದು ಸೀರೆ, ಚೂಡಿದಾರ, ನೈಟಿ, ಹಿಜಾಬ್, ಬುರ್ಕಾ ಸೇರಿದಂತೆ ಯಾವುದೇ ಇರಬಹುದು. ಅದು ಆಕೆಯ ವೈಯಕ್ತಿಕ ಆಯ್ಕೆ. ಅದನ್ನು ತೊಟ್ಟಾಗ ಅವಳಿಗೆ ಒಂದು ತೃಪ್ತಿ, ಭದ್ರತೆ, ಶಿಸ್ತಿನ ಭಾವ ಇರುತ್ತವೆ. ಅದರಂತೆಯೇ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಬೇಕೆಂದು ಕೇಳಿದ್ದು. ಅದರ ಅವಶ್ಯಕತೆ ಹಾಗೂ ಮಾನರಕ್ಷಣೆಗೆ ಚಿಕ್ಕ ಬಟ್ಟೆಯ ಚೂರು ಎಷ್ಟು ಸಹಕಾರಿಯಾಗುತ್ತದೆ ಎನ್ನುವುದರ ಸತ್ಯದರ್ಶನ ಬಹುಶ: ದಿವ್ಯಾ ಹಾಗರಗಿ ಅವರಿಗೆ ಆಗಿದೆ ಅನ್ನಿಸುತ್ತೆ. ಅವರು ಆರೋಪಿ ಅಷ್ಟೇ, ಅಪರಾಧ ಮಾಡಿದ್ದಾರೋ ಇಲ್ಲವೋ ನ್ಯಾಯಾಲಯ ತೀರ್ಮಾನಿಸುತ್ತದೆ, ಆದರೆ ಅಲ್ಲಿಯ ವರೆಗೆ ಅವರ ಮುಖವನ್ನು ಸಮಾಜಕ್ಕೆ ತೋರಿಸಲು ಅವರಿಗೆ ಮುಜುಗರವಾಗಿದೆ ಅನ್ನಿಸುತ್ತೆ. ಅಂತಹ ಮುಜುಗರದಿಂದ ರಕ್ಷಿಸಿದ್ದು ಈ ಶಿರವಸ್ತ್ರ ಅಥವಾ ಹಿಜಾಬ್ ಹಾಗೂ ಮುಖ ಮುಚ್ಚಿದ ವಸ್ತ್ರ….!
ಅನಗತ್ಯವಾಗಿ ಬೇರೆಯವರ ವಸ್ತ್ರಸಂಹಿತೆಯನ್ನು ಹೀಗಳೆಯುವ ದಿವ್ಯಾ ಹಾಗರಗಿ ಅಂತಹ ಮನಸ್ಥಿತಿ ಇರುವವರೇ ಇನ್ನಾದರೂ ಬೇರೆಯವರ ವೈಯಕ್ತಿಕ ಬದುಕಿನ ಕುರಿತು ಗೊಂದಲವನ್ನು ಸೃಷ್ಟಿಸದಿರಿ. ದಿವ್ಯಾ ಆಗಲೀ ಬೇರೆ ಯಾವ ಹೆಣ್ಣು ಮಕ್ಕಳೇ ಇರಲಿ ಅವರೆಲ್ಲಾ ನಮ್ಮವರೇ, ಅವರು ತಮ್ಮ ಮಾನ ಮರ್ಯಾದೆ ಕಾಪಾಡಿಕೊಳ್ಳುವಲ್ಲಿ ಅನಾವಶ್ಯಕ ಮೂಗು ತೂರಿಸಿ ಅವರ ನೆಮ್ಮದಿ ಕೆಡಿಸದಿರಿ….! ಹೆಣ್ಣು ಸಮಾಜದ ಕಣ್ಣು ಆಕೆಯ ಕುರಿತು ಗೌರವ ಇರಲಿ, ಅವಳು ಮುಸ್ಲಿಂ ಆಗಲೀ, ಹಿಂದೂ ಆಗಲೀ, ಕ್ರಿಶ್ಚಿಯನ್ ಆಗಲೀ ಹೆಣ್ಣು ಹೆಣ್ಣೇ… ಅವಳ ರಕ್ಷಣೆ ನಮ್ಮೆಲ್ಲರ ಹೊಣೆ…. ಇನ್ನಾದರೂ ಯೋಚನಾ ವಿಧಾನವನ್ನು ಬದಲಿಸಿಕೊಳ್ಳಿ‌.
Advertisement
Advertisement
Recent Posts
Advertisement