Homepageರಾಜ್ಯನಾನು ಪ್ರಶ್ನಿಸಿದ್ದು ಆರೆಸ್ಸೆಸನ್ನು. ಉತ್ತರಿಸುತ್ತಿರುವವರು ಬಿಜೆಪಿಗರು. ಆರೆಸ್ಸೆಸ್ಸಿಗರೇನು ಓದು ಬರಹ ಬಾರದವರೇ? ಅವರೇಕೆ ಉತ್ತರಿಸುತ್ತಿಲ್ಲ: ಸಿದ್ದರಾಮಯ್ಯ ಪ್ರಶ್ನೆ ನಾನು ಪ್ರಶ್ನಿಸಿದ್ದು ಆರೆಸ್ಸೆಸನ್ನು. ಉತ್ತರಿಸುತ್ತಿರುವವರು ಬಿಜೆಪಿಗರು. ಆರೆಸ್ಸೆಸ್ಸಿಗರೇನು ಓದು ಬರಹ ಬಾರದವರೇ? ಅವರೇಕೆ ಉತ್ತರಿಸುತ್ತಿಲ್ಲ: ಸಿದ್ದರಾಮಯ್ಯ ಪ್ರಶ್ನೆ Advertisement ನಾನು ಪ್ರಶ್ನೆ ಮಾಡಿದ್ದು ಆರ್.ಎಸ್.ಎಸ್ ಎಂಬ ಸಂಸ್ಥೆಯನ್ನು, ಉತ್ತರಿಸುತ್ತಿರುವವರು ಬಿಜೆಪಿ ನಾಯಕರು. ಇವರು ಯಾಕೆ ಎದೆ ಬಡಿದುಕೊಳ್ಳುತ್ತಿದ್ದಾರೆ? ಆರ್.ಎಸ್.ಎಸ್ ನಾಯಕರು ಓದು-ಬರಹ ಗೊತ್ತಿಲ್ಲದವರೇ? ಅವರೇ ಉತ್ತರಿಸಲಿ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಆರೆಸ್ಸೆಸ್ ನಾಯಕರುಗಳಿಗೆ ಸವಾಲೆಸೆದಿದ್ದಾರೆ.ಹಿಂದೂ ಧರ್ಮದ ರಕ್ಷಣೆಗಾಗಿಯೇ ಅವತಾರ ಎತ್ತಿ ಬಂದಂತೆ ಮಾತನಾಡುತ್ತಿರುವ ಆರ್.ಎಸ್.ಎಸ್ ನಾಯಕರು ಬೆಂಬಲಿಸುತ್ತಿರುವುದು ಮಾತ್ರ ಬಿಜೆಪಿ ಎಂಬ ರಾಜಕೀಯ ಪಕ್ಷವನ್ನು. ಯಾಕೆ ಬಿಜೆಪಿಯಲ್ಲಿರುವವರು ಮಾತ್ರ ಹಿಂದೂಗಳೇ? ಬಿಜೆಪಿಯಲ್ಲಿರುವವರು ಮಾತ್ರ ಹಿಂದೂಗಳೆಂದು ಯಾವ ಆಧಾರದಲ್ಲಿ ಆರ್.ಎಸ್.ಎಸ್ ತೀರ್ಮಾನಿಸಿದೆ? ಆರ್.ಎಸ್.ಎಸ್ ದೃಷ್ಟಿಯಲ್ಲಿ ಹಿಂದೂ ಆಗಲು ಹೊಂದಿರಬೇಕಾದ ಅರ್ಹತೆಗಳೇನು? ಎಂದವರು ಪ್ರಶ್ನಿಸಿದ್ದಾರೆ.ಆರ್.ಎಸ್.ಎಸ್ ಪ್ರತಿಪಾದಿಸುವ ಹಿಂದೂ ಧರ್ಮದಲ್ಲಿ ದಲಿತರು, ಹಿಂದುಳಿದ ಜಾತಿಗಳ ಸ್ಥಾನಮಾನ ಏನು? ಆರ್.ಎಸ್.ಎಸ್ ಯಾಕೆ ಮೀಸಲಾತಿ, ಭೂಸುಧಾರಣೆಯನ್ನು ವಿರೋಧಿಸುತ್ತಾ ಬಂದಿದೆ? ಇದರ ಫಲಾನುಭವಿಗಳು ಹಿಂದುಗಳು ಅಲ್ಲವೇ?ಆರ್.ಎಸ್.ಎಸ್ ದೃಷ್ಟಿಯಲ್ಲಿ ಹಿಂದೂ ಆಗಲೂ 40% ಕಮಿಷನ್ ಹೊಡೆಯಬೇಕಾ? ಬ್ಲೂ ಫಿಲ್ಮ್ ನೋಡಬೇಕಾ? ಗಣಿ ಲೂಟಿ ಮಾಡಬೇಕಾ? ಚೆಕ್ ನಲ್ಲಿ ದುಡ್ಡು ಪಡೆದು ಜೈಲಿಗೆ ಹೋಗಬೇಕಾ? ರೇಪ್ ಮಾಡಬೇಕಾ? ಏನು ಮಾಡಬೇಕು? ಹೇಳಿಬಿಡಿ ಎಂದು ಹೇಳಿದ್ದಾರೆ.ಹಸಿದ ಹೊಟ್ಟೆಗೆ ಅನ್ನ, ಎಳೆಯ ಮಕ್ಕಳಿಗೆ ಹಾಲು, ರೈತರ ಬೆಳೆಗೆ ನ್ಯಾಯದ ಬೆಲೆ, ಯುವಜನರಿಗೆ ಉದ್ಯೋಗ, ಅವಕಾಶ ವಂಚಿತರಿಗೆ ಸಮಾನ ಅವಕಾಶ, ಜಾತಿ ತಾರತಮ್ಯದಿಂದ ಅನ್ಯಾಯಕ್ಕೀಡಾದವರಿಗೆ ಸಾಮಾಜಿಕ ನ್ಯಾಯ.. ಹಿಂದೂ ಆಗಲು ಇಷ್ಟು ಅರ್ಹತೆ ಸಾಲದೇ? ಹಿಂದೂಗಳೆಲ್ಲ ಒಂದು ಎಂದು ಕಂಠಶೋಷಣೆ ಮಾಡುತ್ತಿರುವ ಆರ್.ಎಸ್.ಎಸ್ ತನ್ನ ಸಂಘಟನೆಯ ಪದಾಧಿಕಾರಗಳನ್ನೆಲ್ಲಾ ಯಾಕೆ ಒಂದು ಜಾತಿಗೆ ಮೀಸಲಿಟ್ಟಿದೆ? ಆರ್.ಎಸ್.ಎಸ್ ನ ಪದಾಧಿಕಾರಿಗಳಲ್ಲಿ ಎಷ್ಟು ಮಂದಿ ದಲಿತರು, ಹಿಂದುಳಿದ ಜಾತಿಯವರಿದ್ದಾರೆ ಎಂದವರು ಕೇಳಿದ್ದಾರೆ.ಆರ್.ಎಸ್.ಎಸ್ ದೃಷ್ಟಿಯಲ್ಲಿ ಹಿಂದೂ ಧರ್ಮದ ವ್ಯಾಖ್ಯಾನ ಏನು? ಹಿಂದೂ ಆಗಲು ಹಿಂದೂ ತಂದೆ-ತಾಯಿ ಹೊಟ್ಟೆಯಲ್ಲಿ ಹುಟ್ಟಿದರೆ ಸಾಕಾ? ಇಲ್ಲವೇ ಬಿಜೆಪಿ ಎಂಬ ರಾಜಕೀಯ ಪಕ್ಷದ ಸದಸ್ಯರಾಗಬೇಕಾ?ಹಿಂದೂಗಳೆಲ್ಲ ಒಂದು ಎಂದು ಕಂಠ ಶೋಷಣೆ ಮಾಡುತ್ತಿರುವ ಆರ್.ಎಸ್.ಎಸ್ ಹಿಂದೂ ಧರ್ಮದ ಅನಿಷ್ಠಗಳಾದ ಅಸ್ಪೃಶ್ಯತೆ, ಅಸಮಾನತೆ, ಮೂಢ ನಂಬಿಕೆ, ಕಂದಾಚಾರಗಳ ಬಗ್ಗೆ ಮಾತನಾಡುತ್ತಿಲ್ಲ ಯಾಕೆ ಎಂದವರು ಕೇಳಿದ್ದಾರೆ.ಹಿಂದೂ ಧರ್ಮದೊಳಗಿನ ಅನಿಷ‍್ಠಗಳನ್ನು ಪ್ರಶ್ನಿಸಿದ ಮಾತ್ರಕ್ಕೆ ನನ್ನಂತಹವರು ಹಿಂದೂ ವಿರೋಧಿ ಆಗುವುದಾದರೆ? ಇದೇ ಕೆಲಸ ಮಾಡಿರುವ ಸ್ವಾಮಿ ವಿವೇಕಾನಂದ, ಕನಕದಾಸ, ನಾರಾಯಣ ಗುರುಗಳನ್ನು ಏನೆಂದು ಕರೆಯುತ್ತೀರಿ?ಆರ್.ಎಸ್.ಎಸ್ ನಾಯಕರೇ ನಿಮ್ಮ ಆತ್ಮವನ್ನು ಸಾಕ್ಷಿಯಾಗಿಟ್ಟುಕೊಂಡು ಹೇಳಿಬಿಡಿ. ನಿಮ್ಮ ನಿಷ್ಠೆ ರಾಷ್ಟ್ರಧ್ವಜಕ್ಕೋ? ಭಗವಾ ಧ್ವಜಕ್ಕೋ? ನಿಮ್ಮ ನಿಷ್ಠೆ ಸಂವಿಧಾನಕ್ಕೋ ? ಮನುಸ್ಮೃತಿಗೋ? ನಿಮ್ಮ ನಿಷ್ಠೆ ಗಾಂಧೀಜಿಗೋ? ಗೋಡ್ಸೆಗೋ? ಎಂದು ಪ್ರಶ್ನಿಸಿದ್ದಾರೆಆರ್.ಎಸ್.ಎಸ್ ನಾಯಕರೇ, ಈ ರಿಮೋಟ್ ಕಂಟ್ರೋಲ್ ರಾಜಕೀಯ ಬಿಟ್ಟು ಬಿಡಿ. ನಿಮ್ಮ ತತ್ವ-ಸಿದ್ದಾಂತದ ಬಗ್ಗೆ ಅಷ್ಟೊಂದು ವಿಶ್ವಾಸ ನಿಮಗಿದ್ದರೆ ಈ ಹಿಂಬಾಗಿಲ ರಾಜಕೀಯ ಮಾಡದೆ ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಡಿ, ಗೆಲುವು ಕೋಮುವಾದದ್ದೋ? ಜಾತ್ಯತೀತತೆಯದ್ದೋ? ನೋಡಿಯೇ ಬಿಡೋಣ ಎಂದವರು ಸವಾಲೆಸೆದಿದ್ದಾರೆ. Show Full Article Advertisement Next Read: ಸಾವರ್ಕರ್ ರನ್ನು "ವೀರ್" ಎಂದು ಕರೆದುಕೊಂಡದ್ದು ಸ್ವತಃ ಸಾವರ್ಕರ್ ರವರೇ ವಿನಃ ಈ ದೇಶದ ಚರಿತ್ರೆಯಲ್ಲ! » Advertisement Recent Posts ಜೆ.ಪಿ ಹೆಗ್ಡೆ ಸಂಸದರಾಗಲಿ. ಕೋಟ ಪರಿಷತ್ ವಿಪಕ್ಷ ನಾಯಕರಾಗಿ ಮುಂದುವರಿಯಲಿ! "ದೇಶದ ಸಂಪತ್ತು ಸಮಾನ ಹಂಚಿಕೆ"ಯ ರಾಹುಲ್ ಗಾಂಧಿ ಯೋಜನೆಗಳು ತಪ್ಪೇ? ಜಯಪ್ರಕಾಶ ಹೆಗ್ಡೆ ಮತಯಾಚನೆ: ಫೋಟೋ ಸುದ್ದಿ ಈ ಬಾರಿಯ ಜೋಡುಕರೆ ಕಂಬಳದಲ್ಲಿ ಐಎಂಎ (ರಿ) ಮಂಗಳೂರು ನೇತೃತ್ವದ ತಂಡ! ಡಾ. ಅಂಬೇಡ್ಕರ್ ಜಯಂತಿ ದಿನ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ವಿಶೇಷ ಪ್ರಚಾರ ಅಭಿಯಾನ! ಕುಚ್ಚಲಕ್ಕಿ ನೀಡುವ ಕುರಿತು ಸುಳ್ಳು ಹೇಳಿದ್ದ ಕೋಟ v/s ನುಡಿದಂತೆ ನಡೆವ ಜೆ.ಪಿ ಹೆಗ್ಡೆ ಜಯಪ್ರಕಾಶ ಹೆಗ್ಡೆಯವರೇ ಸಂಸದರಾಗಬೇಕು! ಏಕೆಂದರೆ... ಕಾಂಗ್ರೆಸ್ ನಾಯಕ ಹೇರಿಕುದ್ರು ಗಂಗಾಧರ ಶೆಟ್ಟಿ ಇನ್ನಿಲ್ಲ. ಮಾರ್ಚ್ 12: ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರ್ಪಡೆ! ಕಾಲಜ್ಞಾನ ಭವಿಷ್ಯದ ಪ್ರಕಾರ ಪ್ರಿಯಾಂಕಾ ಗಾಂಧಿ ಪ್ರಧಾನಿ: ನೊಣವಿನಕೆರೆ ಗುರೂಜಿ! ಚುನಾವಣಾ ಬಾಂಡ್ ನಿಷೇಧ- ಸುಪ್ರಿಂ ಕೋರ್ಟ್ ತೀರ್ಪು ಶ್ಲಾಘನೀಯ: ಸಿದ್ದರಾಮಯ್ಯ ಮಂಗಳೂರು: ಸೈಂಟ್ ಜೆರೋಜಾ ಶಾಲೆಯಲ್ಲಿ ನಿಜಕ್ಕೂ ನಡೆದದ್ದು ಏನು? ಕಾಂಗ್ರೆಸ್ ಪುನಶ್ಚೇತನ ಯಾವಾಗ? ಉತ್ತರದ ವೈಫಲ್ಯಕ್ಕೆ ದಕ್ಷಿಣಕ್ಕೆ ಶಿಕ್ಷೆ? - ಮಟ್ಟು "ಇದು ವಿನಾಶಕಾರಿ ಬಜೆಟ್" ಸಿದ್ದರಾಮಯ್ಯ ವಿಶ್ಲೇಷಣೆ