Advertisement

ರೋಟರಿ ಎಂದರೆ ಸ್ನೇಹ, ಸಹಕಾರ ಹಾಗೂ ಸೇವಾಮನೋಭಾವದ ಸಂಕೇತ: ರೋಟರಿ ಕ್ಲಬ್ ಸಾಯ್ಬರಕಟ್ಟೆ ಪದಪ್ರಧಾನ ಸಮಾರಂಭ

Advertisement
ರೋಟರಿ ಎಂದರೆ ಸ್ನೇಹ, ಸಹಕಾರ ಹಾಗೂ ಸೇವಾಮನೋಭಾವದ ಸಂಕೇತ. ಸಾಯ್ಬರಕಟ್ಟೆ ರೋಟರಿಕ್ಲಬ್ ಹಲವು ವರ್ಷಗಳಿಂದ ಪರಿಸರದಲ್ಲಿ ಉತ್ತಮ ಕೆಲಸಗಳಿಂದ ಪ್ರಸಿದ್ದವಾಗಿದೆ. ಕ್ರೀಯಾಶೀಲ ಯುವಕ ಸನ್ಮತ್ ಹೆಗ್ಡೆಯವರು ಅಧ್ಯಕ್ಷರಾಗಿ ಪದಪ್ರಧಾನ ಮಾಡುವ ಈ ಸಂಧರ್ಭದಲ್ಲಿ ಕೊರೊನಾ ಲಾಕ್‌ಡೌನ್ ವೇಳೆಯಲ್ಲಿ ಅಶಕ್ತರಿಗೆ ಮಾಡಿದ ಸೇವೆಗಾಗಿ ಡಾ. ಅವಿನ್ ಆಳ್ವಾ ಮತ್ತು ಜಯರಾಂ ಆಚಾರ್ಯ ಅವರನ್ನು ಸನ್ಮಾನಿಸುತ್ತಿರುವುದು ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡಿದಂತಾಗಿದೆ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಲಯ 9ರ ಮಾಜಿ ಅಸಿಸ್ಟೆಂಟ್ ಗವರ್ನರ್ ಪಿಎಚ್‌ಎಫ್ ಮೋಹನ್. ಡಿ ಹೇಳಿದ್ದಾರೆ.

ಅವರು ಜುಲೈ10 ಆದಿತ್ಯವಾರ ಸಾಯ್ಬರಕಟ್ಟೆ ಸ್ವಾಗತ್ ಮಿನಿಹಾಲ್‌ನಲ್ಲಿ ನಡೆದ ಪದಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ಸನ್ಮತ್ ಹೆಗ್ಡೆ, ವಲಯ 9ರ ಅಸಿಸ್ಟೆಂಟ್ ಗವರ್ನರ್ ಪಿಎಚ್‌ಎಫ್ ಆನಂದ ಶೆಟ್ಟಿ., ಝೋನಲ್ ಲೆಫ್ಟಿನೆಂಟ್ ಪ್ರಾಣೇಶ್ ಎಸ್.ಕೆ., ಹಿಂದಿನ ಅವಧಿಯ ಅಸಿಸ್ಟೆಂಟ್ ಗವರ್ನರ್ ಪಿಎಚ್‌ಎಫ್ ಪದ್ಮನಾಭ ಕಾಂಚನ್ ಕೆ., ಹಿಂದಿನ ಅವಧಿಯ ಝೋನಲ್ ಲೆಫ್ಟಿನೆಂಟ್ ವಿಜಯಕುಮಾರ್ ಶೆಟ್ಟಿ ಕೆ ನಿರ್ಗಮನ ಅಧ್ಯಕ್ಷ ಯು. ಪ್ರಸಾದ್ ಭಟ್, ಪಿಎಚ್‌ಎಫ್ ಅಣ್ಣಯ್ಯ ದಾಸ್, ನಿಲಕಂಠ ರಾವ್ ಮುಂತಾದವರು ಉಪಸ್ಥಿತರಿದ್ದರು.
Advertisement
Advertisement
Recent Posts
Advertisement