Advertisement

ಕೊಳ್ಕೆರೆ ವಿಜಯಲಕ್ಷ್ಮಿ ಎಸ್. ಹೆಗ್ಡೆ ನಿಧನ | ಬುಧವಾರ ಬೆಳಿಗ್ಗೆ ಅಂತ್ಯಕ್ರಿಯೆ|

Advertisement

ಕುಂದಾಪುರ ತಾಲೂಕು ಬಸ್ರೂರಿನ ಪ್ರಸಿದ್ಧ ಕೊಳ್ಕೆರೆ ಮನೆತನದ ಕೊಳ್ಕೆರೆ ವಿಜಯಲಕ್ಷ್ಮಿ. ಎಸ್ ಹೆಗ್ಡೆ (76) ಅವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಮಂಗಳವಾರ ಸಂಜೆ ನಿಧನರಾಗಿದ್ದಾರೆ. ಮೃತರು ನಿವೃತ್ತ ಶಿಕ್ಷಕ ಶಿರಿಯಾರ ಶ್ರೀಧರ ಹೆಗ್ಡೆಯವರ ಧರ್ಮಪತ್ನಿಯಾಗಿದ್ದಾರೆ.

ಮೃತರು ಪುತ್ರ ಕುಂದಾಪುರದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ವಿಕಾಸ್ ಹೆಗ್ಡೆ ಹಾಗೂ ಪುತ್ರಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದೇವಾನಂದ ಶೆಟ್ಟಿ ಅವರ ಪತ್ನಿ ವರ್ಷಾ ಶೆಟ್ಟಿ ಮತ್ತು ಅಸಂಖ್ಯಾತ ಬಂಧುಬಾಂಧವರನ್ನು ಅಗಲಿದ್ದಾರೆ.

ಬುಧವಾರ ಬೆಳಗ್ಗೆ 9 ಗಂಟೆಗೆ ಪಾರ್ಥಿವ ಶರೀರವನ್ನು ಕೊಳ್ಕೆರೆ ಮನೆಗೆ ತಂದು ನಂತರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement
Advertisement
Recent Posts
Advertisement