Advertisement

ಉಡುಪಿ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ: ಅಧ್ಯಕ್ಷರಾಗಿ ಅಲೆವೂರು ಹರೀಶ್ ಕಿಣಿ ಅವಿರೋಧ ಆಯ್ಕೆ.

Advertisement

ಕನ್ನಡ ಮೀಡಿಯಾ ಡಾಟ್ ಕಾಂ ಸುದ್ದಿ-

ಉಡುಪಿ: ಪ್ರತಿಷ್ಠಿತ ಉಡುಪಿ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿ (ಲಿ.) ಉಡುಪಿ ಇದರ ಅಧ್ಯಕ್ಷರಾಗಿ ಅಲೆವೂರು ಹರೀಶ್ ಕಿಣಿ ಮತ್ತು ಉಪಾಧ್ಯಕ್ಷರಾಗಿ ಮಹೇಶ್ ಅಂಚನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


(ಅಲೆವೂರು ಹರೀಶ್ ಕಿಣಿ)

ನಿರ್ದೇಶಕರಾಗಿ ಶೇಖರ್ ಪಾಲನ್, ವಿನ್ಸೆಂಟ್ ಸಾಲ್ದಾನಾ, ರಮೇಶ್ ಪೂಜಾರಿ, ಸುಕುಮಾರ್ ಗುಜರನ್, ವಿದ್ಯಾ ದಿನಕರ, ಸುನೀತಾ ಮದುಸೂದನ್, ವೈಷ್ಣವಿ ವಿ. ನಾಯಕ್, ಸುರೇಶ್ ಪಾಲನ್, ರಾಜೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.


(ಮಹೇಶ್ ಅಂಚನ್)

ಸಹಕಾರ ಅಭಿವೃದ್ಧಿ ಅಧಿಕಾರಿ ರೋಹಿತ್ ಚುನವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಕಾರ್ಯನಿರ್ವಾಹಕ ಜಗದೀಶ್ ಅಮೀನ್ ಸಹಕರಿಸಿದರು.

ಈ ಸಂಧರ್ಭದಲ್ಲಿ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಸಾಮಾಜಿಕ ಕಾರ್ಯಕರ್ತ, ಉದ್ಯಮಿ ಮಧುಸೂದನ್ ಹೇರೂರು ರವರು ಹಾರಹಾಕಿ ಅಭಿನಂಧಿಸಿದರು.

Advertisement
Advertisement
Recent Posts
Advertisement