Advertisement

4 ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬಿಜೆಪಿಗಿಂತ 9,44,444 ಹೆಚ್ಚು ಮತ ಬಂದಿದೆ: ಬಿ.ಕೆ ಹರಿಪ್ರಸಾದ್

Advertisement

ಚುನಾವಣೆಯಲ್ಲಿ ನಾವು ಅಧಿಕಾರದಿಂದ ದೂರ ಇದ್ದೇವೆ, ಆದರೆ ಜನರ ನಂಬಿಕೆ ಮತ್ತು ಪ್ರೀತಿಯಿಂದಲ್ಲ.! ನಮ್ಮ ಪಕ್ಷಕ್ಕೆ ಜನರು ಅಧಿಕಾರ ನೀಡದೆ ಇರಬಹುದು, ಆದ್ರೆ ಮನದಾಳದಿಂದ ಮತ ನೀಡಿದ್ದಾರೆ. ಅವರಿಗೆ ತಲೆಬಾಗಿದ್ದೇವೆ, ಕೃತಜ್ಞರಾಗಿದ್ದೇವೆ ಎಂದು ಕರ್ನಾಟಕ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

ಚುನಾವಣೆ ಎಂದರೆ ಕೇವಲ ಅಂಕಿ ಸಂಖ್ಯೆಗಳ ಜಾದು ಅಲ್ಲ. ಸಂವಿಧಾನದ ರೀತಿ-ರಿವಾಜುಗಳ ಜೊತೆ ಅಲ್ಲೊಂದು ನಂಬಿಕೆ ಇದೆ, ವಿಸ್ವಾಸವಿದೆ. ಜನರ ಬದುಕಿನ ಪ್ರಶ್ನೆಗಳಿವೆ. ಕಾಂಗ್ರೆಸ್ ಪಕ್ಷ ಈ ನಾಲ್ಕು ರಾಜ್ಯಗಳಲ್ಲಿ ಜನರ ಬಳಿ ಇಂತಹ ಪ್ರಶ್ನೆಗಳನ್ನ ಇಟ್ಟುಕೊಂಡೇ ಮತ ಕೇಳಿದ್ದೇವೆ. ಅದಕ್ಕೆ ಮತದಾರರು ಅಭೂತಪೂರ್ವ ಸ್ಪಂದನೆ ನೀಡಿದ್ದಾರೆ. ಬಿಜೆಪಿಗಿಂತಲೂ ಹೆಚ್ಚು ಮತವನ್ನೂ ನೀಡಿದ್ದಾರೆ‌ ಎಂದವರು ಹೇಳಿದರು.

ನಾಲ್ಕು ರಾಜ್ಯದಲ್ಲಿ ನಮ್ಮ ಪಕ್ಷಕ್ಕೆ ಬಿಜೆಪಿ ಪಕ್ಷಕ್ಕಿಂತ 9,44,444 ಹೆಚ್ಚು ಮತ ಬಂದಿದೆ. ಕಾಂಗ್ರೆಸ್ ಪಕ್ಷಕ್ಕೆ ಒಟ್ಟು 4,90,77,907 ಮತಗಳು ಬಂದರೆ, ಬಿಜೆಪಿಗೆ 4,81,33,463 ಮತಗಳು ಬಂದಿವೆ. ಇದು ಕೋಮು ಧ್ರುವೀಕರಣ, ದ್ವೇಷ ರಾಜಕಾರಣ ಸೋಲಲ್ಲದೇ ಬೇರೇನಲ್ಲ ಎಂದು ಬಿ.ಕೆ. ಹೆಚ್ ಹೇಳಿದ್ದಾರೆ

ಛತ್ತೀಸ್ಗಢದಲ್ಲಿ ಬಿಜೆಪಿಗೆ 46.27%, ಕಾಂಗ್ರೆಸ್ ಪಕ್ಷಕ್ಕೆ 42.23%, ಮಧ್ಯಪ್ರದೇಶದಲ್ಲಿ ಬಿಜೆಪಿಗೆ 48.55% ನಮ್ಮ ಪಕ್ಷಕ್ಕೆ 40.40%, ರಾಜಸ್ತಾನದಲ್ಲಿ 41.69% ನಮ್ಮ ಪಕ್ಷಕ್ಕೆ 39.53% ನೀಡಿದೆ. ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಪಕ್ಷವನ್ನು ಸರಾಸರಿ ಶೇ 50ರಷ್ಟು ಮತದಾರರು ನಿರಾಕರಿಸಿರುವುದು ಸ್ಪಷ್ಟ ಎಂದವರು ಹೇಳಿದರು.

ನಾವು ಅಧಿಕಾರದಿಂದ ದೂರ ಇದ್ದರೂ, ಜನರ ಬದುಕು ಬವಣೆಗಳ ಬಗ್ಗೆ ಧ್ವನಿಯಾಗುತ್ತೇವೆ, ದ್ವೇಷ ರಾಜಕೀಯದ ವಿರುದ್ಧ ಪ್ರೀತಿ ವಿಸ್ವಾಸದ ರಾಜಕೀಯ ಮುಂದುವರೆಸುತ್ತೇವೆ. ಶ್ರೀಮತಿ ಸೋನಿಯಾ ಗಾಂಧಿ, ಶ್ರೀ ರಾಹುಲ್ ಗಾಂಧಿ , ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಾವು ಮತ್ತೆ ಭಾರತವನ್ನು ಒಗ್ಗೂಡಿಸುತ್ತೇವೆ ಎಂದು ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

Advertisement
Advertisement
Recent Posts
Advertisement