Advertisement

ಸ್ವತಂತ್ರ ಭಾರತದ ಇತಿಹಾಸದಲ್ಲಿ ದಾಖಲೆಯಾಗುಳಿವ ಮೋದಿ ಸಾಧನೆಗಳು!

Advertisement

ಸ್ವತಂತ್ರ ಭಾರತದ ಇತಿಹಾಸದಲ್ಲಿ ದಾಖಲೆಯಾಗುಳಿವ ಮೋದಿ ಸಾಧನೆಗಳು: ಮೋದಿ ವಿರೋಧಿಗಳು ಮತ್ತು ಬೆಂಬಲಿಗರು ತಿಳಿದುಕೊಳ್ಳಲೇ ಬೇಕಾದ ನಗ್ನಸತ್ಯಗಳು!

ಇದನ್ನೂ ಓದಿ: "ದೇಶಕ್ಕಾಗಿ ಆರೆಸ್ಸೆಸ್ ಬಿಟ್ಟೆ" ಪುಸ್ತಕ ವಿಮರ್ಶೆ

* ಗುಜರಾತ್ ಮಾದರಿ(?)ಯ ಅಭಿವೃದ್ಧಿಯ ಭ್ರಮೆ ಮೂಡಿಸಿ ಅಧಿಕಾರಕ್ಕೆ ಬಂದು ವಿದೇಶಗಳಿಗೆ ಗೋಮಾಂಸ ರಫ್ತಿನಲ್ಲಿ ಭಾರತವನ್ನು ನಂಬರ್ ಒನ್ ಆಗಿಸಿ, ದೇಶದೊಳಗೆ ಗೋವುಗಳ ಸಾಗಾಟ ಮಾಡುವವರ ವಿರುದ್ಧ ಇವರದ್ದೇ ಪಕ್ಷದವರು ವದಂತಿ ಹರಡುವ ಮೂಲಕ ಕೋಮುಗಲಭೆಗಳು ಆದಾಗ, ಅದೇ ಗೋವುಗಳ ಹೆಸರಿನಲ್ಲಿ ಅಮಾಯಕರ ಮೇಲೆ ಹಲ್ಲೆಗಳು ನಡೆದಾಗ, ಕೊಲೆಗಳಾದಾಗ, ಮಹಿಳೆಯರ ಹಾಗೂ ಎಳೆ ಬಾಲಕಿಯರ ಮೇಲೆ ಅತ್ಯಾಚಾರಗಳು ನಡೆದಾಗ, ಕೊಲೆಗಳಾದಾಗ ನವಿಲುಗಳಿಗೆ ಕಾಳು ಹಾಕುತ್ತಿದ್ದ, ಗಿಳಿಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಫೋಟೋ ಸೆಷನ್ಸ್ ನಡೆಸುತ್ತಿದ್ದ, ಡಿಜೆ ಸೌಂಡ್ ಹಾಗೂ ಲೇಸರ್ ಬೆಳಕಿಗೆ ಕೈ ಬೆರಳು ಕುಣಿಸುತ್ತಿದ್ದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು.

ಇದನ್ನೂ ಓದಿ: "ಜನರ ದಿಕ್ಕು ತಪ್ಪಿಸದಿರಿ" ಶ್ರೀನಿವಾಸ ಪೂಜಾರಿಯವರಿಗೆ ಬಹಿರಂಗ ಪತ್ರ

* ಸಿಎಜಿ ವ್ಯಾಪ್ತಿಗೆ ಬರುವ ಕೇಂದ್ರ ಸರ್ಕಾರದ 'ಪ್ರಧಾನ ಮಂತ್ರಿ ಪರಿಹಾರ ನಿಧಿ' ಎಂಬ ಅಧಿಕೃತವಾದ ಸಂಸ್ಥೆ ಇದ್ದರೂ ಕೂಡಾ ಕೊರೊನಾ ಲಾಕ್‌ಡೌನ್ ಸಮಯದಲ್ಲಿ 'ಪಿಎಂ ಕೇರ್ಸ್ ಫಂಡ್' ಎಂಬ ಹೆಸರಲ್ಲಿ ಖಾಸಗಿ ಫಂಡ್ ಒಂದನ್ನು ಆರಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿ, ಸಂತ್ರಸ್ತರಿಗೆ ಚಿಕ್ಕಾಸೂ ಸಹಾಯ ಧನ ಬಿಡುಗಡೆ ಮಾಡದೆ, ದಾನಿಗಳಿಗೆ ಹಾಗೂ ದೇಶದ ಜನರಿಗೆ ಸಂಗ್ರಹವಾದ ಹಣದ ವಿವರ ಮತ್ತು ಖರ್ಚು ವೆಚ್ಚಗಳ ವಿವರ ಕೊಡದೆ 'ಮಾಹಿತಿ ಹಕ್ಕು' ಅರ್ಜಿಯನ್ನು ತಿರಸ್ಕರಿಸುವ ಮೂಲಕ ವಂಚಿಸಿದ ಸ್ವತಂತ್ರ ಭಾರತದ ಮೊತ್ತ ಮೊದಲ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು.

ಇದನ್ನೂ ಓದಿ: 'ಗಾಂಜಾ ದುಷ್ಪರಿಣಾಮ' ದ ಕುರಿತು ವೈದ್ಯಕೀಯ ಸತ್ಯ ತಿಳಿದುಕೊಳ್ಳಿ.

*'ಕೇವಲ ಐವತ್ತು ದಿನಗಳ ಅವಕಾಶ ಕೊಡಿ, ದೇಶದೊಳಗಿನ ಕಪ್ಪುಹಣವನ್ನು ಸರ್ವನಾಶ ಮಾಡುತ್ತೇನೆ' ಎಂದು ಹೇಳಿ ಯಾವುದೇ ಪೂರ್ವತಯಾರಿ ಇಲ್ಲದೆ ರಾತ್ರೋರಾತ್ರಿ ನೋಟು ಬ್ಯಾನ್ ಮಾಡಿ, ಮಾರುಕಟ್ಟೆಯಲ್ಲಿದ್ದ ಕಪ್ಪು ಹಣವನ್ನು ಬಿಳಿಯಾಗಿಸಿಕೊಳ್ಳಲು ಅವಕಾಶ ಮಾಡಿಕೊಟ್ಟು, ಕಳೆದ ಅರವತ್ತು ವರ್ಷಗಳಲ್ಲಿ ನಿಧಾನವಾಗಿ ಸದೃಢ ವಾಗಿ ಬೆಳೆದು ನಿಂತ ದೇಶದ ಆರ್ಥಿಕತೆಯನ್ನು ಸರ್ವನಾಶ ಮಾಡಿ ಜನಸಾಮಾನ್ಯರು ಒಂದೊತ್ತಿನ ಊಟಕ್ಕೂ ಪರದಾಡುವಂತೆ ಮಾಡಿ, ಆ ನಂತರ ಜಪಾನ್ ಗೆ ತೆರಳಿ ಅಲ್ಲಿನ ಸಭೆಯೊಂದರಲ್ಲಿ 'ಆಟ್ ತಾರೀಖ್ ಕೋ ರಾತ್ ಆಟ್ ಭಜೆ... ಪಾಂಚ್ ಸೌ ಔರ್ ಹಝಾರ್ ರೂಪ್ಯೆ ಕಾ ನೋಟ್... ಬ್ಯಾನ್ ಹೋಗಯಾ... ದೇಶ್ ವಾಸಿಂ ಯೋಕಾ ಘರ್ ಮೇ ಶಾದಿ ಹೇ... ಫೈಸಾ ನಹಿಂ ಹೇ...' ಎಂದು ಹೆಮ್ಮೆಯಿಂದ ತನ್ನದೇ ದೇಶದ ಜನರ ದುಸ್ಥಿತಿಯ ಕುರಿತು ಹೇಳಿ ಕೈತಟ್ಟಿ ವಿಕೃತವಾಗಿ ನಕ್ಕ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು.

ಇದನ್ನೂ ಓದಿ: ಕಾಂಗ್ರೆಸ್ ಈ ದೇಶಕ್ಕೇನು ಕೊಟ್ಟಿದೆ?

*ದೇಶವನ್ನು ಗುಜರಾತ್ ಮಾದರಿಯಲ್ಲಿ ಕಟ್ಟುತ್ತೇನೆ ಎಂದು ಹೇಳುತ್ತಾ ಅವೈಜ್ಞಾನಿಕವಾದ ನೋಟು ಬ್ಯಾನ್, ಪೂರ್ವಸಿದ್ದತೆಯಿಲ್ಲದ ಲಾಕ್‌ಡೌನ್ ಗಳ ಮೂಲಕ ದೇಶದ ಮೂರು ಲಕ್ಷಕ್ಕೂ ಹೆಚ್ಚು ಸಣ್ಣ, ಮಧ್ಯಮ ಗಾತ್ರದ ಕಂಪೆನಿಗಳು ಬಾಗಿಲು ಮಚ್ಚುವಂತೆ ಮಾಡಿ ಅಲ್ಲಿನ ಕೋಟ್ಯಾಂತರ ಕಾರ್ಮಿಕರು ಕೆಲಸ ಕಳೆದುಕೊಳ್ಳುವಂತೆ ಮಾಡುವ ಮೂಲಕ ದೇಶದ ನಿರುದ್ಯೋಗದ ಮಟ್ಟವನ್ನು ಕಳೆದ 45 ವರ್ಷಗಳ ಹಿಂದಿನ ಮಟ್ಟಕ್ಕೆ ಇಳಿಸಿದ ಹಾಗೂ ಕಾಂಗ್ರೆಸ್ ಕಾಲದಲ್ಲಿದ್ದ 10.8% ಜಿಡಿಪಿಯನ್ನು ಕೇವಲ ಆರು ವರ್ಷಗಳಲ್ಲಿ ಮೈನಸ್ 23.9%ಗೆ ಇಳಿಸಿದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು.

ಇದನ್ನೂ ಓದಿ: ಸಂಘಿಗಳ ಉರಿನಂಜಿಗೆ ಕಾರಣವಾದ ಟಿಪ್ಪು ತಂದ ಸುಧಾರಣೆ: "ಪಾಳೇಗಾರರಿಂದ- ಬ್ರಾಹ್ಮಣಶಾಹಿಯಿಂದ ರೈತಾಪಿಯ ಬಿಡುಗಡೆ"

*2020 ರ ಮಾರ್ಚ್ 25ರ ಹೊತ್ತಿಗೆ ದೇಶದೊಳಗಿದ್ದ ಕೇವಲ 497 ಕೊರೊನಾ ಪಾಸಿಟಿವ್ ಪ್ರಕರಣಗಳನ್ನು ನಿಭಾಯಿಸಲಾಗದೆ ದೇಶದ 137ಕೋಟಿ ಜನರನ್ನು ಲಾಕ್‌ಡೌನ್ ಹೆಸರಲ್ಲಿ ಮನೆಯೊಳಗೆ ಕೂರಿಸಿ ದೇಶದ ಆರ್ಥಿಕತೆ ಸರ್ವನಾಶ ಮಾಡಿ ಆನಂತರ ಪಾಸಿಟಿವ್ ಪ್ರಕರಣಗಳು ಒಂದು ಕೋಟಿ ತಲುಪಿದ ಸಮಯದಲ್ಲಿ 'ಕೊರೊನಾದೊಂದಿಗೆ ಬದುಕಲು ಕಲಿಯಿರಿ' ಎಂದು ದೇಶದ ಜನರಿಗೆ ಕರೆ ನೀಡಿದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು.

ಇದನ್ನೂ ಓದಿ: ಮನುವಾದಿಗಳಿಗೆ ಸಿದ್ದರಾಮಯ್ಯನವರ ಮೇಲೆ ಈ ಪರಿಯ ದ್ವೇಷವೇಕೆ ಗೊತ್ತೇ?

*ಕೇವಲ ಅಂತರ್ರಾಷ್ಟ್ರೀಯ ವಿಮಾನಗಳನ್ನು ಬಂದ್ ಮಾಡುವ ಮೂಲಕ ಕೊರೊನಾ ವೈರಸ್ ತಡೆಯಬಹುದಾಗಿದ್ದ ಸರಳ ವಿಧಾನ ಬಿಟ್ಟು, ದೇಶದ 137 ಕೋಟಿ ಜನರನ್ನು ಲಾಕ್‌ಡೌನ್ ಹೆಸರಲ್ಲಿ ಮನೆಯೊಳಗೆ ಕೂರಿಸಿ ಅವರಿಗೆ ಆದಾಯವಿಲ್ಲದೆ ಒಂದೊತ್ತಿನ ಊಟಕ್ಕೂ ಪರದಾಡುವಂತೆ ಮಾಡಿ, ವಲಸೆ ಕಾರ್ಮಿಕರಿಗೆ ಅತ್ತ ಕೆಲಸವೂ ಇಲ್ಲದೇ ಇತ್ತ ಊಟ ಹಾಗೂ ಕುಡಿಯುವ ನೀರಿಗೂ ಪರದಾಡುವಂತೆ ಮಾಡಿ ಅವರುಗಳಿಗೆ ಊರು ತಲುಪಲು ಬಸ್‌ಗಳ ವ್ಯವಸ್ಥೆಯೂ ಮಾಡದೆ ಜೀವಂತವಾಗಿ ಕೊಂದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು.

ಇದನ್ನೂ ಓದಿ: ಸಾವರ್ಕರ್ ‌ರನ್ನು ಅಂಡಮಾನ್ ಜೈಲಿನಲ್ಲಿ ಕರಿನೀರ ಶಿಕ್ಷೆಗೆ ಒಳಪಡಿಸಿದ್ದು ಏಕೆ ಗೊತ್ತೇ?

*'ಕಳೆದ ಅರವತ್ತು ವರ್ಷಗಳಲ್ಲಿ ಈ ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು?' ಎಂದು ಪ್ರಶ್ನಿಸುತ್ತಾ.. ಪ್ರಶ್ನಿಸುತ್ತಾ, ಕಾಂಗ್ರೆಸ್ ಕಾಲದಲ್ಲಿ ಕಟ್ಟಿದ ಹಾಗೂ ಸರ್ಕಾರಕ್ಕೆ ಬಹು ಆದಾಯ ತರುತ್ತಿದ್ದ ದೇಶದ 32ಕ್ಕೂ ಹೆಚ್ಚು ಅಮೂಲ್ಯವಾದ ಲಕ್ಷಾಂತರ ಕೋಟಿ ಮೌಲ್ಯದ ಸರ್ಕಾರಿ ಆಸ್ತಿಗಳನ್ನು ಅಂಬಾನಿ, ಅದಾನಿ ಮತ್ತಿತರ ಉದ್ಯಮಿಗಳಿಗೆ ಮೂರುಕಾಸಿನ ಬೆಲೆಗೆ ಮಾರಾಟ ಮಾಡಿದ ಹಾಗೂ ಕಾಂಗ್ರೆಸ್ ಕಾಲದ 23ಕ್ಕೂ ಹೆಚ್ಚು ಯೋಜನೆಗಳ ಹೆಸರು ಬದಲಿಸಿ ಆ ಯೋಜನೆಗಳು ಮೋದಿ ಸರ್ಕಾರವೇ ಮಾಡಿದ ಯೋಜನೆಗಳು ಎಂಬಂತೆ ಬಿಂಬಿಸಲು ಸಾವಿರಾರು ಕೋಟಿ ರೂಪಾಯಿ ಖಜಾನೆಯ ಹಣವನ್ನು ಪೋಲು ಮಾಡಿದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು.

ಇದನ್ನೂ ಓದಿ: ನವೋ ಭಾರತದ ನವ ಕಥೆ: ಆಶ್ಚರ್ಯ ಆದರೂ ಸತ್ಯ!

*2014ರಿಂದ 2020 ಮಾರ್ಚ್‌ ವೇಳೆ ಕೊರೊನಾ ಭಯ ಮೂಡುವ ತನಕವೂ ಸಾವಿರಾರು ಕೋಟಿ ರೂಪಾಯಿ ಸರ್ಕಾರಿ ಹಣ ಪೋಲುಮಾಡಿ ವಿದೇಶ ಯಾತ್ರೆ ಮಾಡುತ್ತಾ, ಕೇವಲ ಅರವತ್ತು ತಿಂಗಳಲ್ಲಿ ನೂರಕ್ಕೂ ಹೆಚ್ಚು ದೇಶಗಳಿಗೆ ತೆರಳಿ, ವಿಚಿತ್ರ ವೇಷಭೂಷಣ ಮಾಡಿಕೊಂಡು ಅಲ್ಲಿನ ಪ್ರಧಾನಿಗಳನ್ನು, ಅಧ್ಯಕ್ಷರನ್ನು ತಬ್ಬಿಕೊಂಡು ಪೋಟೋ ಗೆ ಪೋಸು ಕೊಡುತ್ತಿದ್ದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು.

ಇದನ್ನೂ ಓದಿ: ಬಿಜೆಪಿಗರ ಹಿಂದುತ್ವವು ಹಿಂಸೆಯನ್ನು ಪ್ರತಿಪಾದಿಸುತ್ತದೆಯೇ? : ಬಿಳಿಮಲೆ

*ಸ್ವಾತಂತ್ರ್ಯ ನಂತರ ಕಳೆದ ಅರವತ್ತು ವರ್ಷಗಳ ಕಾಲ ಈ ದೇಶವನ್ನು ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ದೇಶದ ಪ್ರಾಕೃತಿಕ ವಿಕೋಪದ ಸಂಧರ್ಭದ ಬಳಕೆಯ ಉದ್ದೇಶದಿಂದ ಜತನವಾಗಿ ಕೂಡಿಟ್ಟ 'ಆರ್‌ಬಿಐ ರಿಸರ್ವ್ ಫಂಡ್' 1ಕೋಟಿಯ 76ಲಕ್ಷ ಕೋಟಿ ರೂಪಾಯಿಯನ್ನು ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳು ಹಾಗೂ ರಿಸರ್ವ್ ಬ್ಯಾಂಕ್ ನ ಗವರ್ನರ್‌ಗಳ ವಿರೋಧದ ನಡುವೆಯೂ ಕಿತ್ತುಕೊಂಡು ಕೊರೊನಾ ಆಪತ್ತಿನ ಕಾಲದಲ್ಲಿ ವಲಸೆ ಕಾರ್ಮಿಕರು ವಾಹನ ಸೌಲಭ್ಯ ಹಾಗೂ ದೇಶದ ಬಿಪಿಎಲ್ ವರ್ಗದ ಕಡು ಬಡಜನತೆ ಅನ್ನ, ನೀರು ಇಲ್ಲದೇ ಸಾಯುವಂತೆ ಮಾಡಿದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು.

ಇದನ್ನೂ ಓದಿ: ಆರೆಸ್ಸೆಸ್ ಸಂವಿಧಾನ ವಿರೋಧಿ! ಇದಕ್ಕೆ ಮೋದಿ, ಕಟೀಲ್, ಸಿಟಿ ರವಿ ಉತ್ತಮ ಉದಾಹರಣೆ: ಡಾ.ಎಚ್.ಸಿ ಮಹಾದೇವಪ್ಪ

*ರೈತ ವಿರೋಧಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ರೈತರನ್ನು ಖಲಿಸ್ಥಾನಿಗಳೆಂದು ಕರೆದ, ದೇಶದಲ್ಲಿ ನಡೆಯುತ್ತಿರುವ ಹಲ್ಲೆ- ಕೊಲೆ- ಅತ್ಯಾಚಾರಗಳ ವಿರುದ್ಧ ಪ್ರಶಸ್ತಿ ವಾಪಸಿ ಚಳವಳಿ ನಡೆಸಿದ ಸಾಹಿತಿಗಳನ್ನು ಬುದ್ದಿಜೀವಿಗಳನ್ನು ಹಿರಿಯ ನಟರನ್ನು ಕವಿಗಳನ್ನು ಅರ್ಬನ್ ನಕ್ಸಲರು ಎಂದು ಕರೆದ, ದೇಶದಲ್ಲಿ ಶಾಂತಿ ಸೌಹಾರ್ಧತೆ ಮೂಡಿಸಲು ಪ್ರಯತ್ನಿಸಿದ ವಿಧ್ಯಾರ್ಥಿಗಳನ್ನು ಪ್ರತ್ಯೇಕತಾವಾದಿಗಳು ಎಂದು ಪ್ರಚಾರ ಮಾಡಿದ, ಪ್ರಗತಿಪರ ಚಿಂತನೆಗಳನ್ನು ಪ್ರತಿಪಾದಿಸುವ ರಾಜಕೀಯ ನಾಯಕರನ್ನು ಮಾವೋವಾದಿಗಳು ಎಂದು ಕರೆದ, ಇತಿಹಾಸ ತಜ್ಞರನ್ನು- ಸಂಶೋಧಕರನ್ನು ದೇಶದ್ರೋಹಿಗಳು ಎಂದು ಅಪಾದಿಸಿ ಬಂದಿಸಿ ಜೈಲಿನಲ್ಲಿಟ್ಟು ಔಷದೋಪಚಾರ ನೀಡದೇ ಕೊಂದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ಇದ್ದರೆ, ಅದು ನರೇಂದ್ರ ಮೋದಿಯವರು.

ಇದನ್ನೂ ಓದಿ: |ಆರೆಸ್ಸೆಸ್ ಮತ್ತು ಸಾವರ್ಕರ್ ರ ದೇಶಪ್ರೇಮದ ಕುರಿತಾಗಿ ಬಿಜೆಪಿಗರು ನೀಡಿದ 12 ಉದಾಹರಣೆಗಳು ಮತ್ತದರ ಹಿಂದಿನ ಹಸಿಹಸಿ ಸುಳ್ಳುಗಳು|

*ಈ ನಾಡಿನ ಮೂಲ ನಿವಾಸಿಗಳ ಪೌರತ್ವ ಕಿತ್ತುಕೊಂಡು, ಆ ಮೂಲಕ ಅವರ ರೇಷನ್ ಕಾರ್ಡ್, ಆದಾರ್ ಕಾರ್ಡ್, ಮತದಾರರ ಕಾರ್ಡ್, ಆಸ್ತಿ ಹಕ್ಕು ಕಿತ್ತುಕೊಂಡು ದ್ವಿತೀಯ ದರ್ಜೆಯ ನಾಯಕರನ್ನಾಗಿಸುವ ಮೂಲಕ ಅವರಿಗೆ ವಿದ್ಯೆ, ಅಧಿಕಾರ, ಆಸ್ತಿಯ ಹಕ್ಕು ನಿರಾಕರಿಸುವ ಮೂಲಭೂತವಾದಿ ವೈದಿಕಶಾಹಿಗಳ 'ಸನಾತನ' ಕಾನೂನಾದ 'ಮನುಸ್ಮೃತಿ' ಯನ್ನು ಜಾರಿಗೆ ತಂದು ಗುಲಾಮಗಿರಿ ಪದ್ದತಿ ಹೇರುವ ಗುಪ್ತ ಕಾರ್ಯಸೂಚಿಯ ಭಾಗವಾಗಿ ಜಾರಿಗೊಳಿಸ ಹೊರಟಿರುವ, ಇದೀಗ ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳ ವಿರೋಧದ ಕಾರಣಕ್ಕಾಗಿ ತಾತ್ಕಾಲಿಕವಾಗಿ ತಡೆಹಿಡಿಯಲ್ಪಟ್ಟಿರುವ "ಸಿಎಎ, ಎನ್‌ಆರ್‌ಸಿ ಕಾನೂನು"ಗಳನ್ನು ಮುಂದೆ ಇವರೇ ಅಧಿಕಾರದಲ್ಲಿ ಮುಂದುವರಿದರೆ ಖಂಡಿತವಾಗಿಯೂ ಜಾರಿಗೊಳಿಸುವ ಹುನ್ನಾರ ಹೊಂದಿರುವ ಈ ದೇಶದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು.

ಇದನ್ನೂ ಓದಿ: ಬಿಜೆಪಿಯ "ಬ್ರಾಹ್ಮಣೀಯ ಹಿಂದುತ್ವ"ದ ಏಕರೂಪ ನಾಗರಿಕ ಸಂಹಿತೆ ಹಿಂದೂ ಮಹಿಳೆಯರಿಗೇ ಮಾರಕ

ಈ ಮೇಲೆ ವಿವರಿಸಿದವುಗಳು ಕೇವಲ ಒಂಭತ್ತೂವರೆ ವರ್ಷಗಳ ಕೆಲವೇ ಕೆಲವು ಸ್ಯಾಂಪಲ್ ಗಳಾಗಿದ್ದು ಮೋದಿ ಮತ್ತವರ ತಂಡ ಮುಂದೆ ಅರವತ್ತು ವರ್ಷಗಳ ಆಳ್ವಿಕೆ ಮಾಡಿದರೆ ಖಂಡಿತವಾಗಿಯೂ ಈ ದೇಶ ವಿಶ್ವದ ಅತ್ಯಂತ ಬಡರಾಷ್ಟ್ರವಾದ ಸುಡಾನ್ ಗಿಂತಲೂ ಕೆಳಕ್ಕೆ ಹೋಗುವುದರಲ್ಲಿ ಎರಡು ಮಾತಿಲ್ಲ. ನಮ್ಮದೇ ಮುಂದಿನ ಜನಾಂಗ ಬದುಕಿ ಬಾಳಬೇಕಾದ ಈ ದೇಶದ ಭವಿಷ್ಯದ ಕುರಿತು ಪ್ರಜ್ಞಾವಂತರಾದ ನಾವು ಕಣ್ಮುಚ್ಚಿ ಕುಳಿತುಕೊಳ್ಳುವುದು ಮಹಾನ್ ಅಪರಾಧವಾದೀತು.

ಇದನ್ನೂ ಓದಿ: ಸಾವರ್ಕರ್ ‌ರನ್ನು ಅಂಡಮಾನ್ ಜೈಲಿನಲ್ಲಿ ಕರಿನೀರ ಶಿಕ್ಷೆಗೆ ಒಳಪಡಿಸಿದ್ದು ಏಕೆ ಗೊತ್ತೇ?

Advertisement
Advertisement
Recent Posts
Advertisement