Advertisement

ಸ್ವಾತಂತ್ರ್ಯ ಸಂಗ್ರಾಮದ ವೇಳೆ ತನ್ನ ಜೀವನದ ಅತ್ಯಮೂಲ್ಯವಾದ 3259ದಿನಗಳನ್ನು ಜೈಲುವಾಸದಲ್ಲಿ ಕಳೆದಿದ್ದ ಚಾಚಾ ನೆಹರೂ: ಅಗತ್ಯವಾಗಿ ಓದಿ!

Advertisement

ಈ ಹಿಂದೆ 'ಕಾಂಗ್ರೆಸ್ ಕಚೇರಿಯಲ್ಲಿ ನೆಹರೂ ಹುಕ್ಕಾ ಬಾರ್ ತೆರೆಯಲಿ' ಎಂದು ಮತ್ತು ನಿನ್ನೆ, 'ಕಾಂಗ್ರೆಸ್‌ನಲ್ಲಿ ಪ್ರಮೋಷನ್‌ ಸಿಗಬೇಕಾದರೆ ಜೈಲಿಗೆ ಹೋಗಬೇಕು, ಭ್ರಷ್ಟಾಚಾರ ಮಾಡಿರಬೇಕು' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ. ಆ ಕುರಿತು ಅವರಿಗೊಂದು ಬಹಿರಂಗ ಪತ್ರ. ಮಾನ್ಯ ಸಿ.ಟಿ ರವಿಯವರೇ, ತಾವು ನಿನ್ನೆ 'ಕಾಂಗ್ರೆಸ್‌ನಲ್ಲಿ ಪ್ರಮೋಷನ್‌ ಸಿಗಬೇಕಾದರೆ ಜೈಲಿಗೆ ಹೋಗಬೇಕು, ಭ್ರಷ್ಟಾಚಾರ ಮಾಡಿರಬೇಕು' ಎಂಬ ಹೇಳಿಕೆ ನೀಡಿದ್ದೀರಿ. ಹಾಗೆಯೇ ಪೂರ್ವತಯಾರಿ ಇಲ್ಲದ ನೋಟ್‌ಬ್ಯಾನ್ ಹಾಗೂ ಅವೈಜ್ಞಾನಿಕವಾದ ಲಾಕ್‌ಡೌನ್ ನಿಂದಾದ ಉದ್ಯೋಗ ನಷ್ಟದಿಂದ ರಾಜ್ಯದ ಬಡಜನತೆ ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಹೊತ್ತಿನಲ್ಲಿ ಆ ವರ್ಗದ ಜನತೆಯ ಹೊಟ್ಟೆ ತುಂಬಿಸಿದ ಇಂದಿರಾ ಕ್ಯಾಂಟೀನ್ ದಿನದಿಂದ ದಿನಕ್ಕೆ ಜನಪ್ರಿಯತೆ ಪಡೆಯುತ್ತಿರುವುದನ್ನು ಸಹಿಸಲಾಗದೆ ಅದರ ಹೆಸರು ಬದಲಾವಣೆಗೆ ತಾವು ಮತ್ತು ತಮ್ಮ ಪಕ್ಷೀಯರು ಮುಂದಾದಿರಿ. ಆ ಕುರಿತು ರಾಜ್ಯದ ಜನತೆ ವಿರೋಧ ವ್ಯಕ್ತಪಡಿಸಿದಾಗ ಕಾಂಗ್ರೆಸ್ ನವರು ಬೇಕಿದ್ದರೆ ಅವರ ಪಕ್ಷದ ಕಚೇರಿಯಲ್ಲಿ 'ನೆಹರೂ ಹುಕ್ಕಾ ಬಾರ್' ಆರಂಬಿಸಲಿ ಎಂದಿರಿ. ಇತಿಹಾಸ ಓದದವನು ಇತಿಹಾಸ ನಿರ್ಮಿಸಲಾರ ಎಂಬುವುದಕ್ಕೆ ತಮ್ಮ ಈ ಎರಡು ಹೇಳಿಕೆಗಳು ಉತ್ತಮ ಉದಾಹರಣೆಯೂ ಆಗಲಿದೆ! ಏಕೆಂದರೆ, ಸ್ವಾತಂತ್ರ್ಯ ಸಂಗ್ರಾಮದ ವೇಳೆ ಈ ದೇಶದ ಪ್ರಥಮ ಪ್ರಧಾನಿ, ಕಾಂಗ್ರೆಸ್ ನಾಯಕ ಜವಹರಲಾಲ್ ನೆಹರೂರವರು ತನ್ನ ಜೀವನದ ಅಮೂಲ್ಯವಾದ ಒಂಭತ್ತು ವರ್ಷ (3259 ದಿನ)ಗಳಷ್ಟು ದೀರ್ಘಕಾಲ ಜೈಲುವಾಸ ಅನುಭವಿಸಿದ್ದರು ಮತ್ತು ತನ್ನ ಕುಟುಂಬದ ಆ ಕಾಲದ 196 ಕೋಟಿ ರೂ. ಮೌಲ್ಯದ ಆಸ್ತಿ (ಈ ಕಾಲಕ್ಕೆ ಅದರ ಮೌಲ್ಯ ಕನಿಷ್ಠ 25ಸಾವಿರ ಕೋಟಿ) ಯನ್ನು ದೇಶವನ್ನು ಪುನರ್ ನಿರ್ಮಿಸುವ ಸದುದ್ದೇಶದಿಂದ ಸ್ವತಂತ್ರ ಭಾರತದ ಸರ್ಕಾರಕ್ಕೆ ದಾನವಾಗಿ ನೀಡಿದ್ದರು.. ಆ ಎಲ್ಲಾ ಕಾರಣಕ್ಕಾಗಿ ಈ ದೇಶದ ಜನ ಅವರ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಸತತ ಎಪ್ಪತ್ತು ವರ್ಷಗಳ ಕಾಲ ಪದೇಪದೇ ಆರಿಸಿದ್ದರು ಎಂಬುವುದನ್ನು ಮರೆಯದಿರಿ. ಹಾಗೆಯೇ, ಮೊದಲನೆಯದಾಗಿ ಸ್ವಾತಂತ್ರ್ಯಾ ನಂತರ ಈ ದೇಶದಲ್ಲಿ 'ನೋಮಿನೇಷನ್' ಮೂಲಕ ಸರ್ವಾಧಿಕಾರದ ಅಧಿಕಾರ ನಡೆಸುವ ಅವಕಾಶ ಇತ್ತಾದರೂ ಹಾಗೆ ಮಾಡದೇ ಇದೀಗ ಅವರನ್ನು ವಿರೋಧಿಸುವ ನಿಮ್ಮ ಪಕ್ಷ ಕೂಡ ಅಧಿಕಾರಕ್ಕೆ ಬರಲು ಕಾರಣವಾದ ಪ್ರಜಾಪ್ರಭುತ್ವ ವನ್ನು ಈ ನೆಲದಲ್ಲಿ ಸ್ಥಾಪಿಸಿದವರು ಅದೇ ನೆಹರೂ ಎನ್ನುವುದನ್ನು ಅರಿತುಕೊಳ್ಳಿ. ಎರಡನೆಯದಾಗಿ, ಅಂದು ಪ್ರಧಾನಿಯಾದ ನಂತರ ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಸಿದ್ದಾಂತದ ಸಂವಿಧಾನವನ್ನು ಜಾರಿಗೊಳಿಸಿ ಈ ದೇಶದ ಕಟ್ಟಕಡೆಯ ಪ್ರಜೆಗೂ ಈ ನೆಲದ ಸಂಪೂನ್ಮೂಲದ ಮೇಲೆ ಹಕ್ಕನ್ನು ನೀಡಿದವರು ಅದೇ ನೆಹರೂರವರ ಸಂಪುಟ ಎಂಬುವುದನ್ನು ಮರೆಯಬೇಡಿ. ಮೂರನೆಯದಾಗಿ, ಅದೇ ಅವಧಿಯಲ್ಲಿ ಗ್ರಹಸಚಿವ ಸರ್ಧಾರ್ ವಲ್ಲಭ ಬಾಯಿ ಪಟೇಲರ ಜೊತೆಗೂಡಿ ಕನ್ಯಾಕುಮಾರಿ ಯಿಂದ ಕಾಶ್ಮೀರದ ತನಕದ ಬರೋಬ್ಬರಿ 526 ರಾಜಸಂಸ್ಥಾನಗಳ ಅರಸರುಗಳ ಮನ ಒಲಿಸಿ ಇಂದಿನ ನವ ಭಾರತ ನಿರ್ಮಿಸಿದ ಕೀರ್ತಿಯೂ ಅದೇ ನೆಹರೂರವರದ್ದು ಎಂಬುವುದನ್ನು ಕೂಡ ಅರಿತುಕೊಳ್ಳಿ. ಹಾಗೆಯೇ, ನೆಹರೂರವರು ಮೃತಪಟ್ಟು ಐವತ್ತೇಳು ವರ್ಷಗಳ ನಂತರವೂ ಅಂದರೆ ಇಂದಿಗೂ ಅಂತಹ ಮಹಾನ್ ನಾಯಕ ಕುರಿತು ತಮ್ಮ ಪಕ್ಷದ ನಾಯಕರುಗಳು ಕೀಳಾಗಿ ಮಾತನಾಡುತ್ತಿರುವುದರ ಹಿಂದಿನ ಮರ್ಮವೇನು? ಹಾಗಾದರೆ ತಮ್ಮ ಪಕ್ಷ ಬಿಜೆಪಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ನೆಹರೂರಂತಹ ಒಬ್ಬನೇ ಒಬ್ಬ ನಾಯಕ ಇದ್ದರೆ ಆ ಮಹಾನಾಯಕರ ಹೆಸರು ಹೇಳಬಲ್ಲಿರಾ? ದೇಶದ ಸ್ವಾತಂತ್ರ್ಯಕ್ಕಾಗಿ, ಅಭ್ಯುದಯಕ್ಕಾಗಿ, ಏಕತೆಗಾಗಿ ಹೋರಾಡಿದ ನಾಯಕರ ಕುರಿತು ಗೌರವ ಹೊಂದಿಲ್ಲದ ನಿಮ್ಮ ಪಕ್ಷದ ಸಿದ್ಧಾಂತವಾದರೂ ಏನು? ಹಾಗೆಯೇ, ಮಾಲೇಗಾಂ ಸ್ಪೋಟ ಪ್ರಕರಣದ ಆರೋಪಿಗೆ ಲೋಕಸಭಾ ಟಿಕೇಟು ಕೊಟ್ಟು ಗೆಲ್ಲಿಸಿದ್ದು ನಿಮ್ಮ ಪಕ್ಷದ ನಾಯಕತ್ವ. ಗುಜರಾತ್‌ನಲ್ಲಿ ಗಡಿಪಾರು ಶಿಕ್ಷೆಗೊಳಗಾದ ಆರೋಪಿಗೆ ಕೇಂದ್ರದಲ್ಲಿ ಸಚಿವನನ್ನಾಗಿ ಮಾಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷನನ್ನಾಗಿ ಮಾಡಿದ್ದು ನಿಮ್ಮ ಪಕ್ಷದ ನಾಯಕತ್ವ. ಕರ್ನಾಟಕದ ಇತಿಹಾಸದಲ್ಲಿ ಜೈಲಿಗೆ ಹೋಗಿ ಬಂದ ಪ್ರಪ್ರಥಮ ಮುಖ್ಯಮಂತ್ರಿ ಖ್ಯಾತಿಯ ಬ್ರಷ್ಠಾಚಾರದ ಆರೋಪಿಗೆ ಮತ್ತೊಮ್ಮೆ ಮುಖ್ಯಮಂತ್ರಿ ಮಾಡಿದ್ದು ನಿಮ್ಮದೇ ಪಕ್ಷದ ಹೈಕಮಾಂಡ್ ನಾಯಕರುಗಳು ಎಂಬುವುದನ್ನು ಅದೇಕೆ ಮರೆತಿರಿ? (ಇಂತಹ ಹತ್ತಾರು ಉದಾಹರಣೆಗಳಿವೆ. ಆದರೆ ಪತ್ರ ಧೀರ್ಘವಾಗಬಾರದು ಎಂಬ ಕಾರಣಕ್ಕಾಗಿ ಇಲ್ಲಿ ಅವುಗಳನ್ನು ಉಲ್ಲೇಖಿಸುತ್ತಿಲ್ಲ.) ಅಂದರೆ ನಿಮ್ಮ ಪಕ್ಷದ ತತ್ವ ಅಥವಾ ನೀತಿಯೇ ಇದಾಗಿರಬೇಕು ಅಲ್ಲವೇ? ಹಾಗಾದರೆ ಅಫ್ಘಾನಿಸ್ಥಾನವನ್ನು ಆಕ್ರಮಿಸಿರುವ ತಾಲಿಬಾನಿಗಳ ಸಿದ್ದಾಂತಕ್ಕೂ, ಈ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿರುವ ನಿಮ್ಮ ಪಕ್ಷದ ಸಿದ್ದಾಂತಕ್ಕೂ ಇರುವ ವ್ಯತ್ಯಾಸವಾದರೂ ಏನು? ದಯವಿಟ್ಟು ಉತ್ತರಿಸುವಂತಹವರಾಗಿ. - ಚಂದ್ರಶೇಖರ ಶೆಟ್ಟಿ, (ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ಸೋಶಿಯಲ್ ಮೀಡಿಯಾ.) ►►ಇದನ್ನೂ ಓದಿ: ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಭಾರತದಲ್ಲಿ ದಿಢೀರ್‌ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ? ►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?

Advertisement
Advertisement
Recent Posts
Advertisement