ಸಂಪಾದಕೀಯ
*'ಕಳೆದ ಅರವತ್ತು ವರ್ಷಗಳಲ್ಲಿ ಈ ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು?' ಎಂದು ಪ್ರಶ್ನಿಸುತ್ತಾ.. ಪ್ರಶ್ನಿಸುತ್ತಾ, ಕಾಂಗ್ರೆಸ್ ಕಾಲದಲ್ಲಿ ಕಟ್ಟಿದ ಹಾಗೂ ಸರ್ಕಾರಕ್ಕೆ ಬಹು ಆದಾಯ ತರುತ್ತಿದ್ದ ದೇಶದ 32ಕ್ಕೂ ಹೆಚ್ಚು ಅಮೂಲ್ಯವಾದ ಲಕ್ಷಾಂತರ ಕೋಟಿ ಮೌಲ್ಯದ ಸರ್ಕಾರಿ ಆಸ್ತಿಗಳನ್ನು ಅಂಬಾನಿ, ಅದಾನಿ ಮತ್ತಿತರ ಉದ್ಯಮಿಗಳಿಗೆ ಮೂರುಕಾಸಿನ ಬೆಲೆಗೆ ಮಾರಾಟ ಮಾಡಿದ ಹಾಗೂ ಕಾಂಗ್ರೆಸ್ ಕಾಲದ 23ಕ್ಕೂ ಹೆಚ್ಚು ಯೋಜನೆಗಳ ಹೆಸರು ಬದಲಿಸಿ ಆ ಯೋಜನೆಗಳು ಮೋದಿ ಸರ್ಕಾರವೇ ಮಾಡಿದ ಯೋಜನೆಗಳು ಎಂಬಂತೆ ಬಿಂಬಿಸಲು ಸಾವಿರಾರು ಕೋಟಿ ರೂಪಾಯಿ ಖಜಾನೆಯ ಹಣವನ್ನು ಪೋಲು ಮಾಡಿದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು.
* ಸಿಎಜಿ ವ್ಯಾಪ್ತಿಗೆ ಬರುವ ಕೇಂದ್ರ ಸರ್ಕಾರದ 'ಪ್ರಧಾನ ಮಂತ್ರಿ ಪರಿಹಾರ ನಿಧಿ' ಎಂಬ ಅಧಿಕೃತವಾದ ಸಂಸ್ಥೆ ಇದ್ದರೂ ಕೂಡಾ ಕೊರೊನಾ ಲಾಕ್‌ಡೌನ್ ಸಮಯದಲ್ಲಿ 'ಪಿಎಂ ಕೇರ್ಸ್ ಫಂಡ್' ಎಂಬ ಹೆಸರಲ್ಲಿ ಖಾಸಗಿ ಫಂಡ್ ಆರಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ಕೋಟಿ ರೂಪಾಯಿ ಹಣ ಸಂಗ್ರಹಿಸಿ, ಸಂತ್ರಸ್ತರಿಗೆ ಚಿಕ್ಕಾಸೂ ಸಹಾಯ ಧನ ಬಿಡುಗಡೆ ಮಾಡದೆ, ದಾನಿಗಳಿಗೆ ಹಾಗೂ ದೇಶದ ಜನರಿಗೆ ಸಂಗ್ರಹವಾದ ಹಣದ ವಿವರ ಮತ್ತು ಖರ್ಚು ವೆಚ್ಚಗಳ ವಿವರ ಕೊಡದೆ 'ಮಾಹಿತಿ ಹಕ್ಕು' ಅರ್ಜಿಯನ್ನು ತಿರಸ್ಕರಿಸುವ ಮೂಲಕ ವಂಚಿಸಿದ ಸ್ವತಂತ್ರ ಭಾರತದ ಮೊತ್ತ ಮೊದಲ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು.
* ಗುಜರಾತ್ ಮಾದರಿ(?)ಯ ಅಭಿವೃದ್ಧಿಯ ಭ್ರಮೆ ಮೂಡಿಸಿ ಅಧಿಕಾರಕ್ಕೆ ಬಂದು ವಿದೇಶಗಳಿಗೆ ಗೋಮಾಂಸ ರಫ್ತಿನಲ್ಲಿ ಭಾರತವನ್ನು ನಂಬರ್ ಒನ್ ಆಗಿಸಿ, ದೇಶದೊಳಗೆ ಗೋವುಗಳ ಸಾಗಾಟ ಮಾಡುವವರ ವಿರುದ್ಧ ಇವರದ್ದೇ ಪಕ್ಷದವರು ವದಂತಿ ಹರಡುವ ಮೂಲಕ ಕೋಮುಗಲಭೆಗಳು ಆದಾಗ, ಅದೇ ಗೋವುಗಳ ಹೆಸರಿನಲ್ಲಿ ಅಮಾಯಕರ ಮೇಲೆ ಹಲ್ಲೆಗಳು ನಡೆದಾಗ, ಕೊಲೆಗಳಾದಾಗ, ಮಹಿಳೆಯರ ಹಾಗೂ ಎಳೆ ಬಾಲಕಿಯರ ಮೇಲೆ ಅತ್ಯಾಚಾರಗಳು ನಡೆದಾಗ, ಕೊಲೆಗಳಾದಾಗ ನವಿಲುಗಳಿಗೆ ಕಾಳು ಹಾಕುತ್ತಿದ್ದ, ಗಿಳಿಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಫೋಟೋ ಸೆಷನ್ಸ್ ನಡೆಸುತ್ತಿದ್ದ, ಡಿಜೆ ಸೌಂಡ್ ಹಾಗೂ ಲೇಸರ್ ಬೆಳಕಿಗೆ ಕೈ ಬೆರಳು ಕುಣಿಸುತ್ತಿದ್ದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು.
*'ಕೇವಲ ಐವತ್ತು ದಿನಗಳ ಅವಕಾಶ ಕೊಡಿ, ದೇಶದೊಳಗಿನ ಕಪ್ಪುಹಣವನ್ನು ಸರ್ವನಾಶ ಮಾಡುತ್ತೇನೆ' ಎಂದು ಹೇಳಿ ಯಾವುದೇ ಪೂರ್ವತಯಾರಿ ಇಲ್ಲದೆ ರಾತ್ರೋರಾತ್ರಿ ನೋಟು ಬ್ಯಾನ್ ಮಾಡಿ, ಮಾರುಕಟ್ಟೆಯಲ್ಲಿದ್ದ ಕಪ್ಪು ಹಣವನ್ನು ಬಿಳಿಯಾಗಿಸಿಕೊಳ್ಳಲು ಅವಕಾಶ ಮಾಡಿಕೊಟ್ಟು, ಕಳೆದ ಅರವತ್ತು ವರ್ಷಗಳಲ್ಲಿ ನಿಧಾನವಾಗಿ ಸದೃಢ ವಾಗಿ ಬೆಳೆದು ನಿಂತ ದೇಶದ ಆರ್ಥಿಕತೆಯನ್ನು ಸರ್ವನಾಶ ಮಾಡಿ ಜನಸಾಮಾನ್ಯರು ಒಂದೊತ್ತಿನ ಊಟಕ್ಕೂ ಪರದಾಡುವಂತೆ ಮಾಡಿ, ಆ ನಂತರ ಜಪಾನ್ ಗೆ ತೆರಳಿ ಅಲ್ಲಿನ ಸಭೆಯೊಂದರಲ್ಲಿ 'ಆಟ್ ತಾರೀಖ್ ಕೋ ರಾತ್ ಆಟ್ ಭಜೆ... ಪಾಂಚ್ ಸೌ ಔರ್ ಹಝಾರ್ ರೂಪ್ಯೆ ಕಾ ನೋಟ್... ಬ್ಯಾನ್ ಹೋಗಯಾ... ದೇಶ್ ವಾಸಿಂ ಯೋಕಾ ಘರ್ ಮೇ ಶಾದಿ ಹೇ... ಫೈಸಾ ನಹಿಂ ಹೇ...' ಎಂದು ಹೆಮ್ಮೆಯಿಂದ ತನ್ನದೇ ದೇಶದ ಜನರ ದುಸ್ಥಿತಿಯ ಕುರಿತು ಹೇಳಿ ಕೈತಟ್ಟಿ ವಿಕೃತವಾಗಿ ನಕ್ಕ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು.
*ದೇಶವನ್ನು ಗುಜರಾತ್ ಮಾದರಿಯಲ್ಲಿ ಕಟ್ಟುತ್ತೇನೆ ಎಂದು ಹೇಳುತ್ತಾ ನೋಟು ಬ್ಯಾನ್, ಲಾಕ್‌ಡೌನ್ ಗಳ ಮೂಲಕ ದೇಶದ ಲಕ್ಷಾಂತರ ಕಂಪೆನಿಗಳು ಬಾಗಿಲು ಮಚ್ಚುವಂತೆ ಮಾಡಿ ಅಲ್ಲಿನ ಕೋಟ್ಯಾಂತರ ಕಾರ್ಮಿಕರು ಕೆಲಸ ಕಳೆದುಕೊಳ್ಳುವಂತೆ ಮಾಡುವ ಮೂಲಕ ದೇಶದ ನಿರುದ್ಯೋಗ ಮಟ್ಟವನ್ನು ಕಳೆದ 45 ವರ್ಷಗಳ ಹಿಂದಿನ ಮಟ್ಟಕ್ಕೆ ಇಳಿಸಿದ ಹಾಗೂ ಕಾಂಗ್ರೆಸ್ ಕಾಲದಲ್ಲಿದ್ದ 10.8% ಜಿಡಿಪಿಯನ್ನು ಕೇವಲ ಆರು ವರ್ಷಗಳಲ್ಲಿ ಮೈನಸ್ 23.9%ಗೆ ಇಳಿಸಿದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು.
*2020 ರ ಮಾರ್ಚ್ 25ರ ಹೊತ್ತಿಗೆ ದೇಶದೊಳಗಿದ್ದ ಕೇವಲ 497 ಕೊರೊನಾ ಪಾಸಿಟಿವ್ ಪ್ರಕರಣಗಳನ್ನು ನಿಭಾಯಿಸಲಾಗದೆ ದೇಶದ 137ಕೋಟಿ ಜನರನ್ನು ಲಾಕ್‌ಡೌನ್ ಹೆಸರಲ್ಲಿ ಮನೆಯೊಳಗೆ ಕೂರಿಸಿ ದೇಶದ ಆರ್ಥಿಕತೆ ಸರ್ವನಾಶ ಮಾಡಿ ಆನಂತರ ಪಾಸಿಟಿವ್ ಪ್ರಕರಣಗಳು ಒಂದು ಕೋಟಿ ತಲುಪಿದ ಸಮಯದಲ್ಲಿ 'ಕೊರೊನಾದೊಂದಿಗೆ ಬದುಕಲು ಕಲಿಯಿರಿ' ಎಂದು ದೇಶದ ಜನರಿಗೆ ಕರೆ ನೀಡಿದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು.
*ಕೇವಲ ಅಂತರ್ರಾಷ್ಟ್ರೀಯ ವಿಮಾನಗಳನ್ನು ಬಂದ್ ಮಾಡುವ ಮೂಲಕ ಕೊರೊನಾ ವೈರಸ್ ತಡೆಯಬಹುದಾಗಿದ್ದ ಸರಳ ವಿಧಾನ ಬಿಟ್ಟು, ದೇಶದ 137 ಕೋಟಿ ಜನರನ್ನು ಲಾಕ್‌ಡೌನ್ ಹೆಸರಲ್ಲಿ ಮನೆಯೊಳಗೆ ಕೂರಿಸಿ ಅವರಿಗೆ ಆದಾಯವಿಲ್ಲದೆ ಒಂದೊತ್ತಿನ ಊಟಕ್ಕೂ ಪರದಾಡುವಂತೆ ಮಾಡಿ, ವಲಸೆ ಕಾರ್ಮಿಕರಿಗೆ ಅತ್ತ ಕೆಲಸವೂ ಇಲ್ಲದೇ ಇತ್ತ ಊಟ ಹಾಗೂ ಕುಡಿಯುವ ನೀರಿಗೂ ಪರದಾಡುವಂತೆ ಮಾಡಿ ಅವರುಗಳಿಗೆ ಊರು ತಲುಪಲು ಬಸ್‌ಗಳ ವ್ಯವಸ್ಥೆಯೂ ಮಾಡದೆ ಜೀವಂತವಾಗಿ ಕೊಂದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು.
*2014ರಿಂದ 2020 ಮಾರ್ಚ್ ವೇಳೆ ಕೊರೊನಾ ಭಯ ಮೂಡುವ ತನಕವೂ ಸಾವಿರಾರು ಕೋಟಿ ರೂಪಾಯಿ ಸರ್ಕಾರಿ ಹಣ ಪೋಲುಮಾಡಿ ವಿದೇಶ ಯಾತ್ರೆ ಮಾಡುತ್ತಾ, ಕೇವಲ ಅರವತ್ತು ತಿಂಗಳಲ್ಲಿ ನೂರಕ್ಕೂ ಹೆಚ್ಚು ದೇಶಗಳಿಗೆ ತೆರಳಿ, ವಿಚಿತ್ರ ವೇಷಭೂಷಣ ಮಾಡಿಕೊಂಡು ಅಲ್ಲಿನ ಪ್ರಧಾನಿಗಳನ್ನು, ಅಧ್ಯಕ್ಷರನ್ನು ತಬ್ಬಿಕೊಂಡು ಪೋಟೋ ಗೆ ಪೋಸು ಕೊಡುತ್ತಿದ್ದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು.
*ಸ್ವಾತಂತ್ರ್ಯ ನಂತರ ಕಳೆದ ಅರವತ್ತು ವರ್ಷಗಳ ಕಾಲ ಈ ದೇಶವನ್ನು ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ದೇಶದ ಪ್ರಾಕೃತಿಕ ವಿಕೋಪದ ಸಂಧರ್ಭದ ಬಳಕೆಯ ಉದ್ದೇಶದಿಂದ ಜತನವಾಗಿ ಕೂಡಿಟ್ಟ 'ಆರ್‌ಬಿಐ ರಿಸರ್ವ್ ಫಂಡ್' 1ಕೋಟಿಯ 76ಲಕ್ಷ ಕೋಟಿ ರೂಪಾಯಿಯನ್ನು ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳು ಹಾಗೂ ರಿಸರ್ವ್ ಬ್ಯಾಂಕ್ ನ ಗವರ್ನರ್‌ಗಳ ವಿರೋಧದ ನಡುವೆಯೂ ಕಿತ್ತುಕೊಂಡು ಕೊರೊನಾ ಆಪತ್ತಿನ ಕಾಲದಲ್ಲಿ ವಲಸೆ ಕಾರ್ಮಿಕರು ವಾಹನ ಸೌಲಭ್ಯ ಹಾಗೂ ದೇಶದ ಬಿಪಿಎಲ್ ವರ್ಗದ ಕಡು ಬಡಜನತೆ ಅನ್ನ, ನೀರು ಇಲ್ಲದೇ ಸಾಯುವಂತೆ ಮಾಡಿದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು.
*ರೈತ ವಿರೋಧಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ರೈತರನ್ನು ಖಲಿಸ್ಥಾನಿಗಳೆಂದು ಕರೆದ, ದೇಶದಲ್ಲಿ ನಡೆಯುತ್ತಿರುವ ಹಲ್ಲೆ- ಕೊಲೆ- ಅತ್ಯಾಚಾರಗಳ ವಿರುದ್ಧ ಪ್ರಶಸ್ತಿ ವಾಪಸಿ ಚಳವಳಿ ನಡೆಸಿದ ಸಾಹಿತಿಗಳನ್ನು ಬುದ್ದಿಜೀವಿಗಳನ್ನು ಹಿರಿಯ ನಟರನ್ನು ಕವಿಗಳನ್ನು ಅರ್ಬನ್ ನಕ್ಸಲರು ಎಂದು ಕರೆದ, ದೇಶದಲ್ಲಿ ಶಾಂತಿ ಸೌಹಾರ್ಧತೆ ಮೂಡಿಸಲು ಪ್ರಯತ್ನಿಸಿದ ವಿಧ್ಯಾರ್ಥಿಗಳನ್ನು ಪ್ರತ್ಯೇಕತಾವಾದಿಗಳು ಎಂದು ಪ್ರಚಾರ ಮಾಡಿದ, ಪ್ರಗತಿಪರ ಚಿಂತನೆಗಳನ್ನು ಪ್ರತಿಪಾದಿಸುವ ರಾಜಕೀಯ ನಾಯಕರನ್ನು ಮಾವೋವಾದಿಗಳು ಎಂದು ಕರೆದ, ಇತಿಹಾಸ ತಜ್ಞರನ್ನು- ಸಂಶೋಧಕರನ್ನು ದೇಶದ್ರೋಹಿಗಳು ಎಂದು ಅಪಾದಿಸಿ ಬಂದಿಸಿ ಜೈಲಿನಲ್ಲಿಟ್ಟು ಔಷದೋಪಚಾರ ನೀಡದೇ ಕೊಂದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ಇದ್ದರೆ, ಅದು ನರೇಂದ್ರ ಮೋದಿಯವರು.
*ಈ ನಾಡಿನ ಮೂಲ ನಿವಾಸಿಗಳ ಪೌರತ್ವ ಕಿತ್ತುಕೊಂಡು, ಆ ಮೂಲಕ ಅವರ ರೇಷನ್ ಕಾರ್ಡ್, ಆದಾರ್ ಕಾರ್ಡ್, ಮತದಾರರ ಕಾರ್ಡ್, ಆಸ್ತಿ ಹಕ್ಕು ಕಿತ್ತುಕೊಂಡು ದ್ವಿತೀಯ ದರ್ಜೆಯ ನಾಯಕರನ್ನಾಗಿಸುವ ಮೂಲಕ ಅವರಿಗೆ ವಿದ್ಯೆ, ಅಧಿಕಾರ, ಆಸ್ತಿಯ ಹಕ್ಕು ನಿರಾಕರಿಸುವ ಮೂಲಭೂತವಾದಿ ವೈದಿಕಶಾಹಿಗಳ 'ಸನಾತನ' ಕಾನೂನಾದ 'ಮನುಸ್ಮೃತಿ' ಯನ್ನು ಜಾರಿಗೆ ತಂದು ಗುಲಾಮಗಿರಿ ಪದ್ದತಿ ಹೇರುವ ಗುಪ್ತ ಕಾರ್ಯಸೂಚಿಯ ಭಾಗವಾಗಿ ಜಾರಿಗೊಳಿಸ ಹೊರಟಿರುವ, ಇದೀಗ ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳ ವಿರೋಧದ ಕಾರಣಕ್ಕಾಗಿ ತಾತ್ಕಾಲಿಕವಾಗಿ ತಡೆಹಿಡಿಯಲ್ಪಟ್ಟಿರುವ ಸಿಎಎ, ಎನ್‌ಆರ್‌ಸಿ ಕಾನೂನುಗಳನ್ನು ಮುಂದೆ ಇವರೇ ಅಧಿಕಾರದಲ್ಲಿ ಮುಂದುವರಿದರೆ ಖಂಡಿತವಾಗಿಯೂ ಅವುಗಳನ್ನು ಜಾರಿಗೊಳಿಸುವ ಹುನ್ನಾರ ಹೊಂದಿರುವ ಈ ದೇಶದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು.
ಈ ಮೇಲೆ ವಿವರಿಸಿದವುಗಳು ಕೇವಲ ಏಳು ವರ್ಷಗಳ ಕೆಲವೇ ಕೆಲವು ಸ್ಯಾಂಪಲ್ ಗಳಾಗಿದ್ದು ಮೋದಿ ಮತ್ತವರ ತಂಡ ಮುಂದೆ ಅರವತ್ತು ವರ್ಷಗಳ ಆಳ್ವಿಕೆ ಮಾಡಿದರೆ ಖಂಡಿತವಾಗಿಯೂ ಈ ದೇಶ ವಿಶ್ವದ ಅತ್ಯಂತ ಬಡರಾಷ್ಟ್ರವಾದ ಸುಡಾನ್ ಗಿಂತಲೂ ಕೆಳಕ್ಕೆ ಹೋಗುವುದರಲ್ಲಿ ಎರಡು ಮಾತಿಲ್ಲ. ನಮ್ಮದೇ ಮುಂದಿನ ಜನಾಂಗ ಬದುಕಿ ಬಾಳಬೇಕಾದ ಈ ದೇಶದ ಭವಿಷ್ಯದ ಕುರಿತು ಪ್ರಜ್ಞಾವಂತರಾದ ನಾವು ಕಣ್ಮುಚ್ಚಿ ಕುಳಿತುಕೊಳ್ಳುವುದು ಮಹಾನ್ ಅಪರಾಧವಾದೀತು.
►►ಇದನ್ನೂ ಓದಿ:
►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ.
►►ಎಳೆಮಕ್ಕಳ, ವಿದ್ಯಾರ್ಥಿಗಳ ಪ್ರಾಣಕ್ಕೆ ಮಾರಕವಾದ ಟೇಸ್ಟಿಂಗ್ ಪೌಡರ್ ಅನ್ನು ಸರ್ಕಾರ ಅದೇಕೆ ನಿಷೇಧಿಸುತ್ತಿಲ್ಲ?
►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ!
►►ಭಾರತದಲ್ಲಿ ದಿಢೀರ್ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ?
►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ.
►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ?
►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?
►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ?
►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.!
►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್!
►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ!
►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ?
►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ?
►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ.
►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ
►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ)
►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ?
►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..!
►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ!
►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ?
►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್!
►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ?
►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು.
►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು?
►►'ಕೋವಿಡ್ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್!
►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ.
►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ?
►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್
►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ
►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್ ಚಂದ್ರ ಶೆಟ್ಟಿ (ವಿಡಿಯೋ ನೋಡಿ)
►►ಖಾಸಗೀಕರಣದ ಹಿಂದಿನ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ
►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?