ಬರಹ: ನವೀನ್ ಸೂರಿಂಜೆ (ಲೇಖಕರು ಖ್ಯಾತ ಪತ್ರಕರ್ತರು ಹಾಗೂ ಜನಪರ ಬರಹಗಾರರು)
ಅಫ್ಘಾನಿಸ್ತಾನವನ್ನು ತಾಲೀಬಾನಿಗರು ಸಂಪೂರ್ಣ ಕೈವಶ ಮಾಡಿಕೊಂಡಿದ್ದಾರೆ. ಭಾರತೀಯರಾದ ನಮಗೆ ಇದೊಂದು ಪಾಠ. ತಾಲೀಬಾನಿಗರು ಅಫ್ಘಾನಿಸ್ಥಾನದಲ್ಲಿ ಮಾತ್ರ ಇರೋದಲ್ಲ. ನಮ್ಮ ದೇಶದಲ್ಲೂ ತಾನಿಬಾನಿಗರು ಸದೃಢವಾಗಿ ಬೆಳೆಯುತ್ತಿದ್ದಾರೆ. ಈಗಲೇ ಚಿವುಟಿ ಹಾಕದಿದ್ದರೆ ನಾವೂ ಕೂಡಾ ಅಫ್ಘಾನಿಸ್ತಾನದ ಸ್ಥಿತಿಯನ್ನೇ ಎದುರಿಸಬೇಕಾಗುತ್ತದೆ.
ನಿಮಗೆ ನೆನಪಿರಬಹುದು. ಮಂಗಳೂರಿನಲ್ಲಿ ತಾಲೀಬಾನ್ ಗಿರಿ ಎಂದು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಆ ತಾಲೀಬಾನಿಗರೇ ಇಂದು ಇಡೀ ಭಾರತದಲ್ಲಿ ಬೆಳೆದುಬಿಟ್ಟಿದ್ದಾರೆ.
ತಾಲೀಬಾನಿಗರ ಮೂಲ ಸಿದ್ದಾಂತ ಏನು ? ಅವರು ಯಾವುದಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ? ಅಫ್ಘಾನ್, ಪಾಕಿಸ್ತಾನದ ಜನಸಾಮಾನ್ಯರು ತಾಲೀಬಾನ್ ಅನ್ನು ಯಾಕೆ ಬೆಂಬಲಿಸ್ತಾರೆ ? ಭಾರತದಲ್ಲೂ ಜನಸಾಮಾನ್ಯರು ಇದೇ ರೀತಿ ತಾಲೀಬಾನ್ ಬೆಂಬಲಿಸಿದರೆ ಏನಾಗುತ್ತದೆ ಎಂದು ಸಿಂಪಲ್ಲಾಗಿ ಯೋಚಿಸಬೇಕು.
ಅಫ್ಘಾನ್ ತಾಲೀಬಾನ್ : ಸರ್ಕಾರದ ಕಾನೂನುಗಳನ್ನು ವಿರೋಧಿಸುತ್ತದೆ. ಧಾರ್ಮಿಕ ಕಾನೂನುಗಳೇ ಅಸ್ತಿತ್ವದಲ್ಲಿರಬೇಕು ಎಂದು ಬಯಸುತ್ತದೆ. ಧರ್ಮದ ಆಧಾರದಲ್ಲೇ ಈ ದೇಶ ಇರಬೇಕು ಎಂದು ಹೇಳುತ್ತದೆ.
ಭಾರತದ ತಾಲೀಬಾನ್ : ಭಾರತದ ಸಂವಿಧಾನವನ್ನೇ ವಿರೋಧಿಸುತ್ತದೆ. ಧರ್ಮದ ಆಧಾರದಲ್ಲೇ ದೇಶ ಇರಬೇಕು. ಬಹುಸಂಖ್ಯಾತರ ಧಾರ್ಮಿಕ ನಿಯಮಗಳನ್ನೇ ಕಾನೂನು ಮಾಡಲು ಕಾನೂನನ್ನು ಹಲವು ಬಾರಿ ಕೈಗೆತ್ತಿಕೊಂಡಿದೆ.
ಅಫ್ಘಾನ್ ತಾಲೀಬಾನ್ : ಧರ್ಮ, ಸಂಸ್ಕೃತಿಯ ನಿಯಮಗಳನ್ನು ಉಲ್ಲಂಘಿಸಿದರೆ ತಾಲೀಬಾನಿಗಳು ನಿಂತ ಜಾಗದಲ್ಲೇ ಶಿಕ್ಷೆ ಕೊಡ್ತಾರೆ.
ಭಾರತದ ತಾಲೀಬಾನ್ : ತಾವು ಪ್ರತಿಪಾದಿಸುವ ಧರ್ಮ, ಸಂಸ್ಕೃತಿಯನ್ನು ಒಪ್ಪದವರ ಮೇಲೆ ಹಲ್ಲೆ ನಡೆಸುತ್ತಾರೆ. ದೇಶದಾದ್ಯಂತ ಲಕ್ಷಾಂತರ ಘಟನೆಗಳು ನಡೆದಿವೆ. ಅದಕ್ಕಾಗಿಯೇ ಹಲವು ಹೆಸರಿನಲ್ಲಿ ಸಂಘಟನೆಯನ್ನು ಮಾಡಿಕೊಂಡಿದ್ದಾರೆ.
ಅಫ್ಘಾನ್ ತಾಲೀಬಾನ್ : ಹಂದಿ ತಿನ್ನುವುದು ಮತ್ತು ಕುಡಿಯುವುದನ್ನು ವಿರೋಧಿಸುತ್ತದೆ. ಗೊತ್ತಾದರೆ ಅಂತಹ ಸ್ಥಳಕ್ಕೆ ದಾಳಿ ಮಾಡಿ ನಾಗರಿಕರನ್ನು ಥಳಿಸುತ್ತದೆ.
ಭಾರತದ ತಾಲೀಬಾನ್ : ದನ ತಿನ್ನುವುದನ್ನು ಮತ್ತು ಹುಡುಗಿಯರು ಕುಡಿಯುವುದನ್ನು ವಿರೋಧಿಸುತ್ತದೆ. ಗೊತ್ತಾದರೆ ಅಂತಹ ಹೊಟೇಲ್, ಮನೆಯ ಮೇಲೆ ದಾಳಿ ನಡೆಸುತ್ತದೆ. ಕುಡಿಯುವ ಹುಡುಗಿಯರಿಗೆ ಸಾರ್ವಜನಿಕವಾಗಿ ಹಲ್ಲೆ ನಡೆಸುತ್ತದೆ. ಪಬ್ ದಾಳಿ, ಹೋಂ ಸ್ಟೇ ದಾಳಿ ಇದಕ್ಕೆ ತಾಜಾ ಉದಾಹರಣೆಗಳು.
ಅಫ್ಘಾನ್ ತಾಲೀಬಾನ್ : ಪಶ್ಚಿಮಾತ್ಯ ಹೊಸ ವರ್ಷದ ಆಚರಣೆ ಮತ್ತು ಕ್ಯಾಲೆಂಡರ್ ಅನ್ನು ವಿರೋಧಿಸುತ್ತದೆ. ಧಾರ್ಮಿಕ ಕಾಲಮಾನದ ಪ್ರಕಾರ ಹೊಸ ವರ್ಷ ಆಚರಣೆ ಮತ್ತು ಕ್ಯಾಲೆಂಡರ್ ರೂಪಿಸಬೇಕು ಎನ್ನುತ್ತದೆ.
ಭಾರತದ ತಾಲೀಬಾನ್ : ಪಶ್ಚಿಮಾತ್ಯ ಹೊಸ ವರ್ಷದ ಆಚರಣೆ ಮತ್ತು ಕ್ಯಾಲೆಂಡರ್ ಅನ್ನು ವಿರೋಧಿಸುತ್ತದೆ. ಧಾರ್ಮಿಕ ಕಾಲಮಾನದ ಪ್ರಕಾರ ಹೊಸ ವರ್ಷ ಆಚರಣೆ ಮತ್ತು ಕ್ಯಾಲೆಂಡರ್ ರೂಪಿಸಬೇಕು ಎನ್ನುತ್ತದೆ.
ಅಫ್ಘಾನ್ ತಾಲೀಬಾನ್ : ಯುವತಿಯರು ಸಾಮಾಜಿಕ ಜಾಲತಾಣ ಬಳಸುವುದು ಮತ್ತು ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದನ್ನು ನಿಷೇದಿಸುತ್ತದೆ.
ಭಾರತದ ತಾಲೀಬಾನ್ : ಯುವತಿಯರು ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯ ಆಗಿರುವುದು ಮತ್ತು ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದನ್ನು ಕೆಲ ಸಂಘಟನೆಗಳ ಪ್ರಮುಖರು ಹಲವು ಬಾರಿ ಆಕ್ಷೇಪಿಸಿದ್ದಾರೆ.
ಅಫ್ಘಾನ್ ತಾಲೀಬಾನ್ : ಪುರುಷರು ಮತ್ತು ಮಹಿಳೆಯರು ಒಟ್ಟುಗೂಡಿ ಆನಂದಿಸುವುದು, ಪಾರ್ಟಿ ಮಾಡುವುದು, ಗುಂಪು ಸೇರುವುದನ್ನು ವಿರೋಧಿಸುತ್ತದೆ. ಮತ್ತು ಅಂತಹ ಸ್ಥಳಗಳಿಗೆ ದಾಳಿ ಮಾಡುತ್ತದೆ.
ಭಾರತದ ತಾಲೀಬಾನ್ : ಪುರುಷರು ಮತ್ತು ಮಹಿಳೆಯರು ಒಟ್ಟಾಗಿ ಪಾರ್ಟಿ ಮಾಡಿದರೆ ಮಾರಲ್ ಪೊಲೀಸಿಂಗ್ (ನೈತಿಕ ಪೊಲೀಸ್ ಗಿರಿ) ಮಾಡುತ್ತದೆ. ಅಟ್ಟಾಡಿಸಿ ಹೊಡೆಯುತ್ತದೆ. ಇಂತಹ ಹಲವು ಘಟನೆಗಳಿಂದಲೇ ಭಾರತೀಯರಿಗೆ ತಾಲೀಬಾನ್ ಎಂಬ ಪದದ ಪರಿಚಯವಾಯ್ತು.
ಅಫ್ಘಾನ್ ತಾಲೀಬಾನ್ : ನಮ್ಮ ಧರ್ಮವಲ್ಲದೆ ಇನ್ನೊಂದು ಧರ್ಮದ ಪೂಜಾ ಸ್ಥಳಗಳನ್ನು ತಾಲೀಬಾನಿಗಳು ಒಪ್ಪುವುದಿಲ್ಲ.
ಭಾರತದ ತಾಲೀಬಾನಿಗಳು : ಇಂತಹ ಕಾರಣಕ್ಕಾಗಿಯೇ ಚರ್ಚ್ ಮೇಲೆ ದಾಳಿ, ಮಸೀದಿಗಳು, ಮದ್ರಾಸಗಳ ವಿರುದ್ದ ದ್ವೇಷದ ಮಾತುಗಳನ್ನಾಡುತ್ತಾರೆ.
ಅಫ್ಘಾನ್ ತಾಲೀಬಾನಿಗಳು : ದೇಶದಲ್ಲಿ ಎಲ್ಲರಿಗೂ ಬದುಕುವ ಹಕ್ಕನ್ನು ನಿರಾಕರಿಸುತ್ತದೆ. ಎಲ್ಲರೂ ಸಮಾನರು ಎಂಬುದನ್ನು ಸುತಾರಾಂ ಒಪ್ಪುವುದಿಲ್ಲ.
ಭಾರತದ ತಾಲೀಬಾನಿಗಳು : ದೇಶದಲ್ಲಿ ಎಲ್ಲರಿಗೂ ಬದುಕುವ ಹಕ್ಕನ್ನು ನಿರಾಕರಿಸುತ್ತದೆ. ಎಲ್ಲರೂ ಸಮಾನರು ಎಂಬುದನ್ನು ಸುತಾರಾಂ ಒಪ್ಪುವುದಿಲ್ಲ. ಬಾಯಿ ಮಾತಿಗೆ ಒಪ್ಪಿದರೂ ಎಲ್ಲರೂ ಅವರ ಧರ್ಮದ ನಿಯಮಗಳಂತೆ ನಡೆಯಬೇಕು ಮತ್ತು ಅವರಿಗೆ ಗುಲಾಮರಾಗಿ ಬದುಕಬಹುದು ಎಂದು ಪ್ರತಿಪಾದಿಸುತ್ತದೆ.
ಅಫ್ಘಾನ್ ತಾಲೀಬಾನ್ : ಪುರುಷರು ಮಾತ್ರ ಉದ್ಯೋಗಕ್ಕೆ ಹೋಗಬೇಕು. ಮಹಿಳೆಯರು ಮನೆಯ ಒಳಗೇ ಇರಬೇಕು ಎಂದು ಹೇಳುತ್ತದೆ.
ಭಾರತದ ತಾಲೀಬಾನ್ : ಮಹಿಳೆಯರು ಉದ್ಯೋಗಕ್ಕೆ ಹೋಗುವುದರಿಂದಲೇ ಭಾರತೀಯ ಸಂಸ್ಕೃತಿ ಹಾಳಾಗುತ್ತದೆ. ಮಹಿಳೆ ಅಡುಗೆ ಮನೆಗಷ್ಟೇ ಸೀಮಿತ ಎಂದು ಸಂಘಟನೆಯೊಂದರ ರಾಷ್ಟ್ರೀಯ ನಾಯಕರು ಹಲವು ಬಾರಿ ಕರೆ ಕೊಟ್ಟಿದ್ದರು.
ಅಫ್ಘಾನ್ ತಾಲೀಬಾನ್ :1,60,000 ನಾಗರಿಕರು ಹಸಿವಿನಿಂದ ಬಳಲುತ್ತಿದ್ದರೂ UN ನೀಡಿದ್ದ ಆಹಾರ ಪೂರೈಕೆಯನ್ನು ನಿರಾಕರಿಸಿದರು.
ಭಾರತದ ತಾಲೀಬಾನ್ : ಕೇರಳ ಪ್ರವಾಹದಿಂದ ಜನ ಮನೆ ಮಠ ಕಳೆದುಕೊಂಡಾಗ ದುಬೈ ಸರ್ಕಾರ 700 ಕೋಟಿ ರೂ. ನೆರವು ನೀಡಲು ಬಂದಾಗ ನಿರಾಕರಿಸಲಾಯ್ತು. ಜನ ಸಾಯ್ತಾ ಇರುವಾಗ ಈ ರೀತಿ ನೆರವು ನಿರಾಕರಣೆಯನ್ನು ಭಾರತದ ತಾಲೀಬಾನಿಗರು ಸಂಭ್ರಮಿಸಿದರು.
ಅಫ್ಘಾನ್ ತಾಲೀಬಾನ್ : ಸಣ್ಣ ಸಂಖ್ಯೆಯ ಬುಡಕಟ್ಟು ಮುಸ್ಲೀಮರನ್ನು ಮೂಲಭೂತವಾದಿ ಮುಸ್ಲೀಮರನ್ನಾಗಿಸಲು ಯತ್ನಿಸಿದರು. ಸಾಧ್ಯವಾಗದೇ ಇದ್ದಾಗ ಬುಡಕಟ್ಟು ಮುಸ್ಲೀಮರ ಮಕ್ಕಳು, ಮಹಿಳೆಯರ ಮೇಲೆ ದಾಳಿಗಳನ್ನು ನಡೆಸಿದರು.
ಭಾರತದ ತಾಲೀಬಾನ್ : ಆದಿವಾಸಿ, ದಲಿತರು ಒಂದೋ ನಾವು ಹೇಳಿದಂತೆ ನಮ್ಮ ಧರ್ಮದ ವರ್ಣ ಪದ್ದತಿಯಂತೆ ಬದುಕಬೇಕು. ಇಲ್ಲದೇ ಇದ್ದರೆ ಬದುಕಲು ಬಿಡಲಾರೆವು ಎಂದು ಹಲವು ಘಟನೆಗಳ ಮೂಲಕ ಸಾಭೀತು ಮಾಡಲಾಗಿದೆ.
ಈ ರೀತಿ ದೊಡ್ಡ ಪಟ್ಟಿ ಮಾಡಬಹುದು. ಅಫ್ಘಾನ್ ತಾಲೀಬಾನ್ ಗೂ ಭಾರತದಲ್ಲಿರುವ ಕೆಲ ಕೋಮುವಾದಿ ಸಂಘಟನೆಗಳ ಕೆಲಸ/ಸಿದ್ದಾಂತಗಳಿಗೂ ಯಾವ ವ್ಯತ್ಯಾಸವೂ ಇಲ್ಲ. ಅಫ್ಘಾನ್ ನಲ್ಲಿ ಅವರು ಬಹುಸಂಖ್ಯಾತರು. ಭಾರತದಲ್ಲಿ ಇವರು ಬಹುಸಂಖ್ಯಾತರು. ತಾಲೀಬಾನ್ ಅನ್ನು ವಿರೋಧಿಸುವವರು ಧರ್ಮದ ಆಧಾರದಲ್ಲಿ ವಿರೋಧಿಸಬೇಡಿ. ತಾಲೀಬಾನ್ ಯಾವ ಧರ್ಮದ್ದೇ ಆಗಿರಲಿ, ಯಾವ ದೇಶದಲ್ಲೇ ಇರಲಿ. ತಾಲೀಬಾನ್ ಸಿದ್ದಾಂತವನ್ನೇ ವಿರೋಧಿಸಬೇಕಿದೆ. ಆಗ ನಮ್ಮ ಪ್ರೀತಿಯ ಭಾರತವು ಅಫ್ಘಾನ್ ತರಹ ಆಗದೆ ಭಾರತವಾಗಿ ಉಳಿಯುತ್ತದೆ.
►►ಇದನ್ನೂ ಓದಿ:
►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ.
►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ?
►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?
►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ?
►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.!
►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್!
►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ!
►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ?
►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ?
►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ.
►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ
►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ)
►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ?
►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..!
►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ!
►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ?
►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್!
►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ?
►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು.
►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು?
►►'ಕೋವಿಡ್ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್!
►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ.
►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ?
►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್
►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ
►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್ ಚಂದ್ರ ಶೆಟ್ಟಿ (ವಿಡಿಯೋ ನೋಡಿ)
►►ಖಾಸಗೀಕರಣದ ಹಿಂದಿನ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ
►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?