'ಕನ್ನಡ ಪರ ಹೋರಾಟಗಾರರ ಮೇಲಿನ ಕೇಸುಗಳನ್ನು ವಾಪಾಸು ಪಡೆಯುವ ನೆವದಲ್ಲಿ ಕೋಮುಗಲಭೆ ಸೃಷ್ಟಿಸಿ, ಹಲವರ ಸಾವು- ನೋವಿಗೆ ಹಾಗೂ ಸಾರ್ವಜನಿಕ ಆಸ್ತಿಗಳ ಹಾನಿಗೆ ಕಾರಣವಾದ ಬಿಜೆಪಿ ಬೆಂಬಲಿಗ ದುಷ್ಕರ್ಮಿಗಳ ಮೇಲಿನ ಕೇಸ್ ಅನ್ನೂ ವಾಪಸ್ ಪಡೆಯುವುದಾದರೆ ತನ್ನನ್ನೂ ಸೇರಿ ಯಾವುದೇ ಕನ್ನಡ ಪರ ಹೋರಾಟಗಾರರ ಕೇಸ್ ವಾಪಸ್ ಪಡೆಯುವುದೇ ಬೇಡ..!' ಹೀಗಂತ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಕರ್ನಾಟಕ ರಣಧೀರ ಪಡೆಯ ಬೈರಪ್ಪ ಹರೀಶ್ ಕುಮಾರ್.
ಮುಖ್ಯಮಂತ್ರಿಗಳಿಗೆ ಬರೆದ ಪತ್ರದ ವಿವರ ಇಂತಿದೆ:
75ನೇ ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಮುಖ್ಯಮಂತ್ರಿಗಳಿಗೆ ನಮ್ಮ ಹಕ್ಕೊತ್ತಾಯ.
ಶ್ರೀ ಬಸವರಾಜ ಬೊಮ್ಮಾಯಿಯವರು
ಸನ್ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ, ಇವರಿಗೆ..
ಮಾನ್ಯರೇ,
ನಮ್ಮ ದೇಶದ ಸ್ವಾತಂತ್ರೋತ್ಸವ ಸಂಭ್ರಮದ ಶುಭಕಾಮನೆಗಳು. ತಮ್ಮ ಅಧಿಕಾರದ ಅವಧಿಯಲ್ಲಿ ಈ ಹಿಂದೆಂದಿಗಿಂತಲೂ ಕರುನಾಡು ಹೆಚ್ಚು ಸಂಪದ್ಬರಿತವಾಗಲಿ, ನಾಡು ಸುಭಿಕ್ಷವಾಗಿರಲಿ ಎಂದು ಹಾರೈಸುತ್ತೇವೆ.
ನಾವು ಈಗ 75 ನೇ ಸ್ವಾತಂತ್ರೋತ್ಸವವನ್ನು ಆಚರಿಸುತ್ತಿದ್ದೇವೆ. ನಮಗೆ ರಾಜಕೀಯ ಸ್ವಾತಂತ್ರ್ಯ ಮಾತ್ರ ಸಿಕ್ಕಿದೆ, ಸಾಮಾಜಿಕ ಸ್ವಾತಂತ್ರ್ಯ ಇನ್ನೂ ಬಂದಿಲ್ಲ ಎಂಬ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮಾತು ಪ್ರಾದೇಶಿಕ ರಾಜಕಾರಣಕ್ಕೂ ಅನ್ವಯವಾಗುತ್ತದೆ. ಹೇಗೆ ದೇಶದಲ್ಲಿ ಇನ್ನೂ ಸಾಮಾಜಿಕ ಸ್ವಾತಂತ್ರ್ಯ ಲಭ್ಯವಾಗಿಲ್ಲವೋ, ಪ್ರಾದೇಶಿಕವಾಗಿ ರಾಜ್ಯಗಳೂ ಸಂಪೂರ್ಣ ರಾಜಕೀಯ ಸ್ವಾತಂತ್ರ್ಯವನ್ನು ಪಡೆದುಕೊಂಡಿಲ್ಲ ಎಂಬುದು ಅಷ್ಟೇ ಸತ್ಯ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ವ್ಯವಸ್ಥೆಯಲ್ಲಿ ಒಕ್ಕೂಟ ಸರ್ಕಾರಗಳು ರಾಜ್ಯಗಳಿಗೆ "ಕೇಂದ್ರ ಸರ್ಕಾರ"ದಂತೆ ವರ್ತಿಸುತ್ತಿದೆ. ರಾಜ್ಯಗಳಿಗೆ ಸಂಪೂರ್ಣ ಸ್ವಾಯತ್ತತೆ, ಸ್ವಾತಂತ್ರ್ಯವನ್ನು ಇನ್ನೂ ನೀಡಲಾಗಿಲ್ಲ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಸ್ವಾತಂತ್ರ್ಯದ ಜೊತೆಗೆ ರಾಜಕೀಯ, ಭಾಷಿಕ, ಸಾಂಸ್ಕೃತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ. ರಾಜ್ಯ ಸರ್ಕಾರಗಳ ಈ ಸ್ವಾತಂತ್ರ್ಯವನ್ನು ಕಸಿಯುವುದೆಂದರೆ ಜನರ ಸ್ವಾತಂತ್ರ್ಯವನ್ನು ಹರಣ ಮಾಡಿದಂತೆ ! ಕರ್ನಾಟಕ ರಾಜ್ಯವೂ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ಸ್ವಾತಂತ್ರ್ಯವನ್ನು ಕಳೆದುಕೊಂಡಿದೆ ಮತ್ತು ಅದನ್ನು ಪಡೆಯಲು ಹೋರಾಟ ನಿರಂತರವಾಗಿರಿಸಿಕೊಂಡೇ ನಾವು 75 ನೇ ಸ್ವಾತಂತ್ರೋತ್ಸವ ಸಂಭ್ರಮದಲ್ಲಿ ಆಚರಿಸುತ್ತಿದ್ದೆವೆ ಎಂಬ ಪ್ರಜ್ಞೆ ನಮ್ಮಲ್ಲಿ ಸದಾ ಜಾಗೃತವಾಗಿ ಇರಬೇಕಾಗುತ್ತದೆ.
ಸ್ವಾತಂತ್ರೋತ್ಸವದ ಈ ಶುಭ ಸಂದರ್ಭದಲ್ಲಿ ನಾವು ಹಲವು ಬೇಡಿಕೆಗಳನ್ನು ನಮ್ಮ ಒಕ್ಕೂಟ ಸರ್ಕಾರದ ಮುಂದೆ ಇಡಬೇಕಾಗುತ್ತದೆ. ಕನ್ನಡ ಸಂಘಟನೆಯಾಗಿ, ಪ್ರಾದೇಶಿಕ ರಾಜಕಾರಣ ಮಾಡುವವರಾಗಿ ಕನ್ನಡ ಭಾಷೆ, ನೆಲ, ಜಲ, ಬದುಕಿನ ಬಗ್ಗೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಎಲ್ಲಾ ಪಕ್ಷಗಳು ಅಧಿಕಾರದಲ್ಲಿ ಇಲ್ಲದೇ ಇದ್ದಾಗ ನಮ್ಮ ಬೇಡಿಕೆಗಳನ್ನು ಬೆಂಬಲಿಸಿವೆ. ಅಧಿಕಾರಕ್ಕೆ ಬಂದಾಗ ಕನ್ನಡ ಭಾಷೆ, ನೆಲ, ಜಲ, ಬದುಕಿನ ಹೋರಾಟ ಮಾಡುವವರನ್ನು ವಿರೋಧಿಗಳಂತೆ ನಮ್ಮ ರಾಜ್ಯದ ಆಡಳಿತಗಾರರೇ ನಡೆಸಿಕೊಂಡಿರುವುದು ರಾಜ್ಯದ ದುರಾದೃಷ್ಟ. ಅದು ಇನ್ನು ಮುಂದೆ ಕೊನೆಯಾಗಬೇಕು. ನಮ್ಮ ಭಾಷೆ, ನೆಲ, ಜಲ, ಬದುಕಿನ ವಿಚಾರಗಳು ಚರ್ಚೆಯಾದಾಗ ರಾಜ್ಯ ಸರ್ಕಾರವು ತಮಿಳುನಾಡು ಮಾದರಿಯಲ್ಲಿ ಒಕ್ಕೂಟ ಸರ್ಕಾರವನ್ನು ಎದುರು ಹಾಕಿಕೊಂಡು ಬೆಂಬಲಿಸುವ ದೈರ್ಯ ಮತ್ತು ಆಸಕ್ತಿಯನ್ನು ತೋರಿಸಬೇಕು.
1. ಕೇಂದ್ರ ಸರ್ಕಾರ ಎಂಬ ಪದ ಬಳಕೆ ನಿಲ್ಲಿಸಿ : ಭಾರತೀಯ ಒಕ್ಕೂಟ ಸರ್ಕಾರದ ಸ್ವತಂತ್ರ ರಾಜ್ಯವಾಗಿ ಸ್ವಾತಂತ್ರ್ಯದ ಮನೋಭಾವವನ್ನು ಬೆಳೆಸಿಕೊಳ್ಳಲು ಮೊದಲನೆಯ ಹಂತವಾಗಿ ಒಕ್ಕೂಟ ಸರ್ಕಾರವನ್ನು ಕೇಂದ್ರ ಸರ್ಕಾರ ಎಂದು ಕರೆಯುವುದನ್ನು ನಿಲ್ಲಿಸಬೇಕು. ಸಂವಿಧಾನದಲ್ಲಿ ಕೇಂದ್ರ ಸರ್ಕಾರ ಎಂಬ ಉಲ್ಲೇಖವೇ ಇಲ್ಲವಾಗಿದ್ದು ಒಕ್ಕೂಟ ಸರ್ಕಾರ ಮಾತ್ರ ಅಸ್ತಿತ್ವದಲ್ಲಿದೆ. ರಾಜ್ಯದ ಆಡಳಿತ ಭಾಷಾ ಬಳಕೆಯಲ್ಲಿ ಕೇಂದ್ರ ಸರ್ಕಾರ ಎಂಬ ಪದವನ್ನು ಕೈಬಿಟ್ಟು ಒಕ್ಕೂಟ ಸರ್ಕಾರ ಎಂಬ ಪದವನ್ನು ಬಳಸುವಂತೆ ಅಧಿಕೃತ ಆದೇಶ ಹೊರಡಿಸಬೇಕು.
2.ಯಾವ ಪಕ್ಷಗಳೂ ಹೈಕಮಾಂಡ್ ಪದ ಬಳಕೆ ಮಾಡಬಾರದು : ಎಲ್ಲಾ ಪಕ್ಷಗಳು ಮತ್ತು ಜನಸಾಮಾನ್ಯರು ಪಕ್ಷಗಳ ಉತ್ತರ ಭಾರತೀಯ/ದೆಹಲಿ ನಾಯಕತ್ವವನ್ನು ಹೈಕಮಾಂಡ್ ಎಂದು ವೈಭವೀಕರಿಸುವುದು ಅಸಹ್ಯದ ಪರಮಾವಧಿ. ಕರ್ನಾಟಕದ ರಾಜಕಾರಣಕ್ಕೆ ಕನ್ನಡಿಗರೇ ಹೈಕಮಾಂಡ್ ಆಗಿರುತ್ತಾರೆ. ಪಕ್ಷಗಳ ನಾಯಕರು ಉತ್ತರ ಭಾರತೀಯರಾಗಿದ್ದರೆ ಅವರ ಹುದ್ದೆಯಿಂದ ಸಂಬೋಧಿಸಬೇಕೇ ವಿನಹ ಹೈಕಮಾಂಡ್ ಎನ್ನಬಾರದು. ಕೋಟ್ಯಾಂತರ ಕನ್ನಡಿಗರ ಮುಖ್ಯಮಂತ್ರಿಗಳೇ ಖುದ್ದು ಯಾರನ್ನೋ ಹೈಕಮಾಂಡ್ ಎನ್ನುವುದು ಕನ್ನಡಿಗರಿಗೆ ಮಾಡುವ ಅವಮಾನವಾಗಿದೆ.
3. ಬ್ಯಾಂಕು/ರೈಲು ಹುದ್ದೆಗಳಿಗೆ ಕನ್ನಡದಲ್ಲೇ ಪರೀಕ್ಷೆ: ಒಕ್ಕೂಟ ಸರ್ಕಾರವು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸಿಬ್ಬಂದಿ ನೇಮಿಸಿಕೊಳ್ಳಲು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಐಬಿಪಿಎಸ್ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದ ಸಂವಿಧಾನದಲ್ಲಿ ಸಮಾನ ಸ್ಥಾನಮಾನ ಹೊಂದಿದ ಕನ್ನಡವೂ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಹಾಗೂ ಭಾಷಿಕರಿಗೆ ತೀವ್ರ ಅನ್ಯಾಯವಾಗುತ್ತಿದೆ. ಈಗಾಗಲೇ ಕರ್ನಾಟಕದ ಬ್ಯಾಂಕುಗಳಲ್ಲಿ ಹಿಂದಿ ಭಾಷಿಕರು ತುಂಬಿಕೊಳ್ಳುತ್ತಿದ್ದಾರೆ. ಪ್ರಾದೇಶಿಕ ಭಾಷೆ ಬಲ್ಲವರೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನೇಮಕಗೊಳ್ಳಬೇಕು ಎಂಬ ನಿಯಮವನ್ನು ಗಾಳಿಗೆ ತೂರಿದಂತೆ ಆಗಿದೆ. ಹಾಗಾಗಿ ಈ ಬಗ್ಗೆ ಗಂಭೀರವಾಗಿ ಗಮನಹರಿಸಿ, ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಐಬಿಪಿಎಸ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ಅವಕಾಶ ನೀಡಬೇಕು.
4. ತ್ರಿಭಾಷಾ ಸೂತ್ರವನ್ನು ವಿರೋಧಿಸಿ :
ಕರ್ನಾಟಕವು ತ್ರಿಭಾಷಾ ಸೂತ್ರವನ್ನು ಖಡಖಂಡಿತವಾಗಿ ವಿರೋಧಿಸಬೇಕು. ಈ ಸೂತ್ರದಡಿಯಲ್ಲಿ ಉತ್ತರ ಭಾರತದ ಯಾರೂ ಕನ್ನಡವನ್ನು ಕಲಿತೇ ಇಲ್ಲ. ತಮಿಳುನಾಡು ಸರ್ಕಾರವಂತೂ ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡೇ ಇಲ್ಲ. ಕರ್ನಾಟಕವು ಕೂಡಾ ತ್ರಿಭಾಷಾ ಸೂತ್ರವನ್ನು ಯಾವುದೇ ಕಾರಣಕ್ಕೆ ಒಪ್ಪಬಾರದು. ಹಿಂದಿ ರಾಷ್ಟ್ರಭಾಷೆಯಲ್ಲ. ರಾಷ್ಟ್ರಭಾಷೆ ಎಂದು ಸಂವಿಧಾನವಾಗಲೀ, ಕಾನೂನಾಗಲೀ ಇಲ್ಲ. ಹಾಗಾಗಿ ಹಿಂದಿ ರಾಷ್ಟ್ರಭಾಷೆಯಲ್ಲ ಎಂಬುದನ್ನು ಶಾಲೆಗಳಲ್ಲಿ ಮಕ್ಕಳಿಗೆ ಕಲಿಸಬೇಕು.
5. ಹಿಂದಿ ಹೇರಿಕೆಯನ್ನು ನಿಲ್ಲಿಸಿ :
ಒಕ್ಕೂಟ ಸರ್ಕಾರವು ವ್ಯವಸ್ಥಿತವಾಗಿ ಹಿಂದಿ ಹೇರಿಕೆಯನ್ನು ಮಾಡುತ್ತಿದೆ. ಹಿಂದಿ ಭಾಷೆಯನ್ನು ಬಳಸಬೇಕೆಂದು ಆದೇಶಿಸುವ ಸುತ್ತೋಲೆಗಳು, ಕಚೇರಿ ಟಿಪ್ಪಣಿಗಳು ಮತ್ತು ಆದೇಶಗಳು ರಾಜ್ಯಕ್ಕೆ ಒಕ್ಕೂಟ ಸರ್ಕಾರದಿಂದ ಅಧಿಕೃತವಾಗಿ ಬಂದಿವೆ. ಡಿಮಾನಿಟೈಸೇಶನ್ ನಂತರ ರಿಸರ್ವ್ ಬ್ಯಾಂಕ್ ಪ್ರಕಟಿಸಿದ ಹೊಸ ನೋಟುಗಳ ಮೇಲೆ ಗಾಂಧೀ ಚಿತ್ರದ ಸನಿಹ ದೇವನಾಗರಿಯಲ್ಲಿ ಬರೆಯಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಹಿಂದೀ ಭಾಷೆಯನ್ನು ವ್ಯಾಪಕವಾಗಿ ಬಳಸಲಾಗಿದೆ. ಒಕ್ಕೂಟ ಸರ್ಕಾರ ಘೋಷಿಸುವ ಯೋಜನೆಗಳ ಹೆಸರುಗಳೂ ಹಿಂದಿಭಾಷಿಕವಾಗಿದೆ. ಕನ್ನಡಿಗರೂ ಸೇರಿದಂತೆ ಬಹುಸಂಖ್ಯಾತ ದ್ರಾವಿಡ ಭಾಷಿಕರಿಗೆ ಒಕ್ಕೂಟ ಸರ್ಕಾರದ ಯೋಜನೆಗಳಲ್ಲಿ ಭಾವನಾತ್ಮಕ ಸಂಬಂಧ ಬೆಳೆಯಬೇಕಾದರೆ, ಯೋಜನೆಯ ಜಾರಿ ಸುಲಭವಾಗಬೇಕಾದರೆ ಯೋಜನೆಯ ಹಿಂದಿ ಹೆಸರನ್ನು ಕೈಬಿಡಬೇಕು.
6. ಕನ್ನಡದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ:
ಕಳೆದ 75 ವರ್ಷಗಳಲ್ಲಿ ಒಕ್ಕೂಟ ಸರ್ಕಾರವು ರಾಜ್ಯದ ನೆಲ, ಜಲವನ್ನು ಬಳಸಿಕೊಂಡು ರಾಜ್ಯದ ಅಲ್ಲಲ್ಲಿ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಸ್ಥಾಪಿಸಿತು. ಅದರಂತೆ ಬೆಂಗಳೂರಿನಲ್ಲಿ ಎಚ್‌ಎಎಲ್, ಮಂಗಳೂರಿನ ಎಂಆರ್ ಪಿಎಲ್ ಸೇರಿ ಹಲವು ಕೈಗಾರಿಕೆಗಳು ರಾಜ್ಯದಲ್ಲಿ ಸ್ಥಾಪನೆಯಾದವು. ಆದರೆ ಈ ಕಾರ್ಖಾನೆಗಳಲ್ಲಿ ಕನ್ನಡಿಗರ ಸಂಖ್ಯೆ ತೀರಾ ಕಡಿಮೆ ಇದೆ. ಪ್ರಮುಖವಾಗಿ ತಮಿಳುನಾಡು ಹಾಗೂ ಉತ್ತರ ಭಾರತದಿಂದ ವಲಸೆ ಬಂದವರು ಹೆಚ್ಚು ಉದ್ಯೋಗ ಪಡೆಯುತ್ತಿದ್ದಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕರ್ನಾಟಕ ರಣಧೀರಪಡೆಯು ಜಾಬ್ ಫಾರ್ ಕನ್ನಡಿಗಾಸ್ ಎಂಬ ಐತಿಹಾಸಿಕ ಹೋರಾಟವನ್ನು ಕೈಗೆತ್ತಿಕೊಂಡಿತ್ತು. ಲಕ್ಷಾಂತರ ಕನ್ನಡಿಗರು ಈ ಹೋರಾಟದಲ್ಲಿ ಕೈ ಜೋಡಿಸಿದ್ದು, ಜನಪ್ರತಿನಿಧಿಗಳು ಈ ಬಗ್ಗೆ ಪ್ರತಿಕ್ರಿಯೆ ಕೊಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನೇನು ರಾಜ್ಯ ಸರ್ಕಾರ ಮತ್ತು ಒಕ್ಕೂಟ ಸರ್ಕಾರ ಈ ಬಗ್ಗೆ ನಿರ್ಧಾರ ಪ್ರಕಟಿಸುತ್ತದೆ ಎಂದು ನಿರೀಕ್ಷಿಸುವ ಸಂದರ್ಭದಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಆವರಿಸಿದ್ದರಿಂದ ಹೋರಾಟ ಮೊಟಕುಗೊಂಡಿತು. ಜನರ ಈ ತೀವ್ರತರವಾದ ಬೇಡಿಕೆಯನ್ನು ಪರಿಗಣಿಸಿ ಕನ್ನಡದ ನೆಲದ ಉದ್ಯೋಗ ಕನ್ನಡಿಗರಿಗೇ ಮೀಸಲು ಎಂಬ ನಿಯಮ/ಕಾನೂನನ್ನು ರಾಜ್ಯ ಸರ್ಕಾರ ತಕ್ಷಣ ರೂಪಿಸಬೇಕು.
7. ಮೇಕೆದಾಟು ಯೋಜನೆ - ಸಿ ಟಿ ರವಿ ವಿರುದ್ದ ಯುಎಪಿಎ ಕೇಸ್ ದಾಖಲಿಸಿ :
ಮೇಕೆದಾಟು ಯೋಜನೆ ಕನ್ನಡಗರ ಬದುಕಿನ ಪ್ರಶ್ನೆಯಾಗಿದೆ. ತಮಿಳುನಾಡಿನ ತಕರಾರಿನಿಂದಾಗಿ ಆ ಯೋಜನೆ ವೇಗ ಪಡೆಯುತ್ತಿಲ್ಲ. ನಮ್ಮಲ್ಲೇ ಹುಟ್ಟಿ, ನಮ್ಮಲ್ಲೇ ಹರಿಯುವ ನದಿಗೆ ನಮ್ಮದೇ ನೆಲದಲ್ಲಿ ಅಣೆಕಟ್ಟು ಕಟ್ಟಲು ಇನ್ನಾವುದೋ ರಾಜ್ಯದ ಅನುಮತಿ ಕೇಳುವ ದುಸ್ಥಿತಿ ಜಗತ್ತಿನ ಯಾವ ಭಾಗದಲ್ಲೂ ಇಲ್ಲವೇನೋ. ಮೇಕೆದಾಟು ಯೋಜನೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಇದು ನೇರವಾಗಿ ಕನ್ನಡಿಗರ ಬದುಕಿನ ಪ್ರಶ್ನೆಯಾಗಿರುವುದರಿಂದ ಇದನ್ನು ವಿರೋಧಿಸುವುದು ನಾಡದ್ರೋಹ, ರಾಜದ್ರೋಹವಾಗುತ್ತದೆ. ಈ ಯೋಜನೆಯ ವಿಚಾರದಲ್ಲಿ ಕರ್ನಾಟಕದ ಶಾಸಕರಾಗಿದ್ದುಕೊಂಡು, ತಮಿಳುನಾಡು ಪರ ನಿಂತಿರುವ ಸಿ ಟಿ ರವಿ ವಿರುದ್ದ ತಕ್ಷಣ ನಾಡದ್ರೋಹ/ರಾಜದ್ರೋಹದ ಕೇಸ್ ದಾಖಲಿಸಬೇಕು.
8. ಕನ್ನಡಿಗರ ಪ್ರತಿಮೆಗಳು ಮತ್ತು ಹೆಸರುಗಳು :
ಕರ್ನಾಟಕದ ಹೆಮ್ಮೆಯ ಸಂಗೊಳ್ಳಿ ರಾಯಣ್ಣರ ಪ್ರತಿಮೆಯನ್ನು ಬೆಳಗಾವಿಯಲ್ಲಿ ಸ್ಥಾಪನೆ, ಯಲಹಂಕ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರಿನ ಬದಲಿಗೆ ಕೆಂಪೇಗೌಡರ ಹೆಸರಿಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ನಾವು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಸರ್ಕಾರದ ವತಿಯಿಂದಲೇ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಮಾಡಬೇಕು. ಯಾವೆಲ್ಲಾ ರಸ್ತೆ, ಸೇತುವೆಗಳಿಗೆ ಕನ್ನಡೇತರರ ಹೆಸರಿದೆಯೋ ಅವೆಲ್ಲವನ್ನು ರದ್ದು ಮಾಡಬೇಕು.
9. ಕನ್ನಡ ಹೋರಾಟಗಾರರ ಮೇಲೆ ಕೇಸ್ ವಾಪಸ್ :
ಕನ್ನಡ ಹೋರಾಟಗಾರ ಸಮುದಾಯವು ನಮ್ಮ ನೆಲ ಜಲ, ಭಾಷೆ ರಕ್ಷಣೆಯ ಹೋರಾಟಗಳ ಸಂದರ್ಭದಲ್ಲಿ ಆಳುವ ಸರ್ಕಾರಗಳು ಮತ್ತು ಪಕ್ಷಗಳ ಬೆಂಬಲಿಗರಿಂದ ಅಪಾರ ಪ್ರಮಾಣದ ಹಿಂಸೆಯನ್ನು ಅನುಭವಿಸಿದೆ. ಹಲವು ಕೇಸ್ ಗಳನ್ನು ಕನ್ನಡದ ನಿಸ್ವಾರ್ಥ ಕಾರ್ಯಕರ್ತರು ಎದುರಿಸುತ್ತಿದ್ದಾರೆ. ಕನ್ನಡ ಹೋರಾಟಗಾರರ ಮೇಲಿನ ಎಲ್ಲಾ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು.
10. ಕೋಮುವಾದಿಗಳ ಮೇಲಿನ ಕೇಸ್ ವಾಪಸಾತಿ ನಿರ್ಧಾರ ಬೇಡ :
ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸಾತಿ ಮಧ್ಯೆ ಕೋಮುವಾದಿ ಸಂಘಟನೆಗಳ ಮೇಲಿನ ಕೇಸ್ ವಾಪಸಾತಿ ಮಾಡಕೂಡದು. ಕನ್ನಡಿಗರು ಮತ್ತು ನಮ್ಮ ರಾಜ್ಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವಂತೆ ಮಾಡಿದ್ದು ಈ ಕೋಮುವಾದಿಗಳು. ಅಂತಹ ಕೋಮುವಾದಿಗಳ ಪ್ರಕರಣವನ್ನು ಹಿಂಪಡೆಯುವುದರಿಂದ ಕನ್ನಡತನ ಅಪಾಯದಲ್ಲಿ ಸಿಲುಕುತ್ತದೆ. ಹಾಗಾಗಿ ಕನ್ನಡ ಹೋರಾಟಗಾರರ ಜೊತೆಗೆ ಕೋಮುವಾದಿಗಳ ಕೇಸ್ ಕೂಡಾ ವಾಪಸ್ ತೆಗೆಯುವುದಾದರೆ ಕನ್ನಡ ಹೋರಾಟಗಾರರ ಕೇಸ್ ವಾಪಸ್ ತೆಗೆಯುವುದೇ ಬೇಡ ಎಂದು ಆಗ್ರಹಿಸುತ್ತೇವೆ.
11. ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮ ಎಂದು ಸಾರಿ :
ರಾಜಕೀಯ ಹಿತಾಸಕ್ತಿಯ ಕೊರತೆಯಿಂದಾಗಿ ಕೆಂಪೇಗೌಡರು, ಸಂಗೊಳ್ಳಿರಾಯಣ್ಣ, ಟಿಪ್ಪು, ರಾಣಿ ಅಬ್ಬಕ್ಕ, ಮದಕರಿ ನಾಯಕ, ಕಿತ್ತೂರ ರಾಣಿ ಚೆನ್ನಮ್ಮ, ಮೈಸೂರು ಒಡೆಯರ್ ಮೊದಲಾದ ಹತ್ತು ಹಲವು ಮಹನೀಯರು ಕಟ್ಟಿದ ಕರ್ನಾಟಕ ಇಂದು ಅನ್ಯರ ಪಾಲಾಗುತ್ತಿದೆ. ಪರಭಾಷಿಗರೇ ಎಲ್ಲ ಕ್ಷೇತ್ರಗಳಲ್ಲಿ ವಿಜೃಂಭಿಸುತ್ತಿದ್ದಾರೆ. ಕನ್ನಡದ ನೆಲದಲ್ಲಿ ಕನ್ನಡಿಗನೇ ಸಾರ್ವಭೌಮನಾಗಬೇಕು. ಕರ್ನಾಟಕದ ಮೂಲನಿವಾಸಿ ಎಲ್ಲಾ ಕನ್ನಡಿಗರಿಗೆ ವಸತಿ ಕಲ್ಪಿಸುವ ವ್ಯವಸ್ಥೆಯಾಗಬೇಕು. ರಸ್ತೆ, ನೀರು, ಒಳಚರಂಡಿಯಂಥ ಮೂಲಭೂತ ಸೌಕರ್ಯಗಳೊಂದಿಗೆ ಎಲ್ಲಾ ಕನ್ನಡಿಗರು ಬದುಕುವಂತಾಗಬೇಕು. ಎಲ್ಲಕ್ಕಿಂತ ಮಿಗಿಲಾಗಿ ಇಡೀ ಕರ್ನಾಟಕ ನೂರು ಶೇಕಡಾ ಕನ್ನಡೀಕರಣವಾಗಬೇಕಿದೆ. ಎಲ್ಲ ಉದ್ಯಮಗಳಲ್ಲೂ ಕನ್ನಡಿಗರಿಗೆ ಮಾತ್ರ ಉದ್ಯೋಗ ನೀಡುವಂತಾಗಬೇಕು. ಕನಿಷ್ಟ ಕೇರಳ ಮಾದರಿಯಲ್ಲಿ ರಾಜ್ಯದ ಆಡಳಿತ ಭಾಷೆ ಗೊತ್ತಿದ್ದರೆ ಮಾತ್ರ ಬದುಕಲು ಸಾಧ್ಯ ಎಂಬ ವಾತಾವರಣ ಸೃಷ್ಟಿಸಬೇಕು. ಇದು ಹಿಂದಿವಾಲಗಳು ಕನ್ನಡದ ನೆಲದ ರಾಜಕಾರಣವನ್ನು ನಿರ್ಧರಿಸುವುದನ್ನು ತಪ್ಪಿಸುತ್ತದೆ.
12. ಮಹಾಜನ್ ವರದಿ ಜಾರಿಯಾಗಲಿ : ಮಹಾಜನ್ ವರದಿ ಪ್ರಕಾರ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂದು ನಿರ್ಧಾರವಾಗಿ ಅನೇಕ ವರ್ಷಗಳೇ ಆಗಿವೆ. ಬೆಳಗಾವಿಯ ಮರಾಠಿಗರಲ್ಲಿ ಗಡಿ ವಿವಾದದ ವಿಷಬೀಜವನ್ನು ನೆಟ್ಟು ತಮ್ಮ ರಾಜಕೀಯು ಬೇಳೆ ಬೇಯಿಸಿಕೊಳ್ಳಲು ವಿನಾಕಾರಣ ಮಹಾರಾಷ್ಟ್ರ ಏಕೀಕರಣ ಸಮಿತಿ ಯತ್ನಿಸುತ್ತಿದೆ. ಅದರ ಕುತಂತ್ರದ ವಿರುದ್ಧ ಬೆಳಗಾವಿಯಲ್ಲಿ ಅ) ಕನ್ನಡಿಗರಿಗೆ ಉದ್ಯೋಗ, ಆ) ಕನ್ನಡಿಗರಿಗೆ ಶಿಕ್ಷಣ ಸೌಲಭ್ಯಗಳು, ಇ)ಕನ್ನಡಿಗರಿಗೆ ವಸತಿ ಸೌಲಭ್ಯಗಳು, ಈ) ಕನ್ನಡಿಗರಿಗೆ ಸ್ವ ಉದ್ದಿಮೆ, ಸ್ವ ಉದ್ಯೋಗಕ್ಕೆ ನೆರವು, ಉ) ರಾಜ್ಯದ ನೆಲ, ಜಲ, ಸಂಪತ್ತಿನ ಸಂರಕ್ಷಣೆ, ಊ) ಗಡಿ ಪ್ರದೇಶ ಮತ್ತು ಗಡಿ ಕನ್ನಡಿಗರ ಭದ್ರತೆ, ಋ) ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆ ರಕ್ಷಣೆ, ಕನ್ನಡ ಚಲನಚಿತ್ರ ಪ್ರದರ್ಶನಕ್ಕೆ ಒತ್ತು ನೀಡಬೇಕು.
13. ಅನಿವಾಸಿ ಕನ್ನಡಿಗರ ರಕ್ಷಣೆ : ಕನ್ನಡ ಎಂಬುದು ವಿಶ್ವಮಾನವ ಪರಿಕಲ್ಪನೆ ಹೊಂದಿದೆ. ಕನ್ನಡತನ ಎಂಬುದು ಯಾರನ್ನೂ ದ್ವೇಷ ಮಾಡುವುದಿಲ್ಲ. ದ್ವೇಷರಹಿತವಾದ ಸ್ವಾಭಿಮಾನ ಹೊಂದಿರುವುದೇ ಕನ್ನಡತನ. ಈ ಕಾರಣಕ್ಕಾಗಿಯೇ ಇಡೀ ಜಗತ್ತಿನಲ್ಲಿ ಕನ್ನಡಿಗರು ನೆಲೆಸಿದ್ದಾರೆ. ಕರ್ನಾಟಕ ಜನಾಧಿಕಾರ ಪಕ್ಷ/ ಕರ್ನಾಟಕ ರಣಧೀರ ಪಡೆ ಅಂತರರಾಷ್ಟ್ರೀಯ ಘಟಕಗಳನ್ನು ಹೊಂದಿದ್ದು ಹಲವು ಬೇಡಿಕೆ ಈಡೇರಿಸುವಂತೆ ಕೋರುತ್ತದೆ. ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರನ್ನ ಕೂಡಲೇ ನೇಮಿಸಬೇಕು. ಉಪಾಧ್ಯಕ್ಷ ಸ್ಥಾನಕ್ಕೆ ಅನಿವಾಸಿಗಳ ಕಷ್ಟ ಬಲ್ಲ ಒಬ್ಬ ಅನಿವಾಸಿ ಕನ್ನಡಿಗರನ್ನೇ ನೇಮಿಸಬೇಕು. ನೆನೆಗುದಿಗೆ ಬಿದ್ದಿರುವ ಎನ್.ಆರ್.ಕೆ ಕಾರ್ಡ್ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಬೇಕು. ಹೆಚ್ಚು ಅನಿವಾಸಿ ಕನ್ನಡಿಗರ ಸಾಂದ್ರತೆ ಇರುವ ದೇಶಗಳಲ್ಲಿ ಕನ್ನಡ ಭವನ ನಿರ್ಮಾಣ ಮಾಡಿ ಕನ್ನಡ ಪಾಠ ಶಾಲೆ ನಡೆಸಲು ವ್ಯವಸ್ಥೆ ಮಾಡಬೇಕು. ಮಧ್ಯವರ್ತಿಗಳಿಂದ ಮೋಸಹೋದವರಿಗೆ, ಓಡಿಬಂದ ಮನೆಗೆಲಸದವರಿಗೆ, ಅಪಘಾತಗಳಿಗೆ ಬಲಿಯಾದವರಿಗೆ, ತುರ್ತು ಸಹಾಯದ ಅವಶ್ಯಕತೆಯಿರುವ ಅಧಿಕೃತ ದಾಖಲೆಗಳಿಲ್ಲದ ಸಾಗರೋತ್ತರ ಕಾರ್ಮಿಕರಿಗೆ ಅಥವ ಸಮಸ್ಯೆಗಳಿಗೆ ಸಿಲುಕಿದ ಬೇರೆ ಯಾವುದೇ ಭಾರತೀಯ ನಾಗರಿಕರಿಗೆ ಆರ್ಥಿಕ ಸಹಾಯವನ್ನು ರಾಜ್ಯ ಸರ್ಕಾರ ನೀಡಬೇಕು. ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಮೃತದೇಹವನ್ನು ಭಾರತಕ್ಕೆ ತರಲು ಅವರ ಕಂಪನಿ ಒಪ್ಪದಿದ್ದಲ್ಲಿ ತಕ್ಷಣ ರಾಜ್ಯ ಸರ್ಕಾರ ಎಲ್ಲಾ ವೆಚ್ಚ ಭರಿಸಿ ಕ್ರಮ ವಹಿಸಬೇಕು.
14. ವಿಮಾನ ನಿಲ್ದಾಣ ಕನ್ನಡಿಕರಣವಾಗಲಿ : ಕರ್ನಾಟಕದ ಯಾವುದೇ ವಿಮಾನ ನಿಲ್ದಾನಕ್ಕೆ ಪರಭಾಷಿಕರ ಹೆಸರು ಇಡಕೂಡದು ಮತ್ತು ಖಾಸಗಿ ಸಂಸ್ಥೆಗಳಿಗೆ ವಹಿಸಬಾರದು. ಒಕ್ಕೂಟ ಸರ್ಕಾರವು ವಿಮಾನ ನಿಲ್ದಾಣವನ್ನು ಖಾಸಗಿಗೆ ವಹಿಸುವುದರಾದರೆ ರಾಜ್ಯ ಸರ್ಕಾರವೇ ಅದನ್ನು ಖರೀಧಿಸಲು ಮುಂದಾಗಬೇಕು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ವಿಮಾನ ನಿಲ್ದಾಣವೆಂದೂ, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯ ವಿಮಾನ ನಿಲ್ದಾಣವೆಂದೂ ಅಧಿಕೃತ ನಾಮಕರಣ ಮಾಡಬೇಕು.
ನಾಡಪ್ರೇಮವೇ ದೇಶಪ್ರೇಮವಾಗಿದೆ. ನಾಡಿಲ್ಲದೇ ದೇಶವಿಲ್ಲ. ನಾಡದ್ರೋಹವೂ ದೇಶದ್ರೋಹಕ್ಕೆ ಸಮನಾಗಿದೆ. ಆದ್ದರಿಂದ ಸರ್ಕಾರವಾಗಲೀ, ಪಕ್ಷವಾಗಲೀ, ಜನಸಮುದಾಯವಾಗಲೀ ನಾಡದ್ರೋಹಿಯಾಗುವುದನ್ನು ನಾವು ಕನ್ನಡಿಗರ ಸಹಿಸುದಿಲ್ಲ. ಒಕ್ಕೂಟ ಸರ್ಕಾರಕ್ಕೆ ನಮ್ಮ ಬೇಡಿಕೆಗಳನ್ನು ಕನ್ನಡಿಗರ ಪ್ರತಿನಿಧಿಯಾಗಿ ಸಲ್ಲಿಸುವುದರ ಜೊತೆ ಜೊತೆಗೆ ರಾಜ್ಯದಲ್ಲೂ ಈ ಬೇಡಿಕೆಗಳನ್ನು ಕಾನೂನಾಗಿ ರೂಪಿಸಿ ಕಟ್ಟುನಿಟ್ಟಿನ ಜಾರಿಗೆ ತರಬೇಕು ಎಂಬುದು ಕರ್ನಾಟಕ ಜನಾಭಿವೃದ್ದಿ ವೇದಿಕೆಯ* ಆಗ್ರಹವಾಗಿದೆ.
ಇದು ಸ್ವಾತಂತ್ರೋತ್ಸವದ 75 ನೇ ಸಂಭ್ರಮದಲ್ಲಿ ಎಲ್ಲಾ ಕನ್ನಡಿಗರ ಬೇಡಿಕೆಯಾಗಿದ್ದು, ಇದನ್ನು ಅನುಮೋದಿಸಿವುದು ಕನ್ನಡಿಗರ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಂತಾಗುತ್ತದೆ.
ಮತ್ತೊಮ್ಮೆ ಎಲ್ಲರಿಗೂ 75 ನೇ ಸ್ವಾತಂತ್ರೋತ್ಸವದ ಶುಭಾಶಯಗಳು
ಕನ್ನಡವೇ ಸತ್ಯ, ಕನ್ನಡವೇ ನಿತ್ಯ
ಇಂತಿ, ಬೈರಪ್ಪ ಹರೀಶ್ ಕುಮಾರ್.
►►ಇದನ್ನೂ ಓದಿ:
►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ.
►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ?
►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?
►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ?
►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.!
►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್!
►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ!
►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ?
►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ?
►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ.
►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ
►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ)
►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ?
►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..!
►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ!
►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ?
►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್!
►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ?
►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು.
►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು?
►►'ಕೋವಿಡ್ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್!
►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ.
►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ?
►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್
►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ
►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್ ಚಂದ್ರ ಶೆಟ್ಟಿ (ವಿಡಿಯೋ ನೋಡಿ)
►►ಖಾಸಗೀಕರಣದ ಹಿಂದಿನ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ
►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?