Advertisement

"ಅಫ್ಘಾನಿಸ್ತಾನದ ಬೆಳವಣಿಗೆಗಳು ಸಾಬೀತುಪಡಿಸುತ್ತಿರುವುದು ಮೋದಿ ಸರ್ಕಾರದ ಸಿಎಎ ಕಾಯಿದೆಯ ದೂರದೃಷ್ಟಿಯನ್ನೋ ಅಥವಾ ಸಂಘೀಬಾನಿಗಳ ಧೂರ್ತತನವನ್ನೋ?"

Advertisement

"ಅಫ್ಘಾನಿಸ್ತಾನದ ಬೆಳವಣಿಗೆಗಳು ಸಾಬೀತುಪಡಿಸುತ್ತಿರುವುದು ಮೋದಿ ಸರ್ಕಾರದ ಸಿಎಎ ಕಾಯಿದೆಯ ದೂರದೃಷ್ಟಿಯನ್ನೋ ಅಥವಾ ಸಂಘೀಬಾನಿಗಳ ಧೂರ್ತತನವನ್ನೋ?" ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) ಅಫ್ಘಾನಿಸ್ತಾನವನ್ನು ಮತೀಯ ಮೂಲಭೂತವಾದಿ ಉಗ್ರರಾದ ತಾಲಿಬಾನಿಗಳು ವಶಪಡಿಸಿಕೊಂಡಿರುವುದು ಅಫ್ಘಾನ್ ಜನತೆಯ ಬಗ್ಗೆ ನಿಜವಾದ ಕಾಳಜಿಯುಳ್ಳ ಮನುಷ್ಯರೆಲ್ಲರಲ್ಲೂ ಆತಂಕವನ್ನು ಕಳವಳವನ್ನು ಹುಟ್ಟುಹಾಕಿದೆ. ಅದೇ ಸಮಯದಲ್ಲಿ ಕೇವಲ ತಮ್ಮ ಜಿಯೋ-ಪೊಲಿಟಿಕಲ್ ಹಾಗೂ ಆರ್ಥಿಕ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಸುಂದರವಾದ ಅಫ್ಘಾನಿಸ್ತಾನವನ್ನು ಇಂಥಾ ದುರಂತಕ್ಕೆ ದೂಡಿದ ಅಮೇರಿಕ ಸಾಮ್ರಾಜ್ಯವಾದೀ ಷಡ್ಯಂತ್ರದ ಬಗ್ಗೆಯೂ ಆಕ್ರೋಶವನ್ನು ಹುಟ್ಟುಹಾಕಿದೆ. ಈಗ ಅಮೆರಿಕದ ದಾರಿಯಲ್ಲೇ ಅಫ್ಘಾನಿಸ್ತಾನವನ್ನು ಹರಿದು ಮುಕ್ಕಲು ಹೊರಟಿರುವ ಚೀನಾದ ನಡೆಗಳ ಬಗ್ಗೆಯೂ ಕಳವಳವನ್ನು ಹುಟ್ಟಿಸಿದೆ. ಆದರೆ ಮೋದಿ ಭಕ್ತ ಶಿಖಾಮಣಿಗಳಲ್ಲಿ ಮಾತ್ರ ಅಫ್ಘನ್ನರ ದುರಂತ ಒಂದು ಸಂಭ್ರಮವನ್ನು ಹುಟ್ಟುಹಾಕಿದಂತಿದೆ. ಏಕೆಂದರೆ, ಈ ಸಂಘೀಬಾನಿಗಳು, ಈ ವಿದ್ಯಮಾನವನ್ನು ತಮ್ಮ ಮೂಗಿನ ನೇರಕ್ಕೆ ತಿರುಚಿ, ಇಸ್ಲಾಮಿನ ಬಗ್ಗೆ , ಮುಸ್ಲಿಮರ ಬಗ್ಗೆ ತಾವು ಯೋಜಿತವಾಗಿ ನಡೆಸುತ್ತಿರುವ ಅತ್ಯಂತ ಕ್ರೂರ ಹಾಗೂ ದುಷ್ಟ ಪ್ರಚಾರಗಳಿಗೆ ಬಳಸಿಕೊಳ್ಳುತ್ತಿವೆ. ಅದೇ ಸಮಯದಲ್ಲಿ ಮೋದಿ ಸರ್ಕಾರದ ಹೊಗಳಿಕೆಗೂ ಈ ಸಂದರ್ಭವನ್ನು ಅತ್ಯಂತ ಹಾಸ್ಯಾಸ್ಪದವಾಗಿ ಬಳಸಿಕೊಳ್ಳುತ್ತಿವೆ. ಉದಾಹರಣೆಗೆ, ಕೆಲವು ದಿನಗಳ ಹಿಂದೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹಾಗೂ ನಿನ್ನೆ ಮೋದಿ ಸರ್ಕಾರದ ಮಂತ್ರಿವರ್ಯನಾದ ಹರದೀಪ್ ಸಿಂಗ್ ಸೂರಿ ಇನ್ನಿತರರು ಅಫ್ಘಾನಿಸ್ತಾನದ ಬಿಕ್ಕಟ್ಟು ಮೋದಿ ಸರ್ಕಾರ CAA -ನಾಗರಿಕತ್ವ ತಿದ್ದುಪಡಿ ಕಾಯಿದೆಯನ್ನು- ಜಾರಿಗೆ ತಂದದ್ದು ಎಷ್ಟು ಸರಿ ಎಂಬುದನ್ನು ಸಾಬೀತು ಮಾಡುತ್ತದೆ ಎಂದು ಹೆಗ್ಗಳಿಕೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಅದಕ್ಕೆ ಅವರು ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿರುವ ಸಿಖ್ ಮತ್ತು ಹಿಂದುಗಳ ಬವಣೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಮತ್ತು ಮೋದಿಯವರು ದೂರದೃಷ್ಟಿಯಿಂದ ಜಾರಿ ಮಾಡಿದ ಸಿಎಎ ಕಾಯಿದೆಯಿಂದಾಗಿ ಮಾತ್ರ ಅಫ್ಘನ್ನಿನ ಸಿಖ್ಖರು ಮತ್ತು ಹಿಂದೂಗಳು ತಮ್ಮ ಸ್ವಂತ ಭೂಮಿಯಾದ ಭಾರತಕ್ಕೆ ಮರಳಲು ಸಾಧ್ಯವಾಗುತ್ತಿದೆ ಎಂಬ ಹುಸಿವಾದವನ್ನು ಮಂಡಿಸುತ್ತಿದ್ದಾರೆ. ಇದು ಒಂದು ಬಗೆಯ 'ಸಂಘೀಬಾನಿ'ನ ಹುಸಿತರ್ಕವೇ ಆಗಿದೆ. ಏಕೆಂದು ನೋಡೋಣ... CAA ಹೇಳುವುದೇನು? -ಮೋದಿ ಸರ್ಕಾರ ಜಾರಿಗೆ ತಂದ CAA ಪ್ರಕಾರ: 2014ಕ್ಕೆ ಮುಂಚೆ ಪಾಕಿಸ್ತಾನ,ಬಾಂಗ್ಲಾದೇಶ, ಹಾಗೂ ಅಫ್ಘಾನಿಸ್ತಾನಗಳಿಂದ, ಧಾರ್ಮಿಕ ದಮನಕ್ಕೆ ಗುರಿಯಾಗಿ ಭಾರತಕ್ಕೆ ವಲಸೆ ಬಂದ ಹಿಂದುಗಳು, ಬೌದ್ಧರೂ, ಸಿಕ್ಕರೂ, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರನ್ನು ಅರ್ಥಾತ್ ಈ ಮೂರು ದೇಶಗಳ ಎಲ್ಲಾ ಮುಸ್ಲಿಮೇತರ ವಲಸಿಗರನ್ನು ಅಕ್ರಮ ವಲಸಿಗರೆಂದು ಪರಿಗಣಿಸದೆ ನಾಗರಿಕತ್ವ ಕೊಡಲಾಗುವುದು . ಈ ಮೂರು ದೇಶಗಳ ಮುಸ್ಲಿಮರನ್ನು ಏಕೆ ಸಿಎಎ ಪರಿಗಣಿಸುವುದಿಲ್ಲ? -ಏಕೆಂದರೆ ಮೋದಿ ಸರ್ಕಾರದ ಪ್ರಕಾರ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನಗಳು ಘೋಷಿತ ಮುಸ್ಲಿಮ್ ದೇಶಗಳಾಗಿರುವುದರಿಂದ ಅಲ್ಲಿ ಮುಸ್ಲಿಮರ ಮೇಲೆ ಧಾರ್ಮಿಕ ದಮನವಾಗುವುದಿಲ್ಲ. ಸಿಎಎ ವಿರೋಧಿಗಳ ವಾದವೇನು? ಸಿಏ ಯನ್ನು ವಿರೋಧಿಸುತ್ತಿದ್ದವರ ಪ್ರತಿಪಾದನೆ ಇದು: ಖಂಡಿತ.. ಧಾರ್ಮಿಕ ದಮನಕ್ಕೊಳಗಾಗಬಹುದಾದ ಆ ಮೂರು ದೇಶಗಳ ಆರು ಮುಸ್ಲಿಮೇತರ ಧರ್ಮೀಯರಿಗೆ ಖಂಡಿತಾ ಭಾರತೀಯ ನಾಗರಿಕತ್ವ ಕೊಡಬೇಕು ಹಾಗೂ ಬೇಗನೆ ಕೊಡಬೇಕು. ಆದರೆ ಅದೇ ರೀತಿ ಆ ಮೂರು ದೇಶಗಳಲ್ಲಿ ಧಾರ್ಮಿಕ ದಮನಕ್ಕೊಳಗಾಗುವ ಅಲ್ಪಸಂಖ್ಯಾತ ಮುಸ್ಲಿಮರಿಗೂ ಅದೇ ಅವಕಾಶವನ್ನು ಒದಗಿಸಬೇಕು... ಏಕೆಂದರೆ ಆ ದೇಶಗಳ್ಲಲೂ ಮುಸ್ಲಿಂ ಧಾರ್ಮಿಕ ಅಲ್ಪಸಂಖ್ಯಾತರಿದ್ದಾರೆ. ಮತ್ತು ಅವರ ಮೇಲೆ ಅತ್ಯಂತ ಕ್ರೂರ ಹಿಂಸಾತ್ಮಕವಾದ ಧಾರ್ಮಿಕ ದಮನಗಳು ನಡೆಯುತ್ತಾ ಬಂದಿವೆ. ಆದ್ದರಿಂದ ಧಾರ್ಮಿಕ ದಮನವೇ ಸಿಎಎ ಮಾನದಂಡವಾದರೆ ಅದು ಮುಸ್ಲಿಂ ಧಾರ್ಮಿಕ ಅಲ್ಪಸಂಖ್ಯಾತರಿಗೂ ಅನ್ವಯವಾಗಬೇಕು. ಆಫ್ಘಾನಿಸ್ತಾನದ ಬೆಳವಣಿಗೆಗಳು ಏನು ಸಾಬೀತು ಪಡಿಸಿವೆ? -ಆಫ್ಘಾನಿಸ್ತಾನದಲ್ಲಿ ಹಲವು ಬಗೆಯ ಜನಾಂಗಗಳು ಹಾಗು ಹಲವು ಬಗೆಯ ಮುಸ್ಲಿಮರು ವಾಸ ಮಾಡುತ್ತಾರೆ. ಅವರಲ್ಲಿ ಸುನ್ನಿ ಸಂಪ್ರದಾಯದ ಮುಸ್ಲಿಮರು ಬಹುಸಂಖ್ಯಾತರು. ಹಾಗೂ ಶೇ. 10-12ರಷ್ಟು ಅಲ್ಪಸಂಖ್ಯಾತ ಶಿಯಾ ಸಂಪ್ರದಾಯದ ಹಜಾರ ಮುಸ್ಲಿಮರಿದ್ದಾರೆ. ಇದಲ್ಲದೆ ತಾಜಾಕ್,ಉಜಬೆಕ್, ಐಮ್ಯಾಕ್, ಪಾಮಿರಿ, ಕಿರ್ಗಿಜ್, ಟರ್ಕ್ಮೆನ್, ನೂರಿಸ್ತಾನೀ, ಬಲೂಚ್ ಇನ್ನಿತ್ಯಾದಿ ಹಲವು ಜನಾಂಗಗಳಿಗೆ ಸೇರಿದ ಅಲ್ಪಸಂಖ್ಯಾತ ಮುಸ್ಲಿಮರಿದ್ದಾರೆ. ತಾಲಿಬಾನಿಗಳು ಇಸ್ಲಾಮಿನ ಸುನ್ನಿ ಸಂಪ್ರದಾಯಯದ ಪಸ್ತೂನ್ ಜನಾಂಗಕ್ಕೆ ಸೇರಿದವರು. ಅವರಿಗೆ ಅಲ್ಪಸಂಖ್ಯಾತ ಶಿಯಾ ಸಂಪ್ರದಾಯದ ಹಜಾರ ಮುಸ್ಲಿಮರು ಮೇಲೆ ಐತಿಹಾಸಿಕ- ಪೌರಾಣಿಕ ಧರ್ಮ ದ್ವೇಷವಿದೆ. ಈ ಹಿಂದೆಯೂ 1996-2001ರ ನಡುವೆ ತಾಲಿಬಾನಿಗಳು ಅಧಿಕಾರದಲ್ಲಿದ್ದಾಗ ಅಫ್ಘಾನಿಸ್ತಾನದ ಮಜರ್ ಪ್ರಾಂತ್ಯದಲ್ಲಿ ವಾಸಿಸುವ ಹಜಾರ ಮುಸ್ಲಿಮರ ಮೇಲೆ ಹತ್ಯಾಕಾಂಡವನ್ನೇ ನಡೆಸಿದ್ದರು. 1998ರಲ್ಲಿ ತಾಲಿಬಾನಿನ ಕಮಾಂಡರ್ ಮೌಲ್ವಿ ಮೊಹಮ್ಮದ್ ಹನೀಫ್ " ಹಜಾರಗಳು ಮುಸ್ಲಿಮರಲ್ಲ . ಅವರನ್ನು ಕೊಲ್ಲಬಹುದು" ಎಂದು ಆದೇಶ ನೀಡಿದ್ದ . ಹೀಗಾಗಿಯೇ 1998ರಲ್ಲಿ ಮಜರೆ-ಷರೀಫ್ ನಲ್ಲಿ ಸಾವಿರಾರು ಹಜಾರ ಮುಸ್ಲಿಮರ ಮಾರಣಹೋಮವೇ ನಡೆದಿತ್ತು. 2001ರ ನಂತರದಲ್ಲಿ ಅಫ್ಘಾನಿಸ್ತಾನ ಅಮೇರಿಕಾದ ನಿಯಂತ್ರಣದಲ್ಲಿದ್ದರೂ, ಮಜರ್ ಪ್ರಾಂತ್ಯದಲ್ಲಿ ISIS ಮತ್ತು ಅಲಖೈದಾ ಗಳು ಹಜಾರ ನಾಯಕರ ಕೊಲೆಗಳನ್ನು ಮುಂದುವರೆಸಿದ್ದವು. ಈಗ ಅಮೇರಿಕ ಸೈನ್ಯವು ಹಿಂತಿರುಗುವುದು ಖಾತರಿಯಾಗುತ್ತಿದ್ದಂತೆ ತಾಲಿಬಾನಿಗಳು ಮೇ ತಿಂಗಳಲ್ಲಿ ಬಾಮಿಯಾನ್ ಪ್ರಾಂತ್ಯದಲ್ಲಿದ್ದ ಹಜಾರಗಳ ದಂಡನಾಯಕ ಅಬ್ದುಲ್ ಅಲಿ ಮಜಾರಿಯ ಪ್ರತಿಮೆಯನ್ನು ಬಾಂಬ್ ಇಟ್ಟು ಉಡಾಯಿಸಿದರು. ಅದೇ ಸಮಯದಲ್ಲಿ ಕಾಬೂಲಿನ ಹೊರವಲಯದಲ್ಲಿ ಹಜಾರಗಳೇ ಹೆಚ್ಚಿರುವ ವಸತಿಪ್ರದೇಶದಲ್ಲಿ ಒಂದು ಕಾರ್ ಬಾಂಬ್ ಅನ್ನು ಉಡಾಯಿಸಿ 60ಹಜಾರ ಹೆಣ್ಣುಮಕ್ಕಳ ಕಗ್ಗೊಲೆ ಮಾಡಿತ್ತು. ಹೀಗಾಗಿ ಇಂದು ಆಫ್ಘಾನಿಸ್ತಾನದಲ್ಲಿ ಧಾರ್ಮಿಕ ದಮನದ ಕಾರಣಕ್ಕಾಗಿ ಯಾರಿಗಾದರೂ ಆಶ್ರಯದ ಅಗತ್ಯವಿದ್ದರೆ ಅದು ಅಫ್ಘಾನಿಸ್ತಾನದ ಹಜರಾ ಶಿಯಾ ಮುಸ್ಲಿಮರಿಗೆ. ಹೀಗಾಗಿ ಅಫ್ಘಾನಿಸ್ತಾನದ ಬೆಳವಣಿಗೆಗಳು ಆ ದೇಶದಲ್ಲಿ ಮುಸ್ಲಿಮೇತರರು ಮಾತ್ರ ಧಾರ್ಮಿಕ ದಮನಕ್ಕೆ ಒಳಗಾಗುತ್ತಾರೆ ಎಂಬ ಮೋದಿ ಸರ್ಕಾರದ ಸಿಎಎ ಕಾಯಿದೆಯ ಕೋಮುವಾದಿ ತಿಳವಳಿಕೆಯನ್ನು ಸುಳ್ಳೆಂದು ಸಾಬೀತು ಪಡಿಸಿದೆ. ಅಲ್ಲಿಯ ಹಜಾರಗಳು ಮತ್ತವರ ಜೊತೆಗೆ ಇತರ ಅಲ್ಪಸಂಖ್ಯಾತ ಜನಾಂಗೀಯ ಮುಸ್ಲಿಮರ ಬದುಕೂ ಆತಂಕಕ್ಕೆ ಒಳಗಾಗಿದೆ. ಜಗತ್ತಿನ ಇತರ ಪ್ರಜಾತಾಂತ್ರಿಕ ದೇಶಗಳು ಅದರಲ್ಲೂ ಯುರೋಪಿನ ದೇಶಗಳು ಹಿಂದೂ, ಸಿಖ್ ಒಳಗೊಂಡಂತೆ ಧಾರ್ಮಿಕ ದಮನಕ್ಕೆ ಒಳಗಾಗಿರುವ ಹಜಾರ ಮುಸ್ಲಿಮರಿಗೂ ಹಾಗೂ ಜನಾಂಗೀಯ ದಮನದ ಆತಂಕವಿರುವ ಇತರ ರಿಗೂ ಧರ್ಮದ ನಿಬಂಧನೆಯಿಲ್ಲದೆ ಆಶ್ರಯವನ್ನೂ ಮತ್ತು ಶಾಶ್ವತ ನಾಗರಿಕತ್ವವನ್ನು ಕೊಡುತ್ತಿದೆ. ಆದರೆ ಜಗತ್ತಿನಲ್ಲಿ ಮೋದಿ ನೇತೃತ್ವದ ಭಾರತ ಸರ್ಕಾರ ಮಾತ್ರ ತನ್ನ ಕೋಮುವಾದಿ ಸಿಎಎ ಕಾಯಿದೆಯಡಿ ಭಯದಲ್ಲೂ ಆತಂಕದಲ್ಲೂ ಕ್ರೂರ ಕೋಮುಬೇಧ ಮಾಡುತ್ತಿದೆ. ಹೀಗಾಗಿ ಅಫ್ಘಾನಿಸ್ತಾನದ ಬೆಳವಣಿಗೆಗಳು ಸಾಬೀತು ಮಾಡಿರುವುದು ಮೋದಿ ಸರ್ಕಾರದ ಹಾಗೂ ಸಿಏ ಯ ಕೋಮುವಾದಿ ದುಷ್ಟತನವನ್ನೇ ವಿನಾ ಅದರ ಉಪಯುಕ್ತತೆಯನ್ನಲ್ಲ.. ಅಲ್ಲವೇ? ►►ಇದನ್ನೂ ಓದಿ: ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಭಾರತದಲ್ಲಿ ದಿಢೀರ್‌ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ? ►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?

Advertisement
Advertisement
Recent Posts
Advertisement