ಬರಹ: ರಾಜಾರಾಂ ತಲ್ಲೂರು (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು)
ನಾಯಕತ್ವದ ಡೆಮಾಕ್ರಾಟಿಕ್ ಮಾಡೆಲ್- ಆಸ್ಕರ್ ಫೆರ್ನಾಂಡಿಸ್
2022 ರ ತನಕ ಇದ್ದಿದ್ದರೆ ದೇಶದಲ್ಲಿ ಸುದೀರ್ಘಾವಧಿಗೆ ಸತತ ಸಂಸದರಾಗಿದ್ದ ದಾಖಲೆ ಆಸ್ಕರ್ ಅವರದಾಗುತ್ತಿತ್ತು ಎಂದು ಹೇಳಿದ್ದು ಕೇಳಿದ್ದೆ. 1980ರಲ್ಲಿ ಟಿ ಎ ಪೈ ಅವರನ್ನು ಮಣಿಸಿದಲ್ಲಿಂದ 1996ರಲ್ಲಿ ರಾಜ್ಯಸಭೆಯ ಸದಸ್ಯತ್ವ ಪಡೆಯುವ ನಡುವಿನ ಬೆರಳೆಣಿಕೆಯ ದಿನಗಳು ಬಿಟ್ಟರೆ ಸತತ 41 ವರ್ಷಗಳ ಕಾಲ ಸಂಸದರಾಗಿದ್ದವರು ಅವರು.
ನಿನ್ನೆ ಪತ್ರಕರ್ತ ಸ್ನೇಹಿತರೊಬ್ಬರು ಇಷ್ಟು ಸುದೀರ್ಘ ಅವಧಿಯಲ್ಲಿ ಆಸ್ಕರ್ ಕರಾವಳಿಗೆ ಏನು ಮಾಡಿದರು ಎಂದು ಕೇಳಿದರು. ವೈಯಕ್ತಿಕವಾಗಿ ನಿನ್ನೆ ಸ್ವಲ್ಪ ವ್ಯಸ್ತನಿದ್ದುದರಿಂದ ನನಗೆ ಆ ಕ್ಷಣಕ್ಕೆ ತೋಚಿದ್ದನ್ನು ಅವರಿಗೆ ಹೇಳಿ ಸುಮ್ಮನಾದೆ. ಈವತ್ತಿನ ರಾಜಕಾರಣಕ್ಕೆ ಬಹಳ ಡೆಲಿಕೇಟ್ ಪ್ರಶ್ನೆ ಇದು. ಹನುಮಂತಯ್ಯ ವಿಧಾನಸೌಧ ಕಟ್ಟಿದರು, ವಿಶ್ವೇಶ್ವರಯ್ಯ ಕನ್ನಂಬಾಡಿ ಕಟ್ಟಿದರು, ದೇವರಾಜ ಅರಸರು ಭೂಮಸೂದೆ ತಂದರು… ಹೀಗೆ ಸಾಧನೆಗಳನ್ನು ವೈಯಕ್ತಿಕವಾಗಿ ಗುರುತಿಸಿ “ಹೀರೊ”ಗಳನ್ನು ಆಯ್ದುಕೊಳ್ಳುವುದು ಅಭ್ಯಾಸ ಆಗಿರುವ ರಾಜಕೀಯ ವ್ಯವಸ್ಥೆಯಲ್ಲಿ “ಏನು ಕೊಟ್ಟರು” ಎಂಬ ಪ್ರಶ್ನೆ ಬಹಳ ಡೆಲಿಕೇಟ್ ಆದಂತಹದು.
ಆಸ್ಕರ್ ಅವರ ರಾಜಕಾರಣಕ್ಕೆ ಎರಡು ಮಗ್ಗುಲುಗಳಿವೆ. ಮೊದಲನೆಯದಾಗಿ ಅವರು ಕಲೆಕ್ಟಿವ್ ಆದ, ಡೆಮೊಕ್ರಾಟಿಕ್ ಆದ ವ್ಯವಸ್ಥೆಯೊಂದರ ಭಾಗವಾಗಿ ಶಿಸ್ತಿನಿಂದ ಕಾರ್ಯಾಚರಿಸಿದವರು. ಎರಡನೆಯದಾಗಿ ಅವರ ಈ ಶಿಸ್ತಿನ ಕಾರಣಕ್ಕಾಗಿಯೇ ಅವರನ್ನು ಅವರ ಪಕ್ಷ ಸಾಂಸ್ಥಿಕ ಚಟುವಟಿಕೆಗಳಿಗೆ ಆಧಾರ ಕಂಬವಾಗಿ ಬಳಸಿಕೊಂಡಿತು. ಈವತ್ತಿನ ರಾಜಕೀಯ ವ್ಯವಸ್ಥೆಯಲ್ಲಿ ಈ ಎರಡೂ ಮಗ್ಗುಲುಗಳ ರಿಸ್ಕ್ ಅಪಾರ. ಆ ರಿಸ್ಕ್ ತೆಗೆದುಕೊಂಡದ್ದರಿಂದಲೇ ಆಸ್ಕರ್ ಈ ರೀತಿಯ ಸಮಷ್ಠಿಯ ನಾಯಕರಾದದ್ದು.
ಬಹಳ ಸರಳವಾಗಿ ಆಸ್ಕರ್ ಸಾಧನೆಯನ್ನು ವಿವರಿಸಬೇಕಿದ್ದರೆ, 80-2019 ನಡುವಿನಲ್ಲಿ ಕರಾವಳಿಯ ಮತ್ತು ಸ್ಥೂಲವಾಗಿ ಕರ್ನಾಟಕದ ಮತ್ತು ದೇಶದ ಎಲ್ಲ ಸಾಮಾಜಿಕ, ರಾಜಕೀಯ ಬೆಳವಣಿಗೆಗಳಲ್ಲಿ, ತೀರ್ಮಾನಗಳಲ್ಲಿ - ಅದೆಷ್ಟೇ ದೊಡ್ಡದಿರಲಿ ಅಥವಾ ಸಣ್ಣದಿರಲಿ - ಆಸ್ಕರ್ ಅವರ ಪಾತ್ರ ಮಹತ್ವದ್ದಿದೆ. ಇನ್ನು ಹೆಕ್ಕಿ ತೆಗೆದು ಹೇಳಬೇಕೆಂದಿದ್ದರೆ, ಅವರು ಜವಾಬ್ದಾರಿ ಹೊತ್ತಿದ್ದ ಈಶಾನ್ಯ ಭಾರತದ ರಾಜಕೀಯ ನಿರ್ವಹಣೆ ಮತ್ತು ಅವರು ಸಾರಿಗೆ ಸಚಿವರಾಗಿದ್ದ ಸಣ್ಣ ಅವಧಿಯಲ್ಲಿ ಕರ್ನಾಟಕಕ್ಕೆ ಮಂಜೂರು ಮಾಡಿದ ಹೆದ್ದಾರಿಗಳನ್ನು ತೋರಿಸಬಹುದು. ಕೊಂಕಣ ರೈಲ್ವೇಯಲ್ಲೂ ಅವರ ಪಾತ್ರವನ್ನು ಅವರು ಅದು ತನ್ನದೆಂದು ಯಾವತ್ತೂ ಎತ್ತಿ ಆಡಿದವರಲ್ಲ.
ಮೂರು-ನಾಲ್ಕು ವರ್ಷಗಳ ಹಿಂದೆ ಆರೋಗ್ಯ ತೀರಾ ಹದೆಗಡುವ ತನಕವೂ ಕಾಂಗ್ರೆಸ್ ಪಕ್ಷದ “ಸಿಗ್ನೆಟರಿ”ಗಳಲ್ಲಿ ಒಬ್ಬರಾಗಿದ್ದ ಆಸ್ಕರ್ ದಿಲ್ಲಿ ಕಾಂಗ್ರೆಸ್ ವಲಯದಲ್ಲಿ ಪಕ್ಷದ ಆಧಾರಸ್ಥಂಭವಾಗಿ, ಒಬ್ಬ ವರ್ಕೋಹಾಲಿಕ್ ಪಕ್ಷದ ಪದಾಧಿಕಾರಿಯಾಗಿ ಮತ್ತು ಹಿಂದಿದ್ದು ತಂಡವನ್ನು ಮುನ್ನಡೆಸುವ “ಮ್ಯಾನೇಜರ್” ಆಗಿ ಮಾಡಿದ ಕೆಲಸಗಳನ್ನು ಅಲ್ಲಿನ ಎಐಸಿಸಿ ಕಚೇರಿಯ ಮೇಲ್ತುದಿಯಿಂದ ಕೆಳತುದಿಯ ತನಕದ ಪ್ರತಿಯೊಬ್ಬರೂ ದಿನಗಟ್ಟಲೆ ವಿವರಿಸಬಲ್ಲರು. ಹೀಗೆ ಕಾಂಗ್ರೆಸ್ಸಿಗೆ ಸಾಂಸ್ಥಿಕವಾಗಿ ದಕ್ಕಿದ್ದು, ಕರಾವಳಿಗೆ ನಷ್ಟವಾಯಿತು. ತಡರಾತ್ರಿಯ ತನಕವೂ ಸ್ವತಃ ಕೆಲಸ ಮಾಡಿ ತಂಡವನ್ನೂ ಸ್ಪೂರ್ತಿಯುತವಾಗಿ ಮುನ್ನಡೆಸುವ ಅವರ ಸಾಮರ್ಥ್ಯದ ಬಗ್ಗೆ ದಿಲ್ಲಿ ವಲಯಕ್ಕೆ ಚೆನ್ನಾಗಿ ಗೊತ್ತು.
ನಾನು ಪತ್ರಕರ್ತನಾಗಿ ಸುದ್ದಿ ಅರಸಿಕೊಂಡು ಹಲವು ಭಾರಿ ಭೇಟಿ ಮಾಡಿದ್ದು ಬಿಟ್ಟರೆ ವೈಯಕ್ತಿಕವಾಗಿ ಅವರನ್ನು ಬಲ್ಲವನಲ್ಲ. ಆದರೆ ಅವರ ನಿಕಟವರ್ತಿಗಳಿಂದ ಅವರ ಗುಣಸ್ವಭಾವಗಳ ಬಗ್ಗೆ ಕೇಳಿಬಲ್ಲೆ. ನಾನು ಗುರುತಿಸಿದ ಅವರ ದೊಡ್ಡ ಸಾಮರ್ಥ್ಯ ಎಂದರೆ ಒಂದು ಸವಾಲು ಎದುರಾದಾಗ ಅದನ್ನು ವಿಶ್ಲೇಷಿಸಿ ತೀರ್ಮಾನ ತೆಗೆದುಕೊಳ್ಳುವ ಅವರ ಚಾತುರ್ಯ. ಈವತ್ತಿನ ಪೌರುಷದ ರಾಜಕೀಯಕ್ಕೆ ಅವರ ತೀರ್ಮಾನಗಳು ಆ ಕ್ಷಣಕ್ಕೆ ಇದೆಂತಹ ವಿಲಕ್ಷಣ ತೀರ್ಮಾನ ಅನ್ನಿಸಿದರೂ ದಿನ ಕಳೆದಂತೆ ಅದೆಷ್ಟು ಸಮರ್ಪಕವಾದ “ರಾಜಕೀಯವಾಗಿ ಪರ್ಫೆಕ್ಟ್” ಅನ್ನಿಸುವ ತೀರ್ಮಾನ ಎಂದು ಅರಿವಾದ ಹಲವು ಘಟನೆಗಳನ್ನು ಕರಾವಳಿಗೆ ಸಂಬಂಧಿಸಿದಂತೆಯೂ, ಕರ್ನಾಟಕಕ್ಕೆ ಸಂಬಂಧಿಸಿದಂತೆಯೂ ಬೊಟ್ಟು ಮಾಡಬಹುದು.
ಇಂತಹದೊಂದು ಸ್ಕಿಲ್ ಅವರಲ್ಲಿ ಹೇಗೆ ಬಂತು ಎಂದರೆ, ಅದಕ್ಕೆ ಎಐಸಿಸಿ ಹೇಗೆ ಕಾರ್ಯಾಚರಿಸುತ್ತದೆ ಎಂಬುದನ್ನು ತಿಳಿಯಬೇಕು. ಅಲ್ಲಿ ಸುದೀರ್ಘಕಾಲ ಕೆಲಸ ಮಾಡಲು ಆಸ್ಕರ್ ಅವರಿಗೆ ಸಾಧ್ಯವಾದದ್ದೇ ಈ “ಪ್ರಾಮಾಣಿಕತೆಯ” ಕೌಶಲದ ಕಾರಣಕ್ಕಾಗಿ. ದಿಲ್ಲಿಯಲ್ಲಿ ಕಾಂಗ್ರೆಸ್ ರಾಜಕಾರಣದ ಫ್ರಿಂಜ್ ಬಹಳ ವಿಸ್ತಾರವಾದುದು. ಅಲ್ಲಿ ಎಲ್ಲಬಣ್ಣಗಳೂ ಇವೆ. ಹಾಗಾಗಿ ಹೈಕಮಾಂಡ್ ನಿರ್ಧಾರಗಳು “ಸೇನ್” ಆಗಿ ಹೊರಬರುವುದು ಬಹಳ ಸಂಕೀರ್ಣ ಪ್ರಕ್ರಿಯೆ. ಪಕ್ಷದ ಪ್ರಭಾರಿಯಾಗಿ ಒಬ್ಬರು ಒಂದೆಡೆ ಹೋಗಿ ಬಂದರೆ ಆ ಕುರಿತು ಆ ಪ್ರಭಾರಿಯ ವರದಿ ಹೈಕಮಾಂಡಿಗೆ ತಲುಪುವ ಜೊತೆಜೊತೆಗೇ ನೂರು ದಿಕ್ಕಿನಿಂದ ವರದಿಗಳು ಅಲ್ಲಿಗೆ ತಲುಪಿರುತ್ತವೆ. ಅದರಲ್ಲಿ ಎಲ್ಲವಿಧದ ಮಾಹಿತಿ ಮಹಾಪೂರವಿರುತ್ತದೆ. ಅವುಗಳಲ್ಲಿ ಜಳ್ಳು ಉದುರಿಸಿ ಕಾಳು ಹೆಕ್ಕುವ ಕಾರ್ಯ ಮಹತ್ವದ್ದು. ಯಾವುದೇ ತಪ್ಪು ಮಾಹಿತಿ ಅಥವಾ ಪಕ್ಷಪಾತಿ ಮಾಹಿತಿ ಹೆಚ್ಚು ವಾಯಿದೆ ಹೊಂದಿರುವುದಿಲ್ಲ. ಸುದೀರ್ಘಕಾಲ ಈ ಪ್ರಕ್ರಿಯೆಯಲ್ಲಿ ತೊಡಗಿಕೊಂಡ ಕಾರಣಕ್ಕಾಗಿ ಆಸ್ಕರ್ ಅವರ ತೀರ್ಮಾನಗಳಿಗೆ ಒಂದು ನಿಖರವಾದ ಡೆಮೊಕ್ರಾಟಿಕ್ ಆದ ಮತ್ತು ಅವರ ಪಕ್ಷದ-ಸಂಘಟನೆಯ ಹಿತದೃಷ್ಟಿಯನ್ನು ತಲೆಯಲ್ಲಿರಿಸಿಕೊಂಡು ಮಾಡುವ ತೂಕ ಸಹಜವಾಗಿಯೇ ಬಂದಿತ್ತು.
ಇಂತಹ ತೀರ್ಮಾನಗಳ ಫಲಶ್ರುತಿ ಏನು? ಎಂಬ ಪ್ರಶ್ನೆ ಬರುತ್ತದೆ.
ಕರ್ನಾಟಕದಲ್ಲಿ ರಾಜಕಾರಣ ದೇಶದ ಬೇರೆ ರಾಜ್ಯಗಳ ರಾಜಕಾರಣಕ್ಕೆ ಹೋಲಿಸಿದರೆ ಇನ್ನೂ ಆರೋಗ್ಯವಂತವಾಗಿ ಉಳಿದಿರುವುದಕ್ಕೆ ಆಸ್ಕರ್ ಅವರ ಅದೃಶ್ಯ ಕೊಡುಗೆ ದೊಡ್ಡದಿದೆ ಎಂದರೆ ಎಲ್ಲವನ್ನೂ ಹೇಳಿದಂತೆ.
ನಮ್ಮ ಕಾಲದ ಅತ್ಯಂತ ಡೆಮಾಕ್ರಾಟಿಕ್, ಲವೆಲ್ ಹೆಡೆಡ್, ಸೂಕ್ಷ್ಮಮತಿ ರಾಜಕಾರಣಿ ಅವರು.
ಹೋಗಿಬನ್ನಿ ಆಸ್ಕರಣ್ಣ.
►►ಇದನ್ನೂ ಓದಿ:
►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ.
►►ಎಳೆಮಕ್ಕಳ, ವಿದ್ಯಾರ್ಥಿಗಳ ಪ್ರಾಣಕ್ಕೆ ಮಾರಕವಾದ ಟೇಸ್ಟಿಂಗ್ ಪೌಡರ್ ಅನ್ನು ಸರ್ಕಾರ ಅದೇಕೆ ನಿಷೇಧಿಸುತ್ತಿಲ್ಲ?
►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ!
►►ಭಾರತದಲ್ಲಿ ದಿಢೀರ್ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ?
►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ.
►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ?
►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?
►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ?
►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.!
►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್!
►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ!
►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ?
►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ?
►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ.
►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ
►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ)
►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ?
►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..!
►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ!
►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ?
►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್!
►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ?
►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು.
►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು?
►►'ಕೋವಿಡ್ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್!
►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ.
►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ?
►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್
►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ
►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್ ಚಂದ್ರ ಶೆಟ್ಟಿ (ವಿಡಿಯೋ ನೋಡಿ)
►►ಖಾಸಗೀಕರಣದ ಹಿಂದಿನ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ
►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?