ಪತ್ರಕರ್ತೆ, ಜನಪರ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಯಾಗಿ ಇಂದಿಗೆ ನಾಲ್ಕು ವರ್ಷ! ಈ ಸಂಧರ್ಭದಲ್ಲಿ ಸಾಮಾಜಿಕ ಕಾಳಜಿಯ ಪತ್ರಕರ್ತ ನವೀನ್ ಸೂರಿಂಜೆಯವರು ಬರೆದಿರುವ ಲೇಖನ.. ಗೌರಿ ಲಂಕೇಶ್ ಅಭಿಮಾನಿಗಳಿಗಾಗಿ.
9 ಜನ್ಮದಲ್ಲಿ ಸ್ವರ್ಗ ಸುಖ ಸಿಗುತ್ತದೆ ಎಂದು ಗೌರಿಯನ್ನು ಕೊಲೆ ಮಾಡಿದ್ದ ಕೋಮುವಾದಿ ಹಂತಕರು..! ತಾಲೀಬಾನ್, ಐಸಿಸ್ ಗಿಂತಲೂ ಅಸಹ್ಯವಾದ ಸಿದ್ದಾಂತವೇ ಕೊಲೆಗೆ ಕಾರಣ...
ಗೌರಿಯನ್ನು ಕೊಂದಿದ್ದು ತಾಲೀಬಾನ್ ಸಿದ್ದಾಂತ. ಹಾಗೆ ನೋಡಿದರೆ ತಾಲೀಬಾನಿಗಿಂತಲೂ ಅತ್ಯಂತ ಕೆಟ್ಟದಾದ, ತಾಲೀಬಾನಿಗಳ ಜೊತೆಗೂ ಹೋಲಿಸಿಕೊಳ್ಳಲಾಗದಷ್ಟು ಅಸಹ್ಯವಾಗಿರುವ ಸಿದ್ದಾಂತವಾದಿಗಳು ಗೌರಿಯನ್ನು ಕೊಂದರು. ಗೌರಿಯ ಕೊಲೆ ಮೂಲಕ ಕಳೆದ ನಾಲ್ಕು ವರ್ಷಗಳಲ್ಲಿ ಕೊಲೆಯಾಗಬೇಕಾಗಿದ್ದ ಹತ್ತಾರು ಪ್ರಗತಿಪರ ಚಿಂತಕರು, ಹೋರಾಟಗಾರರು, ಪತ್ರಕರ್ತರು, ಪೊಲೀಸರು ಬದುಕುಳಿದಿದ್ದಾರೆ. ಇಂತದ್ದೊಂದು ಅಘಾತಕಾರಿ ಮಾಹಿತಿಯನ್ನು ನಾನು ಹೇಳುತ್ತಿರುವುದಲ್ಲ. ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ 10 ಸಾವಿರ ಪುಟಗಳ ಚಾರ್ಜ್ ಶೀಟ್ ಭಾರತದ ತಾಲೀಬಾನಿಗಳ ಕತೆಯನ್ನು ಬಿಚ್ಚಿಡುತ್ತದೆ.
05 ಸೆಪ್ಟೆಂಬರ್ 2017 ರ ಸಂಜೆ ಮಾನವ ಹಕ್ಕು ಹೋರಾಟಗಾರ್ತಿ, ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ರನ್ನು ಕೋಮುವಾದಿಗಳು ಗುಂಡಿಕ್ಕಿ ಕೊಂದರು. ಗೌರಿ ಸಾವು ಸಾವಿರಾರು, ಲಕ್ಷಾಂತರ ಗೌರಿಗಳನ್ನು ಸೃಷ್ಟಿಸಿತು. ನಾನೂ ಗೌರಿ, ನಾವೆಲ್ಲರೂ ಗೌರಿ ಎಂಬ ಘೋಷವಾಕ್ಯದಲ್ಲಿ ಬೆಂಗಳೂರಿನಲ್ಲಿ ನಾವುಗಳು ಲಕ್ಷಾಂತರ ಸಂಖ್ಯೆಯಲ್ಲಿ ಸಮಾವೇಶ ಸೇರಿ ಕೋಮುವಾದಿಗಳ ಎದೆ ನಡುಗಿಸಿದೆವು. ಕೋಮುವಾದಿಗಳ ಗುಂಡಿಗೆ ನಾವು ಹೆದರುವುದಿಲ್ಲ ಎಂದು ಸಾರಿ ಸಾರಿ ಹೇಳಲಾಯಿತು.
ನಾವು ಈಗ ಅಫ್ಘಾನ್ ನ ತಾಲೀಬಾನ್ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಅಫ್ಘಾನ್ ನ ತಾಲೀಬಾನ್ ಗೂ ಭಾರತದ ಹಿಂದುತ್ವ ತಾಲೀಬಾನ್ ಗೂ ಸಂಬಂಧ ಕಲ್ಪಿಸಬಾರದು, ಆ ಹೋಲಿಕೆಯೇ ಸರಿ ಇಲ್ಲ ಎಂದು ಕೆಲವರು ವಾದ ಮಾಡುತ್ತಿದ್ದಾರೆ. ಇಸ್ಲಾಂ ಅನ್ನು ಪಾಲಿಸದವರನ್ನು ಕೊಂದರೆ ಸ್ವರ್ಗ ಸಿಗುತ್ತದೆ ಎಂದು ತಾಲೀಬಾನಿಗಳು ನಂಬಿದರೆ, ಹಿಂದೂ ಧರ್ಮವನ್ನು ನಂಬದವರನ್ನು ಕೊಂದರೆ 9 ಜನ್ಮದಲ್ಲಿ ಸ್ವರ್ಗ ಸಿಗುತ್ತದೆ ಎಂದು ನಂಬಿದವರು ಗೌರಿ ಹಂತಕರು. ಇದನ್ನು ನಾನು ಕಲ್ಪಿಸಿಕೊಂಡು ಬರೆಯುತ್ತಿಲ್ಲ. ಗೌರಿ ಕೇಸ್ ನಲ್ಲಿ ಪೊಲೀಸರ ಚಾರ್ಜ್ ಶೀಟ್ ನ Annexure ದಾಖಲೆಗಳು ಇದನ್ನು ಹೇಳುತ್ತಿವೆ.
ಗೌರಿಯನ್ನು ಕೊಂದಿದ್ದು ಸನಾತನ ಸಂಸ್ಥಾ ಎಂಬ ಹಿಂದುತ್ವವಾದಿ ಸಂಘಟನೆ ಎಂದು ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ಹೇಳುತ್ತಿದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರದಲ್ಲಿ ಗೌರಿಯ ಕೊಲೆಗೆ ಮೂರು ವರ್ಷಗಳಿಂದ ಸಿದ್ದತೆ ಮಾಡಿಕೊಳ್ಳಲಾಯಿತು. 2014 ರಿಂದ 2017 ರವರೆಗೆ ಗೌರಿ ಕೊಲೆಗೆಂದೇ ಗನ್ ತಯಾರಿ, ಗನ್ ಟ್ರೈನಿಂಗ್ ಗಳನ್ನು ಕೊಡಲಾಯ್ತು. ಕೊನೆಗೇ 2017 ಸೆಪ್ಟೆಂಬರ್ 05 ರಂದು ಗೌರಿಯನ್ನು ಕೊಲ್ಲಲಾಯಿತು. ಸನಾತನ ಸಂಸ್ಥಾದ ಕಾರ್ಯಕರ್ತರು ದೇಶದಾದ್ಯಂತ ಪ್ರಜಾಪ್ರಭುತ್ವವಾದಿಗಳು, ಸಂವಿಧಾನ ಸಮರ್ಥಕರು, ಪ್ರಗತಿಪರರ ಕೊಲೆ ಮಾಡಲೆಂದೇ ತಂಡವೊಂದನ್ನು ರಚಿಸಿಕೊಂಡಿದ್ದಾರೆ. ಗೌರಿ ಲಂಕೇಶ್, ಪ್ರೊ ಎಂ ಎಂ ಕಲ್ಬುರ್ಗಿ, ಪನ್ಸಾರೆಯನ್ನು ಕೊಲೆ ಮಾಡಿದ್ದು ಒಂದೇ ತಂಡ ಎಂದು ಗೌರಿ ಕೇಸ್ ನ ಚಾರ್ಜ್ ಶೀಟ್ ಓದುವಾಗ ಸ್ಪಷ್ಟವಾಗುತ್ತಾ ಹೋಗುತ್ತದೆ. ಈ ತಂಡ ಪಕ್ಕಾ ತಾಲೀಬಾನ್ ಮಾದರಿಯಲ್ಲೇ ಕಾರ್ಯಾಚರಣೆ ಮಾಡುತ್ತದೆ ಮತ್ತು ಅದರ ಅಂತಿಮ ಫಲಿತಾಂಶ ತಾಲೀಬಾನ್ ಗಿಂತಲೂ ಕೆಟ್ಟದಾಗಿರುತ್ತದೆ.
ಒಟ್ಟು 18 ಆರೋಪಿಗಳು ಗೌರಿ ಕೊಲೆಯಲ್ಲಿ ಭಾಗಿಯಾಗಿದ್ದಾರೆ. 10 ಮಹಾರಾಷ್ಟ್ರದವರು, 8 ಕರ್ನಾಟಕದ ಆರೋಪಿಗಳು ಕೊಲೆಯಲ್ಲಿ ಭಾಗಿಧಾರಿಗಳು. ಈ ಹಂತಕರ ಸೂತ್ರದಾರಿಗಳು ಗೋವಾ ಮಹಾರಾಷ್ಟ್ರದಲ್ಲಿ ಗುರೂಜಿಗಳ ವೇಷಧಾರಿಯಾಗಿದ್ದುಕೊಂಡು ಅಲ್ಲಿನ ಶಾಸಕರು, ಮಂತ್ರಿಗಳಿಂದ ಸೇವೆ ಮಾಡಿಸಿಕೊಂಡಿದ್ದಾರೆ. ಐಸಿಸ್, ತಾಲೀಬಾನ್ ರೀತಿಯಲ್ಲಿ ಕೊಲೆಗಡುಕ ಕಾರ್ಯಕರ್ತರನ್ನು ಸಿದ್ದ ಮಾಡಿಕೊಡುವುದಷ್ಟೇ ಆ ಪ್ರಭಾವಿ ಗುರೂಜಿಗಳ ಕೆಲಸ ಆಗಿರುತ್ತದೆ.
ಚಾರ್ಜ್ ಶೀಟ್ ನಲ್ಲಿ ಹೇಳಿರುವ ಪ್ರಕಾರ ಸನಾತನ ಸಂಸ್ಥಾದ 18 ಕಾರ್ಯಕರ್ತರು ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಗೌರಿ ಲಂಕೇಶ್ ಹತ್ಯೆಗೆಂದೇ ಹಲವು ಮೀಟಿಂಗ್ ಗಳನ್ನು ಮಾಡುತ್ತಾರೆ. ನಂತರ ಇನ್ನೂ ಹಲವು ಸುತ್ತಿನ ರಹಸ್ಯ ಸಭೆಗಳು ಮಡಿಕೇರಿ, ಗೋವಾ, ಬೆಳಗಾವಿ, ಮಹಾರಾಷ್ಟ್ರದಲ್ಲಿ ನಡೆಯುತ್ತದೆ. ಮೀಟಿಂಗ್ ಮಾಡಿದ ಬಳಿಕ 18 ಆರೋಪಿಗಳು ಒಂದೊಂದು ಯೋಜನೆಯಲ್ಲಿ ಭಾಗಿದಾರಿಯಾಗುತ್ತಾರೆ. ಮೊದಲು ಬೆಳಗಾವಿ ಸಮೀಪದ ಕಾಡೊಂದರಲ್ಲಿ ಆರೋಪಿ ವಾಗ್ಮೊರೆಗೆ ಗನ್ ಶೂಟ್ ತರಬೇತಿ ನೀಡಲಾಗುತ್ತದೆ. ವಾಗ್ಮೊರೆ ಜೊತೆ ಗಣೇಶ್ ಮಿಸ್ಕಿಗೂ ಗನ್ ಶೂಟ್ ಟ್ರೈನಿಂಗ್ ನೀಡಲಾಗುತ್ತದೆ. ಗನ್ ತರಬೇತಿ ಪಡೆದಿರುವ ಕಾಡಿನಲ್ಲಿ ಪೊಲೀಸರು ಮಹಜರು ನಡೆಸಿ ಅಲ್ಲಿ ಸಿಕ್ಕ ಸಾಕ್ಷ್ಯಧಾರಗಳನ್ನು ಕೋರ್ಟಿಗೆ ಸಲ್ಲಿಕೆ ಮಾಡಲಾಗಿದೆ.
ಬಳಿಕ ಇಬ್ಬರು ಆರೋಪಿಗಳು ಬೆಂಗಳೂರಿನ ಹೊರವಲಯದಲ್ಲಿ ಎರಡು ಕಡೆ ಪ್ರತ್ಯೇಕವಾಗಿ ಬಾಡಿಗೆಗೆ ಮನೆ ಪಡೆದುಕೊಳ್ಳುತ್ತಾರೆ. ಒಂದು ಮನೆಯನ್ನು ಅಕ್ಯುಪೆಂಚರ್ ಕ್ಲೀನಿಕ್ ಆಗಿ ಮಾರ್ಪಾಡು ಮಾಡಲಾಗುತ್ತದೆ. ಅ್ಯಕ್ಯುಪೆಂಚರ್ ಕ್ಲೀನಿಕ್ ಹೆಸರಿನಲ್ಲಿ ಅಲ್ಲಿ ಗನ್ ಬಳಕೆಯ ವಿಧಾನ, ಕೊಲೆಯ ಬಳಿಕ ಮಾಡಬೇಕಿರುವ ಯೋಜನೆಗಳನ್ನು ಸುದೀರ್ಘವಾಗಿ ನಡೆಸಲಾಗುತ್ತದೆ. ಈ ಮನೆಗಳನ್ನೂ ಮಹಜರು ಮಾಡಿ ಅಲ್ಲಿ ಕೊಲೆ ಪಿತೂರಿಗೆ ಬಳಸಲಾಗಿರುವ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಈ 18 ಜನರ ಕೋಮು ಅಮಲೇರಿಸಿಕೊಂಡ ಗುಂಪನ್ನು ಕೇವಲ ಕೊಲೆಗೆಂದೇ ಸಿದ್ದಪಡಿಸಲಾಗಿದೆ. ಪನ್ಸಾರೆ, ಎಂಎಂ ಕಲ್ಬುರ್ಗಿಯನ್ನು ಕೊಲೆ ಮಾಡಿದವರೇ ಗೌರಿ ಲಂಕೇಶರನ್ನೂ ಕೊಲೆ ಮಾಡಿದ್ದಾರೆ ಎಂಬುದಕ್ಕೆ ಚಾರ್ಜ್ ಶೀಟ್ ನಲ್ಲಿ ಬೇಕಾದಷ್ಟು ಮಾಹಿತಿಗಳು ಲಭ್ಯವಾಗುತ್ತದೆ. ಗೌರಿ ಲಂಕೇಶ್ ತನ್ನ ಕಚೇರಿಯಿಂದ ಎಷ್ಟೊತ್ತಿಗೆ ಎಲ್ಲೆಲ್ಲಿಗೆ ಹೋಗುತ್ತಾಳೆ ? ಮನೆ ತಲುಪುವಾಗ ಎಷ್ಟೊತ್ತಾಗುತ್ತೆ ? ಬಾಗಿಲು ತೆಗೆಯುವುದು ಯಾರು ? ಗೇಟ್ ತೆಗೆಯುವುದು ಯಾರು ? ಎಂಬ ಸಣ್ಣ ಸಣ್ಣ ಮಾಹಿತಿಯನ್ನೂ ಈ ಗುಂಪುಗಳು ಫಾಲೋ ಮಾಡುತ್ತದೆ. ಎಂಎಂ ಕಲಬುರ್ಗಿಯನ್ನೂ ಹೀಗೇ ಫಾಲೋ ಮಾಡಿ, ಕಾಲಿಂಗ್ ಬೆಲ್ ಒತ್ತಿದಾಕ್ಷಣ ಎಂಎಂ ಕಲಬುರ್ಗಿಯವರೇ ಬಾಗಿಲು ತೆಗೀತಾರೆ ಎಂದು ಖಚಿತಪಡಿಸಿಕೊಂಡೇ ಬಾಗಿಲು ತೆಗೆದಾಕ್ಷಣ ಹಣೆಗೆ ಗುಂಡು ಹೊಡೆಯುತ್ತಾರೆ. ಗೌರಿಯೂ ಗೇಟ್ ಓಪನ್ ಮಾಡಿದ ಒಳ ಹೆಜ್ಜೆ ಇಡುತ್ತಿದ್ದಂತೆ ಗುಂಡಿನ ದಾಳಿ ನಡೆಯುತ್ತದೆ.
ಎಂಎಂ ಕಲಬುರ್ಗಿಯನ್ನು ಕೊಲೆ ಮಾಡಿದವರೇ ಗೌರಿಯನ್ನೂ ಕೊಲೆ ಮಾಡುತ್ತಾರೆ. ಗೌರಿಗೆ ಗುಂಡು ಹಾರಿಸಿದವನು ವಾಗ್ಮೊರೆ. ಈ ವಾಗ್ಮೊರೆಗೆ ಬೈಕ್ ಚಾಲಕನಾಗಿದ್ದವನು ಗಣೇಶ್ ಮಿಸ್ಕಿ. ಎಂಎಂ ಕಲಬುರ್ಗಿಗೆ ಗುಂಡು ಹಾರಿಸಿದವನು ಗಣೇಶ್ ಮಿಸ್ಕಿ. ಆಗ ಗಣೇಶ್ ಮಿಸ್ಕಿಗೆ ಬೈಕ್ ಚಾಲಕನಾಗಿದ್ದವನು ವಾಗ್ಮೊರೆ. ಈ ರೀತಿ ವ್ಯವಸ್ಥಿತವಾಗಿ ಪ್ರಗತಿಪರರ ಕೊಲೆಗೆಂದೇ ಸಂಘಟನೆಯನ್ನು ಕಟ್ಟಲಾಗಿದೆ.
ಗೌರಿ ಕೊಲೆ ಮಾಡಿದವರು ತಾಲೀಬಾನಿಗರೇ ಎಂಬುದಕ್ಕೆ ಚಾರ್ಜ್ ಶೀಟ್ ನಲ್ಲಿ ದಾಖಲೆಗಳಿವೆ. ಸನಾತನ ಸಂಸ್ಥಾವು ಇಂತಹ ಕೊಲೆಗಡುಕ ತಂಡವೊಂದನ್ನು ಸಿದ್ದಗೊಳಿಸುತ್ತದೆ. ಅದಕ್ಕಾಗಿ ಹಿಂದುಳಿದ ವರ್ಗದ ಹಿಂದುತ್ವವಾದಿ ಯುವಕರನ್ನು ಬಳಕೆ ಮಾಡುತ್ತದೆ. ಈ ಯುವಕರಿಗೆ ಗನ್ ತರಭೇತಿ ನೀಡುವುದರ ಜೊತೆ ಜೊತೆಗೆ ತಾಲೀಬಾನ್, ಐಸಿಸ್ ಮಾದರಿಯಲ್ಲಿಯೇ "ಧರ್ಮೋಪದೇಶ" ನೀಡಲಾಗುತ್ತದೆ. ಅದಕ್ಕಾಗಿ ಸನಾತನಾ ಸಂಸ್ಥಾವು ಕ್ಷಾತ್ರ ಧರ್ಮ ಸಾಧನಾ ಎಂಬ ಪುಸ್ತಕವನ್ನು ಪ್ರಕಟಿಸಿದೆ. ಈ ಪುಸ್ತಕವಿಡೀ ಯಾರನ್ನು ಯಾಕಾಗಿ ಹೇಗೆ ಕೊಲೆ ಮಾಡಬೇಕು ಎಂದು ವಿವರಿಸುತ್ತದೆ. ಹಿಂದೂ ಧರ್ಮದಲ್ಲಿರುವ ವಿಷಯಗಳನ್ನು ವಿರೋಧಿಸುವ ವ್ಯಕ್ತಿಗಳನ್ನು "ದುರ್ಜನರು" ಎಂದು ಆ ಕ್ಷಾತ್ರಧರ್ಮ ಪುಸ್ತಕದಲ್ಲಿ ಹೇಳಲಾಗಿದೆ. ಮುಂದುವರೆದು, ಈ ದುರ್ಜನರನ್ನು ಮುಗಿಸಲು ಸುದರ್ಶನ ಚಕ್ರವನ್ನು ಬಳಸಬೇಕು. ಸುದರ್ಶನ ಚಕ್ರ ಹೇಗೆ ದುರ್ಜನರ ವಧೆ ಮಾಡಿ ವಾಪಸ್ ಬರುತ್ತೋ ನೀವು ಚಲಾಯಿಸುವ ಗುಂಡು ಕೂಡಾ ದುರ್ಜನರ ವಧೆ ಮಾಡಿ ವಾಪಸ್ ಬರುತ್ತೆ ಎಂದು ತೀರಾ ಬಾಲಿಶವಾಗಿ ನಂಬಿಸಲಾಗಿದೆ. ಗುಂಡು ಹಾರಿಸುವಾಗ ಸುದರ್ಶನ ಮಂತ್ರವನ್ನು ಪಠಿಸಬೇಕು ಎಂದು ಆ ಪುಸ್ತಕ ಹೇಳುತ್ತೆ. ಈ ರೀತಿ ದುರ್ಜನ ಅರ್ಥಾತ್ ಪ್ರಗತಿಪರರ ಕೊಲೆ ಮಾಡಿದರೆ ಮುಂದಿನ 9 ಜನ್ಮದಲ್ಲಿ ಈ ಕೊಲೆಗಾರರು ಅಷ್ಟೈಶ್ವರ್ಯಗಳಿರುವ ಸ್ವರ್ಗದಂತಹ ಜೀವನ ಮಾಡುತ್ತಾರೆ ಎಂದು ಥೇಟ್ ಐಸಿಸ್, ತಾಲೀಬಾನ್ ರೀತಿಯಲ್ಲಿ ಈ ಯುವಕರನ್ನು ನಂಬಿಸಲಾಗಿದೆ. ಅದೇ ಕಾರಣಕ್ಕಾಗಿ ಗೌರಿ ಲಂಕೇಶ್, ಎಂಎಂ ಕಲಬುರ್ಗಿಯನ್ನು ಹತ್ಯೆ ಮಾಡಲಾಗುತ್ತದೆ. ಈ ಕ್ಷಾತ್ರಧರ್ಮ ಪುಸ್ತಕ ಮತ್ತು ಸನಾತನಾ ಪ್ರಭಾತ್ ಪ್ರತಿಗಳನ್ನು ಜಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
2022 ರಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗಬೇಕು ಎಂಬ ಉದ್ದೇಶವನ್ನು ಅಮೋಲ್ ಕಾಳೆಯ ಈ ಕೊಲೆಗಡುಕರ ತಂಡ ಹೊಂದಿದೆ. ಅದಕ್ಕಾಗಿಯೇ ಬಾಂಬ್ ತಯಾರಿಯನ್ನೂ ಈ ತಂಡ ಕಲಿತುಕೊಂಡು ಅದರಲ್ಲಿ ನಿಷ್ಣಾತೆಯನ್ನು ಪಡೆದುಕೊಂಡಿದೆ. ಅದಕ್ಕಾಗಿ ದಾಬೋಳ್ಕರ್, ಗೋವಿಂದ ಪನ್ಸಾರೆ, ಎಂಎಂ ಕಲಬುರ್ಗಿ, ಗೌರಿ ಲಂಕೇಶರನ್ನು ಸರಣಿಯಲ್ಲಿ ಕೊಲೆ ಮಾಡಲಾಗುತ್ತದೆ. ಗೌರಿ ಲಂಕೇಶ್ ಹತ್ಯೆಯ ತನಿಖೆಗಾಗಿ ಆಗಿನ ಸಿದ್ದರಾಮಯ್ಯ ಸರ್ಕಾರ ವಿಶೇಷ ಪೊಲೀಸ್ ತಂಡವನ್ನು ರಚಿಸಿದ್ದರಿಂದ ಈ ತಂಡದ ಮುಂದಿನ ಕಾರ್ಯಯೋಜನೆ ಸಧ್ಯಕ್ಕೆ ಸ್ಥಗಿತಗೊಂಡಿದೆ.
ಗೌರಿ ಕೊಲೆಯ ರುವಾರಿ ಅಮೋಲ್ ಕಾಳೆ. ಈ ಅಮೋಲ್ ಕಾಳೆ ಹಲವು ಹಿಂದುತ್ವವಾದಿ ನಾಯಕರ ಜೊತೆ ನೇರ ಸಂಪರ್ಕ ಹೊಂದಿರುವವನು. ಧರ್ಮ ರಕ್ಷಣೆಗಾಗಿ ಕೇವಲ ಕೊಲೆ ನಡೆಸಲೆಂದೇ ಒಂದು ಸಂಘಟನೆಯಿದ್ದರೆ ಅದು ಅಮೋಲ್ ಕಾಳೆಯ ಸಂಘಟನೆ. ಐಸಿಸ್, ತಾಲೀಬಾನ್ ಕೂಡಾ ಧರ್ಮರಕ್ಷಣೆಯ ಹೆಸರಲ್ಲಿ ಕೊಲೆ ಮಾಡುತ್ತೆ. ಆದರೆ ಅದು ಅಂತರರಾಷ್ಟ್ರೀಯ ರಾಜತಾಂತ್ರಿಕ ವಿಚಾರಗಳು, ಸ್ಥಳೀಯ ರಾಜಕಾರಣದ ವಿಷಯ ಬಂದಾಗ ಸ್ವಲ್ಪ ರಾಜಕೀಯವಾಗಿಯೂ ಕೆಲಸ ಮಾಡುತ್ತದೆ. ಆದರೆ ಜಗತ್ತಿನಲ್ಲಿ ಕೊಲೆಗೆಂದೇ ಒಂದು ಸಂಘಟನೆ ಮಾಡಿದ್ದರೆ ಅದು ಅಮೋಲ್ ಕಾಳೆ ಮಾತ್ರ. ಅದೂ ಈ ದೇಶದ ಮೂರೂ ಅಂಗಗಳನ್ನು ಸಶಕ್ತವಾಗಿ ಬಳಸಿಕೊಂಡು ಇಂತಹ ವಿದ್ವಂಸಕ ಗುಂಪನ್ನು ಕಟ್ಟಲಾಗಿದೆ. ಈತನ ಜೊತೆಗೆ ದೇಶದ ಹಲವು ರಾಜ್ಯಗಳ ಮಂತ್ರಿಗಳು, ಮಾಜಿ ಸಿಎಂಗಳು, ಹಿರಿಯ ವಕೀಲರು, ಹಿರಿಯ ಪತ್ರಕರ್ತರು ನಿರಂತರ ಸಂಪರ್ಕದಲ್ಲಿದ್ದಾರಂತೆ. ಗೌರಿ ಕೊಲೆಯಾಗಿ ನಾಲ್ಕು ವರ್ಷವಾದರೂ ಇನ್ನೂ ನ್ಯಾಯಾಲಯದ ವಿಚಾರಣೆ ಪ್ರಾರಂಭವಾಗಿಲ್ಲ. ಗೌರಿ ಪರ ಸರ್ಕಾರದಿಂದ ಒಬ್ಬ ಸ್ಪೆಷಲ್ ಪ್ರಾಸಿಕ್ಯೂಟರ್ ಇದ್ದರೆ, ಆರೋಪಿಗಳಿಗೆ ಹತ್ತಾರು ವಕೀಲರು ! ಪ್ರತೀ ವಿಚಾರಣಾ ದಿನಾಂಕದಂತೂ ಒಂದಲ್ಲಾ ಒಂದು ತಕರಾರು ಅರ್ಜಿ, ಮಧ್ಯಂತರ ಅರ್ಜಿಗಳನ್ನು ಹಾಕಲಾಗಿದೆ. ಜಾಮೀನಿನ ಅರ್ಜಿಗಳು ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟಿನಲ್ಲಿ ವಜಾ ಆಗಿದ್ದರೂ, ಆರೋಗ್ಯ ಮತ್ತಿತರ ಕಾರಣಗಳನ್ನು ಒಡ್ಡಿ ಮತ್ತೆ ಮತ್ತೆ ಜಾಮೀನು ಅರ್ಜಿ ಸಲ್ಲಿಸುವುದು, ಡಿಸ್ಚಾರ್ಜ್ ಅರ್ಜಿ ಸಲ್ಲಿಸುವುದರಿಂದ ಇನ್ನೂ ಕೂಡಾ ನ್ಯಾಯದಾನ ಪ್ರಕ್ರಿಯೆ ವಿಳಂಭವಾಗಿದೆ.
ನಾಲ್ಕು ವರ್ಷವಾದರೂ ಇನ್ನೂ ಗೌರಿ ಕೇಸ್ ನ ಟ್ರಯಲ್ ಆರಂಭವಾಗದೇ ಇರುವುದಕ್ಕೆ ಮತ್ತೊಂದು ಕಾರಣವೆಂದರೆ ಪ್ರತ್ಯೇಕ ಸ್ಪೆಷಲ್ ಕೋರ್ಟ್ ಮಾಡದೇ ಇರುವುದು. ಸಧ್ಯ ಗೌರಿ ಪ್ರಕರಣ ಬೆಂಗಳೂರು ಪ್ರಿನ್ಸಿಪಲ್ ಸೆಷನ್ (ಸ್ಪೆಷಲ್) ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಆಡಳಿತಾತ್ಮಕ ಕೆಲಸಗಳನ್ನೂ ಇದೇ ಕೋರ್ಟ್ ನಲ್ಲಿ ನಡೆಸುವುದರಿಂದ ಕೇಸ್ ಗಳ ತನಿಖೆಗೆ ಹೆಚ್ಚಿನ ಅವಧಿ ಸಿಗುವುದಿಲ್ಲ. ಆದ್ದರಿಂದ ಐಎಂಎ, ದಂಡೂಪಾಳ್ಯ, ಮದನಿ ಕೇಸ್ ಗಳಿಗೆ ಪ್ರತ್ಯೇಕವಾಗಿ ವಿಶೇಷ ನ್ಯಾಯಾಲಯ ರಚನೆ ಮಾಡಿದಂತೆ ಗೌರಿ ಹತ್ಯೆ ಪ್ರಕರಣಕ್ಕೂ ವಿಶೇಷ ನ್ಯಾಯಾಲಯವನ್ನು ರಚನೆ ಮಾಡಬೇಕು. ಇಲ್ಲವೆಂದಾದರೆ ಹಲವು ಪ್ರಗತಿಪರರ ಕೊಲೆ ಹೂರಣವನ್ನು ಹೊಂದಿರುವ, ದೇಶಾದ್ಯಂತ ಕರಾಳ ಕೈಗಳನ್ನು ಹೊಂದಿರುವ ಆರೋಪಿಗಳ ವಿರುದ್ದದ 10 ಸಾವಿರ ಪುಟಗಳ ಚಾರ್ಜ್ ಶೀಟ್, ನೂರಾರು ದಾಖಲೆಗಳು, ತಿಂಗಳು ಗಟ್ಟಲೆ ನಡೆದ ಪೊಲೀಸ್ ತನಿಖೆಯು ನ್ಯಾಯಾಲಯದಲ್ಲಿ ಟ್ರಯಲ್ ಹಂತಕ್ಕೆ ಬಂದು ಮುಗಿಯುವಾಗ ಹತ್ತಾರು ವರ್ಷಗಳೇ ಬೇಕಾಗಬಹುದು. ಹಾಗಾಗಿ ಶೀಘ್ರದಲ್ಲಿ ಸರ್ಕಾರವು ಗೌರಿ ಹತ್ಯೆ ಕೇಸ್ ಗೆಂದೇ ಪ್ರತ್ಯೇಕ ವಿಶೇಷ ನ್ಯಾಯಾಲಯವನ್ನು ರಚಿಸಬೇಕು.
(ಕೃಪೆ: ಆಂದೋಲನ)
►►ಇದನ್ನೂ ಓದಿ:
►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ.
►►ಎಳೆಮಕ್ಕಳ, ವಿದ್ಯಾರ್ಥಿಗಳ ಪ್ರಾಣಕ್ಕೆ ಮಾರಕವಾದ ಟೇಸ್ಟಿಂಗ್ ಪೌಡರ್ ಅನ್ನು ಸರ್ಕಾರ ಅದೇಕೆ ನಿಷೇಧಿಸುತ್ತಿಲ್ಲ?
►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ!
►►ಭಾರತದಲ್ಲಿ ದಿಢೀರ್ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ?
►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ.
►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ?
►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?
►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ?
►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.!
►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್!
►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ!
►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ?
►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ?
►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ.
►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ
►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ)
►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ?
►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..!
►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ!
►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ?
►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್!
►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ?
►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು.
►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು?
►►'ಕೋವಿಡ್ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್!
►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ.
►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ?
►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್
►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ
►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್ ಚಂದ್ರ ಶೆಟ್ಟಿ (ವಿಡಿಯೋ ನೋಡಿ)
►►ಖಾಸಗೀಕರಣದ ಹಿಂದಿನ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ
►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?